ಜೈಲಿನಂತಿರುವ ಕೋಣೆಯಲಿ
ಮಾಂಸದಂಗಡಿಯ ಮಟನ್ ನಂತೆ
ನೇತುಬಿಟ್ಟಿರಬೇಕಿತ್ತು
ಹೊತ್ತಿಗೊಂದು ಕೈಗೆ ಸಿಕ್ಕು
ಧರಿಸಬಹುದಿತ್ತು
ಒಲವಾಗಿ ಬಿಡೋಣ ನಳಿನ ಡಿ. ಎಲ್ಲದರಂತಲ್ಲದ ಈ ರೋಸುಆತ್ಮಕೆ ಅಂಟಿಸಿದವರ್ಯಾರು?ಗುಡಿಸಿದಷ್ಟೂ ಕಾಮದ ಕಸ,ತೊಳೆದಷ್ಟೂ ಪ್ರೇಮದ ನೊರೆ,ಉಳಿ ಪಿಡಿದು ಕೆತ್ತಿಸಿದವರ್ಯಾರು?ನಿನ್ನೆದೆಯಲಿ ನನ್ನ? ಬಹು ಜೋಕೆ ಹುಡುಗಾ,ನೀ ನಡೆಯುತಿರುವುದುಕತ್ತಿಯಂಚಿನ ಮೇಲೆ..ಸೀರೆಯ ಸೆರಗ ಮೇಲೆಲ್ಲಾ,ನಿನ್ನ ಹೆಸರಿನ ಕಸೂತಿಉಟ್ಟ ಮೈ ಜುಂ ಅಂದಾಗನಿನ್ನಲ್ಲೂ ತಲ್ಲಣ ಬುದ್ದ ಇದಿರಾದಂತೆ,ತೆವಲಿನ ಜಗತಿಗೆಪ್ರೇಮ ತೆರೆದಿದೆಕಾಮದ ಕೊರಳಿಗೆ..ಎಲ್ಲೆಲ್ಲೂ ಜಯಿಸಿದಬುದ್ದನಂತೆ,ಪ್ರೇಯ ಜಯಿಸಿರಲುನೀನೂಸುಮ್ಮನೇ ಕಾರಣ ಹೇಳದೆಬಂದುಬಿಡಬಹುದುಕಾದವಳ ಅಗ್ನಿಪರೀಕ್ಷೆಗೆವರವಾಗಿ.. ಬಲ್ಲಂಥವರ ಮಾತಲ್ಲಪ್ರೇಮ?ಮೂಗನ ಹಾಡಿನಂತೆ..ಬಾ ದೂರದ ಮರಳುನಾಡಿನಪಯಣಕೆ ಓಯಸಿಸ್ ನಂತೆನಿಂತ ಜಲವಾಗಿಒಲವಾಗಿ ಬಿಡೋಣ.. **********************************************
ವಾರದ ಕವಿತೆ ಜೋಕಾಲಿ ಚೈತ್ರಾ ಶಿವಯೋಗಿಮಠ ಮೇಲೆ ಮೇಲೆ ಮ್ಯಾಗಜೂರಿ ಜೀಕಬೇಕು ನಾನುಹಳ್ಳ ಹೊಳಿ ಕಡಲು ಕಾಣಬೇಕಹಸುರ ಹೊದ್ದ ಕಾನು ಮಗುವಿನ್ಹಾಂಗ ಕ್ಯಾಕಿ ಹಾಕಿಹಾರಬೇಕ ಮ್ಯಾಲೆಕಾಣಬೇಕ ಮನಿ ಮಾಳಿಗಿಹಬ್ಬಿದ ಹೂ ಬಳ್ಳಿ ಅಲ್ಲೆ ಜೋಕಾಲಿ ಕಟ್ಟಿ ಜೀಕಿದರರೆಕ್ಕಿ ಬ್ಯಾಡ ಪುಕ್ಕಾ ಬ್ಯಾಡಬೆಳ್ಳಿ ಮುಗಲ ಅನಾಯಾಸಹಂಗ ಮುಟ್ಟಬೋದು ನೋಡ ಬರ್ರಿ, ಬೆಟ್ಟ ಕಣವಿ ಗುಡಿ ಬಯಲದಾಟಿ ಮುಂದಕ ಜೀಕೋಣುಸ್ವಚ್ಛಂದ ಆಕಾಶದಾಗ ಹಕ್ಕಿಹಂಗಹಾಡಾ ಹಾಡಿ ಸಿಳ್ಳಿ ಹಾಕೋಣು ಹಾರಿದ್ಹಂಗ ಏರಿದ್ಹಂಗ ಚಂದಗಾಳಿ ಜೋಡಿ ಮುಂಗುರುಳ ಸರಸಚಂದವದು, ಸ್ವರ್ಗದ ಬಾಗಿಲು ತಟ್ಟಿಮತ್ತ ಹಿಂದಕ ಹೊರಳೊ ವಿಲಾಸ ಏರಿದ್ಹಾಂಗ ಮತ್ತಷ್ಟ ಮೇಲಕಕಾಣತಾದ ಚಂದದ ಸೃಷ್ಟಿಎಷ್ಟೇ ಮ್ಯಾಲೆ ಜೀಕಿದರೂನುಇರಲಿ ನೆಲದಕಡೆಗೂ ದೃಷ್ಟಿ *****************************************************
ಈ ಸಂಜೆ ಗಾಯಗೊಂಡಿದೆ
ವಾರದ ಕವಿತೆ ಈ ಸಂಜೆ ಗಾಯಗೊಂಡಿದೆ ನಾಗರಾಜ ಹರಪನಹಳ್ಳಿ ಈ ಸಂಜೆ ದುಃಖಗೊಂಡಿದೆಆಕಾಶದ ಕೆನ್ನೆ ಮೇಲಿನ ಕಣ್ಣೀರು ಸಾಗರವಾಗಿದೆ ಸಂಜೆ ದುಃಖದ ಜೊತೆ ಗಾಯಗೊಂಡಿದೆಅಲೆಯ ದುಃಖದ ಕೆನ್ನೀರು ದಂಡೆಗೆ ಸಿಡಿದಿವೆ ಕಣ್ಣೀರನುಂಡ ದಂಡೆ ಹಸಿಯಾಗಿದೆನಿನ್ನ ಭಾವಚಿತ್ರ ಕಡಲಹಾಯಿ ದೋಣಿಯಲ್ಲಿ ಮೂಡಿ ಬಂದಿದೆ ಈ ಸಂಜೆ ಯಾಕೋ ಏನೋ ಕಳೆದು ಕೊಂಡಿದೆ , ಮೌನ ಸಾಗರದ ನಡುವಿನ ದ್ವೀಪ ತಬ್ಬಿದೆ ಕಡಲು ಪಶ್ಚಿಮಕ್ಕೆ ದೀಪ ಮಿಣಕುತ್ತಿದೆಅವು ನಿನ್ನ ಕಣ್ಣುಗಳೇ ಆಗಿವೆ ಸಂಜೆಯ ದುಃಖ ಅಳಿದುಅದರೊಡಲಿಗೆ ಆದ ಗಾಯ ಮಾಯುವ ಕ್ಷಣಕೆ ದಂಡೆ ಕಾದಿದೆಮತ್ತೆ ಅದೇ ದಂಡೆಯಲ್ಲಿ ಯುಗಳ ಹೆಜ್ಜೆ ಗಜ್ಜೆ ಸದ್ದಿಗೆಕಡಲು ಕಾದು ಕುಳಿತಿದೆ ಬರುವ ಹಗಲು ನಗುವ ಹೊತ್ತು ಮರಳಲು ಮನವು ಕಾದಿದೆ (ಗುಲ್ಜಾರ್ ಕವಿತೆಯ ಒಂದು ಸಾಲಿನಿಂದ ಪ್ರೇರಿತ ಕವಿತೆ) ******************************** ನಾಗರಾಜ್ ಹರಪನಹಳ್ಳಿ
