Category: ಅನುವಾದ

ಅನುವಾದ

ಹೂವಿನ ಹಾಡು

ಖಲೀಲ್ ಗಿಬ್ರಾನ್ ನ ಆಂಗ್ಲ ಕವಿತೆಯಾದ “Song of Flower”ನ ಭಾವಾನುವಾದ. ಚೈತ್ರಾ ಶಿವಯೋಗಿಮಠ ಸೃಷ್ಟಿ ಉಲಿದು ಪುನರುಚ್ಛರಿಸಿದ ಮೆಲುದನಿಯು ನಾನು  ನೀಲ ನಭದಿಂದುದುರಿ, ಹಸಿರ ಹಾಸಿನ ಮೇಲೆ  ಬಿದ್ದ ನಕ್ಷತ್ರ ನಾನು ಪಂಚಭೂತಗಳೊಂದಿಗಿನ  ಸಮಾಗಮದಿಂದ   ಮಾಗಿಯು ಗರ್ಭಧರಿಸಿ,  ಚೈತ್ರ ಹಡೆದು, ವೈಶಾಖದ ಮಡಿಲಲಿ ಆಡಿ ಬೆಳೆದು, ಶರದ್ ಶಯ್ಯೆಯ ಮೇಲೆ  ಚಿರನಿದ್ರೆಗೆ ಜಾರುವ ಮಗಳು ನಾನು  ಅರುಣೋದಯದಿ ತಂಗಾಳಿಯೊಂದಿಗೆ  ಸಂಘಟಿಸಿ ಬೆಳಕಿನಾಗಮನವ ಸಾರುವೆನು . ಸಂಧ್ಯಾಕಾಲದಿ  ಹಕ್ಕಿಗಳೊಡಗೂಡಿ,  ನಿರ್ಗಮಿಸುವ ಬೆಳಕ ಬೀಳ್ಕೊಡುವೆನು . ಬಯಲುಗಳು ನನ್ನ […]

ಅನುವಾದ ಸಂಗಾತಿ

ಈಜಿಪ್ಟಿನ ಮಹಾರಾಜ ಮೂಲ: Ozymandias of Egypt: By P.B.Shelly ಕನ್ನಡಕ್ಕೆ:ವಿ.ಗಣೇಶ್ ವಿ.ಗಣೇಶ್ ಅನತಿಕಾಲದಿಂದಲೂ ಪಾಳುಬಿದ್ದಾ ಭೂಮಿಯಲಿನಾನೊಬ್ಬ ಪಯಣಿಗನ ಭೇಟಿಯಾದೆನು ಅಂದುಮುರಿದೆರಡು ಕಾಲುಗಳ ಬರಿ ಪ್ರತಿಮೆಯದಾಗಿತ್ತುಆರ್ಧ ದೇಹವು ಕಂತಿತ್ತು ಆ ಮರಳಿನ ರಾಶಿಯಲಿ ಸುಕ್ಕಾದ ಹೊರ ತೊಗಲು, ಗಂಟು ಮೋರೆಯ ನೋಟಕೆತ್ತಿದಾ ಶಿಲ್ಪಿಯ ಕೈಚಳಕವ  ತೋರುತಲಿತ್ತುಊಟ ವಸತಿಯ ಕೊಟ್ಟು ಸಾಕಿಸಲಹಿದ ರಾಜನದುಷ್ಟತನದ ಕಳೆಯ ತುಂಬಿದ್ದನಾ ವದನದಲಿ. ಪ್ರತಿಮೆಯಾ ಪೀಠವದು ಮರಳಲ್ಲಿ ಮುಳುಗಿದರುರಾಜನ ಕಡು ದರ್ಪವ ಎತ್ತಿ ತೋರಿಸುತಲಿತ್ತು“ನನ್ನ ಹೆಸರು ಓಜಿಮಾಂಡಿಯಾಸ್, ರಾಜರ ಮಹಾರಾಜನನ್ನ ಸಾಧನೆಯ ನೋಡಿ! ಅದೆಷ್ಟು […]

