ಗಜಲ್ ಸಾಹಿತ್ಯ ಮತ್ತು ಸವಾಲುಗಳು
ಲೇಖನ ಗಜಲ್ ಸಾಹಿತ್ಯ ಮತ್ತು ಸವಾಲುಗಳು ಡಾ. ಮಲ್ಲಿನಾಥ ಎಸ್.ತಳವಾರ ಪ್ರಕೃತಿಯನ್ನೊಮ್ಮೆ ಅವಲೋಕಿಸಿದಾಗ ‘ಮನುಷ್ಯ’ ನ ವಿಕಾಸ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಅದೊಂದು ರೀತಿಯಲ್ಲಿ ಪವಾಡವೇ ಸರಿ ! ಎಲ್ಲ ಪ್ರಾಣಿ ಸಂಕುಲಗಳಿಂದ ಆತನು ವಿಭಿನ್ನವೆನಿಸಿದ್ದು ಮಾತ್ರ ಭಾಷೆಯ ಬಳಕೆಯಿಂದ. ತನ್ನ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ‘ಭಾಷೆ’ ಯನ್ನು ಸಾಧನವನ್ನಾಗಿ ಮಾರ್ಪಡಿಸಿಕೊಂಡನು. ಈ ಭಾಷೆಯ ಉದಯದೊಂದಿಗೆ ಸಾಹಿತ್ಯವೂ ಉದಯವಾಯಿತು ಎನ್ನಬಹುದು. “ಭಾಷೆಯ ಉದಯವೆಂದರೆ ಸಾಹಿತ್ಯದ ಉದಯವೆ ಸರಿ” ( ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಎಂಬ ರಂ. […]
ಪ್ರಶಸ್ತಿ ಘೋಷಣೆ
ಪ್ರಶಸ್ತಿ ಘೋಷಣೆ ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಪ್ರಶಸ್ತಿಗಳು ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಇವರ ವತಿಯಿಂದ ಪ್ರತಿ ವರ್ಷ ಸಾಹಿತ್ಯ,ಶಿಕ್ಷಣ,ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ನಾಡಿನ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿಕೊಂಡು ಬರಲಾಗುತ್ತಿದೆ 2019-20 ನೇ ಸಾಲಿನಲ್ಲಿಕನಕ ಶರೀಫ ಪುರಸ್ಕಾರ 1-ಬಿ.ಶ್ರೀನಿವಾಸ-2019 ದಾವಣಗೆರೆ2-ಅಲ್ಲಾಗಿರಿರಾಜ-2020 ಕೊಪ್ಪಳ ಡಾ.ಹಿರೇಮಲ್ಲೂರ ಈಶ್ವರನ್ ಶಿಕ್ಷಕ ಪುರಸ್ಕಾರ 1-ಡಾ.ವಾಯ್.ಎಂ.ಯಾಕೊಳ್ಳಿ-2019 ಬೆಳಗಾವಿ2-ಜಿ.ಎಸ್.ಬಿಜಾಪುರ-2020 ಬಾಗಲಕೋಟೆ ಡಾ.ಅರಟಾಳ ರುದ್ರಗೌಡರ ಸಾಮಾಜಿಕ ಸೇವಾ ಪುರಸ್ಕಾರ 1-ಡಾ.ಹನುಮಂತಪ್ಪ ಪಿ.ಎಚ್.2019 ಶಿಗ್ಗಾಂವ2-ಅಕ್ಷತಾ ಕೆ.ಸಿ.2020 ಹಾವೇರಿ. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನೇವರಿ 2021 […]
” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು”
” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” ರಶ್ಮಿ ಎಸ್. ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ ಡಿ. 6,7,8 ಬಾಬರಿ ಮಸೀದಿ ಪ್ರಕರಣ ಆದಾಗ ಇಡೀ ದೇಶ ಕೋಮು ದಳ್ಳುರಿಯೊಳಗ ಧಗಧಗಿಸುತ್ತಿತ್ತು… ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ … ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ… ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ […]
ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..!
ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಕೆ.ಶಿವು.ಲಕ್ಕಣ್ಣವರ ‘ಮಹಾನಾಯಕ’ ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಡಿ. 6 ದೇಶದ ಮಹಾನಾಯಕ ಅಂಬೇಡ್ಕರ್ ಅವರನ್ನು ಕಳೆದುಕೊಂಡ ದಿನ. ಅವರ ಕೊನೆಯ ಸಂದೇಶವನ್ನು ಪ್ರತಿಯೊಬ್ಬರು ತಿಳಿಯಬೇಕು ಅಂದು ಡಿಸೆಂಬರ್ 6, 1956. ಇಡೀ ಭಾರತದಲ್ಲಿ ಕಣ್ಣೀರ ಕೋಡಿ ಹರಿದ ದಿನ. ಕತ್ತಲಲ್ಲಿದ್ದ ಭಾರತಕ್ಕೆ ಬೆಳಕಿನ ಕಿರಣ ನೀಡಿ, ವಿಶ್ವವೇ ಬೆರಗಾಗುವಂತೆ ಮಾಡಿದ್ದ, ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಬ್ಬಾಣ ಹೊಂದಿದ ದಿನ. ಭಾರತದ ಕಣ್ತೆರೆಸಿ, […]
ದೊಡ್ಡವರ ಮನೆಯ ಸಣ್ಣ ಕತೆ
ಅನುಭವ ದೊಡ್ಡವರ ಮನೆಯ ಸಣ್ಣ ಕತೆ ವೀಣಾ ನಿರಂಜನ್ ಈ ದೊಡ್ಡವರ ಮನೆಯ ಕತೆಗಳು ಬಹಳ ಸ್ವಾರಸ್ಯಕರವಾಗಿರುತ್ತವೆ. ನಾನು ಇಲ್ಲಿ ಹೇಳ ಹೊರಟಿರುವುದು ಒಂದು ಸ್ಯಾಂಪಲ್ ಅಷ್ಟೇ. ಆ ದಿನ ಮನೆ ಮಂದಿಯೆಲ್ಲ ಸಡಗರದಿಂದ ಓಡಾಡುತ್ತಿದ್ದರು. ಮನೆಯ ಮಗನ ಹುಟ್ಟುಹಬ್ಬ ಎಂದರೆ ಕೇಳಬೇಕೆ. ಶೇಖರ್ ಬಾಬು ಬೆಳಿಗ್ಗೆಯೇ ಮಗನಿಗೆ ಇಂಪೋರ್ಟೆಡ್ ಶಾಂಪೂ, ಸೋಪು ಹಾಕಿ ಹಿತವಾಗಿ ಸ್ನಾನ ಮಾಡಿಸಿದರು. ಮಕ್ಕಳಿಬ್ಬರೂ ಸಂಭ್ರಮದಿಂದ ತಂದೆಗೆ ನೆರವಾದರು. ಶರಾವತಿ ಸಂಜೆ ಪಾರ್ಟಿಗೆ ಯಾರ್ಯಾರನ್ನು ಕರೆಯಬೇಕು, ಏನೇನು ಆರ್ಡರ್ ಮಾಡಬೇಕು ಅದೆಲ್ಲವನ್ನೂ […]
ಪಾರಿಜಾತ ಗಿಡ
ಲಲಿತ ಪ್ರಬಂಧ ಪಾರಿಜಾತ ಗಿಡ ವಿದ್ಯಾ ಶ್ರೀ ಎಸ್ ಅಡೂರ್. ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ ಒಂದು ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ. ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು […]
ಜಿ. ಪಿ. ರಾಜರತ್ನಂ ಜನ್ಮದಿನ
ಇಂದು ಕನ್ನಡದ ಧೀಮಂತ ಸಾಹಿತಿ ಪ್ರೊ.ಜಿ.ಪಿ.ರಾಜರತ್ನಂ ಅವರು ಜನಿಸಿದ ದಿನ ಬಾಲ್ಯ ‘ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ “ನಾಗಪಟ್ಟಣ”ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು […]
ಸ್ನೇಹ
ವಾರದ ಕಥೆ ಸ್ನೇಹ ಜ್ಯೋತಿ ಡಿ ಭೊಮ್ಮಾ ಮದುವೆಯಾಗಿ ಮುವತೈದು ವಸಂತಗಳನ್ನು ಜೊತೆಯಲ್ಲಿ ಕಳೆದ ನಿರ್ಮಲಾ ಮತ್ತು ಮೂರ್ತಿ ದಂಪತಿಗಳಿಗೆ ಈಗ ಬದುಕಿನ ಎಲ್ಲಾ ಜವಾಬ್ದಾರಿ ಮುಗಿಸಿ ನಿರಮ್ಮಳವಾಗಿ ಬದುಕು ಸಾಗಿಸುವ ಸಮಯ.ಮಗನ ಮತ್ತು ಮಗಳ ಮದುವೆ ಮಾಡಿ ಅವರನ್ನು ಒಂದು ದಡಕ್ಕೆಸೇರಿಸಬೇಕಾದರೆ ಜೀವನದ ಸಮಯವೆಲ್ಲ ಮುಡುಪಾಗಿಡಬೇಕಾಯಿತು. ಈಗ ನಿವೃತ್ತಿ ಜೀವನ ನಡೆಸುತ್ತಿರುವ ಅವರಿಗೆ ಎಲ್ಲವೂ ಒಮ್ಮೆಲೆ ಖಾಲಿಯಾದ ಅನುಭವ,ಯಾವದರಲ್ಲೂ ಉತ್ಸಾಹವಿಲ್ಲ.ಇಷ್ಟು ದಿನ ನೌಕರಿ ಹಣಗಳಿಕೆ ಪ್ರತಿಷ್ಠೆ ಮಕ್ಕಳ ವಿದ್ಯಾಭ್ಯಾಸ ಮದುವೆಗಳ ಜವಾಬ್ದಾರಿಗಳೆಲ್ಲ ಒಂದೋಂದಾಗಿ ಮುಗಿಯುತ್ತಿದ್ದಂತೆ ಜೀವನದಲ್ಲಿ […]
ಶರದದ ಹಗಲಲ್ಲಿ ಆಷಾಢದ ಮೋಡಗಳು…
ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ. ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ […]
ಭಾವಲಹರಿ
ಲಹರಿ ಭಾವಲಹರಿ ರಶ್ಮಿ.ಎಸ್. ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು… …………………………….. ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು. ಮೊಮ್ಮ ಇಲ್ಲ..! ನಮ್ಮ […]