Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ನಚಂ ವಯಸಲ್ಲದ ವಯಸ್ಸಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕತ್ತಲೆಯ ಬೆನ್ನತ್ತಿ ಬಂದ ಓ ಬೇಳಕೆಂಬ ಕನಸೇ ಹೇಳು ನಿನೆಲ್ಲಿಗೆ ಹೋದೆ ಮನದ ಇರುಳು ತೊಲಗಲೇ ಇಲ್ಲ ನಿನ್ನ ಹೆಜ್ಜೆ ಮೂಡಲೇ ಇಲ್ಲ ಕಣ್ಣಬಿಟ್ಟು ನೋಡಿದೊಡೆ ಕಾಲವೇ ಕೇಳೇದಿತ್ತು ಕತ್ತಲೇ ಮಾತ್ರ ಉಳಿದಿತ್ತು! ಕರುಣೇ ಇಲ್ಲದ ಕಾಲದ ಬೇಳಕೇ ನೀನಾಗದಿರು ಮರಭೂಮಿಯ ನಿರ್ಗುಳ ಹುಡುಕುತ್ತಿರುವೆ ಹುಡುಕುತ್ತಿರುವೆ ನಿನ್ನ ಬಾ ಬೇಳಗೊಮ್ಮೆ ಬದುಕ ಹಬ್ಬವೆಂಬ ನೆಪಹೂಡಿ…. ಬಂದು ನಿಲ್ಲು ಬೇಳಕೇ ಕಾಲದ ಬಿರುಗಾಳಿಗೆ ಆರದೆ ನಿನ್ನ ಹಸಿವು ನನಗೂ ಇದೆ ಅರಿತು […]

ಕಾವ್ಯಯಾನ

ಬಿದಲೋಟಿ ರಂಗನಾಥ್ ಮೌನದ ಗೆರೆಯ ನಡುವೆ.. ಒಡಲುರಿಯ ಕನಸೊಂದು ಚುಕ್ಕಿಗಳತ್ತ ಮುಖ ಮಾಡಿ ಭಾವದಗೂಡಿನಲಿ ಅರಳಿ ಮುತ್ತಾಗಿ ಸಮುದ್ರದ ಮೇಲೆ ಬರೆದ ಕವನದ ಕರುಳ ತಂತಿಯಲಿ ಸುತ್ತಿಕೊಂಡ ಸಂಬಂಧ ಕಿತ್ತಾಡಿ ತಿನ್ನಲಿಲ್ಲ ಒಟ್ಟಾಗಿ ಬೆಳೆಯಲಿಲ್ಲ ಅತ್ತು ಕರೆದು ಕಣ್ಣೀರ ಕಡೆಯಲಿಲ್ಲ ಅದೆಂಥದ್ದೋ ಭಾವದ ಸೆಳೆತ ಹತ್ತಿರ ನಿಂತೆ ಹಾಡುತ್ತಿದೆ ಕಣ್ಣ ಕನ್ನಡಿಯ ಬಿಂಬದಲಿ ಕಟ್ಟಿದ ಕನಸುಗಳ ಕಂತೆ ಬಿಚ್ಚಿ ನೋಡುವ ಬಯಲ ಕುದುರೆ ಈ ಜಗದ ಮಿಣುಕು ಬೆಳಕು ಎಲ್ಲೋ ನಿಂತು ನೋಡಿ ಬೆಸೆದ ಅನುಬಂಧ ಮೀಟುತ್ತಿದೆ […]