ಅನುವಾದ ಸಂಗಾತಿ

ಬದುಕುವುದು ಹೇಗೆ? ಕನ್ನಡ:ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಲಯಾಳಂ: ಚೇತನಾ ಕುಂಬ್ಳೆ ಎಲ್ಲವನು ಬಿಚ್ಚಿ ಬತ್ತಲೆಯಾಗಿಸುವ ಈ ದುಶ್ಯಾಸನರ ಮಧ್ಯೆ ಬದುಕುವುದು ಹೇಗೆ ? ಕಾಮನೆಗಳ ಬದಿಗೊತ್ತಿ ಲಿಂಗೈಕ್ಯಳಾದ ಅಕ್ಕನ ಹೆಸರು ಹೇಳಿ ನಾಪತ್ತೆಯಾಗುವ ತಂಗಿಯರ ಬಗ್ಗೆ ಬರೆಯುವುದು ಹೇಗೆ ? ಮಾತು ಬದಲಾಯಿಸುವ ನಾರದರ ಸಂತಾನ ಮೃಗವಾಗಿ ಸುಳಿಯುವ ಮಾರೀಚನ ಬಳಗ ಪ್ರತ್ಯಕ್ಷವಾದಾಗ ನಿಜರೂಪ ಅರಿಯುವುದು ಹೇಗೆ ? ಶಾಪಗ್ರಸ್ತ ಅಹಲ್ಯೆ ಶೋಕತಪ್ತ ಊರ್ಮಿಳೆ ದಿನವೂ ಅಳುವಾಗ ದೂರ ಸರಿಯುವುದು ಹೇಗೆ ? ಕಲ್ಲುದೇವರಿಗೆ ಮಂಗಳಾರತಿ ಮಾಡಿ […]

ಅನುವಾದ ಸಂಗಾತಿ

ಮುದುಕ ಗ್ರೀಸ್ ದೇಶದ ರಾಷ್ಟ್ರ ಕವಿ ಕೋನ್ಸ್ಟಾ೦ಟಿನ್ ಪಿ ಕವಾಫಿ ಯ “ಏನ್ ಓಲ್ದ್ ಮ್ಯಾನ್”ಕವಿತೆಯ ನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಇದೊ೦ದು ವೃದ್ಧಾಪ್ಯದ ಲ್ಲಿ ನಿ೦ತು ಕಳೆದುಹೋದ ಯೌವನದ ಕಾಲವನ್ನು ಕುರಿತು ಯೋಚಿಸುತ್ತಾ ತಳ ಮಳ ಗೊಳ್ಳುವ ಚಿತ್ರವನ್ನು ಕಟ್ಟಿಕೊಡುವಸು೦ದರ ಕವನ. ನನ್ನ ಅನುವಾದದ ಜತೆಗೆ ಕವಾಫಿಯ ಕವನದ ಇ೦ಗ್ಲಿಶ್ ಪಠ್ಯವನ್ನೂ ಇಲ್ಲಿಕೊಟ್ಟಿದ್ದೇನೆ ಮೇಗರವಳ್ಳಿ ರಮೇಶ್ ಅಲ್ಲಿ, ಗದ್ದಲದ ಕೆಫೆಯ ಆ ಕೊನೆಯಲ್ಲಿತಲೆ ಬಗ್ಗಿಸಿ ಕುಳಿತಿದ್ದಾನೊಬ್ಬ ಮುದುಕಎದುರು ಟೇಬಲ್ಲಿನ ಮೇಲೆ ಹರಡಿದೆ ವೃತ್ತ ಪತ್ರಿಕೆ. ನಿಸ್ಸಾರ ಮುದಿತನದ […]

ಕಥಾಯಾನ

ಒಂದು ವಿಶೇಷ ದಿನ ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ ಕನ್ನಡಕ್ಕೆ ಚೇತನಾ ಕುಂಬ್ಳೆ ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ.         ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು […]

ಅನುವಾದ ಸಂಗಾತಿ

ಬದುಕು ಹೇಳಿಕೊಟ್ಟದ್ದು… ಮೂಲ ಮಲಯಾಲಂ:ಉಸ್ಮಾನ್ ಪಾಡರಡುಕ್ಕ ಕನ್ನಡಕ್ಕೆ: ಚೇತನಾ ಕುಂಬ್ಳೆ ತತ್ವಶಾಸ್ತ್ರದಿಂದ ಒಂದು ಗೋಪುರವನ್ನೇ ನಿರ್ಮಿಸಬಹುದಾದರೂ ಅದಕ್ಕೆ ಜೀವ ತುಂಬಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಸತ್ಕಾರ್ಯಗಳಿಂದ ಒಂದು ಹೂದೋಟವನ್ನೇ ಮಾಡಿ ಬೆಳೆಸಬಹುದಾದರೂ ದುಷ್ಕೃತ್ಯಗಳು ತಾನೇ ಇಲ್ಲದಾಗುತ್ತದೆಯೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಎಲ್ಲರಿಗೂ ಪ್ರೀತಿ ಪಾತ್ರನಾಗಿ ಹೃದಯದಲ್ಲಿ ಸ್ಥಾನ ಪಡೆದರೂ ಎಲ್ಲರಿಗಿಂತಲೂ ಹೆಚ್ಚು ಪ್ರೀತಿಪಾತ್ರನೋಗಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ತ್ಯಾಗಿಯಾಗಿ ಕರ್ಮಯೋಗಿಯಾಗಿ ತನ್ನ ಸಂಘಟನೆಗಾಗಿ ರಕ್ತಸಾಕ್ಷಿಯಾಗಬಹುದಾದರೂ ಚೈತನ್ಯವನ್ನು ಜಡವಾಗಿಸಬಹುದೇ ಮಣ್ಣಿನಲ್ಲಿ ಬಾಳುವ […]

