Category: ಇತರೆ

ಇತರೆ

ಗಜಲ್ ರೇಖಾ ಭಟ್ ಗುಡಿಸಲುಗಳ ಹೊಸ್ತಿಲಲಿ ಹಣತೆಗಳು ಬೆಳಗಿದರೆ ಅಂದು ದೀಪಾವಳಿಹಬ್ಬಿದ ಗೆದ್ದಲುಬಳ್ಳಿ ಉದುರಿ ಹಸೆಚಿತ್ರ ಮೂಡಿದರೆ ಅಂದು ದೀಪಾವಳಿ ಹಬ್ಬವೆಂದರೆ ಹೊಸ ಬಟ್ಟೆ ಹೊಸ ವೇಷ ಹೊಸ ನೋಟ ಇಷ್ಟೇ ಅಲ್ಲಹರಿದ ಅಂಗಿಯ ತುದಿಯಲಿ ಪಾಯಸವು ಅಂಟಿದ್ದರೆ ಅಂದು ದೀಪಾವಳಿ ರಂಗು ಬೆಳಕಿನಲಿ ನಡೆವ ನಶೆಯ ಕೂಟಗಳಿಗೆ ದೀಪಾವಳಿಯೇ ಆಗಬೇಕೆ‘ಮದ್ಯ’ದಲಿ ಕರಗುವ ಪುಡಿಗಾಸು ಕೂಸಿನ ಕಾಲ್ಗೆಜ್ಜೆಗಾದರೆ ಅಂದು ದೀಪಾವಳಿ ನೊಂದ ಜೀವಗಳಲಿ ಆಶಾಭಾವದ ಮಿಣುಕು ಮೊದಲು ಉದಿಸಬೇಕಿದೆ ಇಲ್ಲಿಕಸಮುಸುರೆಯಲಿ ಕನಸರಳಿಸುವ ಕೈಗಳಿಗೆ ಬಿಡುವಾದರೆ ಅಂದು ದೀಪಾವಳಿ […]

ಗಜಲ್ ಮುತ್ತು ಬಳ್ಳಾ ಕಮತಪುರ ನಿ‌ಮಗೆ ಮುಳ್ಳಂತೆ ಚುಚ್ಚುವುದು ಗೊತ್ತು |ಪ್ರೀತಿಸಿದರೆ ಹೂ ಹಣ್ಣಾಗುವುದು ಗೊತ್ತು || ಕಂಗಳಿಗೆ‌ ಸೋಲದವರು ಯಾರು ಹೇಳಿ |ಅಂದಕೆ ಮೋಸ ಮಾಡುವುದು ಗೊತ್ತು || ನೋವುಗಳು ನುಂಗಿದ ಮೌನ ಸಾಗರದಷ್ಟು |ಒಂದು ತಪ್ಪು ಬದುಕೇ ಬದಲಿಸುವುದು ಗೊತ್ತು || ಅಲೆವ ಜೀವ ನದಿ ಕೊನೆಗೆ ಅಂತ್ಯವಾಗುದೆ |ಬೆಣ್ಣೆಯಂತ ಸ್ನೇಹ ಬೆಸೆಯುವುದು ಗೊತ್ತು || ಒಂಟಿ ಚಂದ್ರನು ಬಣ್ಣ ಬದಲಿಸಿದ ಮುತ್ತು|ಬೆವರ ಹನಿ ನೆಲವ ತಣಿಸಿರುವುದು ಗೊತ್ತು | ಕದಡಿದ ಮನದಲಿ ಆಸೆಯ […]

