Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಬದುಕು ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ******

ಕಾವ್ಯಯಾನ

ಕೊನೆಯ ಸತ್ಯ 6 ಶಾಲಿನಿ ಆರ್. ಮುಳ್ಳು ಗಿಡಗಂಟಿಗಳ ಜಾಡು ಮುಗಿಯದ ದಾರಿಯಿದು ಬರಿ ಕಾಡು, ಪಾಚಿ ಗಟ್ಟಿದ ನೆಲಕೆ ಆರದ ನೋವ ಜಾರುತಿರುವ ಸಂಬಂಧಗಳ  ಅವಯವ, ಅಂತರಂಗಕಿದು ಆಳದ ಅರಿವಿಲ್ಲ ಬರಿ ಹೂಳು ತುಂಬಿದೆ ಆಳದೆಲ್ಲೆಲ್ಲ, ಬೆಚ್ಚಗಿನ ನೆನಪಿಗು ಚಳಿಯ ಜಾಡು ಸದ್ದಿಲದೆ ಮುರಿಯುತಿದೆ ಮನದ ಎಲುಬಿನ ಗೂಡು, ತರ ತರದ ಪ್ರೀತಿಗು ಮುಖವಾಡದ  ತುತ್ತು, ಬಿಂಕದಲಿ ಬೀಗುತಿದೆ ಭ್ರಮೆ’ ನನ್ನ ಸೊತ್ತು, ಹೂಳ ತೆಗೆಯದ ಹೊರತು ಕೇಳ, ತಿಳಿಯದು ಅಂತರಾಳದ ಮೇಳ, ಅರಿಯಲಾರದ ನಿಜತನ […]

ಕಾವ್ಯಯಾನ

ಗಝಲ್ ಈರಪ್ಪ ಬಿಜಲಿ ಮನದ ಕತ್ತಲು ಕಳೆದು ಜ್ಯೋತಿ ಬೆಳಗುವದು ಪುಸ್ತಕ ನಿಜ ಸಂಗಾತಿ ಜೀವದ ಭಾವನೆಗಳ ಭಾವನಾಲೋಕದಲಿ ತೇಲಿಸುವದು ಪುಸ್ತಕ ನಿಜ ಸಂಗಾತಿ।। ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣವನು ಚೆಂದದಿ ಮಾಡುವುದು, ಯುಕ್ತಿಯ ಬಳಕೆಮಹತ್ವ ಸಾರುವ ಸಾಧನವಿದು ಪುಸ್ತಕ ನಿಜ ಸಂಗಾತಿ ।। ಮನುಜನನ್ನು ಸುಸಂಸ್ಕೃತನಾಗಿ ಪರಿವರ್ತನೆಗೊಳಿಸುವದು, ನಾಗರಿಕತೆ ಬೆಳೆಸಿ ಅನಾಗರಿಕತೆ ತೊಲಗಿಸುವದು ಪುಸ್ತಕ ನಿಜ ಸಂಗಾತಿ ।। ಜ್ಞಾನಕೋಶವನು ನಿತ್ಯ ತುಂಬಿಸಿ ಜ್ಞಾನಭಂಡಾರ ವೃದ್ಧಿಸುವದು, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಿಸುವದು ಪುಸ್ತಕ ನಿಜ ಸಂಗಾತಿ ।। […]

ಕಾವ್ಯಯಾನ

ಕವಿತೆಗೀಗ ಪುರುಸೊತ್ತಿಲ್ಲ! ವೈ.ಎಂ. ಯಾಕೋಳ್ಳಿ ಮತ್ತೆ ಮತ್ತೆ ಹರಿದು ಬರುವ ಕೆನ್ನೆತ್ತರ ಕಾವಲಿಯಲ್ಲಿ ಬಲಿಯಾದ ತನ್ನ ಕರುಳ ಕುಡಿಯ ಅರಸುತ್ತಿದೆ ಕವಿತೆ ಅದಕ್ಕೀಗ ಪದ ವಾಗಲು ಪುರುಸೊತ್ತಿಲ್ಲ ಅಪ್ಪನ ಬೆವರ ಹನಿ ಅವ್ವನ ಕೈತುತ್ತು ತಿಂದು ,ಪಾಠಶಾಲೆಯ ಪುಸ್ತಕದ ನಡುವೆ ಓದಿದ ಆದರ್ಶಗಳ ನೆಟ್ಟ ದಾರಿಯಲಿ ನಡೆದ ಕವಿತೆಗೆ ಎರಡು ಹೊತ್ತಿನ ಕೂಳು ಸಿಗದೆ ಪರದಾ ಡು ತ್ತಿದೆ ಅದಕ್ಕೀಗ ಪದ ವಾಗಲೂ ಪುರುಸೊತ್ತಿಲ್ಲ ತನ್ನದೇ ಓನಿಯ ಎಳೆಯ ಎದೆಗಳು ಎಲ್ಲಿಯೋ ಜೈಕಾರ ಹಾಕಿ,ಎಲ್ಲಿಯೋ ಮಲಗಿ ಯಾರದೋ […]