ಅನುವಾದ ಸಂಗಾತಿ

ಮಾತು ಕಳೆದುಕೊಂಡಿದ್ದೇನೆ ಕನ್ನಡ:ಆನಂದ್ ಋಗ್ವೇದಿ ಇಂಗ್ಲೀಷ್: ನಾಗರೇಖಾ ಗಾಂವಕರ್ ಮಾತಾಡುವುದಿಲ್ಲ ಎಂದಲ್ಲ ಆಡುವ ಪ್ರತಿ ಮಾತಿನ ಹಿನ್ನೆಲೆ ಚರಿತ್ರೆ ಪರಂಪರೆ ಎಲ್ಲವನ್ನೂ ಶೋಧಿಸಿ ತಮಗೆ ಬೇಕಾದುದು ಸಿಕ್ಕದಿದ್ದರೆ ಸಂ- ಶೋಧಿಸಿ ತಮಗೆ ಹೊಳೆದ ಹೊಸ ಅರ್ಥ ಲಗತ್ತಿಸುವ ಅರ್ಥಧಾರಿಗಳ ಅನರ್ಥದಿಂದಾಗಿ- ನಾನು ಮಾತಾಡಿದರೆ: ಭವಿ ಭಕ್ತ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನನ್ನ ಬಿಡದೇ ಬ್ರಾಹ್ಮಣ ಬೀದಿಗಿಳಿದ ಸಹವರ್ತಿಗಳ ಬೆನ್ನಿಗೆ ನಿಂತರೂ ಶೋಷಕ ಪಕ್ಷ- ಪಾತಿ ಮತ ಧರ್ಮ ನಿರಪೇಕ್ಷೆಯಿಂದ ದರ್ಗಾದಲ್ಲಿ ಸಕ್ಕರೆ ಓದಿಸಿ ಬಂದರೂ ಕೋಮು ವಾದಿ […]

ಅನುವಾದ ಸಂಗಾತಿ

ಚಿರಂಜೀವಿ ಮೂಲ ಮಲಯಾಳಂ:ರಾಧಾಕೃಷ್ಣ ಪೆರುಂಬಳ ಕನ್ನಡಕ್ಕೆ:ಚೇತನಾ ಕುಂಬ್ಳೆ ಮರಣ ಇತರರಿಗಿರುವುದು ರೋಗಗಳೂ ದುರಂತಗಳೂ ಅವರಿಗಾಗಿಯೇ ನನಗಲ್ಲ ಮರಣ ಪಕ್ಕದಮನೆಯಲ್ಲೇ ಇದೆ ಅನ್ಯ ಜಾತಿ ಮತದವರಿಗೆ ಬೇರೆ ಪಕ್ಷದಲ್ಲಿರುವವರಿಗೆ ನನ್ನ ಯಾರಾದರೂ ಬಂಧುಗಳೋ, ಗೆಳೆಯರೋ ಅಥವಾ ಯಾರಾದರೂ ನಾಯಕರು ಅದೇ ರೀತಿ ನೆರೆಕರೆಯವರು ನಿಧನರಾದಾಗಲೋ, ರೋಗಬಾಧಿತರಾದಾಗಲೋ ಅಪಘಾತಕ್ಕೊಳಗಾದಾಗಲೋ ಅಂಥ ದುಃಖದಲ್ಲಿ ನನಗೂ ಪಾಲ್ಗೊಳ್ಳುವ ಅವಕಾಶವಿದೆ ಆಗ ನಾನೂ ದುಃಖಪಡುತ್ತೇನೆ ಅಲ್ಲಿಗೆ ಭೇಟಿ ನೀಡುತ್ತೇನೆ ಅವರ ನೋವಿನಲ್ಲಿ ಭಾಗಿಯಾಗುತ್ತೇನೆ ಸಾಂತ್ವನ ಪಡಿಸುತ್ತೇನೆ, ಸಹಾಯ ಮಾಡುತ್ತೇನೆ ಹೂ ಇಡುತ್ತೇನೆ, ಭಾಷಣ ಮಾಡುತ್ತೇನೆ […]

