ಹುಡುಕಾಟವೆಂಬುದು ವ್ಯಾಧಿ

ಅನುವಾದ ಸಂಗಾತಿ

ಹುಡುಕಾಟವೆಂಬುದು ವ್ಯಾಧಿ

ಕನ್ನಡ ಮೂಲ:ಸ್ಮಿತಾ ಅಮೃತರಾಜ್. ಸಂಪಾಜೆ

ಇಂಗ್ಲೀಷಿಗೆ: ಸಮತಾ ಆರ್.

ಒಂದು ಪಾತ್ರೆಯ ಗಾತ್ರ
ತನ್ನ ಪಾತ್ರಕ್ಕಿಂತ ಹೆಚ್ಚಿಗೆ
ಇನ್ನೇನು ಭರಿಸಲು ಸಾಧ್ಯ
ನೀನೇ ಹೇಳು?
ಮೊಗೆದು ಮೊಗೆದು ಮತ್ತೂ ಮತ್ತೂ
ಸುರಿದು ತುಂಬಿದ್ದಕ್ಕೆ ಕಾರ್ಯ ಕಾರಣವುಂಟೇ?


ಕವಿತೆಗೂ ವಿಜ್ಞಾನಕ್ಕೂ ಕೂಡಿ
ಬರದು ಸಖ್ಯ
ಇದು ನಿನಗೂ ಗೊತ್ತಿರುವಂತ
ಸತ್ಯ.

ಸುರಿಯುವ ಓಘಕ್ಕೆ
ತುಂಬಿದ್ದೂ ಚೆಲ್ಲಿ ಆರಿ ಹೋಗುತ್ತಿದೆ
ಕಂಡೂ ಕಾಣದಂತಿರುವ ಸಣ್ಣದೊಂದು
ಬಿರುಕು ಪಾತ್ರದ ತಳಕ್ಕೀಗ
ಅಡರಿಕೊಂಡಿದೆ.

ಹಿಡಿ ಹೃದಯ ಮುಷ್ಟಿ ಗಾತ್ರ
ಎದೆ ಬಡಿತ ರಕ್ತ ಸಂಚಲನ
ಹಿಡಿ ಜೀವ ಇಲ್ಲೇ ಹಿಡಿದು ನಿಂತಿದೆಯೆನ್ನುವುದು
ಎಲ್ಲರಂತೆ ನೀನೂ ಓದಿ ಉರು ಹೊಡೆದವಳೆ.
ಬದುಕು ಬರೇ ಶುಷ್ಕ ವಿಜ್ಞಾನವೇ? ಅನ್ನುವ ನಿನ್ನ
ಮರು ತರ್ಕ ಕೂಡ ಸರಿಯೇ.

ಮಿದು ಹೃದಯದೊಳಗೆ
ಬಂಡೆ ಗಾತ್ರ ದುಗುಡ
ಪ್ರತೀ ಬಡಿತಕ್ಕೂ ಉಲಿವ ಧ್ಯಾನ
ಕೊಟ್ಟಷ್ಟೂ ಪಡೆದಷ್ಟೂ ತೀರದ
ಉಸಿರ ಸುಖದ ಕಂಪನ..

ಈ ಅತೀತಗಳಾಚೆಗೇ ನಂಬಿಕೆ ಇಡುವ
ನಿನಗೋ ಹುಂಬ ನಿರೀಕ್ಷೆ
ಒಲವಿಗೆ ಬಿದ್ದ ಜೀವಗಳದ್ದು ಬಿಡಿ,
ಇದು ಸಹಜ ತಹತಹಿಕೆ.

ಅಕೋ ಅಲ್ಲಿ..
ಅತೀತ ಅಚ್ಚರಿಯೊಂದು ಘಟಿಸುತ್ತಿದೆ.
ಇಂಗಿಸಿಕೊಳ್ಳುತ್ತಲೇ ತೇವಗೊಳ್ಳುವ ನೆಲ
ಅಕಾರಣ ಪ್ರೀತಿಗೆ ದ್ಯೋತಕವಾದ ಹಾಗೆ
ಬೇಲಿ ಸಾಲಿನ ಮೇಲೆ ಅರಳಿ ನಿಂತ
ಪುಟ್ಟ ನೀಲಿ ಹೂ ನಗೆ.

ಭೂಮಿಯಂತ  ಹೃದಯ ಪಾತ್ರೆ
ನಿಜಕ್ಕೂ ಇದ್ದೀತೇ?
ಧಾರೆ ಧಾರೆ ಸುರಿದರೂ ಬರಿದಾಗದೇ
ಹಾಗೇ ಉಳಿದೀತೇ?

ಎಲ್ಲವಕ್ಕೂ ಇಲ್ಲಿ ಸಾಕ್ಷ್ಯವಿಲ್ಲ
ಇದ್ದರೂ ಪ್ರಶ್ನಿಸುವ ಹಾಗಿಲ್ಲ
ಅಕ್ಕನಿಂದಲೇ ಶುರುಗೊಂಡಿದೆ ಯಾದಿ ಹುಡುಕಾಟವೆಂಬುದು ಹೀಗೆ..
ಅದು ಜನುಮಕ್ಕಂಟಿದ ವ್ಯಾಧಿ.

    *********************

What more can a vessel hold
than its volume,?
Only you can tell me.
Is there any cause and effect
For  filling and filling,
Again and again.

Poetry and science
can never be mates,
You are also aware of this fact.

The vessel is overflowing
by the speed of filling,
The spilt is evaporating.

A small, almost invisible crack is
now adhering to the bottom.

The heart, of a fistful size,
that throbs,
the blood that flows,
hold the life within,
You too had by hearted all these,
Just like  us.
“Is life all about just dry facts of science?”
Your quest is also right.

This soft heart holds
so much agony as a boulder,
Yearning with every beat,
For unquenched desire,
Even after so much is given and taken.

You, who believes beyond all,
have stupid expectations.
But this longing is there
for all the souls that are in love.

Look there,
An amazing surprise is happening,
The soil gets wet
while allowing to seep in.
The smile of the blooming
little blue flower  on the fence
reveals the unconditional love.

Is there really a heart vessel
As big as the earth,?
Which will not get emptied
even after pouring abound.?

There is no proof for everything,
Even if it’s there,
can’t question anything.
The list of those left for the quest,
begins with Akka atop,
It’s like that only,
A disease that affects,
till the life stops.


5 thoughts on “ಹುಡುಕಾಟವೆಂಬುದು ವ್ಯಾಧಿ

  1. ಸ್ಮಿತಾ ಮತ್ತು ಸಮತಾ ಇಬ್ಬರಿಗೂ ಅಭಿನಂದನೆಗಳು. ಮೂಲ ಕವಿತೆಯಷ್ಟೇ ಸಶಕ್ತ ಅನುವಾದ.

  2. ಬದುಕೇ ಒಂದು ಹುಡುಕಾಟ….

    ಕವಿತೆ ಚೆಂದ. ಅನುವಾದ ಇನ್ನೂ ಚೆಂದ.

Leave a Reply

Back To Top