Category: ಇತರೆ

ಇತರೆ

ಪ್ರಸ್ತುತ

ಬುದ್ದಿಗೆ  ಹಿಡಿದ  ಗ್ರಹಣದ   ಬಿಡುಗಡೆ  ಎಂತು? ಗಣೇಶಭಟ್ ಶಿರಸಿ ಬುದ್ದಿಗೆ  ಹಿಡಿದ  ಗ್ರಹಣದ   ಬಿಡುಗಡೆ  ಎಂತು?    ಕಳೆದ ವಾರ ಅಂದರೆ 26-12-2019  ರಂದು  ನಡೆದ  ಅಪೂರ್ವ ನೈಸರ್ಗಿಕ ವಿದ್ಯಮಾನ ಸೂರ್ಯಗ್ರಹಣ ಹಲವರ  ಕಣ್ತುಂಬಿಸಿದರೆ,  ಹಲವರು ಭಯದಿಂದ  ಕುಗ್ಗಿ ಹೋದರು. ಸೂರ್ಯನಿಗೆ  ಗ್ರಹಣದಿಂದ  ಬಿಡುಗಡೆ   ದೊರಕಿದರೂ ಜನರ ಬುದ್ಧಿಗೆ  ಹಿಡಿದ  ಗ್ರಹಣ  ಬಿಡುವ ಸೂಚನೆಗಳು ಕಾಣುತ್ತಿಲ್ಲ.   ಆಕಾಶ ಕಾಯಗಳ  ಕುರಿತು,  ಅವುಗಳ ಚಲನೆಯ  ಬಗ್ಗೆ  ಏನೂ ತಿಳಿದಿರದ ಕಾಲಘಟ್ಟದಲ್ಲಿ  ಅಂದರೆ ಸಾವಿರಾರು ವರ್ಷಗಳ ಹಿಂದೆ, ಪ್ರಕೃತಿಯ  ಜೊತೆ […]

ಅಕ್ಷರದ ಅವ್ವ

ಸಾವಿತ್ರಿಬಾಯಿ ಪುಲೆ ಕೆ.ಶಿವು ಲಕ್ಕಣ್ಣವರ ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ..! ಇಂದು ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ ಹುಟ್ಟಿದ ದಿನ. ಆ ಕಾರಣವಾವಾಗಿ ಈ ಲೇಖನ ಸ್ಮರಣೆ… ಸಾವಿತ್ರಿಬಾಯಿ ಫುಲೆ(೧೮೩೧-೧೮೯೭)ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಭಾರತದ ಮೊಟ್ಟ ಮೊದಲ ಶಿಕ್ಷಕಿ. ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು ಅವರು… ಸಾವಿತ್ರಿಬಾಯಿ […]

ಪ್ರಸ್ತುತ

ಮಹಾರಾಷ್ಟ್ರದ ಗಡಿ ತಗಾದೆ ಕೆ.ಶಿವು ಲಕ್ಕಣ್ಣವರ ಮತ್ತೆ ಭುಗಿಲೆದ್ದ ಬೆಳಗಾವಿ ಗಡಿ ವಿವಾದವೂ..! ‘ಮಹಾರಾಷ್ಟ್ರ’ ಗಡಿ ಕ್ಯಾತೆ ಕಥೆಯ ಪೂರ್ಣ ಚಿತ್ರಣವೂ..!! ಮಹಾರಾಷ್ಟ್ರಕ್ಕೆ ಏನೋ ಗತಿ ಕಾದಿದೆ. ಅದಕೇ ಅದು ಮೇಲಿಂದ ಮೇಲೆ ಗಡಿ ಕ್ಯಾತೆ ತೆಗೆಯುತ್ತಿದೆ. ಈ ಬಾರಿ ಸಮಗ್ರ ಕರ್ನಾಟಕ ಈ ಗಡಿ ಕ್ಯಾತೆಯ ವಿರುದ್ಧ ಮಹಾರಾಷ್ಟ್ರದ ನೀರು ಇಳಿಸಲು ಸಿದ್ಧವಾಗಿ ಈ ಗಡಿ ಕ್ಯಾತೆ ಹೋರಾಟದಲ್ಲಿ ದುಮುಕಿದೆ… ಮಹಾರಾಷ್ಟ್ರದ ಜತೆಗಿನ ಗಡಿ ವಿವಾದ ಸದಾ ಬೂದಿ ಮುಚ್ಚಿದ ಕೆಂಡದಂತೆ. ಸುಮ್ಮನಿರುವ ಕರ್ನಾಟಕವನ್ನು ಪದೇ […]

