ಕಾವ್ಯಯಾನ
ಥೇಟ್ ನಿನ್ನ ಹಾಗೆ! ಸಂತೆಬೆನ್ನೂರು ಫೈಜ್ನಾಟ್ರಾಜ್ ಅದೇ ಹಾಡು ತುಟಿಗೆ ಬಂದು ವಾಪಾಸಾಯಿತು ಏಕೋ ಏನೋ ಹೀಗೆ ರಸ್ತೆಯ ಕೊನೇ ತಿರುವಲ್ಲಿ ಕಾದಿರು ಈಗ ಬಂದೆ ಎಂದು ಮಾಯವಾದ ಥೇಟ್ ನಿನ್ನ ಹಾಗೆ! * ಕಾಫಿಯ ಘಮವೋ ಮುಡಿದ ಮಲ್ಲಿಗೆ ಗಂಧವೋ… ಉಳಿದ ಮಾತುಗಳು ಹೇಳಲಾರದೇ ಖಾಲಿಯಾದವು…. ನಿನ್ನಂತೆ! * ನೂರು ಮಾತುಗಳು ಆಡಿದರೇನು ಬರಿದೆ; ಚಹ ಪುಡಿಯಿಲ್ಲದ ಚಹ ಕುಡಿದಂತೆ ಬರಿದೆ! * ಮುಳ್ಳ ಬೆನ್ನ ಮೇಲೆಯೇ ಗುಲಾಬಿ ಕೆಸರ ಸೊಂಟದ ಪಕ್ಕದಲ್ಲೇ ಕಮಲ ಮಣ್ಣ […]
ಕಾವ್ಯಯಾನ
ಗಝಲ್ ಅರುಣ್ ಕೊಪ್ಪ ನೀನು ನಗುತ್ತಿಲ್ಲ,ತಾರೆಯಾ ಹೊದ್ದು ಭೂಪನಂತಿದ್ದರೂ ಅಹಂಕಾರವಿಲ್ಲದ ನಿಗರ್ವಿ ನೀನು ನಿನಗಾಗಿ ಅಲ್ಲವೆ ನೀನು ಕಪ್ಪಾದ ಪಂಜರದಲ್ಲಿ ಮೌನ ಸಾಕಿ ಬೀಗುವದಿಲ್ಲ ಬಡಾಯಿ ಕೊಚ್ಚೊ ಬೊಗಳೇದಾಸನಾ ನೀನು ನಿನಗಾಗಿ ಅಲ್ಲವೆ ಮುಳ್ಳು ಮೈಗೆ ಆವರಿಸಿದರೂ ಮೊಗ ನಗು ಮೊಗ್ಗು ಹೂವುಗಳು ಕೆಲ ತಾವುಗಳಲಿ ಸುರಸುಂದರಿ ನೀನು ನಿನಗಾಗಿ ಅಲ್ಲವೆ ಸುತ್ಮೂರು ಹಳ್ಳಿಗಳ ಹಿಶೆ, ನ್ಯಾಯಕೆ ಜಗರಿ ಕೂರುವ ಒಂಟಿ ಸಲಗದಂತೆ ಬೇಕು ಬೇಡಗಳ ನುಂಗಿ, ತಂಪು ಚೆಲ್ಲುವ ತಂಗಾಳಿ ಆಲ ನೀನು ನಿನಗಾಗಿ ಅಲ್ಲವೆ […]
ಕಾವ್ಯಯಾನ
ಮೌನದ ಹಾಡು ದೇವು ಮಾಕೊಂಡ, ಸಿಂದ್ಗಿ ಇಳಿಸಂಜೆಯ ಒಬ್ಬಂಟಿತನದಲಿ ಮೈನೆರೆದು ನಿಂತ ಮುಳ್ಳುಕಂಟಿಗಳ ನಡುವೆ ಬೆಣ್ಣೆಯುಂಡೆಯಾಗಿದ್ದೇನೆ ಹೆಪ್ಪುಗಟ್ಟಿವೆ ಕ್ರೀಯೆಗಳು ಬಂಡೆಗಲ್ಲಿನ ಹಾಗೆ ಪತರಗುಟ್ಟುತ್ತಿವೆ ಭಾವಗಳು ಚಪ್ಪರದಂತೆ ನಿಷ್ಕ್ರೀಯಗೊಂಡಿದೆ ಚಲನೆ ಸೀಮೆಗಲ್ಲಿನಷ್ಟು ಮಧು ಕುಡಿದು