ಮಾತು ಕಳೆದುಕೊಂಡಿದ್ದೇನೆ
ಕನ್ನಡ:ಆನಂದ್ ಋಗ್ವೇದಿ
ಇಂಗ್ಲೀಷ್: ನಾಗರೇಖಾ ಗಾಂವಕರ್
ಮಾತಾಡುವುದಿಲ್ಲ ಎಂದಲ್ಲ
ಆಡುವ ಪ್ರತಿ ಮಾತಿನ ಹಿನ್ನೆಲೆ
ಚರಿತ್ರೆ ಪರಂಪರೆ ಎಲ್ಲವನ್ನೂ ಶೋಧಿಸಿ
ತಮಗೆ ಬೇಕಾದುದು ಸಿಕ್ಕದಿದ್ದರೆ ಸಂ-
ಶೋಧಿಸಿ ತಮಗೆ ಹೊಳೆದ ಹೊಸ
ಅರ್ಥ ಲಗತ್ತಿಸುವ ಅರ್ಥಧಾರಿಗಳ
ಅನರ್ಥದಿಂದಾಗಿ-
ನಾನು ಮಾತಾಡಿದರೆ:
ಭವಿ ಭಕ್ತ
ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ
ನನ್ನ ಬಿಡದೇ ಬ್ರಾಹ್ಮಣ
ಬೀದಿಗಿಳಿದ ಸಹವರ್ತಿಗಳ ಬೆನ್ನಿಗೆ
ನಿಂತರೂ ಶೋಷಕ ಪಕ್ಷ-
ಪಾತಿ ಮತ ಧರ್ಮ ನಿರಪೇಕ್ಷೆಯಿಂದ
ದರ್ಗಾದಲ್ಲಿ ಸಕ್ಕರೆ ಓದಿಸಿ ಬಂದರೂ
ಕೋಮು ವಾದಿ
ಜನ ವಿರೋಧಿ!
ನನ್ನ ಕಾಳಜಿಯೂ ಹುಸಿ
ಕನಿಕರ ಸೌಹಾರ್ದ ಕಥನವೂ ಅತಿ
ರಂಜಿತ ವಾಸ್ತವ ಆತ್ಮ ಪ್ರಶಂಸೆ
ಜನಾರೋಗ್ಯದ ಕಾಯಕದಲ್ಲೂ ಗು-
ಮಾನಿ ಮಾನವಂತನ ತನವೂ ಆಶಾಡ-
ಭೂತಿಯಂತೆ!
ಕಾಯ್ದೆ ಪರ ವಹಿಸಿದರೆ ಕಾರ್ಮಿಕರ
ಬೀದಿಗೆ ಬಿದ್ದವರ ಕನಿಕರಿಸಿದವರ
ಕೆಂಗಣ್ಣಿನ ಉರಿಗೆ ಗುರಿ
ಯಾರೋ ಉಡಾಳರು ಮಾಡಿದ್ದ
ಖಂಡಿಸುವಂತಿಲ್ಲ, ನಿಯಮ ಮೀರಿದ
ಉಡಾಫೆಯ ಪ್ರಶ್ನಿಸುವಂತಿಲ್ಲ
ಕವಿ ಸದಾ ಸೂಕ್ಷ್ಮ
ಆಗಿರಬೇಕು ಅವರಿವರೆನ್ನದೇ ತನ್ನವರ
ಮರೆತೂ ಅವ ಇವರು ಹೇಳಿದಂತೆ
ಮಾತ ಆಡಬೇಕು ಕವನದ
ಕನಸ ಬೇಕು
ಇವರು ಹೆಸರಿಸಿದವರಿಗೇ
ಉಸಿರೆತ್ತದೆ ಭೋ ಪರಾಕು
ಲಂಚ ಹೊಡೆಯದೇ ಬಡವ ಬಲ್ಲಿದರ
ಕಾಡದೇ ಕೆಳೆಯನಾದರೆ ನಿರುಪಯುಕ್ತ
ಬರಿಯೇ ಕಾನೂನು ಹೇಳ್ವ
ನಿಷ್ಪ್ರಯೋಜಕ!
ಏನ ಮಾತಾಡಲಿ!?
ನಿನ್ನೆಯ ದಂಗೆ
ಮೊನ್ನೆಯ ಗಲಭೆ
ಆಚೆ ಮೊನ್ನೆಯ ಗುಪ್ತ ಸಭೆಯ
ಆಯ್ದ ಸಂಗತಿ ಮಾತ್ರ ಇತಿ
ಹಾಸಃ! ಆಹಾ ಭವ್ಯ ದೇಶದ
ದಿವ್ಯ ಪ್ರಜೆಗೆ ಮಾತು ಆಡುವ ವಾಕ್
ಸ್ವಾತಂತ್ರ್ಯ ಸಂವಿಧಾನದ ಪುಸ್ತಕದಲ್ಲಿ
ಮಾತ್ರ!
I have lost my words
I have lost my words
It doesn’t mean that i won’t talk
But by the wrong interpretation of these
Scholiasts
For every word i utter
Its context, its past, and customs,
they explore everything
If didn’t find the expected thing in it
then they predict new meaning
so as what they assume.
If i speak
Im meterialistic,
even if I leave brahmanism, it won’t leave me
so as im a brahmin
If i stand with a supportive pose
to my companions
on their campaigns
Still im biased.( an exploiter’s partisan)
If i distribute sugar in a masjid
to promote religious righteousness
Im communalist
And a people opponent.
My indeed care appears fake
merciful, harmonious stories
looks exaggerated self- flattery
If i work for the health of people
there too prevails disbelief.
the term ” hypocrite” overlaps on humanity feelings
If i stand for rules, for labourers , downtrodden people, and show sympathy towards
then myself to be exposed
to a glare of comtempt,
shouldn’t blame the misbehaviour of the rascals,
shouldn’t ask negligibly violated rules,
Poet always should be sensitive, should forget his people,
talk and act accordingly what these people insist
And should dream of a poem.
Without any queries
should say Jai, Jai”to whom they recommend,
If I become a friend to poors and riches
without accepting bribery and by avoiding corruption
Im unskilled,
and a useless man of rules amd regulations.
What can i say?
Yesterday’s riot, tumult of the day before,
the day before last
secret matters of whispering campaigns
only these are our historic aspects!
Aha! (What an irony)
An honest citizen of the Great Nation
has the right of speech only in the book of constitution.
*******