ಪ್ರಸ್ತುತ

ಪರೀಕ್ಷೆಗಳತ್ತ ಚಿತ್ತ

Hyderabad: Control room set up to help students writing ssc exams

ವನಜಾ ಸುರೇಶ್

ಪರೀಕ್ಷೆಗೆ  ದಿನಗಣನೆ  ಆರಂಭವಾಗಿದೆ  . ಕೆಲವು  ಮಕ್ಕಳಿಗೆ.  ಪರೀಕ್ಷೆ  ಮುಗಿದರೆ ಸಾಕೆಂಬ ಮನೋಭಾವವು ಇದೆ . ಕೆಲವರಲ್ಲಿ ಭಯವೂ ಇದೆ. 2019 ಜೂನ್ ನಿಂದು ಪ್ರಾರಂಬಿದ  ಪರೀಕ್ಷಾ ತಯಾರಿ  ಅಂತಿಮ ಹಂತಕ್ಕೆ ಬಂದು ನಿಂತಿದೆ.

  ಡಿಸೆಂಬರ್ ಗೆ ಬೋದಿಸಬೇಕಾದ ಪಠ್ಯಭಾಗವನ್ನು  ಮುಗಿಸಿ  ಜನವರಿಯಿಂದ  ಪುನರಾವರ್ತನೆ ಮಾಡಲಾಗಿದೆ  ಫೆಬ್ರವರಿಯಿಂದ  ಸಾಕಷ್ಟು ಸರಣಿ ಪರೀಕ್ಷೆಗಳನ್ನು ಮಾಡಿ  ಬರವಣಿಗೆ ದೋಷವನ್ನು ಸರಿಪಡಿಸಿಕೊಳಲು ತಿಳುವಳಿಕೆ ಹೇಳಲಾಗಿದೆ

ಕ್ಲಿಷ್ಟಕರಕರವೆನಿಸಿದ  ಪಠ್ಯಭಾಗವನ್ನು  ಪುನಃ ಪುನಃ ಬೋಧನೆ ಮಾಡಿ ಪರೀಕ್ಷೆ ಗಳನ್ನು ಮಾಡಿ  ತಿಳಿಸಲಾಗಿದೆ.

ನಂತರ

ವಿದ್ಯಾರ್ಥಿಗಳು ಕಲಿಕೆಯ ಹಾಗೂ ಅಭಿವ್ಯಕ್ತಿಯ  ಮಾನದಂಡದಂತೆ  ಎ  ಶ್ರೇಣಿ

ಬಿ  ಶ್ರೇಣಿ  ಹಾಗೂ ಸಿ.  ಶ್ರೇಣಿಗಳಾಗಿ  ವಿಭಾಗಿಸಿ  ಕೊಂಡು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋದಿಸಲಾಗಿದೆ .

C ಶ್ರೇಣಿಯಲ್ಲಿ ಗೆ ಕೆಲವು ಆಯ್ದ ಪಠ್ಯಭಾಗಗಳನ್ನೇ ಬೋಧಿಸಿ ನಿತ್ಯ ಬರೆಸಿ  ಮೌಖಿಕವಾಗಿ  ಹೇಳಿಸಿ  ಡ್ರಿಲ್  ವರ್ಕ್     ಮಾಡಿಸಿ,  ಅವರಿಗೂ ನಾವು ಬರೆಯಬಲ್ಲೆ ವೆಂಬ  ವಿಶ್ವಾಸ  ಮೂಡಿಸಲಾಗಿದೆ.

A. ಶ್ರೇಣಿ ಯ ವಿದ್ಯಾರ್ಥಿ ಗಳಿಗೆ ಇಡೀ  ಪಠ್ಯಭಾಗವನ್ನು  ಓದಿಕೊಂಡು  ಹೇಗೆ ಪ್ರಬುದ್ಧತೆ ಯಿಂದ ಉತ್ತರ ಬರೆಯಬೇಕೆಂಬ. ಬಗೆಗೆ ತಿಳುವಳಿಕೆ ಜೊತೆ ಜೊತೆಗೆ

tamil nadu state board exams: Tamil Nadu State board Class XII ...

