Category: ಅಂಕಣ

ಅಂಕಣ

ಬಣ್ಣ-ರೇಖೆಗಳ ಜೊತೆಯಾಟ ಪಕ್ಷಾತೀತ ಕಲಾವಿದ ಅನಾಥ ಶಿಶುವಿನಂತೆ’ ಎಂ.ಎಲ್.ಸೋಮವರದ ಎಂ.ಎಲ್.ಸೋಮವರದ ದೇಶ ಕಂಡ ಉತ್ತಮ ಕಲಾವಿದರಲ್ಲಿ ಒಬ್ಬರು. ಮಂಡ್ಯದ ವಿ.ವಿ.ನಗರದ ಕಲ್ಲಹಳ್ಳಿ ನಿವಾಸಿ. ತುಂಬಾ ನಿಷ್ಠುರ ವ್ಯಕ್ತಿತ್ವದ ಸೋಮವರದ , ಜೀವನದಲ್ಲಿ ಕಷ್ಟಗಳನ್ನೇ ಹೆಚ್ಚು ಹೊದ್ದವರು. ನ್ಯಾಯ, ನೈತಿಕ ಮತ್ತು ವೈಚಾರಿಕ ನಿಲುವಿನ ಕಲಾವಿದ. ವೈಚಾರಿಕ ಮನೋಭಾವದಿಂದ ಅನೇಕ ಅವಕಾಶಗಳನ್ನು ಕಳೆದುಕೊಂಡವರು. ಎಂ.ಎಲ್.ಸೋಮವರದ ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ 1987ರಲ್ಲಿ ಡಿ.ಎಂ.ಸಿ. ಪದವಿ ಪಡೆದವರು. 2008 ರಲ್ಲೇ ಮೈಸೂರು ಮುಕ್ತ ವಿ.ವಿ.ಯಿಂದ ಬಿ.ಎಫ್.ಎ. ಅಧ್ಯಯನ ಮಾಡಿದರು. ಮಂಡ್ಯ, […]

ಮೂರನೇ ಆಯಾಮ

ಸುಪ್ತಮನದೊಳಗಿನ ಗುಪ್ತತೆಗಳ ಅನಾವರಣ ಸುಪ್ತಲೇಖಕರು- ಡಾ. ಕೆಬಿ ಶ್ರೀಧರಬೆಲೆ- ೨೦೦ ತ್ರೀ ಈಡಿಯೆಟ್ಸ್ ನೋಡಿದ್ದೀರಲ್ಲ? ಅಲ್ಲಿನ ಒಂದು ದೃಶ್ಯ. ಇಂಜಿನಿಯರ್ ಕಾಲೇಜಿನ ರಿಸಲ್ಟ್ ಬಂದಿರುತ್ತದೆ. ಸ್ನೇಹಿತರಾದ ಫರ್ಹಾನ್ ಖಾನ್ ಮತ್ತು ರಾಜು ತಮ್ಮ ತಮ್ಮ ರಿಸಲ್ಟ್ ನೋಡಲು ಅಂಕಪಟ್ಟಿಯ ಕೆಳಗಿನಿಂದ ಮೇಲಕ್ಕೆ ನೋಡುತ್ತಿರುತ್ತಾರೆ. ಅಲ್ಲೆಲ್ಲೋ ಮಧ್ಯದಲ್ಲಿ ಅವರ ಹೆಸರುಗಳು ಕಾಣಿಸುತ್ತವೆ. ತಮ್ಮ ಹೆಸರು ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಆದರೆ ತಮಗಿಂತ ಒಂದಿಷ್ಟು ಮೇಲಿನವರೆಗೆ ನೋಡಿದರೂ ರಾಂಚೋ ನಂಬರ್ ಸಿಕ್ಕುವುದೇ ಇಲ್ಲ. ಗೆಳೆಯರಿಗೆ ಬೇಸರ. ತಮ್ಮದೇ ಜೊತೆ […]