ಎದೆಚುಚ್ಚುವ ರಣಹದ್ದುಗಳದ್ದೇ ಕಾರುಬಾರುವಿಲ್ಲಿ ಅದಕ್ಕೆಂದೆ ಹೂವುಗಳು ರಾತ್ರಿಯೆದ್ದು ಹಗಲು ಮಲಗುತ್ತವೆ ಕರಾಳ ಬೆಳಕಿಗಂಜಿ ಹೆಪ್ಪುಗಟ್ಟಿದ ಬೆಳಕಿಗೆ ನೆರಳುಗಳಾಡಿಸುವ ಹಗಲು ರಾತ್ರಿಗಳ ಪಂಜೆಗಳು ವಿಭೇದಿಸುವ ಕಪ್ಪು ನೆಲವೇ ರೂಪರೇಖೆ ನಮ್ಮೊಳಗಿನ ಮೌನದ ಹಾಡೆ ಸುಖದ ಹೆರಿಗೆ
ಗಝಲ್
ಗಝಲ್ ಸುಜಾತ ರವೀಶ್ ಬಾಳಬಾನಲಿ ಹೊಂಬೆಳಕಾಗಿ ಬಂದೆ ಏನಿರಲಿಲ್ಲ ಕಾರಣ ಇಂದೀಗ ಅಮಾವಾಸ್ಯೆಯ ಕಗ್ಗತ್ತಲು ತಿಳಿಯುತ್ತಿಲ್ಲ ಕಾರಣ ಜೀವನವನದಿ ಅರಳಿ ನಗುತ್ತಿದ್ದವು ಸುಂದರ ಹೂಗಳು ಈಗೆಲ್ಲಾ ಬರೀ ಬೋಳು ಬರಡು ಅರಿಯಲಾಗುತ್ತಿಲ್ಲ ಕಾರಣ ಜೀವ ವೀಣೆ ಮಿಡಿದು ಅಂದು ಹೊರಟಿತ್ತು ಒಂದು ಸುಶ್ರಾವ್ಯ ಗಾನ ತಂತಿ ಏಕೋ ಮುರಿದು ಅಪಸ್ವರ ಕೇಳಲಾಗುತ್ತಿಲ್ಲ ಕಾರಣ ಹೊಸ ಹೊಸ ಆಸೆ ತರಂಗಗಳು ಗಗನದೆತ್ತರ ವಿಸ್ತಾರ ಅಗಲಿಕೆಯ ಬಿರುಗಾಳಿ ಏಕೆ ಹೇಳಲಾಗುತ್ತಿಲ್ಲ ಕಾರಣ ಹಂಬಲಗಳ ನವ ಕನಸುಗಳು ಮೂಡಿಸಿದ್ದವು ಚಿತ್ತಾರ ದುಃಖಿತೆ […]
ಕಾವ್ಯಯಾನ
ಪುಣ್ಯವಂತೆ… ಅವ್ಯಕ್ತ ಕಾಣಲಿರುವ ಒಡನಾಟದ ಚುಕ್ಕಿಯಾಗಿ ಬಂದಳು ಕನಸುಗಳ ಹೊತ್ತು ನನಸ ಮಾಡುವ ಬಿರುಸಿನಲಿ ಮಿಡಿಯೋ ಮನಸುಗಳಿಗೆ ಮಿಲನದ ಔತಣವನಿಟ್ಟು ಮುಗಿಲೆತ್ತರದ ಭಾವಗಳ ಮುಟ್ಪಿಬರುವ ರೆಕ್ಕೆ ಹೊತ್ತು ನೋವುಗಳ ನುಂಗಿ ನಗುತ ನಲಿಸುವ ಕಲೆಯೇ ಸುಂದರ ಅಂತ್ಯದೆಡೆಗೆ ಹೂಹಾಸಿ ನಲಿಯುತ ಹರಿಯುವುದೇ ಸುಂದರ ತುಸು ಕ್ಷಣದ ಹನಿಗಳಲಿ ,ಮೈಮರೆತು ಲೀನಳಾಗಿ.. ನಿನ್ನಲ್ಲೆಲ್ಲೋ ನನ್ನ ಕಂಡೆ ನನ್ನಲ್ಲೆಲ್ಲೋ ನಿನ್ನ ಕಂಡೆ. ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲಿ ಹೇಳದೇ ಮಾಯವಾಗುವವರಲ್ಲಿ, ಹೇಳಿಹೋದ ಸೌಂದರ್ಯ ಕನಿಕೆ.. ಸಾಧನೆಯ ಪುಟಗಳಲ್ಲಿ ಮಿನುಗುನಕ್ಷತ್ರ.. ನೀನಿಲ್ಲದೆ ನೀನಿಲ್ಲಿರುವೆ, ನೀನಳಿದರು […]