ಹಲವು ಸುತ್ತಿನ ಬರವಣಿಗೆ ಮೂಲಕ,   ಸರಣಿ ಪರೀಕ್ಷೆ ಗಳು ಮೂಲಕ ತಯಾರಿ  ಮಾಡಿಸಲಾಗಿದೆ . ನಿಮಗೆ ಸಾಮರ್ಥ್ಯವಿದೆ  ನೂರಕ್ಕೆ , ನೂರೂ ತಗೊಂಡು ಅಚೀವ್ ಮಾಡಿರೆಂದೂ ,  ಪ್ರೋತ್ಸಾಹಿಸಿದ್ದೇವೆ . ಮಕ್ಕಳೂ ಈ ನಿಟ್ಟಿನಲ್ಲಿ ಸಿದ್ಧತಾ ಪರೀಕ್ಷೆ ಬರೆದು , ಖಾತ್ರಿಮಾಡಿಕೊಂಡಿದ್ದಾರೆ.

  ಇನ್ನು ಇಡೀ ವರ್ಷವವೆಲ್ಲ  ತರಬೇತಿಗೊಳಿಸಿದ  ಶಿಕ್ಷಕರು, ಕ್ರಿಕೆಟ್  ,ತರಬೇತುದಾರ,   ಗ್ಯಾಲರಿಯಲ್ಲಿ ಕುಳಿತು  ತಮ್ಮ ಶಿಷ್ಯರ  ಅದ್ಬುತ ಪ್ರದರ್ಶನಕ್ಕೆ  ,  ಕ್ರಿಕೆಟಿಗ ಚೆಂಡನ್ನು ಎದುರಿಸಿ , ಸಿಕ್ಸರ್ ಬಾರಿಸಿ ,  ನೆರೆದ ಸಭಿಕರಿಗೆ  , ಕೋಚ್ ಗಳಿಗೆ ಸಂತಸ  ತರುವನೋ,  ಎಂದು    ಆಸೆ  ಕಾತರದಿಂದ  ಕಾಯುವಂತೆ ,  ಶಿಕ್ಷಕರಾದ  ನಾವುಗಳೂ , ಆಸೆ , ಆತಂಕ , ಕುತೂಹಲದಿಂದ ಗಳಿಂದ ಎದುರು  ನೋಡುತ್ತಿದ್ದೇವೆ .

    ಪ್ರತಿಯೊಬ್ಬ ವಿದ್ಯಾರ್ಥಿಯೂ  ಒಂದೊಂದು ಪ್ರಶ್ನೆ ಯನ್ನು  ಹೇಗೇಗೆ   ಉತ್ತರಿಸಬಲ್ಲ  ಎಷ್ಟು   ಉತ್ತರಿಸ ಬಲ್ಲ

ಎಷ್ಟು ಜನ ವಿದ್ಯಾರ್ಥಿಗಳು  ಯಾವ ಯಾವ ಪ್ರಶ್ನೆ ಗಳಿಗೆ  ಉತ್ತರಿಸುತ್ತಾರೆಂಬ  ಅಂಕಿ ಅಂಶವೂ  ನಮಗೀಗ  ದೃಢವಾಗಿದೆ. ,

ಆದರೂ ಬದಲಾದ ಪರೀಕ್ಷಾ ಪದ್ಧತಿ  ಎಂಬ. ಮಾಹಿತಿ ಗೇ

ಹಲವು ಮಕ್ಕಳು  ಅಧೀರರಾಗುವುದನ್ನು , ಗಮನಿಸಿ  ಸಾಕಷ್ಟು   ಆತ್ಮವಿಶ್ವಾಸ ದ. , ಮಾತುಗಳು ಮೂಲಕ ದೈರ್ಯ ತುಂಬಿದ್ದೇವೆ .