ಕುವೆಂಪು ಜನ್ಮದಿನ

“ವಿಶ್ವ ಮಾನವ” ಬರಹಗಾರ ಕುವೆಂಪು..! ಕೆ.ಶಿವು ಲಕ್ಕಣ್ಣವರ ಇಂದು ಡಿಸೆಂಬರ್ ೨೯. ಕುವೆಂಪು ಹುಟ್ಟಿದ ದಿನ. ಆ ವಿಶ್ವ ಮಾನವ ನೆನಪಿನಲ್ಲಿ ಈ ಬರಹ ಸ್ಮರಣೆ… ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದ ಕುವೆಂಪು ಅವರು ತಾವೇ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪು ಅವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು, ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ “ಪರ್ವತಾರಣ್ಯ ಪ್ರಪಂಚ”ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ , […]

ಕೃಷಿಬೆಲೆ ಆಯೋಗ

ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು….. ಗಣೇಶಭಟ್ ಶಿರಸಿ. ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು…… ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ನೇಮಿಸಿರುವ ಕರ್ನಾಟಕ ಕೃಷಿ ಬೆಲೆ ಆಯೋಗವು ಸಕ್ರಿಯವಾಗಿ ಚಿಂತಿಸುತ್ತಿದೆ. ರಾಜ್ಯದ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಮತ್ತು ಸದೃಢ ಮಾರುಕಟ್ಟೆ ಸಿಗಬೇಕೆಂಬ ಉದ್ದೇಶದಿಂದ ಈ ಆಯೋಗವು ಹಲವಾರು ಶಿಫಾರಸ್ಸುಗಳನ್ನು ಮಾಡಿದೆ. ಆಯೋಗ ಮಾಡಿರುವ ಪ್ರತಿಯೊಂದು ಶಿಫಾರಸ್ಸಿನಲ್ಲೂ ರೈತರ, ರೈತಾಬಿಯ ಕುರಿತಾದ ಪ್ರಾಮಾಣಿಕ ಕಾಳಜಿ ಎದ್ದುಕಾಣುತ್ತದೆ. ರಾಜ್ಯಸರ್ಕಾರ ಮನಸ್ಸು ಮಾಡಿದರೆ […]

ಲಹರಿ

ಕವಿತೆಯ ಜಾಡು ಹಿಡಿದು  ಸ್ಮಿತಾಅಮೃತರಾಜ್. ಸಂಪಾಜೆ ಈ ಕವಿತೆ ಒಮ್ಮೊಮ್ಮೆ ಅದೆಷ್ಟು ಜಿಗುಟು ಮತ್ತುಅಂಟಂಟು ಅಂದ್ರೆ ಹಲಸಿನ ಹಣ್ಣಿನ ಮೇಣದ ತರ.ಮತ್ತೆ ಮತ್ತೆ ತಿಕ್ಕಿದಷ್ಟೂ ಅಂಟಿಕೊಳ್ಳುತ್ತಾ,ಬಿಡದೇ ಕಾಡುತ್ತಾ ,ಸತಾಯಿಸುತ್ತಾ,ಹಿಂದೆ ಮುಂದೆ ಸುತ್ತಿಸುಳಿದು ಯಾವುದೋ ಭಾವನಾ ತೀರಕ್ಕೆ ಲಗ್ಗೆಯಿಡುತ್ತಾ ತನ್ನನ್ನು ತಾನು ಮರೆವಿಗೆ ನೂಕಿಬಿಡುತ್ತದೆ.ಅರೆ ಕ್ಷಣವೂ  ಬಿಟ್ಟೂ ಬಿಡದ ಆತ್ಮಸಂಗಾತಿಯಂತೆ ಪಕ್ಕಕ್ಕಿರುತ್ತದೆ.ಕವಿತೆ ಯಾವೊತ್ತೂ ನನ್ನ ಕೈ ಬಿಡಲಾರದು ಎಂಬ ಗುಂಗಿನಲ್ಲೇ, ತುಸು ಹೆಚ್ಚೇ ಹಚ್ಚಿಕೊಂಡು,ಯಾವುದಕ್ಕೂವಿನಾಕಾರಣ ತಲೆಕೆಡಿಸಿಕೊಳ್ಳದೇ,ಕವಿತೆಯನ್ನು ನನ್ನ ತೆಕ್ಕೆಯೊಳಗಿಟ್ಟೋ..ಅಥವಾ ಕವಿತೆಯತೆಕ್ಕೆಯೊಳಗೆ ತಾನು ಬಿದ್ದೋ,ಒಟ್ಟಿನಲ್ಲಿ ಕವಿತೆಯ ಸಾಂಗತ್ಯದಲ್ಲಿ ಬದುಕು ಸುಖಿ ಅಂತಗುನುಗಿಕೊಳ್ಳುತ್ತಿರುವಾಗಲೇ..ಹಾದಿಯುದ್ದಕ್ಕೂ […]

