ಮೌನದಲ್ಲಿನ ಮಾತು
ಕಾವ್ಯ ಸಂಗಾತಿ ಮೌನದಲ್ಲಿನ ಮಾತು ಶ್ರೀವಲ್ಲಿ ಮಂಜುನಾಥ ಕವಿತೆ ಏನ ಹೇಳಲಿ ಸಖನೆ,ನೀ ನುಡಿಯದಿರಲೇನುನಿನ್ನ ಈ ಮೌನದಲೇನನ್ನ ಹಿಡಿದಿಟ್ಟಿರುವೆ ! ನಿಶೆಯಳಿದು,ಉಷೆಯುದಿಸೆಹೊನ್ನಯೆಳೆಯಂದದಿನಿನ್ನ ದನಿಯದು ತಾಆಗಸದಿ ಮೂಡುವುದು! ಹಕ್ಕಿಯೆದೆಗೂಡಿಂದಹೊರಟ ದನಿಯಲಿನಿನ್ನ ಇನಿದನಿಯುಕಲರವವಗೈದಿಹುದು ! ಆ ಇನಿದನಿಯನ್ನುಆಲಿಸಿದ ಈ ಬುವಿಯಮರಗಳು, ಮೌನದಲೆಹೂವುಗಳ ಅರಳಿಸುತ್ತಿಹುದು! ಮೌನದಾ ಸೆರಗಲ್ಲೆಮಾತುಗಳಡಗಿದೆಯಲ್ಲಮನದ ಮಾತುಗಳನೆಲ್ಲಕಂಗಳರುಹಿದೆಯಲ್ಲ! ಮೌನದರಮನೆಯರಸ,ಮಾತನಾಡದೆಯೆನಗೆಗಿಳಿಮಾತ ಕಲಿಸಿದಾನಿನಗೆ ನಾ ಶರಣು !! ಶ್ರೀವಲ್ಲಿ ಮಂಜುನಾಥ
ಸಂಕ್ರಾಂತಿ ಬಂತೋ ರತ್ತೋ ರತ್ತೋ ವಿಶಾಲಾ ಆರಾಧ್ಯ ಭಾರತವು ಅನೇಕ ಧರ್ಮಗಳನ್ನೊಳಗೊಂಡ ದೇಶ. ಹಬ್ಬಗಳು ಎಲ್ಲಾ ಧರ್ಮಗಳಲ್ಲಿ ಹಾಸು ಹೊಕ್ಕಾಗಿವೆ. ಈ ಹಬ್ಬಗಳಿಗೆ ತನ್ನದೇ ಆದ ವಿಶೇಷ ಹಿನ್ನೆಲೆ ಮತ್ತು ಪ್ರತೀಕಗಳು ಇವೆ. ಭಾರತೀಯರೆಲ್ಲಾ ಕೂಡಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ. ಆಯಾ ಧರ್ಮದವರು ಆಚರಿಸುವ ಹಬ್ಬಗಳು ಮತ್ತೊಂದು. ಉತ್ತರಭಾರತದಲ್ಲಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ.. ಅದೇ ಹಬ್ಬಗಳನ್ನು ಬೇರೆ ಹೆಸರಿನಿಂದ ದಕ್ಷಿಣ ಭಾರತೀಯರು ಆಚರಿಸುತ್ತಾರೆ. ಇಂತಹ ಹಬ್ಬಗಳಲ್ಲಿ ಸಂಕ್ರಾಂತಿಯು ನಮ್ಮ ದಕ್ಷಿಣ ಭಾರತೀಯರಿಗೆ ಅದರಲ್ಲೂ ಹಿಂದೂಗಳಿಗೆ ಇದು ಮಹತ್ವದ […]
“ತಾನು ಚೆನ್ನಾಗಿ ಬದುಕಿದ್ದೇನೆ ಎಂದು ಧೈರ್ಯಪಡಬಲ್ಲವನು ಸಾವಿಗೆ ಅಂಜುವುದಿಲ್ಲ”
– ಶಿವರಾಮ ಕಾರಂತ
ಭೂಮಿ ಗೀತ ಕವಿತೆ ಕುರಿತು ಒಂದು ಒಳನೋಟ;
ಪುರುಷಾಹಂಕಾರಕ್ಕೆ ಪ್ರತ್ಯುತ್ತರ
ಬರವಣಿಗೆಯೆಂಬ ಮಾಯಾ ಜಾಲ
ಕಾವ್ಯ ಸಂಗಾತಿ ನನಗೂ ನಿನ್ನಂತಾಗಬೇಕಿತ್ತು ಅದೆಷ್ಟೋ ಸಲ ನಾನೂ ನಿನ್ನಂತಾಗಲು…ಎದೆಯಾಳದ ಕನಸಿನ ಕಣ್ಣಿಗೆ ಕಪ್ಪು ಪಟ್ಟಿ ಬಿಗಿಯುತಿದ್ದೆತೀವ್ರವಾದ ಭಾವಗಳು ಎಲ್ಲೆ ಮೀರದಂತೆಇತಿಮಿತಿಯ ರೇಖೆಯನೆಳೆಯುತಿದ್ದೆ ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗಕರಾಳ ಮೌನ ಎದೆಯನ್ನು ಸುಡುತಿತ್ತುಅಭದ್ರತೆಯ ನೆಲೆಯೊಳಗೆ ಓಲಾಡಿಸುತಿತ್ತು ಅಂದುಕೊಂಡಂತೆ ಇರಲಾಗದೆಸಣ್ಣ ತಪ್ಪುಗಳೂ ವಿರಾಟ ರೂಪ ತಳೆದುಮೂರ್ತರೂಪಕ್ಕಿಳಿಸುವ ಛಲದಿನಕಳೆದಂತೆ ಇಳಿಯುತ್ತಲೇ ಇತ್ತು ನಿನ್ನ ಸಖ್ಯವಾದ ಮೇಲೆನಾನೆನುವ ಅಹಂಭಾವ ಬಿಗುಮಾನಎಲ್ಲವೂ ದೂರ ಸರಿದುನಿನ್ನ ಅನುನಯದೊಳು ಹೂವಾಗಿದ್ದು ಸುಳ್ಳಲ್ಲ ಬೇಕು ಬೇಡಗಳ ನಡುವಿನ ಒಳಪಂಥದಲಿಅದೆಷ್ಟೋ ಬಾರಿ ನಾನೂ ನೀನೂಸೋತು ಗೆಲ್ಲುತಿದ್ದೆವು ಕೆಲವೊಮ್ಮೆ ಮಾತು ಮೌನಗಳ […]
ಪ್ರೀತಿಯ ಸಂಗಾತಿ ಬಳಗವೇ ….