ಅಡುಗೆಮನೆ ಜಗತ್ತು
ವಾರದ ಕವಿತೆ ಅಡುಗೆಮನೆ ಜಗತ್ತು ಉಮಾ ಮುಕುಂದ್ ಕಬ್ಬಿಣದ ತವದ ಮೇಲೆರೆದದೋಸೆಯ ರುಚಿ ಮತ್ತು ಗರಿನಾನ್ ಸ್ಟಿಕ್ ತವದ ದೋಸೆಗೆ ಬಂದೀತು ಹೇಗೆ?ಅಂಟಿಸಿಕೊಳ್ಳದ್ದು ಆಪ್ತವಾದೀತು ಹೇಗೆ? ಉಪ್ಪಿನಕಾಯಿ ಜಾಡಿಗೆ ತುಂಬಿಸಿಮುಚ್ವಿಟ್ಟರೆ ಮುಗಿಯಲಿಲ್ಲಆಗಾಗ್ಗೆ ಕೈಯಾಡಿಸಬೇಕು ತೆಗೆದುಕೆಡದಂತಿರಿಸಿಕೊಳ್ಳಲು. ಅಡುಗೆಮನೆ ಕೈಒರೆಸುಅನಿವಾರ್ಯವಾದರೂಮನೆಯವರಿಗೆ ಸಸಾರಕೆಲಕೆಲವು ಜನರ ಹಾಗೆ. ಬೇಕಾದ್ದು, ಬೇಡದ್ದು ತುಂಬಿಮುಚ್ಚಿಬಿಡುವ ಕಪಾಟಿನಡುಗೆಮನೆಗಿಂತಾಇಟ್ಟಿದ್ದು, ಕೆಟ್ಟದ್ದು ಕಾಣುವ ಅಡುಗೆಮನೆಯಾದರೆಆಗಾಗ ಶುಚಿಗೊಳಿಸಿಕೊಂಡೇವು. ತರಕಾರಿ ಸಹಜ ಬಣ್ಣ ಉಳಿಸಿಕೊಳ್ಳಲುಬೇಯುವಾಗಿಷ್ಟು ಉಪ್ಪು ಉದುರಿಸಿದರಾಯ್ತುಮನುಷ್ಯರ ನಿಜಬಣ್ಣ ತಿಳಿಯಲುಉಪಾಯವೇನಾದರೂ ಇದ್ದಿದ್ದರೆ… ಮೊಂಡಾದ ಚಾಕು, ಈಳಿಗೆಗೆಸಾಣೆ ಹಿಡಿಯಬೇಕು ಆಗಾಗ್ಗೆಮೊನಚು ಕಳಕೊಂಡ ಸಂಬಂಧಗಳಿಗೂ ಹಾಗೇ… ಕೊನೆ ಗುಟುಕಿನವರೆಗೂ ಬಿಸಿಆರದಹಾಗೆ ಕಾಫಿ ಬೆರೆಸುವುದೂಕೊನೆವರೆಗೂ ಬಿಸುಪು ಕಾಯ್ದುಕೊಂಡುಬದುಕುವುದೂ ಎಲ್ಲರಿಗೂ ಸಿದ್ಧಿಸುವುದಲ್ಲ. ಸಿಟ್ಟು, ಅಸಹನೆ, ಅತೃಪ್ತಿ ಎಲ್ಲವನ್ನೂಹಿಟ್ಟಿನೊಂದಿಗೆ ಮಿದ್ದು ಮಿದ್ದುಲಟ್ಟಿಸಿ ಬೇಯಿಸಿದ ಚಪಾತಿತಿನ್ನಲು ಬಲು ಮೃದು, ಮಧುರ. ಜ಼ೊರೋ ಎಂದು ನಲ್ಲಿ ತಿರುಗಿಸಿಇನ್ನೆರಡು ತೊಳೆದರೆ ಮುಗಿಯಿತುಎನ್ನುವಷ್ಟರಲ್ಲೇ ನಿಂತ ನೀರು!ಇದ್ದಾಗ ತಿಳಿಯದ ಬೆಲೆ, ಹೋದಾಗ ಹಳಹಳಿಕೆ. ************************************* ಪ್ರೇರಣೆ: ಬಿ.ವಿ.ಭಾರತಿಯವರ ಕವಿತೆಯಿಂದ
ವಾರದ ಕವಿತೆ ನಿರಂತರ ನೋವು ರಾಜೇಶ್ವರಿ ಭೋಗಯ್ಯ ಎದೆಯ ಒಳಗೊಂದು ಚುಚ್ಚುವ ನೋವಿದ್ದರೆಮೈಮೇಲೊಂದು ಗಾಯ ಮಾಡಿಕೊ ನಂತರ ಒಳಗಿನ ನೋವು ಹೆಚ್ಚೋಹೊರಗಿನ ನೋವು ಹೆಚ್ಚೋ ಎಂದು ತಾಳೆ ಹಾಕಿಕೋ ಎದೆಯ ನೋವೇ ಹಿಂಡುವಂತಾದ್ದುಮೈಯ್ಯ ನೋವೇ ಚುಚ್ಚುವಂತಾದ್ದು ಮನವರಿಕೆ ಮಾಡಿಕೋ ಎರಡರ ಜೊತೆ ಸೆಣಸಿ ಸೆಣಸಿ ಮೈಯ ಗಾಯ ಮಾಯಿತುಎದೆಯ ನೋವು ಮತ್ತೆ ಇಣುಕಿತುಚರ್ಮದ ಮೇಲಿನದು ಒಣಗಿದರೂ ವಿಕಾರವಾಯಿತುಯಾರಿಗೂ ಕಾಣದ ನೋವು ಒಳಗಿದ್ದದ್ದೇ ಸಹ್ಯವಾಯಿತು ಗೆಳತಿ ಹೇಳಿದಳು..ಮೂಗು ಚುಚ್ಚಿಸು…ಕಷ್ಟಕ್ಕೂ ,ಸುಖಕ್ಕೂ ,ಎದೆಗೂ ಹತ್ತಿರಒಂದಕ್ಕೊಂದು ಅನುಬಂಧ ಅದೂ ಆಯಿತು…ಹಾಗೇ ಮಾಯಿತುಉಳಿಯುವುದಿಲ್ಲ ಕಲೆಉಪಯೋಗಿಸಿದ್ದಳು ತಲೆಎಷ್ಟು ಮೂಗಿದ್ದರೂ ಸಾಲುವುದೇ…ಹೆಣ್ಣಿನ ಬವಣೆಗೆ ಕೊನೆಯಿದೆಯೇ ಹಿಂಡುವ , ಚುಚ್ಚುವ ಜುಗಲ್ಬಂದಿಯಲ್ಲಿಗೆದ್ದದ್ದು ಮೈಮೇಲಿನ ನೋವೇಎಂದಿಗೂ ಗೆಲ್ಲದಂತೆ ಹಠ ಹಿಡಿಯುವುದುಎದೆಯೊಳಗಿನ ಕಾವೇ ಚುಚ್ಚುತ್ತಿರಲಿ ಒಂದು ನಿರಂತರ ನೋವುಅದಕಿಂತಾ ಚಂದವಾ ಮೈಮೇಲಿನ ಬಾವು. *******************************