  ಮಕ್ಕಳೇ  ಮುಂದಿನ  ಪರೀಕ್ಷೆಯು  ನಿಮ್ಮ ನಿಮ್ಮ ಶಾಲೆಗಳಲ್ಲಿ  ನಡೆಯುವುದಿಲ್ಲ. , ಹಾಗೇ. ನಿಮ್ಮ ಶಿಕ್ಷಕರಿರುವುದಿಲ್ಲಾ  ಎಂಬ ಬಗ್ಗೆ  ಗಾಬರಿ  ಬೇಡ . ಅಂಜಿಕೆಯೂ ಬೇಡ .

   ಯಾರಾದರೂ ಎಲ್ಲರೂ ಶಿಕ್ಷಕರೇ. ಎಲ್ಲರಿಗೂ  ವಿದ್ಯಾರ್ಥಿಗಳ ಬಗ್ಗೆ  ಪ್ರೀತಿಪೂರ್ವಕ. ಕಾಳಜಿ  ಇದ್ದೇ  ಇರುತ್ತದೆ . ಆದ್ದರಿಂದ ಎಲ್ಲರೂ ದೈರ್ಯವಾಗಿ  ಪರೀಕ್ಷಾ ಕೇಂದ್ರಗಳಿಗೆ  ತೆರಳಿ ರಿ.  ನಿಮ್ಮ ಬರವಣಿಗೆಗೆ ಯಾರೂ ಅಡ್ಡಿ ಮಾಡುವುದಿಲ್ಲಾ.

ಪರೀಕ್ಷಾ ದಿನದಂದು ಅರ್ಧ ಗಂಟೆ ಮೊದಲು ಕೇಂದ್ರಕ್ಕೆ ತೆರಳಿ ರಿ  , ನಿಮ್ಮ ಹಾಜರಿ ಸಂಖ್ಯೆಗಳನ್ನು ಖಾತ್ರಿ ಮಾಡಿಕೋಳ್ಳಿರಿ ,.

ಶಾಂತ ಚಿತ್ತದಿಂದ  ಪ್ರಶ್ನೆ ಪತ್ರಿಕೆ ಪೂರ್ಣ ಓದೆಕೊಂಡು

ನಂತರ  ಬರೆಯಲು ಪ್ರಾರಂಭಿಸಿ .  ನಿಮಗೆ ಚೆನ್ನಾಗಿ ಬರುವೆ ಪ್ರಶ್ನೆಗಳಿಗೆ  ಮೊದಲು ಉತ್ತರಿಸಿರಿ

    ಪ್ರಶ್ನೆಗಳಿಗೆ ಎಷ್ಟು  ಉತ್ತರಿಸಬೇಕು , ಒಂದು ವಾಕ್ಯ, ಎರಡು ವಾಕ್ಯ ,  ಎಂಟು ಹತ್ತು ವಾಕ್ಯ , ಇದನ್ನು ಗಮನಿಸಿಕೊಂಡು , ಉತ್ತರಿಸಿರಿ .

   ಉತ್ತರ ತಿಳಿದಿದೆ ಎಂಬ ಕಾರಣಕ್ಕೆ ,  ಅನವಶ್ಯಕವಾಗಿ  , ಹೆಚ್ಚು ಬರೆದು  ಸಮಯ ವ್ಯರ್ಥಮಾಡಿಕೊಳ್ಳದಿರಿ .

     ಚನ್ನಾಗಿ ಗೊತ್ತಿರುವ ಪ್ರಶ್ನೆ ಗಳನ್ನು ಮೊದಲು ಬರೆಯಿರಿ.