ಈ ಸಂದರ್ಭದಲ್ಲಿ ಸಂಗಾತಿ ಬಳಗ, ನಮ್ಮ ಲೇಖಕರಿಗೆ, ಓದುಗರಿಗೆ ಪುಟ್ಟದಾಗಿ ನಮ್ಮ ಸೌಹಾರ್ದ ಪರಂಪರೆಯನ್ನು ನೆನಪಿಸಿದೆ. ನಮ್ಮ ಎಲ್ಲಾ ಬಳಗಕ್ಕೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು..
ರೇಣುಕಾ ರಮಾನಂದ ಗೆ ವಿಭಾ ಸಾಹಿತ್ಯ ಪ್ರಶಸ್ತಿ
ರೇಣುಕಾ ರಮಾನಂದ ಗೆ ವಿಭಾ ಸಾಹಿತ್ಯ ಪ್ರಶಸ್ತಿ ೨೦೨೧ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ರೇಣುಕಾ ರಮಾನಂದ ಅವರ ‘ಸಾಂಬಾರ ಬಟ್ಟಲ ಕೊಡಿಸು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಬಾನು ಮುಷ್ತಾಕ್ ಮತ್ತು ಕೆ. ಫಣಿರಾಜ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ‘ಬದುಕಿನ ಅಸ್ತತ್ವದ ಸ್ಥಿತಿ, ಅದರಿಂದ ಉಂಟಾಗುವ ಆತಂಕಗಳು ಹಾಗೂ ಅವುಗಳನ್ನು ಎದುರಿಸುವ ಭಂಡ ಸಂಕಲ್ಪ ಭಾವವನ್ನು ಭಾಷೆಯನ್ನು ಮಾತ್ರವೇ ಪ್ರಮಾಣವಾಗಿಟ್ಟುಕೊಂಡು ಚಿತ್ರವತ್ತಾಗಿ ಕಟ್ಟುವ ಬಗೆಗಾಗಿ “ಸಾಂಬಾರ ಬಟ್ಟಲ […]
ಪ್ರೀತಿಯ ಸಂಗಾತಿ ಬಳಗವೇ
ಸಂಗಾತಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಸಂಗಾತಿ ಎಂಬ ಪುಟ್ಟ ಗಿಡ ಬೆಳೆಯುತ್ತಾ , ಬೆಳೆಯುತ್ತಾ ನೆರಳು ನೀಡುವ ಮರವಾಗುತ್ತಿದೆ..
ಹುಡುಕಾಟವೆಂಬುದು ವ್ಯಾಧಿ
ಅನುವಾದ ಸಂಗಾತಿ ಹುಡುಕಾಟವೆಂಬುದು ವ್ಯಾಧಿ ಕನ್ನಡ ಮೂಲ:ಸ್ಮಿತಾ ಅಮೃತರಾಜ್. ಸಂಪಾಜೆ ಇಂಗ್ಲೀಷಿಗೆ: ಸಮತಾ ಆರ್. ಒಂದು ಪಾತ್ರೆಯ ಗಾತ್ರತನ್ನ ಪಾತ್ರಕ್ಕಿಂತ ಹೆಚ್ಚಿಗೆಇನ್ನೇನು ಭರಿಸಲು ಸಾಧ್ಯನೀನೇ ಹೇಳು?ಮೊಗೆದು ಮೊಗೆದು ಮತ್ತೂ ಮತ್ತೂಸುರಿದು ತುಂಬಿದ್ದಕ್ಕೆ ಕಾರ್ಯ ಕಾರಣವುಂಟೇ? ಕವಿತೆಗೂ ವಿಜ್ಞಾನಕ್ಕೂ ಕೂಡಿಬರದು ಸಖ್ಯಇದು ನಿನಗೂ ಗೊತ್ತಿರುವಂತಸತ್ಯ. ಸುರಿಯುವ ಓಘಕ್ಕೆತುಂಬಿದ್ದೂ ಚೆಲ್ಲಿ ಆರಿ ಹೋಗುತ್ತಿದೆಕಂಡೂ ಕಾಣದಂತಿರುವ ಸಣ್ಣದೊಂದುಬಿರುಕು ಪಾತ್ರದ ತಳಕ್ಕೀಗಅಡರಿಕೊಂಡಿದೆ. ಹಿಡಿ ಹೃದಯ ಮುಷ್ಟಿ ಗಾತ್ರಎದೆ ಬಡಿತ ರಕ್ತ ಸಂಚಲನಹಿಡಿ ಜೀವ ಇಲ್ಲೇ ಹಿಡಿದು ನಿಂತಿದೆಯೆನ್ನುವುದುಎಲ್ಲರಂತೆ ನೀನೂ ಓದಿ ಉರು ಹೊಡೆದವಳೆ.ಬದುಕು […]