ಗಜಲ್ ವೀಣಾ .ಎನ್. ರಾವ್. ಎದೆಯ ನದಿಯಲಿ ಹರಿಯಲಿ ಒಲವ ಭಾವಗಂಗೆ ಅನುದಿನ ಗೆಳೆಯಾಸುಧೆಯ ಸುಳಿಯಲಿ ಜಿನುಗಲಿ ನಾದದ ಜೀವಬಂಧ ಹೊಸದಿನ ಗೆಳೆಯಾ. ನಿಯಂತ್ರಣ ತಪ್ಪದ ಬದುಕಲಿ ಹುಡುಕಬೇಕಿದೆ ನಿನ್ನಯ ಸಾಂಗತ್ಯ ಸವಿಯಲುಆಮಂತ್ರಣ ನೀಡದೆ ಬರೆದೆ ನನ್ನೆದೆಯಲಿ ಕಾವ್ಯಕುಸುರಿ ಸುರಿದದಿನ ಗೆಳೆಯಾ. ನಿಲ್ಲದ ಅಭಿಲಾಷೆ ನೋಟದಲಿ ಬಂಧಿಸಿ ಮಧುರ ನುಡಿ ಮರೆಸಿದೆಸಲ್ಲದ ನೆಪದಲಿ ಹಗಲು ಕನಸಿಗೆ ಸ್ಪೂರ್ತಿಯು ಮರೆಯದದಿನ ಗೆಳೆಯಾ. ಕಿರುನಗೆಯನು ಕೆಣಕುತ ಸೆಳೆದ ಮನಕೆ ಪುಳಕದ ಸವಿರಸ ಉಣಿಸಿಹೊಸಬಗೆಯನು ತೋರುತ ಬಳಿಬಂದು ನೋವ ಮರೆತು ಸರಿದದಿನ […]

ಗಜಲ್ ಶಂಕರಾನಂದ ಹೆಬ್ಬಾಳ ಮಳೆಯ ಹನಿಗಳು ಇಳಿಯುತ ಇಳೆಗೆ ಎದೆಗಳ ತಂಪಾಗಿಸಲಿ ಸಖಿ|ಮನದಲಿ ಪ್ರೀತಿಯು ಚಿಮ್ಮುತ ತಾನಿಂದು ಭಾವಗಳ ಇಂಪಾಗಿಸಲಿ ಸಖಿ|| ಜೀವಗಳ ಬಾಂಧವ್ಯ ಬೆಸೆಯುವ ನಲ್ಮೆಯ ಸುಮಧುರ ಸ್ನೇಹವದು|ಭಾನುಭೂಮಿಗಳು ಜೊತೆಯಲಿ ಬೆರೆಯುತ ತನುಗಳ ಒಂದಾಗಿಸಲಿ ಸಖಿ|| ಒಲವಿನಲಿ ಕೂಡುವ ಸವಿ ಸ್ವಪ್ನಗಳು ಕಂಗಳಲಿ ನಲಿಯುತಿವೆ|ಚೆಲುವಿನ ಸಿರಿಯು ಧರಣಿಯ ಮೆಲ್ಗಡೆ ಹಸಿರಿನು ಸೊಂಪಾಗಿಸಲಿ ಸಖಿ|| ಇಬ್ಬನಿಯಲಿ ಕಿರಣಗಳು ರವಿಯ ಕಾಂತಿ ತೋಷದಲ್ಲಿ ಚಲ್ಲುತಿವೆ|ಕಾರ್ಮೋಡ ಆಗಸದಲಿ ಶರಧಿಯ ಸೇರುತ ವರುಣನ ಸ್ವಾಗತಿಸಲಿ ಸಖಿ|| ನೀಲಾಕಾಶವು ಚಣದಲ್ಲಿ ರವಿಯನ್ನು ಹೊಳೆಸಿ […]