ಅಜ್ಜನಮನೆಯೆನ್ನುವ ಜೀವನಪಾಠ….. ಅಜ್ಜ ನೆನಪಿಗೆ ಬಂದಾಗಲೆಲ್ಲ ಅಜ್ಜನಮನೆ ಎನ್ನುವ ಮಮತೆಯ ಮಲ್ಹಾರವೊಂದು ಮನಸ್ಸನ್ನೆಲ್ಲ ತುಂಬಿಕೊಳ್ಳುತ್ತದೆ. ಈ ಪ್ರೀತಿ-ಮಮಕಾರಗಳ ಮೂಲವನ್ನೊಮ್ಮೆ ಕೆದಕಿ ನೋಡಿ! ಅಜ್ಜಿಯ ಸೆರಗಿನಂಚಿನ ಪ್ರೀತಿಯ ಸೆಲೆಯೊಂದು, ಅಜ್ಜನ ಕಿರುಬೆರಳಿನ ಅಭಯವೊಂದು ನಾವಿಡುವ ಪ್ರತೀ ಹೆಜ್ಜೆಯನ್ನೂ ಸಲಹುತ್ತಿರುತ್ತದೆ. ಎಷ್ಟೇ ಆಧುನಿಕ ಜೀವನಶೈಲಿಯಾದರೂ, ಅಪಾರವಾದ ಸ್ನೇಹಬಳಗವಿದ್ದರೂ ಅಜ್ಜ-ಅಜ್ಜಿ ಎನ್ನುವ ಪ್ರೀತಿಯ ಬಲೆಯೊಂದರಲ್ಲಿ ಬದುಕಿನುದ್ದಕ್ಕೂ ಬಂದಿಯಾಗಿರುತ್ತೇವೆ; ಅಚ್ಚರಿಯೆಂದರೆ ಆ ಬಂಧನ ನಮಗೆಂದೂ ಹೊರೆಯೆನ್ನಿಸುವುದಿಲ್ಲ. ಅಜ್ಜನ ಕಥೆಯಲ್ಲಿ ಬರುವ ನೂರಾರು ಮೂಟೆಗಳ ಭತ್ತದ ದಾಸ್ತಾನನ್ನು ರಾತ್ರೋರಾತ್ರಿ ಖಾಲಿ ಮಾಡಿದ ಇರುವೆಗಳ ದಂಡು, […]

ಸ್ವಾತ್ಮಗತ

ಪ್ರೋ.‘ಸಿಜಿಕೆ’ ಎಂಬ ರಂಗ ಪ್ರಜ್ಞೆ ಪ್ರೋ.‘ಸಿಜಿಕೆ’ ಎಂಬ ರಂಗ ಪ್ರಜ್ಞೆಯೂ..!ಸಿಜಿಕೆ ರಂಗ ದಿನವೂ.!! ‘ಸಿಜಿಕೆ’ ಎಂದರೆ ಅದೊಂದು ಮಹಾ ರಂಗಪರಂಪರೆಯ ಸಂಕೇತ. ತನ್ನ ಸುತ್ತಲಿನವರನ್ನು ಒಟ್ಟು ಸಮಾಜವನ್ನು ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಮನೋಭಾವನೆಯ ರಂಗ ಚಟುವಟಿಕೆಗಳ ಮೂಲಕ ಪ್ರಭಾವಿಸಿದ ರಂಗ ಚೇತನ. ದೇಶ, ಕಾಲ ಆಯಾ ಸಂದರ್ಭದಲ್ಲಿ ಎದುರಿಸುವ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ರಂಗ ಬದ್ಧತೆಯೊಂದಿಗೆ ದಿಟ್ಟತನದಿಂದ ಮೆರೆದ ಮಹಾ ಜಗಜಟ್ಟಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ.ಜಿ.ಕೃಷ್ಣಸ್ವಾಮಿ ಪಕ್ಕಾ ದೇಸಿ ಪ್ರತಿಭೆ.ಬೆಂಗಳೂರು […]

ಒಳ ಮನಸು ವಿಸ್ತರಿಸಿದ‌ ಕತೆಗಾರ್ತಿ

ಒಳ ಮನಸು ವಿಸ್ತರಿಸಿದ‌ ಕತೆಗಾರ್ತಿ “ಬರವಣಿಗೆ ಮೂಲಕ  ಅಸಹನೀಯ ಮೌನವೊಂದನ್ನು ಮುರಿಯುತ್ತಿದ್ದೇನೆ ಅನಿಸುತ್ತಿದೆ’ ಸುನಂದಾ ಕಡಮೆ ಕತೆಗಾರ್ತಿ  ಸುನಂದಾ ಕಡಮೆ 1967 ರಲ್ಲಿ ಉತ್ತರಕನ್ನಡದ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ಜನಿಸಿದ್ದು.  ಪಕ್ಕದ ಭಾವಿಕೇರಿಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿಯ ನಂತರ ಕರ್ನಾಟಕ ವಿ.ವಿಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಕವಿ ಪ್ರಕಾಶ ಕಡಮೆಯವರೊಂದಿಗೆ  ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.   ಕಾವ್ಯಾ ಮತ್ತು ನವ್ಯಾ ಎಂಬಿಬ್ಬರು ಮಕ್ಕಳು. 1997ರಲ್ಲಿ ಬರವಣಿಗೆ ಆರಂಭಿಸಿದರು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ […]

