ಅನುವಾದ ಸಂಗಾತಿ

ಕನ್ನಡಕವಿತೆ:ಸರಜೂ ಕಾಟ್ಕರ್

ಇಂಗ್ಲೀಷಿಗೆ: ನಾಗರೇಖಾ ಗಾಂವಕರ್

ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ

NH widening in Kerala hits a roadblock | Kerala national highway

ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ
ಅಲ್ಲಿದ್ದ ಗಿಡಮರಗಳನ್ನು ನಿರ್ದಯವಾಗಿ
ಕತ್ತರಿಸಿ ಹಾಕಿದ ರಾಕ್ಷಸರನ್ನು
ನೆನೆನೆನೆದು ಸಿಟ್ಟಾಗುತ್ತೇನೆ.

ಅಲ್ಲಿಯ ಬೋಳು ಮೈದಾನಗಳಲ್ಲಿ ತಮ್ಮ
ಗೂಡುಗಳನ್ನು ಹುಡುಕುತ್ತಿರುವ ಸಾವಿರಾರು
ಪಕ್ಷಿಗಳ ಆಕ್ರಂದನ ಕೇಳಿ ಕಂಗಾಲಾಗುತ್ತೇನೆ.

ಎಲ್ಲಿ ಹೋಯಿತು ಈ ಗಿಡಗಳ ದಟ್ಟ ಹಸಿರು?
ಗಿಡಗಳಿಗಿಂತಲೂ ಉದ್ದವಾಗಿ ಬೀಳುತ್ತಿದ್ದ ನೆರಳು?
ವಿಧವಿಧ ಪಕ್ಷಿಗಳ ಕಲರವ?
ಗಿಡಗಳ ಸಾಕ್ಷಿಯಲ್ಲಿ ನಡೆಯುತ್ತಿದ್ದ ಪ್ರೇಮದಾಟ?

ಏನಾಗಿರಬಹುದು ಈ ಗಿಡಮರಗಳಿಗೆ-
ಸತ್ತು ಭಸ್ಮವಾದವೇ ಈ ಮರಗಳು
ಅಥವಾ ಯಾರದ್ದಾದರೂ ಮನೆಯಲ್ಲಿರಬಹುದೇ
ಟೇಬಲ್, ಕುರ್ಚಿ, ಸೋಫಾಗಳಾಗಿ?
ಏನಾದವು ನಮ್ಮ ಜೊತೆಗೆ
ಓಡೋಡಿ ಬರುತ್ತಿದ್ದ ಈ ಗಿಡಗಳ ಟೊಂಗೆಗಳು?

— ಎಲ್ಲ ನೆನಪಾಗಿ ಕಣ್ಣು ಕೊಳವಾಗುತ್ತದೆ

ಆಗ ನನ್ನ ದೇಹದಲ್ಲಿಯೇ ಒಂದು ಗಿಡ ಹುಟ್ಟಿದಂತಾಗುತ್ತದೆ
ಗಿಡ ಮರವಾಗಿ, ಮರ ವೃಕ್ಷವಾಗಿ,
ವೃಕ್ಷ ಮಹಾ ವೃಕ್ಷವಾಗಿ

ನನ್ನ ಕಣ್ಣಿಂದ, ಬಾಯಿಂದ, ಕಿವಿ, ಮೂಗಿನಿಂದ, ನನ್ನ ಸರ್ವಾಂಗಗಳಿಂದ ಒಂದೊಂದು ಟೊಂಗೆ ಹುಟ್ಟಿ
ಪ್ರತಿ ಟೊಂಗೆಗಳು ಎಲೆಗಳಿಂದಾವರಿಸಿ
ಹಣ್ಣು ತುಂಬಿ ತೊನೆದು

ಭೂಮಿಯಲ್ಲಿ ಬೇರುಗಳಾಗಿ ಇಳಿದು
ದೂರದಲ್ಲಿ ಭೃಮಿಷ್ಠರಂತೆ ಹಾರುತ್ತಿರುವ ಪಕ್ಷಿಗಳನ್ಪು ಕರೆದು
ಈ ಸೀಮೆಯಿಂದ ಬೇರೆಡೆಗೆ ಜಾರುತ್ತಿರುವ
ಕಪ್ಪು ಮೋಡವನ್ನು ಆಕರ್ಷಿಸಿ

