ಕ್ಷುದ್ರ್ ಕೀ ಮಹಿಮಾ

ಶಾಮ್ ನಂದನ್ ಕಿಶೋರ್
ಅನುವಾದಕರ ಟಿಪ್ಪಣಿ
ಪದ್ಮಶ್ರಿ ಶ್ರೀ ಶಾಮ್ ನಂದನ್ ಕಿಶೋರ್ ಹಿಂದಿಯ ಶ್ರೇಷ್ಠ ಕವಿಗಳಲ್ಲಿ ಒಬ್ಬರು.
ಅವರ ಒಂದು ಕವಿತೆ “ಕ್ಷುದ್ರ್ ಕೀ ಮಹಿಮಾ” ಓದಲು ಸಿಕ್ಕಿತು.
ಮೊದಲ ಓದಿಗೇನೂ ಹೆಚ್ಚು ಅರ್ಥವಾಗಲಿಲ್ಲ. ಆದರೂ ಕವಿ ಏನೋ ವಿಭಿನ್ನವಾದುದನ್ನು ಹೇಳಲು ಹೊರಟಿದ್ದಾರೆಂಬುದರ ಅರಿವಿತ್ತು.
ಮತ್ತೆ ಮತ್ತೆ ಓದಿದಾಗ ಅರ್ಥ ಸ್ಪಷ್ಟವಾಗತೊಡಗಿತು. ಶಬ್ದಗಳೊಳ ಹೊಕ್ಕು ಕವಿಯ ಭಾವವನ್ನು ಅರಿಯಲು ಸಹಾಯ ಮಾಡಿದವಳು ಗೆಳತಿ ರೂಪಾ.
ಅವಳು ಹಿಂದಿ ಭಾಷೆಯ ಅನುವಾದಿತ ಕೃತಿಗಳ ತುಲನಾತ್ಮಕ ಅಭ್ಯಾಸಗಳ ಮೇಲೆ ಸಂಶೋಧನೆಯನ್ನು ಮಾಡುತಿದ್ದಾಳೆ.
ನಾವೆಲ್ಲರೂ ಶ್ರೇಷ್ಠವಾದುದನ್ನು, ಉನ್ನತವಾಗಿರುವುದನ್ನೇ ಬಯಸುತಿದ್ದರೆ, ಕವಿ ಶ್ಯಾಮ್ ನಂದನ್ ಕಿಶೋರ್ ಅವರು ಕ್ಷುದ್ರತೆಯ ಮಹಿಮೆಯನ್ನು ಸಾರುತಿದ್ದಾರೆ.
ಅಪರಂಜಿಯಾಗೇನು ಉಪಯೋಗ? ಆಭರಣ ಬಂಗಾರವಾದರೆ ದೇವರ ಕಂಠೀಹಾರವಾದರೂ ಆಗುವ ಭಾಗ್ಯ ದೊರಕುತಿತ್ತು.
ಅದೇ ರೀತಿ ಪ್ರತಿಯೊಂದು ವಿಷಯದಲ್ಲೂ ಕೊರತೆ ಇದ್ದಾಗಲೇ ಮತ್ತೆ ಅದನ್ನು ಯಥೇಚ್ಛವಾಗಿ ತುಂಬಿಕೊಳ್ಳುವ ಪ್ರಯತ್ನವಾದರೂ ನಡೆಯುತ್ತದೆ.
ಪತನವಿಲ್ಲದೆ ಉತ್ಥಾನವೇ?
ನನಗಂತೂ ಬಹಳ ಇಷ್ಟವಾಯಿತು ಈ ಕೃತಿ.

ಶೀಲಾ ಭಂಡಾರ್ಕರ್
ಮುಖ್ಯ_ಅಮುಖ್ಯ.
ಅಪರಂಜಿಯಾಗೇನುಪಯೋಗ,
ನಿಗಿ ಕೆಂಡದೊಳು ಮಿಂದೆದ್ದ
ಗಿನಿ ಬಂಗಾರದಿ ಕೊರೆದ
ನಿನ್ನ ಕೊರಳಹಾರವಾಗದೇ..!
ನಿಯಮಗಳಿಗೆ ಬಂಧಿಸಲ್ಪಟ್ಟ ಮಾನವ.. ಬಲ್ಲನೇನು..?
ನಿಯಮಗಳ ಉಲ್ಲಂಘಿಸಿದ
ನಂತರದ ಅವಮಾನವ.