ದಿಕ್ಸೂಚಿ

ಯೋಜನೆಯ ಮೇಲೆ ದೃಷ್ಟಿ ಇರಿಸಿ ದೊಡ್ಡ ಗೆಲುವು ಸಾಧಿಸಿ ಜಯಶ್ರೀ ಜೆ.ಅಬ್ಬಿಗೇರಿ ಇದೀಗ ನಾ ಹೇಳ ಹೊರಟಿರುವುದು ಜಗತ್ಪ್ರಸಿದ್ಧ ತೇನ್ ಸಿಂಗನ ಕಥೆ ಆಗ ಆತ ಇನ್ನೂ ಚಿಕ್ಕವ. ಮನೆಯಂಗಳದಲ್ಲಿ ಕುಳಿತು ಸದಾ ಎವರೆಸ್ಟನ್ನೇ ದಿಟ್ಟಿಸುತ್ತಿದ್ದ. ಪುಟ್ಟ ಬಾಲಕನನ್ನು ಎವರೆಸ್ಟ್ ಪ್ರತಿದಿನವೂ ಪುಳಕಗೊಳಿಸುತ್ತಿತ್ತು. ಆತನನ್ನು ಕಂಡ ತಾಯಿ’ಅದೇಕೋ ದಿನವೂ ಎವರೆಷ್ಟನ್ನೇ ದಿಟ್ಟಿಸಿ ನೋಡುತ್ತಿಯಾ?’ ಎಂದು ಕೇಳಿದಳು.’ಅಮ್ಮಾ ಈ ನನ್ನ ಪುಟ್ಟ ಕಾಲುಗಳಿಂದ ಆ ದೊಡ್ಡ ಹಿಮಪರ್ವತದ ತುದಿಯನ್ನು ಮುಟ್ಟಬಲ್ಲೆನೆ? ಎಂದು ಯೋಚಿಸುತ್ತಿದ್ದೇನೆ.’ ಅದಕ್ಕೆ ತಾಯಿ ‘ಮಗೂ,ಅದು ಯಾವ […]

ಮೂರನೆ ಆಯಾಮ

ಕೈರಳಿಯ ದೇವನಾಡಿನಲ್ಲಿ ರಂಗಪಯಣ ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಕೂಸೆ ಅಡ್ರೆಸ್ ಹೇಳು… ಕಿರಣ ಭಟ್ಟರ ಫೋನ್.ಶ್ರೀದೇವಿ ಕೆರೆಮನೆ, ಹಬ್ಬುವಾಡ, ಕಾರವಾರ ಬರೆದುಹಾಕು ಸಾಕು. ಬರ್‍ತು.ಅಷ್ಟೇ ಸಾಕೇನೆ? ಕೆ.ಎಚ್.ಬಿ ಹಾಕದು ಬ್ಯಾಡ್ದಾ? ರೋಡ್ ನಂಬರ ಹೇಳ್ಬಿಡೆ…ನಿಂಗೆ ಬೇಕರೆ ಕೆ.ಎಚ್.ಬಿ. ಡಿ-೬ ರಸ್ತೆ ಎಲ್ಲ ಹಾಕು. ಹಾಕದಿದ್ರು ಬರ್‍ತು. ಚಿಂತೆ ಮಾಡಡ… ನಾನು ನಗುತ್ತ ಹೇಳಿದೆ.ವರ್ಲ್ಡ್ ಫೇಮಸ್ಸು ಮಾರಾಯ್ತಿ ನೀನು… ನಕ್ಕಿದ್ದರು.ಎಂತಕ್ಕೋ… […]