ಗಜಲ್ ಸಿದ್ದರಾಮ ಹೊನ್ಕಲ್ ತೆರೆಯಬಾರದೇನೇ ನಿನ್ನ ಹೃದಯಕ್ಕೆ ಹಾಕಿದ ಬೀಗವನುತೋರಬಾರದೇ ದೇಹ ಮನದೊಳಗಿನ ಚೆಲುವ ಸಿರಿಯನು ಒಲವು ತುಂಬಿಟ್ಟಿರುವಿ ಯಾರೂ ಕದಿಯದಂತೆ ಕಾಪಿಟ್ಟುಮುದದಿ ಸಿಹಿ ಮುತ್ತಿಕ್ಕಿ ನೀ ತಬ್ಬದೇ ಹಬ್ಬಲು ಅರಿಯನು ಜಗದಿ ಕಳ್ಳ ಸುಳ್ಳ ಖದೀಮರೇ ಜಾಸ್ತಿ ದೋಚ ಬಲ್ಲವರುಎಚ್ಚರದಿ ದೂರವಿಡು ನಾಯಿ ನರಿ ಕಾಡು ಕೋಣಗಳನು ಹುಷಾರ್ ಕಣೇ ಬಹುದೂರ ಬಂದಿರುವಿ ಬೇಲಿ ಮರೆಯಲಿಎಲ್ಲೆಂದರಲ್ಲಿ ಕುಂತು ಹಾಕಲು ಮರೆಯದಿರು ಚಿಲುಕವನು ಹೊನ್ನಸಿರಿ’ಮೆಚ್ಚಿಹನು ನಿಸ್ವಾರ್ಥ ಸ್ವಾಭಿಮಾನ ಸಂಪತ್ತನುಜೋಪಾನದಿ ಕಾಪಾಡಿಕೋ ಮುಳ್ಳ ಮೇಲಿನ ಸೀರೆಯನು ಕಲ್ಲು ಬಂಡೆಯಂತವ […]

ಗಜಲ್ ಪ್ರಭುಲಿಂಗ ನೀಲೂರೆ ಬಿಗಿ ಸಾಮೀಪ್ಯ ಇಲ್ಲದೆಯೂ ನೀ ನನ್ನ ಪ್ರಾರ್ಥನೆಯೊಳಗೆ ಅಡಗಿರುವೆ ಮುದ್ದುದೇಹ ಬೇರೆಯಾದರೂ ನೀ ನನ್ನ ಉಸಿರೊಳಗೆ ಬೆರೆತಿರುವೆ ಮುದ್ದು ಎಲ್ಲಿ ನೋಡಿದರಲ್ಲಿ ನಿನ್ನದೆ ಬಿಂಬ ನಾ ಕಾಣುತಿರುವೆ ನನಗೇನಾಗಿದೆ ಹೇಳುನಿನ್ನ ಕಂಡಂದಿನಿಂದ ಶಾಶ್ವತವಾಗಿ ನೀ ನನ್ನ ಕಣ್ಣೊಳಗೆ ನೆಲೆಸಿರುವೆ ಮುದ್ದು ನಮ್ಮ ದೇಹಗಳು ಹತ್ತಿರವಿಲ್ಲದಿದ್ದರೂ ಹೃದಯಗಳು ಎಂದೋ ಒಂದಾಗಿವೆದೂರವಿದ್ದರೂ ಪ್ರತಿಕ್ಷಣ ಮನಸ್ಸಿನೊಳಗೆ ಓಡಾಡುತಿರುವೆ ಮುದ್ದು ತಲೆ ಬಾಚಿದಾಗಲೆಲ್ಲ ನಿನ್ನ ಬೆರಳುಗಳ ಓಡಾಟ ಕಂಡು ನಾಚಿ ನೀರಾಗುತ್ತೇನೆಬೆಳದಿಂಗಳಲಿ ನೀ ನೀಡಿದ ಮುತ್ತಿಗೆ ಸಾಕ್ಷಿಗೆ ಚಂದಿರನಿಗೆ […]

