ಗಝಲ್
ರೇಖಾ ಗಜಾನನ
ಮೌನವ ಮುರಿದು ಮಾತಿನ ಮನೆಯ ಕಟ್ಟೋಣ ಬಾ ಗೆಳೆಯಾ
ನಿನ್ನೆ ಉತ್ತ ಬಯಲಿನಲಿ ಹೊಸ ಬೀಜ ಬಿತ್ತೋಣ ಬಾ ಗೆಳೆಯಾ
ಕಾಪಿಟ್ಟ ಮನೋಬಲವು ಬರಿದೇ ಧ್ಯಾನಸ್ಥವಾದರೇನು ಚೆನ್ನ
ಕೈಗೆ ಕೈಜೋಡಿಸಿ ಯಶದ ಧನುಸ್ಸನ್ನು ಎತ್ತೋಣ ಬಾ ಗೆಳೆಯ
ಒಲವು ಹುಟ್ಟಿತೆಂದರೆ ಅಲ್ಲೊಂದು ಹೊಸಜಗದ ಉಗಮ ತಾನೇ
ಹಸಿರ ಹಾಸಿ ಕರೆದಿದೆ ನಮ್ಮಿಬ್ಬರ ಲೋಕ ಸುತ್ತೋಣ ಬಾ ಗೆಳೆಯಾ
ಸುತ್ತಮುತ್ತ ಬಂಡೆಗಲ್ಲುಗಳ ಸಾಲು ಬೆಳೆಯುತ್ತಲೇ ಇದೆ ನೋಡು
ಕುಶಲದಿಂದ ಕುಂದಿಲ್ಲದ ಮೂರ್ತಿಯನು ಕೆತ್ತೋಣ ಬಾ ಗೆಳೆಯಾ
ಜೋಡಿ ‘ರೇಖೆ’ಯ ಪಯಣವಿದು ಜೊತೆಜೊತೆಯಿದ್ದರೆ ಮಾತ್ರ ಗುರಿ
ಅದೋ ನೆಮ್ಮದಿಯೆಂಬ ಗಮ್ಯವಿದೆಯಂತೆ ಮುಟ್ಟೋಣ ಬಾ ಗೆಳೆಯಾ
ಕಿರು ಪರಿಚಯ:
ರೇಖಾ ಗಜಾನನ ಭಟ್ಟ
ಹುಟ್ಟೂರು: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊನ್ನಗದ್ದೆ
ವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿ
ಪ್ರವೃತ್ತಿ : ಸಾಹಿತ್ಯದ ಓದು ಹಾಗೂ ಬರೆವಣಿಗೆ ಹಾಗೂ ಗಾಯನ
ಪ್ರಥಮ ಕೃತಿಯಾದ ‘ಮಡಿಲ ನಕ್ಷತ್ರ’ ಗಜಲ್ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯಡಿಯಲ್ಲಿ ಆಯ್ಕೆ ಆಗಿ ,ಪುರಸ್ಕಾರ ಪಡೆದಿದ್ದು, ಈ ವರ್ಷ ಬಿಡುಗಡೆಗೊಂಡಿದೆ.
ಗಜಲ್, ಕವನ , ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