ಸಂಪ್ರೋಕ್ಷಣ

ಕನಸಿನ ಚಾದರ ಬರಹ-02 ಬಣ್ಣಗಳಂತೆಯೇ ಕನಸುಗಳದ್ದೂ ಒಂದು ಮೋಹಕ ಲೋಕ. ಕನಸು ಕಾಣದ ಅಥವಾ ಕನಸುಗಳೇ ಬೀಳದ ಮನುಷ್ಯರಿಲ್ಲ. ಕನಸು ಬೀಳುವುದು ವಿಜ್ಞಾನ ಅಥವಾ ವೈದ್ಯಕೀಯಕ್ಕೆ ಸಂಬಂಧಪಟ್ಟ ಸಂಗತಿಯಾದರೆ, ಕನಸು ಕಾಣುವುದೊಂದು ಮನಸ್ಥಿತಿ ಅಥವಾ ಭಾವನೆಗಳಿಗೆ ಸಂಬಂಧಪಟ್ಟಿದ್ದು. ರಾತ್ರಿ ಬಿದ್ದ ಕನಸೊಂದು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಮರೆತುಹೋಗುವುದುಂಟು; ಬಾಲ್ಯದ ಅವೆಷ್ಟೋ ಕನಸುಗಳು ಯೌವನಾವಸ್ಥೆಯಲ್ಲಿ ಅಥವಾ ಯೌವನದ ಅವೆಷ್ಟೋ ಕನಸುಗಳು ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮರೆಯಾಗುವುದುಂಟು. ಆದರೆ ಈ ಕನಸಿನ ಪ್ರಕ್ರಿಯೆ ಮಾತ್ರ ನಿರಂತರ. ಕಾಲೇಜಿನ ದಿನಗಳಲ್ಲಿ ಕುಡಿಮೀಸೆಯಂಚಿನಲ್ಲಿ ಸೊಗಸಾಗಿ […]

ಸ್ವಾತ್ಮಗತ

ದೇವನೂರು ಮಹಾದೇವರೂ..! ಮತ್ತವರು ಹುಡುಕಿದ ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆಯೂ.!! ದೇವನೂರ ಮಹಾದೇವ ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು. ಹಾಗೆಂದು ಅವರ ಬಳಿ ಹೋಗಿ ‘ಹ್ಯಾಪಿ ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು ಗಂಭೀರರಾಗಿಬಿಡುತ್ತಾರೇನೋ ಅನಿಸುತ್ತದೆ. ಅವರು ಮನುಷ್ಯನ ಮೂಲ ಆಳವನ್ನು ತಲುಪದ ಯಾವ ಆಚರಣೆಗಳನ್ನೂ ಒಪ್ಪುವವರಲ್ಲವೇನೋ ಎಂದೆನಿಸುತ್ತಿದೆ. ದೂರದರ್ಶನ ಬಂದ ಪ್ರಾರಂಭದ ದಿನಗಳಲ್ಲಿ ಇರಾನ್, ಇರಾಕ್ ದೇಶಗಳ ಯುದ್ಧಗಳು ಕ್ರಿಕೆಟ್ ಆಟ ನೇರ ಪ್ರಸಾರವಾಗುವಂತೆ ವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು. […]

ದಿಕ್ಸೂಚಿ

ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ. ಜಯಶ್ರೀ ಜೆ.ಅಬ್ಬಿಗೇರಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ‘ನಿನ್ನ ಪರವಾಗಿ ಹೇಳುವುದೇನಾದರೂ ಇದ್ದರೆ ಹೇಳಬಹುದು ಎಂದು ಹೇಳಿದಾಗ ಅದಕ್ಕೆ ಆತ “ನ್ಯಾಯಾಧೀಶರೇ, ನನ್ನ ಜೊತೆಗೆ ನನ್ನ ತಂದೆ ತಾಯಿಗೂ ಶಿಕ್ಷೆ ವಿಧಿಸಿ. ಅವರನ್ನೂ ಜೈಲಿಗೆ ಕಳಿಸಿ” ಎಂದ. ನ್ಯಾಯಾಧೀಶರು ಕಾರಣ ಕೇಳಿದಾಗ ಕಳ್ಳ ಹೇಳಿದ “ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಒಂದು ಪೆನ್ಸಿಲ್ ಕದ್ದೆ. ನಮ್ಮ ತಂದೆ ತಾಯಿಗೆ ಗೊತ್ತಾದರೂ ಅವರು ಏನನ್ನೂ ಹೇಳಲಿಲ್ಲ. ನಂತರ ಬೇರೆ […]

Back To Top