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ಒಮ್ಮೆ ಯೋಚಿಸು ನೋಡು ಗಂಟು ಬಿದ್ದರೆ ಬಿಚ್ಚುವುದಿಲ್ಲ ಬದುಕು.ಒಮ್ಮೆ ಮನ‌ಸ್ಸಿಗೆ ಕೇಳಿ ನೋಡು ಮೈಗೆ ಮೈ ಉಂಡರೆ ಅಗಲುವುದಿಲ್ಲ ಬದುಕು. ಈ ಸುಖ ದುಃಖಗಳ ಆಟವೇ ಹೀಗೆ ಕಾಡಿಸಿ ಕೂಡಿಸಿ ಜೀವನ ಮುಗಿಸುತ್ತವೆ.ಒಮ್ಮೆ ಕನಸಿ ಕರೆದು ನೋಡು ಕತ್ತಲಿಗೂ ಸುಳಿವು ನೀಡುವುದಿಲ್ಲ ಬದುಕು. ದಿನಗಳು ಕಳೆದಂತೆ ಭಾರವಾಗುತ್ತದೆ ಜೀವನ ಸಾವಿನ ಎದುರು.ಒಮ್ಮೆ ಆತ್ಮ ಹೊರಗಿಟ್ಟು ನೋಡು ಹಗಲಿಗೆ ಅರ್ಥವಾಗುವುದಿಲ್ಲ ಬದುಕು. ಎಲ್ಲ ಸುಳ್ಳು ಮನೆ ಮಾತು ಬಂಧು ಬಳಗ ಮರಣ ಒಂದೇ ದಾಖಲೆ.ಒಮ್ಮೆ […]

ಗಜಲ್ ಶಶಿಕಾಂತೆ ತಂಗಾಳಿಗೆ ಮೈ ಮರಗಟ್ಟಿ ನಿನ್ನ ನೆನಪು ಅತಿಯಾಗುತಿದೆ ನೀ ಬಳಿ ಬರಲಾರೆಯಾನಿನ್ನ ತೋಳೊಳಗೆ ಬಿಗಿಯಾಗಿ ಬಂಧಿಸಿ ಮಧುಚಂದ್ರದ ಸುಖ ನೀಡಲಾರೆಯಾ. ನನ್ನ ನಿನ್ನ ಹೃದಯಗಳು ಒಂದಾದಾಗ ಆದ ಅನುಭವದ ಬಯಕೆ ಆಗುತಿದೆನಮ್ಮೊಲವ ಬಗ್ಗೆ ನಾ ಕಂಡ ಕನಸುಗಳನು ನನಸು ಮಾಡಲಾರೆಯಾ ನಿನ್ನನ್ನಪ್ಪಿ ಎದೆಗೊರಗಿ ದೊರೆ ಎನ್ನುವಾಗ ಅದೇನೋ ಸಂತಸ ನನ್ನೊಳಗೆನೀ ಬಂದು ಕುರುಳ ಸವರಿ ರಾಣಿ ಎಂದು ಮನಸ್ಪೂರ್ತಿಯಾಗಿ ಕರೆಯಲಾರೆಯಾ. ಪ್ರೇಮ ಕಾನನದೊಳಗೆ ನಿನ್ನೊಡನೆ ಕೈಕೈ ಬೆಸೆದು ವಿಹರಿಸುವ ಹುಚ್ಚು ಆಸೆನೀನಿದ್ದರೆ ಅದೆಷ್ಟು ಸೊಗಸು,ನನ್ನ […]