ಆಯಾಯ ಕ್ರಮಾಕ್ಷರ  ಪ್ರಶ್ನೆ ಸಂಖ್ಯೆ ಯನ್ನು  ಮರೆಯದೆ ಬರೆಯಿರಿ, ಹಾಗೂ ಬರೆದಾದ ಪ್ರಶ್ನೆ ಯನ್ನು  ರೈಟ್ ಮಾರ್ಕ್ ಮಾಡಿಕೊಳ್ಳಿ.   ಇದರಿಂದ  ನೀವು ಇನ್ನೂ ಉತ್ತರಿಸಬೇಕಾದ ಪ್ರಶ್ನೆ ಗಳೆಷ್ಟಿವೆ ಎಂದು  ತಿಳಿಯುತ್ತದೆ.

ಸಮಯ ಹೊಂದಾಣಿಕೆ ಮಾಡಿಕೊಳಲೂ ಸಹಾಯಕವಾಗುತ್ತದೆ.

     ಉತ್ತರ ಪತ್ರಿಕೆ ಕೊಟ್ಟಾಗ ಮೊದಲು ನಿಮ್ಮ ಹಾಜರಿ ಸಂಖ್ಯೆಯನ್ನು ಮೊದಲು ಬರೆಯಿರಿ

ಹೆಚ್ಚುವರಿ ಹಾಳೆ ತೆಗೆದು ಕೊಂಡಾಗ ಲೂ ಹಾಜರಿ ಸಂಖ್ಯೆಹಾಕಲು  ಮರೆಯದಿರಿ.

ಹೊಸಜಾಗ  ಜನಜಂಗುಳಿ , ಪೊಲೀಸ್ ವ್ಯವಸ್ಥೆ , ಪೋಷಕರು ದಂಡು  ನೋಡಿ ಗಾಬರಿಯಾಗಿ ದಿಲಿ.

  ಪೋಷಕರೇ  ದಯಮಾಡಿ ಪರೀಕ್ಷಾ ಕೇಂದ್ರದ ವರೆಗೆ ಹೋಗಿ  ಅತಿ ಒತ್ತಡ ಹೇರುವುದು ಮೂಲಕ ಭಯಪಡಿಸದಿರಿ.

 ಪರೀಕ್ಷಾ ಕೇಂದ್ರಗಳಿಗೆ ತೆರಳುವ   ಹಿಂದಿನ ದಿನವೇ  ಚೆನ್ನಾಗಿ ಬರೆಯುವ ಎರಡು, ಮೂರು ಪೆನ್ , ನಿಮ್ಮ ಪ್ರವೇಶಪತ್ರ, , ಪನೆಸಿಲ್ , ಎರಾಸರ್, ಇತ್ಯಾದಿಗಳನ್ನು  ರೆಡಿಯಾಗಿ ಇಟ್ಟುಕೊಂಡಿರಿ.

   ಮಕ್ಕಳೇ ಯಾವುದೇ ರೀತಿಯ  ಕಾಪಿಗೆ ಮನಸ್ಸು ಮಾಡಿದಿರಿ, ನೀವು ಇದುವರೆಗೆ ಕಲಿತಿರುವುದು ನನ್ನು ಬರೆಯಿರಿ , ಬೇರೆಯವರು ಹೇಳುವ  ಉತ್ತರಗಳನ್ನು ನಂಬದಿರಿ.

  ಯಾವುದೋ ಒಂದು ಪ್ರಶ್ನೆಗೆ  ಸರಿಯಾಗಿ  ಉತ್ತರಿಸಲಾಗಲಿಲ್ಲಾ , ಅಯ್ಯೋ ನನಗೆ , ಅಂಕ ಕಡಿಮೆಯಾಗುತ್ತದೆ ಎಂದು ಒತ್ತಡಕ್ಕೊಳಗಾಗಬೇಡಿ

ಅಂಕ ಮುಖ್ಯವಲ್ಲಾ , ಜ್ನಾನಮುಖ್ಯ.  ಜೀವನ  ದೊಡ್ಡದಿದೆ.  ಮುಂದೆ  ಇನ್ನೂ ಉತ್ತಮವಾಗಿ ಮುಂದುವರಿಯಲು ಸಾಕಷ್ಟು ಅವಕಾಶಗಳಿವೆ .