ಮತ್ತೆ ತನ್ನಲ್ಲಿ ಪ್ರತಿಷ್ಠಾಪಿಸಿದಂತಾಗುತ್ತದೆ
ಹೀಗೆ ರಸ್ತೆ ತುಂಬ ಜನರೇ
ಗಿಡಗಳಾಗಿ
ಪ್ರತಿ ಗಿಡಕ್ಕೆ ಗಿಡ ಕಡಿದ ಪ್ರತಿ ರಾಕ್ಷಸರ
ನೇಣು ಬಿಗಿದ ಶವಗಳು
ನೇತಾಡುತ್ತಿರುವಂತೆ

ಢಾಳಾಗಿ ಕಾಣಿಸುತ್ತದೆ.

********

While Traversing along the National High Way)

NH Road Marking Service at Rs 650/square meter | thermoplastic ...

While Traversing
along the National high way
I turn furious
when I think of the Monsters who
Mercilessly chopped off the woods

I bewilder
As I find the squawking of birds
in search of their nests
In the empty woods

Where is it gone
all these foliage
and big shadow of these trees?
sweet chirping of birds?
the game of love
behind the leaves of trees?

What might have happened
to these trees?
Have they been burned to ashes?
or they may be at someone’s house
as table,chair, or sofa?
What happened
to the branches
which were reaching out to us

Remembering this,
eyes turn into a pond

Then I feel like,
a seedling comes out
from my body ,
grows itself
seedling to sapling and
then to immense tree.
From my eyes,
nose, mouth, ears
and from my all organs
grow boughs,
fill with lush foliage
and fruits.
my roots branch out
deep into the earth,
call the deluded birds,
flying afar
and attract
the heavy dark clouds
slipping from border place
Then again gets back to myself.

Now, all the roads
are full of people
Who look like trees,
every tree with
the hanging of
the dead bodies
of the tree cutting demons

It is a clear visible sight.

*************

One thought on “ಅನುವಾದ ಸಂಗಾತಿ

  1. ಕವಿತೆ ಆರಂಭದಲ್ಲಿ ವಾಚ್ಯ ಎನಿಸಿದರೂ ಕಣ್ಣು ಕೊಳವಾಗುವುದು, ದೇಹದಲ್ಲಿ ಗಿಡ ಹುಟ್ಟಿ ಅದು ಕಣ್ಣು ಬಾಯಿಗಳಲಿ ಟೊಂಗೆ ಹರಡಿ, ವೃಕ್ಷವಾಗಿ, ಮಹಾವೃಕ್ಷವಾಗುವಲ್ಲಿ ಕವಿತೆ ಧ್ವನಿಪೂರ್ಣವಾಗಿ ಗೆಲ್ಲುತ್ತದೆ. ಕೊನೆಯಲ್ಲಿ ಮರ ಕಡಿದವರ ಶವಗಳು ವೃಕ್ಷದಲ್ಲಿ ನೇತಾಡುವ ವ್ಯಂಗ್ಯ ಕವಿಯ ಸಾತ್ವಿಕ ಸಿಟ್ಟನ್ನು ದಾಖಲಿಸುತ್ತದೆ. ಅನುವಾದ ಓದಲು ತುಂಬಾ ಹಿತವೆನಿಸುತ್ತದೆ…ಕನ್ನಡದ ಕವಯಿತ್ರಿ ಕನ್ನಡಿಗನ‌ ಕವನದ ಧ್ವನಿ ಗ್ರಹಿಸಿ ಅನುವಾದಿಸಿದ ಕಾರಣ ಅದು ಶಕ್ತಿಯುತವಾಗಿದೆ…
    ಸರ್ಜೂ ಕಾಟ್ಕರ್ ಸರ್ ಹಾಗೂ ಕವಯಿತ್ರಿ ನಾಗರೇಖಾ ಇಬ್ಬರಿಗೂ ಅಭಿನಂದನೆಗಳು….

Leave a Reply

Back To Top