ಕಾವ್ಯಯಾನ
ತುಂಬು ಡಾ.ಗೋವಿಂದ ಹೆಗಡೆ ನಾನೂ ರಂಗವೇರಿದ್ದೇನೆ ನಿನ್ನೊಂದಿಗೆ ನರ್ತಿಸಲಲ್ಲ.. ಮೂಲೆಯಲ್ಲಿ ನಿಂತು ಕುಣಿಯುವ ನಿನ್ನ ಬಿಂಬವ ಎದೆ ತುಂಬಿಕೊಳ್ಳಲಿಕ್ಕೆ ಗೆಜ್ಜೆಯಿಂದ ಉದುರುವ ಕಿರುಗಂಟೆಯೊಂದನ್ನೆತ್ತಿ ಚುಂಬಿಸಲಿಕ್ಕೆ ನೆನಪಿನಂಗಳದಲ್ಲಿ ತೂಗಿಬಿಡಲಿಕ್ಕೆ- ಅನಂತದವರೆಗೆ…
ಕಾವ್ಯಯಾನ
ಶಕ್ತಿ ಅವ್ಯಕ್ತ ಸೃಷ್ಟಿ-ಸ್ಥಿತಿ-ಲಯ ಗರ್ಭದ ಮುಕ್ತ ರಹಸ್ಯ ರಾಣಿ ನಾ! ಹರಿವ ಜ್ವಾಲಾ ಶಕ್ತಿಯೊಳು ತಂಪೆರೆವ ವಿಮುಕ್ತಿ ನಾ! ಸಖಿ,ಕಾಮಿನಿ, ಧರ್ಮಿಣಿ, ಸಂಹಾರಿಣಿ, ವೈಷ್ಣವಿ ನಾ! ಸುಳಿಗಳೊಳು ಸಿಲುಕದಂತೆ ಗರಿಚಾಚಿ ಹೊಳೆವೆ ನಾ! ಪ್ರೀತಿಯ ಕಾಮನ ಬಿಲ್ಲಲಿ ಕಣ್ಣುಗಳ್ನಲಂಕರಿಸುವೆ, ಸಿಹಿಕನಸಮಳೆಯ ಮೌನ ಮುಗುಳ್ನಗೆಯೋರಳಿಸುವೆ, ಗಂಭೀರ ಮೂಗುತಿಯನ್ನು ಏರಿಸಿ ಕಾಂತಿಯ್ನ್ಹೆಚ್ಚಿಸುವೆ, ಸುಪ್ತ ಜ್ಞಾನ, ಮುಕ್ತ ಪ್ರೇಮ, ನಿರ್ಲಿಪ್ತ ಮನದ ಕುಂಕುಮ ಧರಿಸುವೆ. ವಜ್ರಕಲ್ಲಾಗಿ, ಗುಪ್ತಗಾಮಿನಿಯಾಗುವೆ ಕೇಸರಿದಾರಿಣಿಯಾಗಿಬಿಡುವೆ, ನೋಡದಿರು ಬಿಲೋಳಗಿನ ಆಳದ ಪ್ರೀತಿಯ, ಸವಿಯಲಿಚ್ಚಿಸದ್ದಿದ್ದರೆ.. ಕೇಳದಿರು ಮೌನ ದೇಗುಲದೊಳಿರುವ ಹಾಡ, […]
ಗಝಲ್ ಸಂಗಾತಿ