ರೈತ ದಿನಾಚರಣೆ

ನೇಗಿಲಯೋಗಿ ಎನ್.ಶಂಕರರಾವ್ ರೈತರ ದಿನಾಚರಣೆ ಅಂಗವಾಗಿ ವಿಷಯ. ನೇಗಿಲ ಯೋಗಿ ಸುಮಾರು ಶೇಕಡಾ ೬೦ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ , ಹಳ್ಳಿ ಹಳ್ಳಿಗಳಲ್ಲಿ ನಮ್ಮ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ದೇಶದ ಆಹಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪರಿಶ್ರಮ ಪಡುತ್ತಿದ್ದಾರೆ. ಡಾ. ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯ ಹರಿಕಾರ. ಆಹಾರ ಸಮಸ್ಯೆ ಎದುರಿಸುತ್ತಿರುವ ಕಾಲದಲ್ಲಿ, ಹಸಿರು ಕ್ರಾಂತಿಯಿಂದ ಸುಭಿಕ್ಷವಾಯಿತು. ಭತ್ತ, ಗೋಧಿ ಬೆಳೆಯುವ ಯೋಜನೆ ಜಾರಿಗೆ ಬಂದು, ನಂತರ, ದ್ವಿದಳ ಧಾನ್ಯಗಳು ಮತ್ತು […]

ಪ್ರಬಂಧ

ಒಂದು ವಿಳಾಸದ ಹಿಂದೆ ಸ್ಮಿತಾ ಅಮೃತರಾಜ್. ಸಂಪಾಜೆ. ವಿಳಾಸವಿಲ್ಲದವರು ಈ ಜಗತ್ತಿನಲ್ಲಿ ಯಾರಾದರೂ ಇರಬಹುದೇ?. ಖಂಡಿತಾ ಇರಲಾರರು ಅಂತನ್ನಿಸುತ್ತದೆ. ಇಂತಹವರ ಮಗ, ಇಂತಹ ಊರು,ಇಂತಹ ಕೇರಿ,ಇಂತಹ ಕೆಲಸ..ಹೀಗೆ ಇಂತಹವುಗಳ ಹಲವು ಪಟ್ಟಿ  ಹೆಸರಿನ ಹಿಂದೆ ತಾಕಿಕೊಳ್ಳುತ್ತಾ ಹೋಗುತ್ತದೆ.  ವಿಳಾಸವೊಂದು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯೆಂಬ ಮಾತನ್ನು ನಾವ್ಯಾರು ಅಲ್ಲಗಳೆಯುವ ಹಾಗಿಲ್ಲ. ಯಾವುದೇ ಆಮಂತ್ರಣ ಪತ್ರವಾಗಲಿ, ದಾಖಲೆಗಳಾಗಲಿ ವಿಳಾಸವಿಲ್ಲದಿದ್ದರೆ ಅಪೂರ್ಣವಾಗುತ್ತದೆ.  ಪರಿಪೂರ್ಣ ವಿಳಾಸವಂತೂ ಇವತ್ತಿನ ಆಧುನಿಕ ಯುಗದ ಜರೂರು ಕೂಡ.  ನಮಗೆಲ್ಲ ಗೊತ್ತಿರುವಂತೆ  ಅಕ್ಷರಾಭ್ಯಾಸ ಮಾಡಿ ಶಾಲೆ […]

ಅನಿಸಿಕೆ

ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಶ್ರೀವತ್ಸ ಜೋಶಿ ಅದು ಸ್ವಾತಿ ಮಳೆಯೇ ಇರಬೇಕು! ನಿನ್ನ ಎದೆಯಿಂದ ಜಾರಿದ ಹನಿಯೊಂದು ನನ್ನ ತುಟಿ ಸಿಂಪಿಯ ಸೇರಿ ಈಗ- ಮುತ್ತಾಗಿದೆ ! @ಡಾ.ಗೋವಿಂದ ಹೆಗಡೆ ‘ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಹುಬ್ಬಳ್ಳಿಯಲ್ಲಿ ಅರಿವಳಿಕೆ ತಜ್ಞರಾಗಿರುವ ಡಾ. Govind Hegdeಯವರು ಒಬ್ಬ ಸೂಕ್ಷ್ಮಮನಸ್ಸಿನ, ಕವಿಹೃದಯದ ಕವಿ. ಪ್ರಚಾರ ಬಯಸದ ಪ್ರತಿಭಾವಂತ. ಕನ್ನಡದಲ್ಲಿ ಹನಿಗವನಗಳನ್ನು, ಕಬೀರನ ‘ದೋಹಾ’ಗಳಂತಿರುವ ದ್ವಿಪದಿಗಳನ್ನು, ಪೂರ್ಣಪ್ರಮಾಣದ ಕವಿತೆಗಳನ್ನೂ ಬರೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಕನ್ನಡ ಗಜ಼ಲ್‌ಗಳನ್ನು ಬರೆದಿದ್ದಾರೆ. ಅವುಗಳನ್ನು ಯಾರಾದರೂ […]

Back To Top