ಗಝಲ್
ಅರುಣ್ ಕೊಪ್ಪ
ನೀನು ನಗುತ್ತಿಲ್ಲ,ತಾರೆಯಾ ಹೊದ್ದು
ಭೂಪನಂತಿದ್ದರೂ ಅಹಂಕಾರವಿಲ್ಲದ
ನಿಗರ್ವಿ ನೀನು ನಿನಗಾಗಿ ಅಲ್ಲವೆ
ನೀನು ಕಪ್ಪಾದ ಪಂಜರದಲ್ಲಿ ಮೌನ ಸಾಕಿ
ಬೀಗುವದಿಲ್ಲ ಬಡಾಯಿ ಕೊಚ್ಚೊ
ಬೊಗಳೇದಾಸನಾ ನೀನು ನಿನಗಾಗಿ ಅಲ್ಲವೆ
ಮುಳ್ಳು ಮೈಗೆ ಆವರಿಸಿದರೂ ಮೊಗ ನಗು ಮೊಗ್ಗು ಹೂವುಗಳು ಕೆಲ ತಾವುಗಳಲಿ
ಸುರಸುಂದರಿ ನೀನು ನಿನಗಾಗಿ ಅಲ್ಲವೆ
ಸುತ್ಮೂರು ಹಳ್ಳಿಗಳ ಹಿಶೆ, ನ್ಯಾಯಕೆ ಜಗರಿ ಕೂರುವ
ಒಂಟಿ ಸಲಗದಂತೆ ಬೇಕು ಬೇಡಗಳ ನುಂಗಿ,
ತಂಪು ಚೆಲ್ಲುವ ತಂಗಾಳಿ ಆಲ ನೀನು ನಿನಗಾಗಿ ಅಲ್ಲವೆ
ಭಕ್ತರ ಹೂವು ,ಹಾಲು ,ಗಂಧ ಸುಗಂಧಗಳ ಮೆಂದು
ಬೆಳಗಿನಿಂದ ಇಡಿ ದಿನ ಒಂಟಿಯಾಗಿ ಕೂತ ದೇವ
ಯೆನ್ನುವ ಮೌನ ಮುರಿಯದ ನೀನು ನಿನಗಾಗಿ ಅಲ್ಲವೇ
=======