 ಒಂದು ವಿಷಯ ಮುಗಿದ ನಂತರ. ಮುಗಿದ ವಿಷಯದ. ಬಗೆಗೆ ಚಿಂತಿಸಿ  ಮುಂದಿನ ವಿಷಯಕ್ಕೆ   ತೊಂದರೆಮಾಡಿಕೊಳದಿರಿ

ಮುಗಿದ ವಿಷಯದ ಬಗ್ಗೆ ಚರ್ಚಿಸಲು ಹೋಗದಿರಿ.

  ಪೋಷಕರೇ  ನಮ್ಮ ಒತ್ತಡಗಳನ್ನು ಸಮಸ್ಯೆಗಳನ್ನು  ಮನೆಯಲ್ಲಿ , ಚರ್ಚೆ ಮಾಡುತ್ತಾ,  ಮಕ್ಕಳ ಮನಸಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಿರಿ.

ಮಕ್ಕಳೇ. ಮತ್ತೊಂದು ಮಹಾಮಾರಿ ಕೊರೋನಾ  ಎಂಬ ವೈರಾಣು ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುತ್ತಿದೆ .  ಇದರಿಂದ ಸಾರ್ವಜನಿಕ ಸಂಪರ್ಕದಿಂದ ಇರಿ ಮನೆಯಲ್ಲಿಯೇ ಇರಿ , ಹಾಗೂ ಆಗಾಗ ಸಾಬೂನಿನಿಂದ ಕೈಕಾಲು ತೊಳೆಯುತ್ತಾ ಇರಿ, .ರೋಗಿ ಹರಡದಂತೆ ತಡೆಯಲು ನೀವೂ ಸಹಕರಿಸುವುದರೊಂದಿಗೆ , ನಿಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ಕಾಪಾಡಲು ಉತ್ತಮ ಸಹಕಾರ ಕೊಡಿ

 ಹಾಗೆಯೇ ವಿಚಲಿತರಾಗದೆ ಮುಂಬರುವ ಪರೀಕ್ಷೆ ಯನ್ನು ಧೈರ್ಯದಿಂದ  ಎದುರಿಸುವ ತಯಾರಿ ಮಾಡಿಕೊಳ್ಳಲು ಸದಾವಕಾಶವಿದೆಂದು  ಭಾವಿಸಿರಿ . ಬೇಜವಾಬ್ದಾರಿ ಬೇಡ . ಭಯವೂ ಬೇಡ

ಇನ್ನು ಪೋಷಕರೇ

ಮಕ್ಕಳೊಂದಿಗೆ  ಪ್ರೀತಿಯಿಂದ  ವರ್ತಿಸುತ್ತಾ,  ಅವರ,

 ಆರೋಗ್ಯನೋಡಿಕೊಂಡು  ಅವರೊಂದಿಗೆ  ಇರಲು. ಪ್ರಯತ್ನಿಸಿ , ಮಕ್ಕಳನ್ನು ಒಂಟಿಯಾಗಿ ಬಿಡದಿರಿ.

ನೀನು. ಓದಿದೀಯಾ  ಚೆನ್ನಾಗಿ ಬರೀತೀಯಾ  ಅನ್ನೋ ನಂಬಿಕೆ ಇದೆ . ಬರೀ ಗಾಬರಿಯಾಗಬೇಡಿ ಎಂಬ ವಿಶ್ವಾಸದ   ಮಾತುಗಳ  ಮೂಲಕ  ಪ್ರೋತ್ಸಾಹಿಸಿ.

  ಎಲ್ಲರಿಗೂ  ಶುಭವಾಗಲಿ .ನೀವೆಲ್ಲರೂ ಶುಭತರುವಿರೆಂಬ  ನಂಬಿಕೆಯಿಂದ

ನಮಸ್ಕಾರಗಳೊಂದಿಗೆ

   ******

Leave a Reply

Back To Top