ವಾರದ ಕತೆ ಧ್ರುವ ತಾರೆ ವಿನುತಾ ಹಂಚಿನಮನಿ . ಸಂಜೆ ನಾಲ್ಕು ಗಂಟೆಯ ಸಮಯ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯಲ್ಲಿ ಗದ್ದಲ ಸ್ವಲ್ಪ ಕಡಿಮೆಯಾಗಿದೆ. ಈಗ ಸಾಧಾರಣವಿರುವ ದವಾಖಾನೆಗೆ ಮಹತ್ವ ಬಂದು, ಕೊರೊನಾ ರೋಗಿಗಳಿಂದ ಯಾವಾಗಲೂ ಗಿಜಿಗುಟ್ಟುತ್ತಿದೆ. ರೋಗಿಗಳನ್ನು ಬಿಟ್ರೆ ಬೇರೆ ಯಾರೂ ಇಲ್ಲಿಗೆ ಬರುವ ಧೈರ್ಯ ಮಾಡುವುದಿಲ್ಲ. ಅಲ್ಲಿಯೇ ಒದಗಿಸುವ ಊಟದ ಸಮಯ ಮುಗಿದಿದ್ದರಿಂದ ನರ್ಸ್, ಆಯಾ ಓಡಾಟ ಕೂಡ ಕಡಿಮೆಯಾಗಿದೆ. ಡಾಕ್ಟರ್ ಇನ್ನು ಬರುವುದು ರಾತ್ರಿಗೇ. ಹೊರಗಡೆ ಸಿಟಿಯಲ್ಲಿ ಲಾಕ್ಡೌನ್ ಇದ್ದುದರಿಂದ ಜನಸಂಚಾರವಿಲ್ಲ. ವಾಹನಗಳ ಸದ್ದು ಕಡಿಮೆಯೇ! ಅಲ್ಲೊಂದು-ಇಲ್ಲೊಂದು ಪಿಸುಮಾತಿನ ಶಬ್ದ ಮತ್ತು ಡ್ಯೂಟಿ ಮುಗಿಸಿ ಹೋಗುವ ತರಾತುರಿಯಲ್ಲಿ ಇರುವ ನರ್ಸ್ ಆಯಾಗಳ ಹೆಜ್ಜೆಯ ಮತ್ತು ಟಕ್ ಟಕ್ ಅನ್ನುವ ಬೂಟಿನ ಸದ್ದು ಬಿಟ್ಟರೆ ಬೇರೆ ಎಲ್ಲ ಶಾಂತವಾಗಿದೆ. ಆದರೆ ಆಸ್ಪತ್ರೆಯಲ್ಲಿ ಮಲಗಿದವರ ಎದೆಯ ಬಡಿತ ಮತ್ತು ತಲೆಯಲ್ಲಿ ಸುತ್ತುವ ನಾನಾ ನಮೂನೆಯ ಬಿರುಗಾಳಿಯಂತಹ ವಿಚಾರಗಳಿಗೆ ಎಲ್ಲಿಯ ಪ್ರತಿಬಂಧ? ಈ ಶಾಂತಿಯನ್ನು ರಣಶಾಂತಿ ಮತ್ತು ಮೌನವನ್ನು ಸ್ಮಶಾನ ಮೌನವೆನ್ನಬಹುದು. ಶಕುಂತಲಾ ಆಸ್ಪತ್ರೆಯ ಮೊದಲ ಮಹಡಿಯ ಸೆಮಿ ಸ್ಪೆಷಲ್ ರೂಮಿನಲ್ಲಿ ಕೋವಿಡ್ ಪೇಷಂಟ್ ರಂಗಣ್ಣ ತನ್ನ ಕಾಟ ಮೇಲೆ ಮಲಗಿ ವಿಚಾರ ಮಂಥನದಲ್ಲಿ ಮುಳುಗಿದ್ದಾನೆ. ಇಲ್ಲಿಗೆ ಬಂದು ಸುಮಾರು ಒಂದು ವಾರ ಆಗಿರಬಹುದು. ದಿನದ ಲೆಕ್ಕ ಯಾರಿಗಿದೆ? ಜೀವಕ್ಕೆ ಲೆಕ್ಕವಿಲ್ಲದಾಗ?…. ರೂಮಿನ ಅರ್ಧಭಾಗ ವ್ಯಾಪಿಸಿಕೊಂಡ ಕಾಟ್ ಮೇಲೆ ಮಲಗಿ ಹೊರ ಜಗತ್ತಿನ ಸಂಪರ್ಕವೇ ಇಲ್ಲವಾಗಿದೆ. ತಲೆಮೇಲೆ ತಿರುಗುತ್ತಿರುವ ಫ್ಯಾನ್ ಸಪ್ಪಳ ಮಾಡುತ್ತ ತನ್ನ ಸೇವೆಯನ್ನು ಪ್ರಚಾರ ಮಾಡುತ್ತಿದೆ……. ಮುಖದ ಮೇಲೆ ಫಿಕ್ಸ್ ಮಾಡಿದ ವೆಂಟಿಲೇಟರ್ ನಿಶಬ್ದ ಕಾರ್ಯತತ್ಪರ…….. ಪಕ್ಕದಲ್ಲಿ ನಿಲ್ಲಿಸಿದ ಕಬ್ಬಿಣದ ಸ್ಟ್ಯಾಂಡಗೆ ಬಾಟ್ಲಿ ಜೋಡಿಸಿ ಅದರಿಂದ ಹೊರಟ ಇನ್ನೊಂದು ತುದಿ ರಂಗಣ್ಣನ ಎಡಗೈಯಲ್ಲಿ ಸೂಜಿಯ ಮುಖಾಂತರ ಹೊಕ್ಕಿದೆ……. ಅಲ್ಲಿಂದ ಬರುತ್ತಿರುವ ಔಷಧ, ವೆಂಟಿಲೇಟರ್ ನಿಂದ ಪೂರೈಕೆಯಾಗುತ್ತಿರುವ ಪ್ರಾಣವಾಯು ತನ್ನನ್ನು ಜೀವದಿಂದ ಇಟ್ಟಿವೆ ಎನ್ನುವುದು ಅವನಿಗೆ ಗೊತ್ತು. ಇಲ್ಲಿಗೆ ಬರುವ ಮೊದಲು ಒಂದು ವಾರ ಧಾರವಾಡದ ಇಳಕಲ್ ಆಸ್ಪತ್ರೆಯಲ್ಲಿ ಇದ್ದವ, ಅಲ್ಲಿ ಆಕ್ಸಿಜನ್ ಸ್ಟಾಕ್ ಇಲ್ಲ ಅಂತ ಈ ದವಾಖಾನೆಗೆ ಬರಬೇಕಾಯಿತು. ಉಳಿವಿನ ಬಗ್ಗೆ ರಂಗಣ್ಣನಿಗೆ ಯಾವಾಗ ಭರವಸೆ ಇಲ್ಲದಾಯಿತೊ ಆ ಕ್ಷಣದಿಂದ ಅವನ ಮನಸ್ಸಿನಲ್ಲಿ ವಿಚಾರಗಳ ಯುದ್ಧ ನಡೆದಿದೆ. “ಅಲ್ಲಾ! ನನಗೆ ಯಾಕೆ ಈ ರೋಗ ಬಂತು? ಇಷ್ಟು ವರ್ಷ ಡಯಾಬಿಟಸ್ ಅನುಭವಿಸಿದ್ದು ಬೇಕಾದಷ್ಟು ಆಗಿರುವಾಗ! ನಾನೆಷ್ಟು ಕಾಳಜಿ ತಗೆದುಕೊಂಡಿದ್ದೆ, ಮದ್ದಣ್ಣ ತೀರಿಹೋದಾಗ! ದೂರದಿಂದ ನೋಡಿದ್ದು ಬಿಟ್ಟರೆ ಸಂಪರ್ಕ ಎಲ್ಲಿ ಬಂದಿತ್ತು? ಸ್ಮಶಾನಕ್ಕೆ ಹೋಗಿರಲಿಲ್ಲ. ಅವನು ಸತ್ತದ್ದು ಕೊವಿಡ್ ನಿಂದ ಅಂತ ಗೊತ್ತಾದ ಕೂಡಲೇ ಎಲ್ಲರೂ ಅಲ್ಲಲ್ಲೇ ಸ್ಟ್ಯಾಚು ತರ ಆದರಲ್ಲ! ಸ್ವಂತ ಅತ್ತೆಯ ಮಗ, ಒಬ್ಬಂಟಿ ಬೇರೆ… ಇಂತಹ ಸಮಯದೊಳಗೆ ನಾನಿದ್ದು ಏನು ಉಪಯೋಗ ಆಯ್ತು! ನನ್ನ ಹಂಗ ರಾಘು ಮತ್ತು ಪರಿಮಳರಿಗೆ ಈ ರೋಗ ಅಮರಿಕೊಂಡಿತ್ತಲ್ಲಾ! ರಾಘುನಿಂದ ನನಗೆ ಬಂದಿರಬಹುದು …..”. ಹೀಗೆ ಸಾಗಿತ್ತು ವಿಚಾರಧಾರೆ. ಯಾರನ್ನೂ ಭೆಟ್ಟಿಯಾಗುವ ಹಂಗಿಲ್ಲ, ಮನಸ್ಸಿನ ಮಾತನ್ನು ಹೇಳಿ ಹಗುರ ಮಾಡಿಕೊಳ್ಳುವ ಹಂಗಿಲ್ಲಾ ಅನ್ನುವ ಬೇಸರ! ರಂಗಣ್ಣನ ತಮ್ಮ ರಾಘು ಹುಬ್ಬಳ್ಳಿಯೊಳಗ ತಮ್ಮ ಸೋದರ ಅತ್ತೆಯ ಮಗ ಮದ್ದಣ್ಣನ ಒಟ್ಟಿಗೆ ಇರುತ್ತಿದ್ದ. ಇಬ್ಬರೂ ಬ್ರಹ್ಮಚಾರಿಗಳು. ಒಬ್ಬರಿಗೊಬ್ಬರು ಆಸರೆಯಾಗಿದ್ದರು. ಯಾವಾಗ ಮದ್ದಣ್ಣ ಸಾವಿಗೆ ಈಡಾದನೋ, ಒಮ್ಮೆಲೆ ಎಲ್ಲರ ಮನಸ್ಸಿನಲ್ಲಿ ನಡುಕ ಶುರುವಾಗಿತ್ತು. ಮದ್ದಣ್ಣನಿಗೆ ಅದು ಹೇಗೆ ಬಂದಿತು? ಯಾರಿಗೂ ಗೊತ್ತಿಲ್ಲ….. ಆಸ್ಪತ್ರೆ ತಲುಪುವದರೊಳಗೆ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನೊಟ್ಟಿಗೆ ಇರುತ್ತಿದ್ದ ರಾಘುನಿಗೆ ತಾಗಿರಬೇಕು, ಗೊತ್ತಾಗಿರಲಿಲ್ಲ. ಅವನಿಗೆ ಕ್ರಿಯಾ ಕರ್ಮ ಮಾಡಿ ಅಣ್ಣ ರಂಗಣ್ಣನೊಟ್ಟಿಗೆ ಕೆಲವು ದಿನ ಇರುವುದರಲ್ಲಿಯೇ ರಾಘುನಿಗೆ ಕರುನಾ ಪಾಸಿಟಿವ್ ಅಂತ ಗೊತ್ತಾಯ್ತು. ಅದರೊಟ್ಟಿಗೆ ಇಲ್ಲಿರುವ ರಂಗಣ್ಣನಿಗೆ ಕೂಡ. ಮೂವರು ಆಸ್ಪತ್ರೆಗೆ ದಾಖಲಾದರು. ಒಂದು ವಾರದಲ್ಲಿ ಅವರಿಬ್ಬರು ಆರಾಮಾಗಿ ಮನೆಗೆ ಹೋದರು. ರಂಗಣ್ಣನಿಗೆ ರೋಗ ಉಲ್ಬಣಿಸ ತೊಡಗಿತು. ಧಾರವಾಡದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗದ ಕಾರಣ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಗೆ ಸೇರಿಸಬೇಕಾಗಿ ಬಂತು. ಕೆಲವೊಮ್ಮೆ ಆಕ್ಸಿಜನ್ ಸಪ್ಲೈ ತೆಗೆಯುವುದು ಮತ್ತೆ ಉಸಿರಾಟದ ತೊಂದರೆ ಕಾಣಿಸಿದ ಕೂಡಲೇ ಮತ್ತೆ ಹಚ್ಚುವುದು ನಡೆದೇ ಇತ್ತು. ದಿನಕಳೆದಂತೆ ರೋಗ ಉಲ್ಬಣಿಸಿತ್ತು. ತನ್ನ ಮನಸ್ಸಿನಲ್ಲಿ ನಡೆಯುತ್ತಿರುವ ವಿಚಾರಗಳನ್ನು ಯಾರಿಗೆ ಹೇಳಿಕೊಳ್ಳಬೇಕು? ಜೀವನಚಕ್ರ ಕಣ್ಣುಮುಂದೆ ಬರತೊಡಗಿತು. ನಾ ಎಷ್ಟು ಸಂತೋಷದಿಂದ ಇದ್ದೆ ಸಣ್ಣವನಿರುವಾಗ ದೊಡ್ಡ ಮನೆತನ, ಕೂಡುಕುಟುಂಬ ಯಾವುದಕ್ಕೂ ಕೊರತೆ ಇಲ್ಲದ ಜೀವನ. ಮನಿಯೊಳಗ ಅಪ್ಪ-ಅವ್ವ ಅಕ್ಕ-ತಮ್ಮ ಮತ್ತೆ ನಾಲ್ಕು ಜನ ತಂಗಿಯರು. ಸಹಜೀವನ, ಸಹಕಾರ, ಹಂಚಿಕೊಳ್ಳುವುದು ಸಾಮಾನ್ಯವಿತ್ತು. ಯಾರ್ದನ್ನು ಯಾರೋ ಉಪಯೋಗಿಸಿದರೂ ಬೇಸರ ಇಲ್ಲ, ಪ್ರತಿಬಂಧ ಇಲ್ಲ ಅದರೊಳಗ ನನಗ ಅಕ್ಕ ತಮ್ಮ ತಂಗಿಯರು ಅಂದರ ಪ್ರಾಣ. ಅವರಿಗೆ ಸಿಟ್ಟು ಬರದಂಗ ಬ್ಯಾಸರವಾಗದಂಗ ಇರೋದು ನನಗೆ ಸೇರ್ತಿತ್ತು. ಹೀಗಾಗಿ ‘ಭೋಳೇಶಂಕರ’ ಅಂತ ಬಿರುದು ಸಿಕ್ಕಿತ್ತು. ಆರು ವರ್ಷ ಕಳೆದ ಮೇಲೆ ಸಾಲಿಗೆ ಸೇರಿಸಿದರು. ಹಳ್ಳಿಯೊಳಗಿನ ಸಾಲಿ, ಮತ್ತ ಪರಿಚಯದ ಮಾಸ್ತರರು. ಕೆಲವರು ಗೆಳೆಯರು ಹೆಚ್ಚಾದರೂ ಹೆಚ್ಚಿನ ಬದಲಾವಣೆ ಅನ್ನಿಸಲಿಲ್ಲ. ಆದರೆ ಸರಿಯಾದ ಸಮಯಕ್ಕ ಸಾಲಿಗೆ ಹೋಗಿ ಬರುವುದು ಸ್ವಲ್ಪ ಕಠಿಣ ಆಗ್ತಿತ್ತು. ಯಾಕಂದರೆ ಆಟ ಆಡಲಿಕ್ಕೆ ವೇಳೆ ಹೆಚ್ಚು ಸಿಗುತ್ತಿರಲಿಲ್ಲ. ಒಂದು ಮಾತ್ರ ಖುಷಿ ಕೊಟ್ಟಿದ್ದು ನನ್ನ ಗೆಳೆಯರೆಲ್ಲಾ ಅದs ಸಾಲಿವಳಗ ಇದ್ದರು. ಕೆಲವರು ಕ್ಲಾಸಿನೊಳಗೆ ಮತ್ತ ಕೆಲವರು ಸಾಲಿವಳಗ. ಹಿಂಗಾಗಿ ನಮ್ಮ ಆಟ ಮಸ್ತಿ ಅಲ್ಲಿನೂ ಸುರುವಾಯ್ತು. ಸಾಲಿ ಮುಗಿಸಿ ಮನೆಗೆ ಬಂದ ಕೂಡಲೇ ಅಭ್ಯಾಸಕ್ಕಿಂತ ಊಟ ತಿಂಡಿಯ ಕಡೆಗೇ ಲಕ್ಷ್ಯ. ಮಾಸ್ತರೆಲ್ಲ ಕಾಕಾ, ಮಾಮಾ, ಚಿಕ್ಕಪ್ಪ ಅಂತ ಸೋದರಸಂಬಂಧಿ ಇದ್ದದ್ದಕ್ಕ ಹೆದರಿಕೆ ಇರಲಿಲ್ಲ. ಶನಿವಾರ ಅರ್ಧದಿನದ ಸಾಲಿ. ಉಳಿದರ್ಧ ದಿನ ಮುಂದಿನ ವಾರಕ್ಕೆ ಶಾಲೆಗೆ ಬೇಕಾಗುವ ಅರಿವೆ -ಬಟ್ಟೆ ನೋಡಿಕೊಳ್ಳುವುದು ಇಂತಹ ಕೆಲಸ. ರವಿವಾರ ಮಾತ್ರ ಹಿಡಿಯುವವರು ಇದ್ದಿಲ್ಲ. ಮುಂಜಾನೆ ನದಿಗೆ ಹೋಗಿ ಸ್ನಾನ ಮಾಡಿ, ಸಾಕು ಅನ್ನಿಸುವಷ್ಟು ಈಸಿ, ಬಿಸಿಲು ಏರಿದ ಕೂಡಲೇ ಕಲ್ಮೇಶ್ವರ ಗುಡಿಗೆ ಹೋಗುವುದು. ಅಲ್ಲೆ ಸೀನ, ವೆಂಕಟ, ನಾನಿ ಯಾರಾದರೊಬ್ಬರು ಅವಲಕ್ಕಿ ಹಣ್ಣು ತಂದಿರುತ್ತಿದ್ದರು ಅದನ್ನು ತಿಂದು ಮತ್ತೆ ಆಟ. ಮಾಸ್ತರರ ಅಣಕ ಮಾಡಿ ತೋರಿಸುವುದು, ಹುಡುಗಿಯರ ಬಗ್ಗೆ ಕಾಮೆಂಟ್ ಮಾಡುವುದು ನಡೀತಿತ್ತು. ನಮಗೆಲ್ಲ ಸಿನಿಮಾ ಮತ್ತ ನಾಟಕದ ನಾಟಕದ ಹುಚ್ಚು ಭಾಳಿತ್ತು. ಆವಾಗ ಬ್ಯಾರೆ ಏನೂ ಮನರಂಜನೆ ಇರುತ್ತಿರಲಿಲ್ಲ. ನೋಡಿ ಬಂದ ಸಿನೆಮಾದ್ದು ಕೆಲವು ಸೀನು ನಾವs ಅಭಿನಯ ಮಾಡುತ್ತಿದ್ದೆವು. ಹೆಚ್ಚಾಗಿ ಭಕ್ತ ಕನಕದಾಸ, ಸತ್ಯಹರಿಶ್ಚಂದ್ರ, ಕೃಷ್ಣದೇವರಾಯ, ಬಬ್ರುವಾಹನ ಇಂತಹ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾದ್ದು. ನನಗೆ ಯಾವಾಗಲೂ ಕನಕದಾಸನ ಪಾತ್ರ. ಕನಕನ್ನ ಕಂಭಕ್ಕ ಕಟ್ಟಿ ಹೊಡೆಯುವುದು, ಬಾಳೆಹಣ್ಣು ತಿನ್ನಲಿಕ್ಕೆ ಕೊಡುವುದು ಬಹಳ ಮಜಾ ಬರುತ್ತಿತ್ತು. ಸತ್ಯಹರಿಶ್ಚಂದ್ರನ ಸಿನಿಮಾದ ವೀರಬಾಹುವಿನ ಪಾತ್ರ ಮಾಡಲಿಕ್ಕೆ ಪ್ರಯತ್ನ ಮಾಡಿದ್ದೇ ಮಾಡಿದ್ದು. ಸಂಜೆಯಾದರೂ ಊಟದ ಖಬರು ಇಲ್ಲದ ಆಟ ನಡೀತಿತ್ತು. ಮನೆಯವರೆಗೂ ಗೊತ್ತಿತ್ತು ,ಹಸಿವಾದರೆ ಮನೆಗೆ ಬರ್ತಾರೆ ಅಂತ . ಹಬ್ಬ-ಹುಣ್ಣಿಮೆ ಬಂದರೆ ನಮ್ಮೂರ ಒಳಗೆ ಗುಡಿಗೆ ಹೋಗುವ ಜನ ಜಾಸ್ತಿ. ನಮ್ಮ ನಾನಿ ಅಪ್ಪ ಗುಡಿ ಪೂಜಾರಿ. ಒಮ್ಮೊಮ್ಮೆ ದೇವರ ಪೂಜೆ ಮಾಡುವ ಪ್ರಸಂಗ ನಾನಿಗೆ ಬರ್ತಿತ್ತು. ಅವತ್ತಿನ ದಕ್ಷಿಣ ರೊಕ್ಕ ನಮ್ಮ ಮುಂದಿನ ಸಿನಿಮಾದ ಖರ್ಚಿಗೆ ಅಂತ ಇಡುತ್ತಿದ್ದ. ಶ್ರೀಮಂತಿಕೆ ಬಡತನ ವ್ಯತ್ಯಾಸ ಆಗ್ತಿದ್ದಿಲ್ಲಾ. ಬಾಲ್ಯದ ಮುಗ್ಧತೆ ಎಷ್ಟು ಚೆಂದ ಇತ್ತು? ಈಗ ಅರಿವಿಗೆ ಬರ್ತದ. ಯಾವುದೇ ರೀತಿಯ ಏರು ಇಳಿವು ಇಲ್ಲದ ಜೀವನ ಸಾಗಿತ್ತು. ಸಾಲಿಯೊಳಗ ಮುಂದಿನ ಕ್ಲಾಸಿಗೆ ಹೋಗುವುದು ಗ್ಯಾರಂಟಿ ಇರುತ್ತಿತ್ತಲ್ಲ. ಅಭ್ಯಾಸದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಏನು ಓದುತ್ತೇನೆ, ಎಷ್ಟು ಮಾರ್ಕ್ಸ್ ತೆಗಿತೀನಿ ಅಂತ ಅಪ್ಪ ಕೂಡ ಹೆಚ್ಚು ಜಿಕೇರಿ ಮಾಡ್ತಿದ್ದಿಲ್ಲ. ಪಾಠ ತಿಳಿಲಿಲ್ಲ ಅಂದ್ರೆ ಗೆಳೆಯರು ಇದ್ದರಲ್ಲ, ನಾನೀ, ಸೀನಾ ಹೇಳಿಕೊಡುತ್ತಿದ್ದರು. ಹಂಗೂ ಹಿಂಗೂ ಮಾಡಿ ಎಸ್ಎಸ್ಸಿ ಪಾಸಾದೆ. ಕಾಲೇಜಿಗೆ ಹೋಗಾಕ ಹಸಿರು ನಿಶಾನಿ ಸಿಕ್ಕಂಗಾಯ್ತು. ಅದs ಊರೊಳಗಿನ ಕಾಲೇಜಿಗೆ ಆರ್ಟ್ಸ್ ಗೆ ಎಡ್ಮಿಶನ್ ಮಾಡಿಸಿದೆ. ನಾನಿ ಒಬ್ಬಾವ ಮಾತ್ರ ಸೈನ್ಸಗೆ ಸೇರಿದ. ಗಣಿತದ ತಲಿಬಿಸಿ, ಪ್ರ್ಯಾಕ್ಟಿಕಲ್ಸ್ ದ ಉಪದ್ರ ಬ್ಯಾಡಾ ಅನಿಸಿತ್ತು ನನಗ. ಈಗ ಮೊದಲಿನ ಹುಡುಗುತನ ಸ್ವಲ್ಪ ಕಡಿಮೆಯಾಗಿತ್ತು. ಮನಿ ಕೆಲಸ ಜಾಸ್ತಿ ಆಗಿತ್ತು. ಮನಿಯೊಳಗಿನ ಹಿಂಡ ಜನರೊಳಗ ಅದೇನು ಭಾಳ ಅನಸ್ತಿದ್ದಿಲ್ಲ. ಮನಿಯೊಳಗ ಮದುವಿ, ಮುಂಜವಿ ಇಂಥಾದ್ದೆಲ್ಲಾ ಕಾರ್ಯಕ್ರಮಕ್ಕ ಇದ್ದರಲ್ಲ ಆಜೂ- ಬಾಜೂ ನಮ್ಮವರು……ಗೊತ್ತಾಗದ ನಡದು ಹೋಗ್ತಿತ್ತು. ನಮ್ಮಜ್ಜ ತನ್ನ ನಾಲ್ಕು ಗಂಡ ಮಕ್ಕಳೊಳಗ ಇಬ್ಬರು ಮಕ್ಕಳನ್ನು ದತ್ತಕ ಕೊಟ್ಟಿದ್ದು, ಅವರಿಬ್ಬರ ಕುಟುಂಬ ಮತ್ತು ಇನ್ನುಳಿದ ಇಬ್ಬರದು ವರ್ಷದಿಂದ ವರ್ಷಕ್ಕೆ ಬೆಳೆದು ಅರ್ಧ ಊರಲ್ಲಿ ನಮ್ಮ ಸಂಬಂಧಿಕರು ತುಂಬಿದ್ದರು. ನೋಡುತ್ತಾ ನೋಡುತ್ತಾ ನಾಲ್ಕು ವರ್ಷ ಮುಗಿದು, ನನ್ನ ಗ್ರಾಜುಯೇಷನ್ ಆಗಿಹೋಯಿತು. ಈ ನಾಲ್ಕು ವರ್ಷದೊಳಗ ಎರಡು ಮುಂಜವಿ, ಇಬ್ಬರ ಅಕ್ಕಂದಿರ ಮದುವೆ ನಡೆದು ಹೋಯಿತು. ಅಪ್ಪನ ಮಾಸ್ತರಿಕೆ ಪಗಾರ ದೊಡ್ಡ ಸಂಸಾರಕ್ಕ ಕಡಿಮೆ ಬೀಳುತ್ತಿತ್ತು ಮದುವೆಗೆ, ಮುಂಜುವಿಗೆ ಹೊಲದ ಒಂದೊಂದು ತುಕಡಿ ಹೊಲ ಗೇಣಿ ಮಾಡುವ ರೈತನಿಗೆ ಮಾರುವುದು ನಡೆದಿತ್ತು. ಅಕ್ಕ ಮತ್ತು ತಂಗಿಯಂದಿರ ಗಂಡನ ಮನಿ ಅಂದ್ರ ಸಂಬಂಧಿಕರs. ಅಕ್ಕನ ಗಂಡ ನನ್ನ ಖಾಸ ಸೋದರಮಾವ. ಹಂಗ ನೋಡಿದರೆ ಹೊಸಬರು ಪರಿವಾರದೊಳಗೆ ಸೇರಲಿಲ್ಲ, ಏನೂ ಬದಲಾವಣೆ ಆದಂಗ ಅನಿಸಲಿಲ್ಲ. ಜೀವನ ಸರಳವಾಗಿ ಹರಿಯುವ ನದಿಯಾಗಿತ್ತು. ನೌಕರಿ ಬ್ಯಾಟಿಗೆ ಶುರುಮಾಡಿದೆ. ನನ್ನ ಸಾದಾ ಬಿ ಎ ಗೆ ಕೆಲಸ ಸಿಗೋದು ಕಠಿಣ ಇತ್ತು. ಪೂರ್ವಜರು ಮಾಡಿದ ಪೌರೋಹಿತ್ಯ ಮತ್ತು ಮಾಸ್ತರ್ಕಿಗೆ ನನಗೆ ಯೋಗ್ಯತಾ ಇರಲಿಲ್ಲ. ನನ್ನದು ಅಂತ ಜೀವನ ಕಟ್ಟಿಕೊಳ್ಳಾಕ ಒಂದು ಕೆಲಸ ಅವಶ್ಯವಿತ್ತು. ಖರೆ ಹೇಳಬೇಕಂದ್ರೆ, ಬೇರೆಯಾದ ಅಸ್ತಿತ್ವ ನಮಗ್ಯಾರಿಗೂ ಇರಲಿಲ್ಲ. ಆದರೂ ಪಾಯಿಪ್ಸ್ ಮಾರುವ ಒಂದು ಪ್ರೈವೇಟ್ ಕಂಪನಿಯೊಳಗ ಕ್ಲರ್ಕ್ ಕೆಲಸ ಸಿಕ್ಕಿತು. ಆದರೆ ಊರು ಬಿಟ್ಟು ಹತ್ತಿರದ ಊರಿಗೆ ಹೋಗಬೇಕಾಯಿತು. ಅಲ್ಲಿ ನಾ ಇರಬೇಕೆಂದರೆ ಮನಿ ಮಾಡಬೇಕು ಅಂತ ಹೇಳಿ ನಮ್ಮವ್ವ ಮತ್ತು ನಮ್ಮ ಅಕ್ಕ ಕೂಡಿ ನನ್ನ ಮದುವೆ ಮಾಡಬೇಕಂತ ಕನ್ಯಾ ಹುಡುಕಲಿಕ್ಕೆ ಹತ್ತಿದರು. ದೂರದ ಸಂಬಂಧಿಗಳ ಬಡವರ ಹುಡಿಗಿ ರಾಧಾ ನನ್ನ ಅರ್ಧಾಂಗಿಯಾಗಿ ಮನಿ ತುಂಬಿದಳು. ಸೌಮ್ಯ ಸ್ವಭಾವದ ರಾಧಾ ಎಲ್ಲ ರೀತಿಯಿಂದ ಹೊಂದಿಕೆ ಆಗಿದ್ದಳು. ಆದರ ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳ ಭಾಗ್ಯ ಸಿಗಲಿಲ್ಲ. ಅವ್ವ ರಾಧಾಳನ್ನ ಡಾಕ್ಟರ್ ಕಡೆಗೆ ಕರ್ಕೊಂಡು ಹೋದಳು. ಅವಾಗ ಬೇರೆ ಏನೋ ವಿಷಯ ಹೊರಗೆ ಬಂತು. ಏನಂದ್ರೆ ರಾಧಾಗ ಡಯಾಬಿಟಿಸ್ ಇತ್ತು. ಅದು ಕೂಡ ಹೆಚ್ಚಿನ ಪ್ರಮಾಣದ ಸಕ್ಕರೆ ರೋಗ. ಸರಿ ಅದಕ್ಕೆ ಟ್ರೀಟ್ಮೆಂಟ್ ಸುರುವಾಯಿತು. ಮಕ್ಕಳ ವಿಷಯ ಮರೆತು ಹೋಯಿತು. ಮುಂದೆ ಕೆಲವರ್ಷದೊಳಗ ನನಗೂ ಡಯಾಬಿಟಸ್ ಶುರುವಾಗಿತ್ತು. ಆದರೂ ನಾ ತಲಿಬಿಸಿ ಮಾಡಿಕೊಳ್ಳಲಿಕ್ಕೆ ಹೋಗಲಿಲ್ಲ. ನಮ್ಮ ಸಂಬಂಧಿಕರು ಬಹುತೇಕ ಜನರಿಗೆ ಇದು ಇತ್ತು. ಬಹುಶಃ ಆನುವಂಶಿಕತೆ ಇರಬಹುದು ಅನಿಸಿ ನಾನೂ ಕೂಡ ಔಷಧಿ ತೆಗೆದುಕೊಳ್ಳಹತ್ತಿದೆ. ಕೂಡು ಕುಟುಂಬದೊಳಗೆ ಇದ್ದುಕೊಂಡು ಸದಾಕಾಲ ಸಾವು – ನೋವು, ರೋಗ
ವಾರದ ಕವಿತೆ
ಹೊಸ್ತಿನ ಹಗಲು ಫಾಲ್ಗುಣ ಗೌಡ ಅಚವೆ ಬಯಲು ಗದ್ದೆಯ ಹೊಸ ಭತ್ತದ ಕದರುರೈತರ ಬೆವರ ಬಸಿಯುವ ಕಯಿಲುಕಂಬಳಕಿಂಪಿನ ಪಾಂಗಿನ ಅಮಲುಹೊಡತಲೆ ಹಗಣದ ಕವಳದ ಸಾಲುಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಮೊನೆಯಲಿ ಸಸಿಬುಡ ಬೇರುಕದರಿನ ನಡುವಲಿ ಗಂಧದ ಹೂವುಮಣ್ಣಲಿ ಹುದುಗಿದ ಎರೆಹುಳ ಪಾಡುಹರಡಿದ ಗಿಣಿಗಳ ಹಾಡಿನ ಜಾಡುಆಚರಿಸುತಿದೆ ಹೊಸ್ತಿನ ಹಗಲು. ಮಣ್ಣಿನ ಬಣ್ಣದ ಮನಸಿನ ತೆವಲುಕೆಂದರಕಿ ಹೂವಿನ ಕಮಾನು ಹೊಸಿಲುಹೂಡುವ ಎತ್ತಿನ ಅಡಸಲ ಕವಲುಹೂನೀರಾಡಿದ ಹೊಸ ಭತ್ತದ ತೆನೆಗಳುಆಚರಿಸುತಿದೆ ಹೊಸ್ತಿನ ಹಗಲು. ಒಳಗಿನ ಅಕ್ಕಿಯ ಮಡಕೆಯ ಕೊರಳುಅಂಗಳದಲ್ಲಿನ ಒನಕೆಯ ಒರಳುತುಂಬಿದ ದನಗಳ ಹಟ್ಟಿಯ ಬಾಗಿಲುಮಿರಿ ಮಿರಿ ಮಿಂಚುವ ಮೋಡದ ಮುಗಿಲುಆಚರಿಸುತಿದೆ ಹೊಸ್ತಿನ ಹಗಲು. ತೆನೆಗಳ ರಾಶಿಯ ಸುಗ್ಗಿಯ ಗೊಂಡೆಮನೆ ಮನೆ ಹಿಗ್ಗುವ ಹೊಸ್ತಿನ ದಂಡೆಹೊರಟಿದೆ ದೇವರ ಪಾಲ್ಕಿಯ ಹಿಂದೆಹೊಸ ಅಕ್ಕಿಯ ಮಡಕೆಯ ಹೊತ್ತಿಹ ಮಂದೆನಿಕ್ಕಿಯಾಗಿದೆ ಹೊಸ್ತಿನ ಹಗಲು. ಭತ್ತದ ಕುತ್ರಿಯ ಸಾಲಿನ ಕನಸುಕಣಜವ ತುಂಬುವ ಸಾವಿರ ನನಸುಬಡತನ ಬಾರದ ಅನ್ನದ ಉಣಿಸುದೇವರಿಗೊಪ್ಪಿಸೋ ಧನ್ಯತೆ ಸೊಗಸುಆಚರಿಸುತ್ತಿದೆ ಹೊಸ್ತಿನ ಹಗಲು. ಬೆವರಿನ ನೆತ್ತರ ಚೆಲ್ಲಿದ ದಿನಗಳುಹಿಡಿ ಅನ್ನಕೆ ದುಡಿದಿಹ ಗೇಣಿಯ ಕೈಗಳುಮೂಲಗೇಣಿಗೆ ಕೋರ್ಟಿನ ಕರೆಗಳುಒಡೆದೀರ್ ಮನೆಗಳ ಬಿಟ್ಟಿ ಕೆಲಸದ ಅಗಳುಕಳೆದಾಚರಿಸುತಿದೆ ಹೊಸ್ತಿನ ಹಗಲು. ಆಲದ ಬಯಲಲಿ ಸೇರಿದ ಜನಗಳುದೇವಿಗೆ ಅರ್ಪಿಸಿರನ್ನದ ಅಗಳುಹೃನ್ಮನ ತುಂಬಿದ ಕೈಯನು ಮುಗಿದುಆಚರಿಸಿದರು ಹೊಸ್ತಿನ ಹಗಲು. ಉಪಾರ ಹಂಚುವ ಹೈಲಿನ ಹಿರಿಯಎಲ್ಲರೂ ಕೂಡಿಯೇ ಉಂಬರು ಬೆಳೆಯಮುಂದೆಯೂ ಬದುಕನು ಕಾಯಲು