ಗಜಲ್

ಮುತ್ತು ಬಳ್ಳಾ ಕಮತಪುರ

woman covering her mouth and nose

ನಿ‌ಮಗೆ ಮುಳ್ಳಂತೆ ಚುಚ್ಚುವುದು ಗೊತ್ತು |
ಪ್ರೀತಿಸಿದರೆ ಹೂ ಹಣ್ಣಾಗುವುದು ಗೊತ್ತು ||

ಕಂಗಳಿಗೆ‌ ಸೋಲದವರು ಯಾರು ಹೇಳಿ |
ಅಂದಕೆ ಮೋಸ ಮಾಡುವುದು ಗೊತ್ತು ||

ನೋವುಗಳು ನುಂಗಿದ ಮೌನ ಸಾಗರದಷ್ಟು |
ಒಂದು ತಪ್ಪು ಬದುಕೇ ಬದಲಿಸುವುದು ಗೊತ್ತು ||

ಅಲೆವ ಜೀವ ನದಿ ಕೊನೆಗೆ ಅಂತ್ಯವಾಗುದೆ |
ಬೆಣ್ಣೆಯಂತ ಸ್ನೇಹ ಬೆಸೆಯುವುದು ಗೊತ್ತು ||

ಒಂಟಿ ಚಂದ್ರನು ಬಣ್ಣ ಬದಲಿಸಿದ ಮುತ್ತು|
ಬೆವರ ಹನಿ ನೆಲವ ತಣಿಸಿರುವುದು ಗೊತ್ತು |


woman's face with sunlight on eyes

ಕದಡಿದ ಮನದಲಿ ಆಸೆಯ ನಶೆಯನು ತುಂಬಿ ಉಸಿರಿಗೆ ಉಸಿರಾದವಳೇ ಆಲಿಸು |
ಹರಿಯುವ ಕೊಳದ ನೀರಲಿ ಬಿಂಬವ ತೋರಿ ಕ್ಷಣದಲಿ ಮಾಯವಾದವಳೇ ಆಲಿಸು ||

ಬನದಲಿ ಹಾರುವ ಪತಂಗ ಮುಟ್ಟಿದರೆ ಮುನಿಯುವ ನಾಜೂಕಿನ ಬಣ್ಣದವಳು |
ಊರ ಹೊರಗಿನ ಹನುಮದೇವರಿಗೆ ಹರಕೆಯ ಕಟ್ಟಿ ಕಾಯುತ್ತಿರುವಳೇ ಆಲಿಸು |

ಬೆರಳ ತುದಿಯಲಿ ನೆಲವ ತೀಡುತ್ತಾ ನಾಚಿ ತುಟಿಯನು ಕಚ್ಚಿ ಮರೆಯಾದವಳು|
ಊರ ಮುಂದಿನ ಬಾವಿಯಲಿ ನೀರನ್ನು ಸೇದುವಾಗ ಜೊತೆಯಾದವಳೇ ಆಲಿಸು ||

ಕಣ್ಣ ಸನ್ನೆ ಮಾಡಿ ಮೌನವಾಗಿ ಪಿಸುನಕ್ಕರು ಅರಿಯದ ಮಡ್ಡಿ ಮಣ್ಣಿನವಳು |
ಆಟದ ನೆಪದಲಿ ನಿನ್ನ ಕೈಗೆ ಸಿಕ್ಕರು ಮುಟ್ಟದೆ ಗಾಬರಿಯಾದವಳೇ ಆಲಿಸು ||

ಆಚೆ ಬೀದಿಯ ಸಂದಿಯಲಿ ಕದ್ದು ಮುಚ್ಚಿ ಭೇಟಿಯಾದ ಸಂಗತಿಯೆ ಮುತ್ತು
ದುಂಬಿಯ ಗೆಳತನ ಬಯಸಿದ ಸುಮಸ್ಪರ್ಶಕೆ ನಾಚಿ ನೀರಾಗಿ ಸಾರ್ಥಕವಾದವಳೇ ಆಲಿಸು ||


Leave a Reply

Back To Top