ಸದಾ ನಿನ್ನ ಸನಿಹದಲ್ಲಿದ್ದು
ಅರಿಯಲು ಸಾಧ್ಯವೇ..?
ನಿನ್ನ ಕರುಣೆಯ ನೆಳಲಿಗಾಗಿ ಅಲೆದಾಡುವ ಭಾಗ್ಯವ.
ಪತನವಾಗಲೇ ಬೇಕಲ್ಲವೇ..!
ಉತ್ಥಾನವಾಗಲು.
ಇನ್ನೂ ಜನ್ಮಿಸದವಗೆ ಕಾಮನ ಬಿಲ್ಲಿನ ಬಣ್ಣದ ಜಗತ್ತಿನೊಡನೇನು ಸಂಬಂಧ.?
ಸ್ವತಹ ನೋವುಣ್ಣದವನಿಂದ ಶಕ್ಯವೇ
ಪರರ ದುಃಖಕ್ಕೆ ಸ್ಪಂದನ?
ಸೃಷ್ಟಿಯ ಹೊರತು ಇನ್ಯಾರು ಸಮರ್ಥರು
ಶೂನ್ಯವನ್ನೂ ಸಿಂಗರಿಸಲು?
ತುಸುವಾದರೂ ಮೋಹವಿರಲೇಬೇಕು
ಸ್ವಪ್ನ ಸಾಕಾರವಾಗಲು.
ಅಭಾವವೆಂದರೆ ಭಾವದ ಕೊರತೆ.
ವಿಕರ್ಷಣದಿಂದಲೇ ಪ್ರೀತಿಯ ಒರತೆ.
ವಿರಹೀ ಉಪವನದಂತೆ ತೋರುವುದು
ಕ್ಷಣ ಮಾತ್ರದ ಪ್ರವಾಸೀ ತಾಣವೂ.
ಜಲಪಾತಗಳಿಂದ ಧುಮ್ಮಿಕ್ಕಿ
ಸುರಿದ ನೀರೇ
ಕಲ್ಲುಗಳ ಮೇಲೆ ಸಂಘರ್ಷದ
ಕವಿತೆಗಳ ಬರೆಯುವುದು.
ಸುಡುಬಿಸಿಲಿಗೆ ಆವಿಯಾದ
ಹನಿಗಳೇ ತಾನೆ..
ಶ್ರಾವಣದಲ್ಲಿ ತಂಪಾಗಿ ಸುರಿಯುವುದು.
ಜತೆಯಲಿದ್ದು ಅಸಾಧ್ಯ
ಪೂರ್ಣ ಪರಿಚಿತರಾಗಲು.
ತುಸು ದೂರ ಸರಿಯಲೇಬೇಕು
ಪ್ರೀತಿ ಮಧುರವಾಗಲು.
क्षुद्र की महिमा
शुद्ध सोना क्यों बनाया, प्रभु, मुझे तुमने,
कुछ मिलावट चाहिए गलहार होने के लिए।
जो मिला तुममें भला क्या
भिन्नता का स्वाद जाने,
जो नियम में बंध गया
वह क्या भला अपवाद जाने!
जो रहा समकक्ष, करुणा की मिली कब छांह उसको
कुछ गिरावट चाहिए, उद्धार होने के लिए।
जो अजन्मा है, उन्हें इस
इंद्रधनुषी विश्व से संबंध क्या!
जो न पीड़ा झेल पाये स्वयं,
दूसरों के लिए उनको द्वंद्व क्या!
एक स्रष्टा शून्य को श्रृंगार सकता है
मोह कुछ तो चाहिए, साकार होने के लिए!
क्या निदाघ नहीं प्रवासी बादलों से
खींच सावन धार लाता है!
निर्झरों के पत्थरों पर गीत लिक्खे
क्या नहीं फेनिल, मधुर संघर्ष गाता है!
है अभाव जहाँ, वहीं है भाव दुर्लभ –
कुछ विकर्षण चाहिए ही, प्यार होने के लिए!
वाद्य यंत्र न दृष्टि पथ, पर हो,
मधुर झंकार लगती और भी!
विरह के मधुवन सरीखे दीखते
हैं क्षणिक सहवास वाले ठौर भी!
साथ रहने पर नहीं होती सही पहचान!
चाहिए दूरी तनिक, अधिकार होने के लिए!
ಚನ್ನಾಗಿದೆ