ಜೀವನ
ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ ಪ್ರೊ ಸುಧಾ ಹುಚ್ಚಣ್ಣವರ “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ […]
ವರ್ತಮಾನ
ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಕೊರೊನಾ ಪೆಟ್ಟು ಪ್ರತೀ ವರುಷವೂ ಸಂಕ್ರಮಣದಿಂದ ನಾಗರಪಂಚಮಿವರೆಗೆ ಹಳ್ಳಿ ಹಳ್ಳಿಗಳು ಸೇರಿದಂತೆ ನಗರ ಪಟ್ಟಣಗಳ ತುಂಬೆಲ್ಲಾ ವೃತ್ತಿರಂಗಭೂಮಿ ನಾಟಕಗಳ ಸುಗ್ಗಿ. ಬಹುಪಾಲು ಜಾತ್ರೆಗಳು ಜರುಗುವುದು ಇದೇ ಅವಧಿಯಲ್ಲೇ. ಒಕ್ಕಲುಮಕ್ಕಳು ಬೆಳೆವ ಬೆಳೆಗಳ ಫಸಲಿನಸುಗ್ಗಿ ಮುಗಿದು ಹಬ್ಬ, ಹುಣ್ಣಿಮೆ, ಜಾತ್ರೆಗಳ ಸಡಗರ ಸಂಭ್ರಮ. ವರ್ಷವೆಲ್ಲ ದುಡಿದ ಜೀವಗಳಿಗೆ ಆಡಿ ನಲಿದು, ಹಾಡಿ, ಕುಣಿವ ಹಂಗಾಮ. ಸಹಜವಾಗಿ ವೃತ್ತಿರಂಗ ನಾಟಕಗಳೆಂದರೆ ಜನ ಸಾಮಾನ್ಯರ ಮನರಂಜನೆಯ ಘಮಲು. ಕವಡೆ ಲೋಬಾನದ ಪರಿಮಳ. ಝಗಮಗಿಸುವ ಬಣ್ಣಬಣ್ಣದ […]
ಹಾಸ್ಯ
ಮನೆಯೇ ಮಂತ್ರಾಲಯ? ಜ್ಯೋತಿ ಡಿ .ಬೊಮ್ಮಾ ಮತ್ತದೆ ಸಂಜೆ ಅದೇ ಬೇಸರದಲ್ಲಿ ಎಕಾಂಗಿಯಾಗಿ ಕುಳಿತಿದ್ದಾಗ ಬಾಜು ಮನಿ ಅಕ್ಕೋರು ಬಂದರು ,ಬರ್ರಿ ಬರ್ರಿ ಎಂದು ಸ್ವಾಗತಿಸಿ ಪಕ್ದಲ್ಲೆ ಇದ್ದ ಖುರ್ಚಿ ಕಡೆಗೆ ಕೈ ತೊರಿಸಿದೆ ಕುಳಿತುಕೊಳ್ಳಲು.ಕುರ್ಚಿ ಸರಕ್ಕನೆ ನನ್ನಿಂದ ನಾಲ್ಕು ಮಾರು ದೂರ ಎಳೆದುಕೊಂಡು ಕುಳಿತರು .ಮುಖಕ್ಕೆ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ನಿಮಗ ಗೊತ್ತದ ಇಲ್ಲ ,ಇಲ್ಲೆ ಬಾಜು ಕಾಲೊನಿದಾಗ ಯಾರಿಗೋ ಕರೊನಾ ಬಂದದಂತರ್ರಿ ,ಅವರ ಮನ್ಯಾಗಿನವರಿಗೆಲ್ಲ ಎಳಕೊಂಡು ಹೊಗ್ಯಾರಂತ ,ಮುಖಕ್ಕೆ ಹಾಕಿದ ಮಾಸ್ಕ ತೆಗೆದು ಅಲ್ಲೆ ಪಕ್ಕದಲ್ಲಿ […]
ಪ್ರಸ್ತುತ
ಶಾಲೆಗಳ ಪುನರಾರಂಭ ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.ತರಗತಿಗಳನ್ನು ನಡೆಸಲು ಮೂರು […]
ಲಹರಿ
ಮಾವಿನ ಪುರಾಣ ಮಾವಿನ ಪುರಾಣ ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ. ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ […]
ಪರಿಸರ
ಮರಗಳ ಕಡಿದರೆ ಖಚಿತ ನಮ್ಮದೇ ಮಾರಣ ಹೋಮ!! ಜಯಶ್ರೀ ಜೆ.ಅಬ್ಬಿಗೇರಿ ಇದು ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಮಾತು ಪ್ರತಿ ಗ್ರಾಮದಲ್ಲೂ ಚಾವಡಿ ಕಟ್ಟೆಗೆ ಹೊಂದಿಕೊಂಡಂತೆ ಮತ್ತು ಊರ ಹೊರಗಿನ ಗ್ರಾಮ ದೇವತೆಯ ದೇವಸ್ಥಾನದ ಸನಿಹ ಗಿಡ ಮರಗಳ ಸೊಂಪಾದ ನೆರಳು ಇದ್ದೇ ಇರುತ್ತಿತ್ತು. ದುಡಿದು ದಣಿದು ಬಂದ ರೈತಾಪಿ ವರ್ಗ, ಹಿರಿಯರು, ಹೈದರು ಮಕ್ಕಳಿಗೆಲ್ಲ ಮನದ ಭಾವನೆಗಳನ್ನು ಹಂಚಿಕೊಳ್ಳುವ ಅಡ್ಡಾದಂತೆ ಕೆಲಸ ನಿರ್ವಹಿಸುತ್ತಿತ್ತು. ಪ್ರತಿಯೊಬ್ಬರ ಮನೆಯ ಹಿಂದೆ ಹಿತ್ತಲಿನಲ್ಲಿ ತರಹೇವಾರಿ ತರಕಾರಿಯೊಂದಿಗೆ […]
ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.
ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ? ನಂದಿನಿ ಹೆದ್ದುರ್ಗ ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. ‘ರೀಫಿಲ್ ಮಾತ್ರ ಸಾಕು’ ಎಂದೆ.. ‘ಅಯ್ಯೋ ರೀಫಿಲ್ಗೂ ,ಫುಲ್ ಪೆನ್ನಿಗೂ ಎರಡೇ ರೂಪಾಯಿ ವ್ಯತ್ಯಾಸ ಮೇಡಮ್ . ಇದನ್ನೇ ತಗೋಳಿ ‘ ಅಂದ ಅಂಗಡಿಯ ಹುಡುಗ. ತಕ್ಕಮಟ್ಟಿಗೆ ವಿದ್ಯಾವಂತನಂತೇ ಕಾಣುತ್ತಿದ್ದ.. ಎರಡು ಮೂರು ರೂಪಾಯಿಗಳ ವ್ಯತ್ಯಾಸಕ್ಕಲ್ಲಣ್ಣ ರಿಫಿಲ್ ಕೇಳ್ತಿರುವುದು.. ನಾನು ಉತ್ಪತ್ತಿ ಮಾಡುವ ಕಸದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಎಂದೆ… ವಿಚಿತ್ರ ಪ್ರಾಣಿಯಂತೆ ಸುತ್ತಲಿನವರು ನೋಡಿದರೆ ಇನ್ನೂ ಕೆಲವರು ನೀವು ಏನ್ […]
ಪ್ರಕೃತಿ ರಕ್ಷತಿ ರಕ್ಷಿತಾಃ
ಪ್ರಕೃತಿ ರಕ್ಷತಿ ರಕ್ಷಿತಾಃ ಜ್ಯೋತಿ ನಾಯ್ಕ ಜೂನ್ ಐದು ಅಂದಾಕ್ಷಣ ವಿಶ್ವ ಪರಿಸರ ದಿನಾಚರಣೆ ಸ್ಮರಿಸೋದು ಸಾಮಾನ್ಯ ಏಕೆಂದರೆ ಪರಿಸರವು ಹಲವು ಜೈವಿಕ & ಭೌತಿಕ ಘಟಕಗಳ ಆಗರ, ಇವುಗಳ ನಡುವೆಯೇ ಬೇಕು-ಬೇಡಗಳ ಸಂಘರ್ಷ. ೧೯೭೨-೧೯೭೩ರಿಂದ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಪರಿಸರದ ಜಾಗೃತಿಗೊಳಿಸುತ್ತಲೇ ಬಂದಿದ್ದೇವೆ ಆದರೂ ಮತ್ತೆ ಮತ್ತೇ ನಮ್ಮ ಪರಿಸರದ ಬಗ್ಗೆ ತಿಳಿಯುವ ಹಾಗೂ ಅದರ ಮಹತ್ವ ಅರಿಯುವ ಜೊತೆಗೆ ನಮ್ಮಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅವಲೋಕಿಸಿ ಸಂರಕ್ಷಿಸಲು ಪಣತೊಡುವ ಮಹತ್ವದ ದಿನ. ಈ ಪರಿಸರ […]
ಒಲವಿನೋಲೆ
ಓದೋಕೊಂದು ಒಲವಿನೋಲೆ ಜಯಶ್ರೀ ಜೆ.ಅಬ್ಬಿಗೇರಿ ಜೀವದ ಗೆಳತಿ, ನೆತ್ತಿ ಸುಡುವ ಸೂರ‍್ಯನ ಅರ್ಭಟ ತಗ್ಗಿಸಲೆಂದೇ ಮಟ ಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೇ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಮೈ ಅರಳಿಸಿಕೊಂಡು ತುಟಿ ಬಿರಿದು ನಿಂತಿತು. ಅದೇ ಕ್ಷಣ ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಘಳಿಗೆ ಅದೆಷ್ಟು ಮಧುರ ಅನುಭವ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲ್ಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು […]
ಇಕೊ ಕ್ಲಬ್ ಗಳ ಅನುಷ್ಠಾನ
ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಹಸಿರೇ ಉಸಿರು- ಪ್ರಕೃತಿಯ ವಿಸ್ಮಯಗಳನ್ನು ಒಳಗೊಂಡಿರುವ ನಮ್ಮ ಸುತ್ತಲಿನ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕಾಗಿರುವುದು ಇಂದು ಅನಿವಾರ್ಯವಾಗಿದೆ. ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ(NGC)ವು ಪರಿಸರ ಮತ್ತು ಅರಣ್ಯ ಮಂತ್ರಾಲಯ(MOEF) ಭಾರತ ಸರ್ಕಾರ (GOL)ದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ದೇಶದಾದ್ಯಂತ ಪ್ರತಿ ಜಿಲ್ಲೆಯ ಸುಮಾರು 250 ಶಾಲೆಗಳಲ್ಲಿ […]