ಗಝಲ್ ಎ.ಹೇಮಗಂಗಾ ಲೋಕದಾ ನಿಯಮಗಳ ಗಾಳಿಗೆ ತೂರಿ ಬಂದುಬಿಡು ನೀ ಮೆಲ್ಲನೆ ಹೂವೊಳು ಗಂಧ ಬೆರೆತಂತೆ ನನ್ನೊಳು ಸೇರಿಬಿಡು ನೀ ಮೆಲ್ಲನೆ ಟೀಕೆಗಳ ಕತ್ತಿ ಇರಿತಕೆ ನಲುಗಿ ಇದ್ದೂ ಇಲ್ಲದಂತಾಗಿದೆ ಜೀವ ನಲುಮೆ ತೋರಿ ಎದೆಗಪ್ಪಿ ನೋವ ಮರೆಸಿಬಿಡು ನೀ ಮೆಲ್ಲನೆ ನಿನ್ನದೇ ಕನವರಿಕೆಯಲಿ ಮುಳುಗಿ ನಿದಿರೆ ದೂರವಾಗಿದೆ ನನಗೆ ದುಃಖದಿ ಕಂಗಳು ಬಾತುಹೋಗಿರೆ ಸವರಿಬಿಡು ನೀ ಮೆಲ್ಲನೆ ಅದೆಷ್ಟು ಹೇಳಲಾಗದ ಮಾತುಗಳಿದ್ದವು ನನ್ನ ನಿನ್ನ ನಡುವೆ ! ನಗುವನ್ನೇ ಮರೆತ ಅಧರಗಳ ಒಮ್ಮೆ ಚುಂಬಿಸಿಬಿಡು ನೀ […]
ಕಾವ್ಯಯಾನ
ಮೊಗ್ಗಿನ ಜಡೆ ಜಯಾ ಮೂರ್ತಿ ದಟ್ಟ ಕೂದಲಿನ ಪುಟ್ಟ ಸಹನ ಬಯಸಿದಳು ಒಂದುದಿನ ಜಡೆ, ಮಲ್ಲಿಗೆ ಮೊಗ್ಗಿನ ‘ಅಮ್ಮ ಹಾಕು ಮೊಗ್ಗಿನ ಜಡೆ’ ಮುದ್ದುಗರೆದಳು ಅಮ್ಮನೆಡೆ ಮಗಳ ಇಚ್ಚೆ ಪೂರೈಸಲು ಸಂತೆ ಕಡೆ ಚೀಲ ಹೆಗಲಿಗೇರಿಸಿ ತಂದೆ ಹೊರಟರು ಮಲ್ಲಿಗೆ ಕಡೆ ಘಮ ಘಮ ಮೊಗ್ಗು ಮನೆಸೇರಲು ಅಮ್ಮ ಕುಚ್ಚು, ಬೈತಲೆ ಬೊಟ್ಟು, ಜಡೆಬಿಲ್ಲೆ ಹೊರತೆಗೆದಳು ಗಳಿಗೆಯಲ್ಲಿ ಉದ್ದ ಕೂದಲ ಬಾಚಿ ಜಡೆ ಹೆಣೆದಳು ನಲಿಯುತಲಿ ಮೊಗ್ಗ ಪೋಣಿಸುತ್ತಾ ಹೊಲೆದಳು ದಟ್ಟ ಜಡೆಗೆ ಮುಗುಳ್ನಗೆ ಯೊಳು ಕುಚ್ಚು […]
ಗಝಲ್ ಸಂಗಾತಿ
ಗಝಲ್ ರೇಖಾ ಗಜಾನನ ಮೌನವ ಮುರಿದು ಮಾತಿನ ಮನೆಯ ಕಟ್ಟೋಣ ಬಾ ಗೆಳೆಯಾ ನಿನ್ನೆ ಉತ್ತ ಬಯಲಿನಲಿ ಹೊಸ ಬೀಜ ಬಿತ್ತೋಣ ಬಾ ಗೆಳೆಯಾ ಕಾಪಿಟ್ಟ ಮನೋಬಲವು ಬರಿದೇ ಧ್ಯಾನಸ್ಥವಾದರೇನು ಚೆನ್ನ ಕೈಗೆ ಕೈಜೋಡಿಸಿ ಯಶದ ಧನುಸ್ಸನ್ನು ಎತ್ತೋಣ ಬಾ ಗೆಳೆಯ ಒಲವು ಹುಟ್ಟಿತೆಂದರೆ ಅಲ್ಲೊಂದು ಹೊಸಜಗದ ಉಗಮ ತಾನೇ ಹಸಿರ ಹಾಸಿ ಕರೆದಿದೆ ನಮ್ಮಿಬ್ಬರ ಲೋಕ ಸುತ್ತೋಣ ಬಾ ಗೆಳೆಯಾ ಸುತ್ತಮುತ್ತ ಬಂಡೆಗಲ್ಲುಗಳ ಸಾಲು ಬೆಳೆಯುತ್ತಲೇ ಇದೆ ನೋಡು ಕುಶಲದಿಂದ ಕುಂದಿಲ್ಲದ ಮೂರ್ತಿಯನು ಕೆತ್ತೋಣ ಬಾ […]