ಕಾವ್ಯಯಾನ

ಶಕ್ತಿ

Silhouette of Girl during Night Time Painting

ಅವ್ಯಕ್ತ

ಸೃಷ್ಟಿ-ಸ್ಥಿತಿ-ಲಯ ಗರ್ಭದ ಮುಕ್ತ ರಹಸ್ಯ ರಾಣಿ ನಾ!
ಹರಿವ ಜ್ವಾಲಾ ಶಕ್ತಿಯೊಳು ತಂಪೆರೆವ ವಿಮುಕ್ತಿ ನಾ!
ಸಖಿ,ಕಾಮಿನಿ, ಧರ್ಮಿಣಿ, ಸಂಹಾರಿಣಿ, ವೈಷ್ಣವಿ ನಾ!
ಸುಳಿಗಳೊಳು ಸಿಲುಕದಂತೆ ಗರಿಚಾಚಿ ಹೊಳೆವೆ ನಾ!

ಪ್ರೀತಿಯ ಕಾಮನ ಬಿಲ್ಲಲಿ ಕಣ್ಣುಗಳ್ನಲಂಕರಿಸುವೆ,
ಸಿಹಿಕನಸಮಳೆಯ ಮೌನ ಮುಗುಳ್ನಗೆಯೋರಳಿಸುವೆ,
ಗಂಭೀರ ಮೂಗುತಿಯನ್ನು ಏರಿಸಿ ಕಾಂತಿಯ್ನ್ಹೆಚ್ಚಿಸುವೆ,
ಸುಪ್ತ ಜ್ಞಾನ, ಮುಕ್ತ ಪ್ರೇಮ, ನಿರ್ಲಿಪ್ತ ಮನದ ಕುಂಕುಮ ಧರಿಸುವೆ.

ವಜ್ರಕಲ್ಲಾಗಿ, ಗುಪ್ತಗಾಮಿನಿಯಾಗುವೆ ಕೇಸರಿದಾರಿಣಿಯಾಗಿಬಿಡುವೆ,
ನೋಡದಿರು ಬಿಲೋಳಗಿನ ಆಳದ ಪ್ರೀತಿಯ, ಸವಿಯಲಿಚ್ಚಿಸದ್ದಿದ್ದರೆ..
ಕೇಳದಿರು ಮೌನ ದೇಗುಲದೊಳಿರುವ ಹಾಡ, ಕನಸಕಿನ್ನರನಲ್ಲದಿದ್ದರೆ..
ಮುಟ್ಟದಿರು ಮೂಗುತಿಯ, ಮುಗ್ಧತೆಗೆ ಒಲಿವ ಹರಿಯಾಗದಿದ್ದರೆ..

ಪ್ರೀತಿ, ಪ್ರೇಮ, ಸ್ನೇಹ, ತಾಳ್ಮೆ, ತ್ಯಾಗ, ಜ್ಞಾನ, ಮೌನ..
ಎರಡಕ್ಷರದ ಆಭರಣಗಳೇ ಇಡೆಯಿಂದ ಮುಡಿಗೆ..
ನಗ್ನ ನೋಟಕೆ ಎನ್ನಯ ಶಕ್ತಿಕಾಂತಿಯ ಮೂಲವಾಗಿರಲಿ


Leave a Reply

Back To Top