ಕಾವ್ಯಯಾನ

ಮೊಗ್ಗಿನ ಜಡೆ

ಜಯಾ ಮೂರ್ತಿ

ದಟ್ಟ ಕೂದಲಿನ
ಪುಟ್ಟ ಸಹನ
ಬಯಸಿದಳು ಒಂದುದಿನ
ಜಡೆ, ಮಲ್ಲಿಗೆ ಮೊಗ್ಗಿನ

‘ಅಮ್ಮ ಹಾಕು ಮೊಗ್ಗಿನ ಜಡೆ’
ಮುದ್ದುಗರೆದಳು ಅಮ್ಮನೆಡೆ
ಮಗಳ ಇಚ್ಚೆ ಪೂರೈಸಲು ಸಂತೆ ಕಡೆ
ಚೀಲ ಹೆಗಲಿಗೇರಿಸಿ ತಂದೆ ಹೊರಟರು ಮಲ್ಲಿಗೆ ಕಡೆ

ಘಮ ಘಮ ಮೊಗ್ಗು ಮನೆಸೇರಲು
ಅಮ್ಮ ಕುಚ್ಚು, ಬೈತಲೆ ಬೊಟ್ಟು, ಜಡೆಬಿಲ್ಲೆ
ಹೊರತೆಗೆದಳು ಗಳಿಗೆಯಲ್ಲಿ 
ಉದ್ದ ಕೂದಲ ಬಾಚಿ ಜಡೆ ಹೆಣೆದಳು ನಲಿಯುತಲಿ

ಮೊಗ್ಗ ಪೋಣಿಸುತ್ತಾ ಹೊಲೆದಳು
ದಟ್ಟ ಜಡೆಗೆ ಮುಗುಳ್ನಗೆ ಯೊಳು
ಕುಚ್ಚು ಗಲಗಲ ಎನ್ನಲು ಮುಗುಳ್ನಗಲು ಮೊಗ್ಗುಗಳು
ಬೆರೆಯುತ್ತಾ ಕಿಲ ಕಿಲಾ ಸಹನಾಳ ನಗೆಯೊಳು

ಉಡಿಸಿಹಳು  ರೇಶಿಮೆ ಸೀರೆ
ತಾಯಿ ಮಗಳಿಗೆ,  ಪುಟ್ಟ ಸಹನಾ ಮೆರೆದಿರೆ
ಕನ್ನಡಿಯಲ್ಲಿ ಜಡೆ ಪ್ರತಿಬಿಂಬಿಸಿರೆ
ತಂದೆ ಚಿತ್ರ ತೆರೆದಿರೆ ಸಂತಸ ಮನೆಯಲ್ಲಿ ಹರಿದಿರೆ

ಉಳಿದ ಮೊಗ್ಗುಗಳ ಹಾರ
ಕೃಷ್ಣ ನ ವಿಗ್ರಹ ಅಲಂಕರಿಸಿರೆ
ದೀಪ ಬೆಳಗಿ ಮಗಳ ಆಶೀರ್ವಾದ ತಾಯಿ ಬಯಸಿರೆ
ಮಗಳ ಆನಂದ ಹೀಗೆ ಇರಲಿ ಎನ್ನುತಿರೆ

ಉರುಳಿತು ಸಂವತ್ಸರುಗಳು
ಇಂದು ವಧುವಾಗಿ ಸಹನಾ ನಿಂತಳು
ಬಿಳಿಸೀರೆ, ಆಭರಣ ಗಳ ತೊಟ್ಟ ಮಗಳು
ಮೊಗ್ಗಿನಜಡೆ ಅಲಂಕೃತ ವ ಇಮ್ಮಡಿಸಲು

ಓಡಿತು ತಾಯ ಹೃದಯ ಅಂದಿನ
ಸಹನಾ ಮೊಗ್ಗಿನ ಜಡೆ ಬಯಸಿದ ದಿನ
ಕೃಷ್ಣ ನ ಆಶೀರ್ವಾದ ಫಲಿಸಿತ್ತು ಈ ದಿನ
ಮಗಳು ಅಳಿಯರು ಮಂಟಪದಲ್ಲಿ ನಿಂತ ಸುದಿನ

ಮತ್ತೇನ ಬಯಸುವರು
ಜನ್ಮವಿತ್ತ ತಂದೆ ತಾಯಿಯರು
ಮಗಳ ಸುಖ ಜೀವನ ಅದೇ ಜೀವನದ ಗುರಿ
ಧಾರೆ ಎರೆದರು ಮಗಳ, ತುಂಬಿದ ಸಭೆ ಅಕ್ಷತೆಯ ಮಳೆ ಸುರಿಸಿಹರು

         ಶುಭಮಸ್ತು, ಶುಭಾಶಯಗಳ
         ಧ್ವನಿ ಪ್ರತಿಧ್ವನಿಸಲು
         ಮುಗುಳ್ನಕ್ಕರು ದಂಪತಿಗಳು  
         ಅವರ ಆಕಾಂಕ್ಷೆ ಫಲಿಸಲು.



ಕಿರು ಪರಿಚಯ:         

ವಾಸ ಇಟಲಿಯಲ್ಲಿ. ಕರ್ಣಾಟಕ ದಿಂದ ಬೆಂಗಳೂರು ಮೈಸೂರು. 
ಕವನಗಳನ್ನು ಬರೆಯುವ ಹವ್ಯಾಸ. ಹ್ರತ್ಕಮಲ 50 ಕವನಗಳ ಪುಸ್ತಕ publish ಆಗಿದೆ. 

Leave a Reply

Back To Top