ಬೇಡುತಆಚರಿಸಿದರು ಹೊಸ್ತಿನ ಹಗಲು. ಸುಗ್ಗಿಯ ಕಾಲದ ಸಂಭ್ರಮ ನೆನಪುಕರಿಯಕ್ಕಿಯ ಹಂಚಲು ಕೂಡಿಡೋ ಮನಸುಹಬ್ಬದಿ ಬಡವರ ಹಸಿವನು ನೀಗಿಸೋಆಚರಿಸುತಿದೆ ಹೊಸ್ತಿನ ಹಗಲು ಕರಿದೇವರ ಪೂಜಿಸೋ ಧನ್ಯತೆ ಸೊಗಸುಕುಲದೇವರ ನೆನೆಯುವ ಭಕ್ತಿಯನಿಂಪುಗ್ರಾಮ ದೇವರಲಿ ಪುಡಿ ಕೇಳುವ ಹುರುಪುಆಚರಿಸುತಿದೆ ಹೊಸ್ತಿನ ಹಗಲು. ಹತ್ತರದಲ್ಲಿದೆ ಹಸುಗಳ ಬಿಚ್ಚುವ ಹಬ್ಬಹುಲಿದೇವನ ನೆನೆದು ಕಾಯುವ ಕಬ್ಬವರುಷಕೆ ಒಂದೇ ಕಚ್ಚೆ ರುಮಾಲುಆಚರಿಸುತಿದೆ ಹೊಸ್ತಿನ ಹಗಲು. ಹುಲ್ಲಿನ ಮನೆಗಳ ಹೊದಿಕೆಯ ಸಾಲುಕಂಬಳ ಮಾಡುವ ಪಾಯಸ ಗಮಲುಮನೆ ಮನೆಗೊಬ್ಬನ ಕರೆಯುವ ಕರೆಯುಆಚರಿಸುತಿದೆ ಹೊಸ್ತಿನ ಹಗಲು. ಸುಗ್ಗಿಯ ತುರಾಯಿ ಭತ್ತದ ಕದರುಒಣಗಿದ ಕೆಯ್ಯಿನ ಹುರುಪಿನ ಕೊಯ್ಲುಬಡತನ ಬದುಕಿನ ಕಷ್ಟದ ಬಯಲುಆಚರಿಸುತಿದೆ ಹೊಸ್ತಿನ ಹಗಲು. ಅಂಬಲಿ ಮಡಕೆಯ ಅಮೃತದಸಿವುಬೆಣ್ಣೆ ದೊಸೆಯ ಕಡುರುಚಿದುಸಿರುವರುಷಕೆ ಒಂದೇ ಕಚ್ಚೆ ಅರಬಿಯ ಹಾಡುದುಡಿತದ ಮೈಕಪ್ಪಿನ ಅರೆಬರೆ ಪಾಡುಮರೆಸುವ ಸಿರಿ ಹೊಸ್ತಿನ ಹಗಲು. ******************************
ವಾರದ ಕವಿತೆ
ವಾರದ ಕವಿತೆ ಆಟ ದೀಪ್ತಿ ಭದ್ರಾವತಿ ಸಾವಿನ ಆಟವಾಡುವಾಗನಿಶ್ಯಬ್ಧ ನಿಶ್ಯಬ್ಧ ಮತ್ತು ನಿಶ್ಯಬ್ಧತೂಕದ ತೋಳುಗಳಹವಣಿಕೆಗೆ ನಿಲುಕದ್ದುಯಾವುದಿದೆ ಇಲ್ಲಿ? ಮರೆ ಮರೆವ ಆಟಬಿಟ್ಟು ಹೋಗುವ ಆಟಸುತ್ತೆಲ್ಲ ಸಮಚಿತ್ತದಲಿಕೂತ ಕೊಕ್ಕೆಗಳನೂರು ಚಿತ್ತಾರಕೆಇಹಪರದ ತರತಮವೆಲ್ಲಿ? ಜೊತೆಗಿದ್ದವರು ಕೈ ಬೀಸುವಬೆನ್ನು ಬಿದ್ದವರುಹೆಗಲು ನೀಡುವ ಸಾಕಾರ ಕ್ರಿಯೆಗಿಲ್ಲಿಸಾವಿರದ ಸಾಸಿವೆ ದೀಕ್ಷೆಬಿಟ್ಟು ಬಿಡುವ ರೆಕ್ಕೆಗಳಪೇರಿಸಿಟ್ಟುಕೊಳ್ಳುವ ಸಾಹಸಕ್ಕೆತುದಿ ಮೊದಲೇ ಭಾವ ಭಂಗಿ? ಆದಿ ಅನಾದಿಗಳ ಲಕ್ಷ ಪ್ರಶ್ನೆಗೆಉತ್ತರ ಹುಡುಹುಡುಕಿ ಸೋತವರಪಟ್ಟಿಯೊಂದೆಜಗದ ಜಂತಿಯಲಿ ನೇತುಬೀಳುವಹೊಸ ಅಂಗಿ ******************************
ನದಿ. ವಾರದ ಕವಿತೆ ಪೂರ್ಣಿಮಾ ಸುರೇಶ್ ಕಿರಿಕಿರಿಕೊಡಲು ಆರಂಭಿಸಿವೆಈ ಸಂಖ್ಯೆಗಳುಇಸವಿ,ಮಾಸ,ದಿನತಳದಲ್ಲಿ ಅದೆಷ್ಟುಮಧು ಉಳಿದಿದೆಋತುಸುತ್ತು ಸುತ್ತಿಚೈತ್ರದ ಎಳೆಹಸಿರುಪಚ್ಚೆಹಳದಿಯಾಗಿ ಮಾಗಿಗೊಣಗಿಕ್ಷೀಣ ಆಕ್ರಂದನ ಚೀರಿ ಕಳಚುವತರಗೆಲೆಯ ನಿಟ್ಟುಸಿರುನಿರಂತರ ಮರ್ಮರ ಹೆಜ್ಜೆ,ದನಿ,ಗಾಳಿಯಸ್ಪರ್ಶಕ್ಕೆಒಡಲ ಹಾಡು ನಿಟ್ಟುಸಿರುಒಣ ಶಬ್ದ ಸೂತಕವಾಗಿ ತೊಡೆಯಲ್ಲಿ ತರಚಿಉಳಿದುಹೋದಕಲೆಗಳೂಆಪ್ತ ಪಳೆಯುಳಿಕೆ ನೀರಾಗುವ ಪುಳಕಿತಘಳಿಗೆಯಲ್ಲೂಬಚ್ಚಲಿನ ಹಂಡೆಇಣುಕಿಉಳಿದಿರಬಹುದಾದಬೆಚ್ಚಗಿನ ನೀರಿನಲೆಕ್ಕಾಚಾರಒದ್ದೆ ತಲೆಗೂದಲಿನ ಸಂದಿಯಲಿಜಲಬಿಂದುಗಳಪಿಸು ಒಂದು ಕುಂಭದ್ರೋಣಮಳೆಯಾಗಿಒಣಗಿ ಬಿರುಕು ಬಿಟ್ಟ ,ಬೆಟ್ಟ, ಬಯಲು, ತೊರೆ,ತೊಯ್ದುಒದ್ದೆ ಒದ್ದೆಯಾಗಿಹೆಣ್ಣಾಗಬೇಕುಹರಿಯುತ್ತಲೇ ಇರಬೇಕು *************************************************









