ರೈತ ದಿನಾಚರಣೆ

Image result for images of draught

ನೇಗಿಲಯೋಗಿ

ಎನ್.ಶಂಕರರಾವ್

ರೈತರ ದಿನಾಚರಣೆ ಅಂಗವಾಗಿ

ವಿಷಯ. ನೇಗಿಲ ಯೋಗಿ

ಸುಮಾರು ಶೇಕಡಾ ೬೦ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ , ಹಳ್ಳಿ ಹಳ್ಳಿಗಳಲ್ಲಿ ನಮ್ಮ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ದೇಶದ ಆಹಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪರಿಶ್ರಮ ಪಡುತ್ತಿದ್ದಾರೆ.

ಡಾ. ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯ ಹರಿಕಾರ. ಆಹಾರ ಸಮಸ್ಯೆ ಎದುರಿಸುತ್ತಿರುವ ಕಾಲದಲ್ಲಿ, ಹಸಿರು ಕ್ರಾಂತಿಯಿಂದ ಸುಭಿಕ್ಷವಾಯಿತು.

ಭತ್ತ, ಗೋಧಿ ಬೆಳೆಯುವ ಯೋಜನೆ ಜಾರಿಗೆ ಬಂದು,
ನಂತರ, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳಿಗೆ ಆಧ್ಯತೆ ನೀಡಲಾಗಿದೆ.

ಈಗ ಒಣ ಬೇಸಾಯಕ್ಕೆ ಒತ್ತು ನೀಡಿ, ಜಲಾನಯನ ಅಭಿವೃದ್ಧಿ ಮೂಲಕ, ನಮ್ಮ ರೈತರು, ನೆಲ ಜಲ ಸಂರಕ್ಷಿಸಲು
ಮುಂದೆ ಬಂದಿದ್ದಾರೆ.

ನಮ್ಮ ನೇಗಿಲ ಯೋಗಿಯ ಜೀವನ ಹೇಗಿದೆ ಎಂದು ಪರಾಮರ್ಶೆ ನಡೆಸುವುದು ನಮ್ಮೆಲ್ಲರ ಹೊಣೆ.

ಸ್ವಾವಲಂಬಿಯಾಗಿದ್ದ ರೈತರ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದೆ. ವಿವಿಧ ಸುಲಭ ಯೋಜನೆಯ ಮೂಲಕ ಅವರನ್ನು ದೇಹೀ ಎಂಬ ಪರಿಸ್ಥಿತಿಗೆ ತಳ್ಳಿದೆ.

ಹಳ್ಳಿಗಳಲ್ಲಿ ಪಟ್ಟಣದ ಸೌಲಭ್ಯ ಒದಗಿಸಲು ಸರ್ಕಾರ ವಿಫಲವಾಗಿದ್ದು, ಯುವಜನರ ಒಲಸೆಗೆ ಕಾರಣವಾಗಿದೆ.

ಕೂಲಿಕಾರರ ಅಲಭ್ಯತೆ, ಮಳೆಯ ವೈಪರೀತ್ಯ, ಬೆಳದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದಿರುವುದು, ಗೂಬ್ಬರ ದೊರೆಯದ ಹಿನ್ನೆಲೆಯಲ್ಲಿ,
ನೇಗಿಲ ಯೋಗಿಯು, ಸಮಸ್ಯೆ ಎದುರಿಸುತ್ತಿದ್ದಾರೆ.

ಬ್ಯಾಂಕ್ ಗಳು ನೀಡಿದ ಸಾಲಬಾಧೆ, ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ, ಋಣಭಾರದ ಚಕ್ರವ್ಯೂಹದಲ್ಲಿ ಸಿಲುಕಿ, ಆತ್ಮಹತ್ಯೆಗೆ ಶರಣಾದ ನೇಗಿಲ ಯೋಗಿಯ ವಿಶಾದ ಕಥೆ ಕೇಳಿದ್ದೇವೆ.

ಇದಕ್ಕೆಲ್ಲಾ ಪರಿಹಾರ ವಿಲ್ಲವೆ.?

ಇದೆ, ಆದರೆ ನಾವೆಲ್ಲರೂ ಮತ್ತು ಸರ್ಕಾರ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ.

ಕೆಲವು ದೀರ್ಘಾವಧಿ ಯೋಜನೆ ಜಾರಿಗೆ ತರುವ ಚಿಂತನೆ ಅಗತ್ಯ.

ಮಣ್ಣು ಪರೀಕ್ಷೆ, ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ, ಉತ್ತಮ ತಳಿಯ ಬೀಜಗಳನ್ನು ಕಡ್ಡಾಯವಾಗಿ ನೀಡುವ ಗುರಿ, ಜೈವಿಕ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ, ವೈಜ್ಞಾನಿಕ ಕೃಷಿಯ ಅಳವಡಿಕೆ, ಸಾಲದ ಸದುಪಯೋಗ, ಸೂಕ್ತ ಬೆಲೆ, ಸುಲಭ ಮಾರುಕಟ್ಟೆ, ಇತ್ಯಾದಿ.

ಜೈ ಜವಾನ್, ಜೈ ಕಿಸಾನ್ ಕೇವಲ ಶಬ್ದಗಳ ಮೂಲಕ ಇರದೆ, ಮನದಾಳದಿಂದ ಮೂಡಿಬಂದ ಭಾರತೀಯರ ಆಶ್ವಾಸನೆ ಆದರೆ, ನಮ್ಮ ನೇಗಿಲಯೋಗಿಯ ಬದುಕು ಹಸನಾಗುತ್ತದೆ ಮತ್ತು ಕುವೆಂಪು ಅವರು ಹೇಳಿರುವಂತೆ ಉಳುವ ನೇಗಿಲ ಯೋಗಿಯ ನೋಡಲ್ಲಿ ಸಾಕಾರ ವಾಗುತ್ತದೆ.


One thought on “ರೈತ ದಿನಾಚರಣೆ

Leave a Reply

Back To Top