ಟಿ.ಎಲ್.ರಾಮಸ್ವಾಮಿ
ಅಪರೂಪದ ಕ್ರಿಯಾಶೀಲ, ಸೃಜನಶೀಲ ಪತ್ರಿಕಾ ಛಾಯಾಗ್ರಾಹಕ ಟಿ.ಎಲ್.ರಾಮಸ್ವಾಮಿಯವರು..!
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಅದರಂತೆ ಕ್ರಿಯಾಶೀಲ ಮತ್ತು ಸೃಜನಶೀಲ ಪತ್ರಿಕಾ ಛಾಯಾಚಿತ್ರ ಗ್ರಾಹಕ ಟಿ.ಎಲ್. ರಾಮಸ್ವಾಮಿಯವರು ತೀರಿದ್ದಾರೆ.
ಅವರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸಾವಿರಾರು ಚಿತ್ರಗಳ ಮೂಲಕ ಕರ್ನಾಟಕದ ಆಗುಹೋಗುಗಳನ್ನು ಸೆರೆಹಿಡಿದವರು. ಅವರು ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ವಿಶಿಷ್ಟ ಪ್ರತಿಭೆಯನ್ನೂ ತೋರಿ ದೇಶ ವಿದೇಶಗಳ ಪತ್ರಿಕೆಗಳ ಗೌರವಾದರ ಪಡೆದವರು…
1950 ರಿಂದ 1985 ರವರೆಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕಾ ಬಳಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿ ಅನುಭವ ಗಳಿಸಿದವರು.
ನಂತರ ಮುಕ್ತ ಪತ್ರಿಕಾ ಛಾಯಾಚಿತ್ರ ವರದಿಗಾರರಾದರೂ ಆದವರು…
ಭಾರತದ ಪ್ರಮುಖ ಪತ್ರಿಕೆಗಳ ಸಂಪರ್ಕ ಪಡೆದಿದವರು. ಫೈನಾನ್ಶಿಯಲ್ ಟೈಮ್ಸ್ ಆಫ್ ಲಂಡನ್ ಸಹ ಇವರು ತೆಗೆದಿರುವ ಛಾಯಾಚಿತ್ರಗಳನ್ನು ಪ್ರಕಟಿಸಿದೆ…
ಪ್ರಜಾವಾಣಿ, ಮಯೂರ, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆ– ನಿಯತಕಾಲಿಕೆಗಳಲ್ಲಿ ಛಾಯಾಚಿತ್ರ ಅಂಕಣಕಾರರಾಗಿ ಜನಪ್ರಿಯತೆ ಗಳಿಸಿದವರು…
ಜಪಾನ್ ನ ನಿಹಾನ್ ಸಿನ್ಬುನ್ ಕ್ಯೊಕಾಯಿ ಸಂಸ್ಥೆ ಮತ್ತು ಲಂಡನ್ ನ ಥಾಮ್ಸನ್ ಪ್ರತಿಷ್ಠಾನದಿಂದ ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ಡಿಪ್ಲೊಮಾ ಪಡೆದಿದವರು.
ಜಪಾನ್ ನ ಅಸಾಹಿ ಶಿನ್‍ಬುನ್, ಮೈನಿಚಿ ಶಿನ್‍ಬುನ್, ಯೊಮಿಯುರಿ ಮತ್ತು ಕ್ಯೋಟೋ ಶಿನ್‍ಬುನ್ ಪತ್ರಿಕೆಗಳಲ್ಲಿ ದುಡಿದು ಅನುಭವ ಪಡೆದವರು. ಫ್ಲೀಟ್ ಸ್ಟ್ರೀಟ್ ನ ಲಂಡನ್ ಟೈಮ್ಸ್, ಡೈಲಿ ಮಿರರ್ ಪತ್ರಿಕೆಗಳಲ್ಲೂ ಅನುಭವ ಗಳಿಸಿದ ಹೆಗ್ಗಳಿಕೆ ಟಿ.ಎಲ್. ರಾಮಸ್ವಾಮಿಯರದು…
ಟಿ.ಎಲ್. ರಾಮಸ್ವಾಮಿ ಅವರು ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಸಮವಸ್ತ್ರ ಧರಿಸಿ ಯುದ್ಧ ವರದಿಯ ತರಬೇತಿ ಪಡೆದಿದ್ದವರು.
ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ರೋಟರಿ, ಲಯನ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಗೌರವಗಳೂ ಅವರಿಗೆ ಸಂದಿವೆ…
ಕ್ರೀಡಾ ಕ್ಷೇತ್ರದ ಅವರ ಸೇವೆ ಮತ್ತು ಸಾಧನೆಯನ್ನು ಗೌರವಿಸಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ.
ಈ ಎಂಭತ್ತರ ಹರೆಯದಲ್ಲಿಯೂ ಯಾವುದೇ ಕಾರ್ಯಕ್ರಮಕ್ಕೆ ಹಾಜರಾದರೂ ಹೆಗಲ ಮೇಲೆ ಕ್ಯಾಮೆರಾ ಹೊತ್ತು ಹಾಜರಾಗುವ ಪರಿಪಾಠವನ್ನು ಮುಂದುವರೆಸಿದ್ದರು. ಅಪರೂಪದ ಚಿತ್ರಗಳ ಮೂಲಕ ಈಗಲೂ ಇತಿಹಾಸದ ಪುಟಗಳನ್ನು ಸಂಪದ್ಭರಿತವಾಗಿಸುತ್ತಿದ್ದವರು ಟಿ.ಎಲ್.ರಾಮಸ್ವಾಮಿವರು…
ಇಂತಹ ಟಿ.ಎಲ್. ರಾಮಸ್ವಾಮಿಯವರು ಈಗ ತೀರಿಕೊಂಡಿದ್ದಾರೆ. ಅವರಿಗಿದೋ ನಮನಗಳು…
***************************************************************
ಕೆ.ಶಿವು.ಲಕ್ಕಣ್ಣವರ