ಗಜಲ್ ರತ್ನರಾಯ ಮಲ್ಲ ಎಣ್ಣೆ, ಬತ್ತಿಗಳು ಬಜಾರಿನಲ್ಲಿ ಬಿಕರಿಯಾಗುತ್ತಿವೆ ಗಾಲಿಬ್ದೀಪ ಹಚ್ಚುವ ಮನಸ್ಸುಗಳು ಮರೆಯಾಗುತ್ತಿವೆ ಗಾಲಿಬ್ . ನಮ್ಮ ಮನೆಗಳು ಕಂಗೊಳಿಸುತ್ತಿವೆ ಬಣ್ಣ ಬಣ್ಣದ ಬೆಳಕಿನಲ್ಲಿಮನಗಳು ಕತ್ತಲೆಯ ಗೂಡಾಗಿ ಕೊಳೆಯಾಗುತ್ತಿವೆ ಗಾಲಿಬ್ ಬುದ್ಧಿವಂತಿಕೆಯ ನೆರಳಲ್ಲಿ ಗುಲಾಮಿಯು ಚಿಗುರೊಡೆಯುತಿದೆಭವ್ಯ ಚಿಂತನೆಯ ಆಪ್ತ ಕನಸುಗಳು ಪರಾರಿಯಾಗುತ್ತಿವೆ ಗಾಲಿಬ್ ಆಡಂಬರದ ಆಲಯವೇ ಈ ಸಮಾಜವನ್ನು ನಿಯಂತ್ರಿಸುತಿದೆಸಂತೃಪ್ತಿ-ಸರಳತೆಯ ದಿನಗಳು ಮರಿಚೀಕೆಯಾಗುತ್ತಿವೆ ಗಾಲಿಬ್ ‘ಮಲ್ಲಿ’ ಯ ಮನವು ಆರದ ಬೆಳಕಿಗಾಗಿ ಕನವರಿಸುತಿದೆ ಇಂದುಪರಸ್ಪರ ಪ್ರೀತಿಸುವ ಹೃದಯಗಳು ಒಂಟಿಯಾಗುತ್ತಿವೆ ಗಾಲಿಬ್.. ನಿನ್ನೊಂದಿಗೆ ಮಾತನಾಡುತ ಮಸಣವನ್ನು ಚುಂಬಿಸುವ […]

ಅವಳ ಬದುಕಿನ ಪುಟಗಳಲ್ಲೊಂದು ಇಣುಕು…

ವಾರದ ಕಥೆ ಅವಳ ಬದುಕಿನ ಪುಟಗಳಲ್ಲೊಂದು ಇಣುಕು… ಟಿ.ಎಸ್.ಶ್ರವಣಕುಮಾರಿ ಆರನೆಯ ನಂಬರಿನ ಡಬಲ್‌ ಡೆಕರ್‌ ಬಸ್‌ ಹೊರಡುತ್ತಿದ್ದುದು ಜಯನಗರ ನಾಲ್ಕನೇ ಬ್ಲಾಕಿನ ಬಸ್‌ ಸ್ಟಾಪಿನಿಂದ. 9.30ಕ್ಕೆ ನಿಲ್ದಾಣಕ್ಕೆ ಬರುವ ಬಸ್ಸು 9.40ಕ್ಕೆ ಸರಿಯಾಗಿ ಅಲ್ಲಿಂದ ಹೊರಟು ಶಿವಾಜಿನಗರಕ್ಕೆ ಹೋಗುತ್ತಿದ್ದ ಆ ಬಸ್ಸಿಗೆ ವೀಣಾ ದಿನನಿತ್ಯದ ಪಯಣಿಗಳು. ಸ್ಟ್ಯಾಂಡಿಗ್‌ ಸೀಟಿನ ಕಚಿಪಿಚಿ ಇರುವುದಿಲ್ಲವಾದ್ದರಿಂದ ಅವಳಿಗೆ ಮಹಡಿಯೇ ಹಿತವೆನ್ನಿಸುತ್ತಿತ್ತು. ಬಸ್‌ ಹತ್ತಿದ ತಕ್ಷಣ ಮಹಡಿಯನ್ನೇರಿ ಮುಂದಿನಿಂದ ಎಡಭಾಗದ ಮೂರನೆಯ ಸೀಟಿನ ಕಿಟಕಿಯ ಬಳಿ ಖಾಯಮ್ಮಾಗಿ ಕುಳಿತು ಟಿಕೇಟು ಪಡೆದುಕೊಂಡ ತಕ್ಷಣವೇ, […]

Back To Top