ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಶಶಿಕಾಂತೆ

Puzzle, Heart, Love, Two Hearts

ತಂಗಾಳಿಗೆ ಮೈ ಮರಗಟ್ಟಿ ನಿನ್ನ ನೆನಪು ಅತಿಯಾಗುತಿದೆ ನೀ ಬಳಿ ಬರಲಾರೆಯಾ
ನಿನ್ನ ತೋಳೊಳಗೆ ಬಿಗಿಯಾಗಿ ಬಂಧಿಸಿ ಮಧುಚಂದ್ರದ ಸುಖ ನೀಡಲಾರೆಯಾ.

ನನ್ನ ನಿನ್ನ ಹೃದಯಗಳು ಒಂದಾದಾಗ ಆದ ಅನುಭವದ ಬಯಕೆ ಆಗುತಿದೆ
ನಮ್ಮೊಲವ ಬಗ್ಗೆ ನಾ ಕಂಡ ಕನಸುಗಳನು ನನಸು ಮಾಡಲಾರೆಯಾ

ನಿನ್ನನ್ನಪ್ಪಿ ಎದೆಗೊರಗಿ ದೊರೆ ಎನ್ನುವಾಗ ಅದೇನೋ ಸಂತಸ ನನ್ನೊಳಗೆ
ನೀ ಬಂದು ಕುರುಳ ಸವರಿ ರಾಣಿ ಎಂದು ಮನಸ್ಪೂರ್ತಿಯಾಗಿ ಕರೆಯಲಾರೆಯಾ.

ಪ್ರೇಮ ಕಾನನದೊಳಗೆ ನಿನ್ನೊಡನೆ ಕೈಕೈ ಬೆಸೆದು ವಿಹರಿಸುವ ಹುಚ್ಚು ಆಸೆ
ನೀನಿದ್ದರೆ ಅದೆಷ್ಟು ಸೊಗಸು,ನನ್ನ ಬೇಸರ,ಒಂಟಿತನವ ನೀಗಲಾರೆಯಾ

ಇರುಳು ಶಶಿಯ ಬೆಳಕಲ್ಲಿ ಮನಸೊಳಗೇ ನಿನ್ನೊಡನೆ ಮೌನ ಸಂಭಾಷಣೆ ನನ್ನದು
ಮನದೊಳಗೆ ಸೇರಿಕೊಂಡು ನಿದಿರೆ ಕದ್ದವನು ತನುವ ತಂಪಾಗಿಸಲಾರೆಯಾ


Month, Plant, Night, Nature, Flower, Sky

ಅಧರಗಳಲಿ ಜಿನುಗುವ ಮಧು ಹೀರಬೇಕಲ್ಲವೆ ಅನುಮತಿ ನೀಡು ಸಖಿ
ಹೃದಯ ವೀಣೆಯಲಿ ಪ್ರೇಮರಾಗ ನುಡಿಸಬೇಕಲ್ಲವೆ ಅನುಮತಿ ನೀಡು ಸಖಿ

ಮಿಂಚಿನಂತೆ ಹೊಳೆವ ಕಣ್ಣ ಕಾಂತಿ ಅಯಸ್ಕಾಂತದಂತೆ ಎಳೆಯುತಿದೆ ನನ್ನನು
ನನ್ನ ನಿನ್ನ ಸ್ನೇಹಸಲಿಗೆಗೆ ಕಣ್ಣುಗಳು ಸೇರಬೇಕಲ್ಲವೆ ಅನುಮತಿ ನೀಡು ಸಖಿ

ಮದ್ದು ಮುದ್ದೆಂದು ಮಾತಾಡುವ ನಿನ್ನ ರೀತಿ ಚಂದ ಮರೆಯಲುಂಟೇ ಅದನು
ನನ್ನೆದೆಗೊರಗಿಸಿಕೊಂಡು ನಿನ್ನ ಹೆಸರನಲ್ಲಿ ಕೇಳಿಸಬೇಕಲ್ಲವೆ ಅನುಮತಿ ನೀಡು ಸಖಿ

ಹಾಲಲಿ ಮಿಂದು ಬಂದಂತೆ ಮೃದುವಾದ ತನುವಿನೊಡತಿ ನೀನು ಸದಾ ಷೋಡಶಿ
ಕಿಬೊಟ್ಟೆಯಲ್ಲಿ ಮುತ್ತಿನ ಚಿತ್ತಾರ ಬಿಡಿಸಬೇಕಲ್ಲವೆ ಅನುಮತಿ ನೀಡು ಸಖಿ

ನಮ್ಮ ಸರಸವ ಮೋಡದ ಮರೆಯಿಂದ ನೋಡುವ ಶಶಿಗಿಲ್ಲದ ನಾಚಿಕೆ ನಿನಗೇತಕೆ
ಕನಸಲಿ ಕಾಣುತ್ತಿದ್ದ ನಮ್ಮಾಸೆ ತೀರಿಸಿ ಕೊಳ್ಳಬೇಕಲ್ಲವೆ ಅನುಮತಿ ನೀಡು ಸಖಿ

******************************************

About The Author

Leave a Reply

You cannot copy content of this page

Scroll to Top