ಕಾವ್ಯಯಾನ

ಗಝಲ್  ಶಿವರಾಜ್. ಡಿ ನಮ್ಮ ಅಪಮಾನ ಅವಮಾನಗಳು ಇನ್ನೂ ಸತ್ತಿಲ್ಲ ಅಸ್ಪೃಶ್ಯತೆ ಅನಾಚರ ಅಜ್ಞಾನಗಳು ಇನ್ನೂ ಸತ್ತಿಲ್ಲ ನಿಮ್ಮ ಕಾಲಿನ ಚಪ್ಪಲಿ ಹೊಲೆದವರು ನಾವು ಚಪ್ಪಲಿ ಮೆಟ್ಟು ಬೆನ್ನಿಗೆ ಹೊದ್ದ ದರ್ಪ ಇನ್ನೂ ಸತ್ತಿಲ್ಲ ಮೀಸಲಾತಿ ಸ್ವಾಭಿಮಾನ ವಿರೋಧಿಸಿದವರು ನೀವು ನಮ್ಮನ್ನು ತುಳಿದ ನಿಮ್ಮ ದುರಭಿಮಾನ ಇನ್ನೂ ಸತ್ತಿಲ್ಲ ನಿಮ್ಮ ಮನೆಯ ಹೊಲ ಗದ್ದೆ ಚಾಕರಿಗೆ ಬೇಕು ನಾವು ನಮ್ಮನ್ನು ಹೊರಗಿಟ್ಟವರ ಮಡಿವಂತಿಕೆ ಇನ್ನೂ ಸತ್ತಿಲ್ಲ ನಿಮ್ಮ ಮಲಮೂತ್ರಗಳ ಹೊಲಸು ಹೊತ್ತವರು ನಾವು ಶ್ವಪಚರೆಂದು ಜರಿದ ಕೊಳಕು […]

ಕಾವ್ಯಯಾನ

ಮಾಯಾ ಪೆಟ್ಟಿಗೆ ಮತ್ತು ಬಾಂಬರುಗಳು    ನೂರುಲ್ಲಾ ತ್ಯಾಮಗೊಂಡ್ಲು ಅದೊ ಮಾಯಾ ಪೆಟ್ಟಿಗೆಯಿಂದವತರಿಸಿ  ಧಗ್ಗನೆದ್ದು ಬಂದಿವೆ  ಗೋದಿ ಗಾವಿಲರು, ಕೋತಿಗಳು ಅಥವ ಕಿಲಬುಕಾರರು  ಅಂದು ಕುಂಪಣಿಯ ಛೇಲಗಳಂತಿವರು  ಇಂದು ಈ ಹೊತ್ತಿಗೆ  ಅಲ್ಲಾವುದ್ದೀನನ ಚಿರಾಗ್ ಬೆಳಕಲಿ  ವಿಸ್ಮಯ ಲೋಕಕಂಡಿದ್ದ ಬಾಲ್ಯದಿನಗಳೇ ಚೆಂದ  ಇಂದು ಈ ೨೪/7 ನ ಪೆಟ್ಟಿಗೆಯಿಂದ ಪೊಳ್ಳು ಅಥವ ಬೆಂಕಿ ಕೆಕ್ಕರಿಸುವ  ದಿನಗಳು ಲೋಕವನ್ನೇ ಸುಡುತಿದೆ  ಅದೊ ಅಲ್ಲಿ ರಂಜನೆ, ರಮ್ಯಕಾಮ, ವಿನೋದ ವೂ ಉಂಟಲ್ಲ ಎಂದವನಿಗೆ ದುರಿತ ಕಾಲದ ವಿವೇಚನೆವಿಲ್ಲವೆಂದು ಮೌನವಾದೆ  ಗಡಿಗಳು ದೇಶಕೋಶಗಳಲಿ  ವಿಷವೇ ವಾಹಿನಿಯಾಗಿ […]

ಕಾವ್ಯಯಾನ

ಮುಕ್ತಿ ದೊರಕೀತು! . ತೇಜಾವತಿ ಹೆಚ್.ಡಿ ಅಂತಹದೊಂದು ಅಂತರಂಗದ ಮಿಡಿತವ ನೀ ಅರಿತು ಗೌರವಿಸುವಿಯಾದರೆ ಬರಡಾದ ಬಂಜರಿನಲ್ಲೂ ಉಕ್ಕುವ ಚಿಲುಮೆಗಾಗಿ ಕಾತರಿಸಿದ ಅವನಿಯ, ಕಾರ್ಗತ್ತಲ ಕಾನನದಲ್ಲೂ ನೆರಳಾಗಿ ಬರುವ ಕಂದೀಲನ್ನು ತಾನು ನಿರಾಕರಿಸಲಾರದು ಯಾವ ಭಾವವೂ ಆಕರ್ಷಣೆಯೆಂದು ಹಗುರ ನುಡಿಯದೆ ಕಾಮವೇ ಐಹಿಕದ ಸುಖವೆಂದು ನೀ ತಿಳಿಯದೆ ಅದರಾಚೆಗಿನ ಪವಿತ್ರತೆಯನೊಪ್ಪಿಕೊಳ್ಳುವೆಯಾದರೆ ಶಾಪಗ್ರಸ್ತ ಜೀವಕ್ಕೆ ಮುಕ್ತಿ ದೊರೆತು ಗಂಗೆಯ ಜಲದಿ ಪಾಪಗಳೆಲ್ಲ ತೊಳೆಯಲಿ ಒಳಗಿರುವ ಮಾಣಿಕ್ಯ ಪ್ರಜ್ವಲಿಸಲಿ ಅರಿವಿಗೆ ತಾನು ಸ್ಫೂರ್ತಿಯಾಗಲಿ *******

ಕಾವ್ಯಯಾನ

ಒಂದಿಷ್ಟು ಹಾಯ್ಕುಗಳು ಮದ್ದೂರು ಮದುಸೂದನ 1 ದೂರದ ಬೆಟ್ಟ ನುಣ್ಣಗೆ ಹೆಣ್ಣು ಕೂಡ 2 ಗಾಳಿ ಬಿಟ್ಟ ಪುಗ್ಗೆ ಒಮ್ಮೊಮ್ಮೆ ಬದುಕು 3 ತುದಿ ಕಾಣದ ಮುಗಿಲು ನಮ್ಮ ನಿಲ್ಲದ ಲಾಲಸೆ 4 ಬರಿದಾಗುತ್ತಿರುವ ಜೀವಜಲ ನಮ್ಮ ಜ್ಞಾನ 5 ಎಲ್ಲಿಯೂ ಒಂದಾಗದ ರೈಲಿನ ಹಳಿ ಜಾತಿಯತೆ 6 ಸದಾ ಕಾಡುವ ಕೊರತೆ ಮಾನವೀಯತೆ *********

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಕಾಲಚಕ್ರ ಅರೆಕ್ಷಣವೂ ವಿರಮಿಸದೇ ಉರುಳುತ್ತಲಿದೆ ನಲ್ಲೆ ನಮ್ಮ ಪ್ರೀತಿ ಅಡೆತಡೆಯಿಲ್ಲದೇ ಬೆಳೆಯುತ್ತಲಿದೆ ನಲ್ಲೆ ನಡೆದ ಹಾದಿಯಲಿ ಎದುರಾದ ಕಷ್ಟ ಕೋಟಲೆಗಳು ನೂರು ಗಂಗಾ಼ಳದ ಗಂಜಿಯಲ್ಲೇ ಮೃಷ್ಟಾನ್ನದ ಸವಿ ತುಂಬಿದೆ ನಲ್ಲೆ ನಿನ್ನೆ ಮೊನ್ನೆಯಂತೆ ನೆನಪಿನಲ್ಲಿದೆ ಸಪ್ತಪದಿ ತುಳಿದ ಘಳಿಗೆ ದಶಕಗಳ ಅನುರಾಗದಲಿ ಈ ಬಂಧ ಬಿಗಿಗೊಂಡಿದೆ ನಲ್ಲೆ ಹುಲ್ಲಿನ ಮನೆಯೇ ಅರಮನೆಯಾಗಿರೆ ಎಲ್ಲಿಹುದು ಕೊರತೆ ? ನಾನು ಬಡವ ನೀನು ಬಡವಿ ಒಲವೇ ಸಿರಿಯಾಗಿದೆ ನಲ್ಲೆ ಬಾಳಿನ ಸಂಧ್ಯಾಕಾಲವಿದು ನನಗೆ ನೀನು ನಿನಗೆ ನಾನು […]

ಭೂಮಿ ದಿನ

ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ […]

Back To Top