ಅನುವಾದ ಸಂಗಾತಿ

ಯಾರಿವಳು? ಕನ್ನಡ: ಶೀಲಾ ಭಂಡಾರ್ಕರ್ ಮಲಯಾಳಂ: ಚೇತನಾ ಕುಂಬ್ಳೆ ಅಡುಗೆಮನೆಯಲ್ಲಿ ಹಾಲು ಉಕ್ಕುವುದರೊಳಗೆ ಓಡಿ ಅದನ್ನು ತಪ್ಪಿಸುವವಳು. ಹೆಣೆದಿಟ್ಟ ಮಧುರ ಕ್ಷಣಗಳ ಕನಸುಗಳು ಹರಿದುಹೋದರೂ ಕಾಣದಂತೆ ಸುಮ್ಮನಿರುವಳು. ರೊಟ್ಟಿ ಕರಕಾಗದಂತೆ ಎಚ್ಚರಿಕೆಯಿಂದ ಬೇಯಿಸಿಕೊಡುವವಳು.. ಎಷ್ಟೋ ಆಸೆಗಳನ್ನು ಸುಟ್ಟು ಬೂದಿ ಮಾಡಿ ಎಸೆದು ಬಿಡುವಳು. ಪಾತ್ರೆಗಳು ಬಿದ್ದು ತಗ್ಗುನುಗ್ಗಾಗದಂತೆ ನೋಡಿಕೊಳ್ಳುವವಳು. ತನ್ನ ಹುಮ್ಮಸ್ಸು, ಉತ್ಸಾಹಗಳನ್ನು ತಾನೇ ಹೊಸಕಿ ಹಾಕುವಳು. ಬಟ್ಟೆಯ ಕಲೆಗಳನ್ನು ಜಾಣ್ಮೆಯಿಂದ ತೊಡೆಯುವವಳು.. ಅಶಕ್ತ ಶಬ್ಧಗಳನ್ನು ಬರೆದ ವಿಷಾದದ ಮಸಿಯನ್ನು ಎದೆಯ ಗೋಡೆಯ ಮೇಲಿಂದ ಅಳಿಸಿಹಾಕುವಳು. ಬಂಧಿಸಿಟ್ಟ […]

ಅನುವಾದ ಸಂಗಾತಿ

ಕನ್ನಡ: ಕು.ಸ.ಮಧುಸೂದನ ಮಲಯಾಳಂ: ಚೇತನಾ ಕುಂಬ್ಳೆ ಅಪ್ಪಚ್ಚನ ಅದೊಂದು ಮನೆಯೂ, ನನ್ನ ಸೋದರತ್ತೆಯೂ! ಅದೊಂದು ಮನೆಯಿತ್ತು ನನ್ನದೂ ನನ್ನ ಅಪ್ಪಚ್ಚನ ಕಾಲದ್ದು ಅವನ ವಿರೋಧಿಸಿ ಮನೆ ಬಿಟ್ಟು ಬಂದ ಅಚ್ಚ ಮತ್ತೆ ಅದರೊಳಗೆ ಕಾಲಿಡದೆಲೆ ಸತ್ತು ಹೋಗಿ ನನ್ನನ್ನೂ ಅಪರಿಚಿತ ಊರಲ್ಲಿ ಪರದೇಸಿಯಾಗಿಸಿದ ನಂತರವೂ ಮೊಮ್ಮಗ ಬರುತ್ತಾನೆಂದು ಸಾಯುವ ತನಕ ಕಾವಲು ಕಾಯುತ್ತಿದ್ದ ಮುದುಕ ಅಷ್ಟು ವರುಷ ಇಲ್ಲದ್ದು ಮೊನ್ನೆ ಕಾಲುಜಾರಿ ಮನೆಯ ಹಿಂದಿನ ಅದೇ ಹಳೆಯ ಬಾವಿಗೆ ಬಿದ್ದು ಸತ್ತು ಹೋದನಂತೆ! ವಿಷಯ ಕಿವಿಗೆ ಬಿದ್ದು […]

Back To Top