ಕಾವ್ಯಯಾನ

ಬದುಕೆಂಬ ವಂಚಕ! ಸೌಜನ್ಯ ದತ್ತರಾಜ ಪರಿಚಿತರಾಗುತ್ತಾ ಆಗುತ್ತಾ ಪರಕೀಯತೆಯ ಭಾವವೇ ಹೆಚ್ಚಾಗಿ ಆಗೀಗ ಪೆಚ್ಚಾಗಿ ಕಾಡುತಿದೆ ಹತ್ತಿರವಾದಷ್ಟೂ ಒಬ್ಬರನೊಬ್ಬರು ದೂರುತ್ತಲೇ ದೂರವಾಗುತ್ತಿರುವ ವಿಪರ್ಯಾಸ ವಿಚಲಿತರನ್ನಾಗಿಸುತಿದೆ ಏಕೆ…. ಏನಾಯ್ತು……ಹೇಗಾಯ್ತು ಪ್ರಶ್ನಿಸಿಕೊಳ್ಳಲೇ ಭಯವಾಗುತ್ತಿದೆ ಅನುಮಾನದ ಹೆಡೆಯೊಂದು ಸದ್ದಿಲ್ಲದೆ ಆಗಾಗ ತಲೆಯೆತ್ತುತಿದೆ ಆಡಬಾರದ ಹೇಳಬಾರದ ಮಾತುಗಳನೆಲ್ಲಾ ಆಡುವ ಬಾಯಿ ಇತ್ತೀಚೆಗೆ ಇಬ್ಬದಿಯಲೂ ಬಿಗಿಯುವ ಇಕ್ಕಳದಂತಾಗಿದೆ ಇರಿಯುತ್ತಲಿದೆ ಮನದಲೊಂದು ಮುಗಿಯದ ಭಾವ ಹೊಂದಾಣಿಕೆ ಆಗದ ಸ್ವಭಾವ ಒಗ್ಗಿಕೊಳ್ಳಲಾರದೆ ಒದ್ದಾಡುತಿರುವ ಜೀವ ಪ್ರೀತಿ ಸ್ನೇಹಗಳ ಹೆಸರಲ್ಲಿ ಪ್ರತಿದಿನವೂ ನಡೆಯುತಿವೆ ಹೊಸ ಹೊಸ ನಾಟಕ ಗೆಲ್ಲುವುದು […]

ಕಾವ್ಯಯಾನ

ನಮ್ಮಳಗೊಬ್ಬ ಸಂತೆಬೆನ್ನೂರು ಫೈಜ್ನಟ್ರಾಜ್ ಮನಸಲ್ಲಿ ಕೋಟಿ ಕೋಟಿ ಯುದ್ಧ  ಸಾಮಗ್ರಿಗಳನ್ನು ಹೊತ್ತು ಕಡಲ ದಡದಿ ನೆಮ್ಮದಿ ಹುಡುಕ್ತಿದ್ದ! * ಎದುರಿಗೇ ಎಲ್ಲಾ ಐತೆ ಏನೋ ಮಿಸ್ಸಾಗಿದೆ ಅಂತ ಎದ್ದು ನಡೆದ ಇದ್ದುದನ್ನ ಬಿಟ್ಟು! * ಕಣ್ಣೆದುರು ಇದ್ರೆ ಕಣ್ ಕೆಂಪು..ಉರಿ ಉರಿ ಮರೆಯಾದ್ರೆ ಕಳ್ಕಂಡೋರ ತರ ಅಂಡ್ ಸುಟ್ ಬೆಕ್ಕು! * ಹಾಡ್ತಾನೆ,ಕುಣಿತಾನೆ,ನಗ್ತಾನೆ,ಅಳ್ತನೆ ಎಲ್ಲಾ ಸರಿ ಮತ್ ಎದುರಿರೋ ಬಳಿ ಏನೈತ್ರಿ ಈ ಬಾಳ್ನಾಗೆ….ರಾಗ * ನಾಯಿ ಬಾಲ ನೇರ ಮಾಡಬಹುದಂತೆ ಹೆಂಗೋ ನಮ್ಮೊಳಗಿದ್ದಾನಲ್ಲಾ ಅವನ್ನ ಊಹ್ಞುಂ….ಗುಂಡ್ಕಲ್ಲದು!!

ಕಾವ್ಯಯಾನ

ನೆನಪುಗಳ ಪಾಲೀಶ್ ಪಾಲಿಸಿ ಬಸವರಾಜ ಕಾಸೆ ಮರೆಯದ ನೆನಪುಗಳತೊಳೆಯುವೆ ಕೊಳೆಯಲು ಕಣ್ಣೀರಲ್ಲಿಅಚ್ಚಳಿಯದೆ ಸ್ವಚ್ಛ ಪಾಲಿಶ್ ಆಗಿಫಳಪಳವೆಂದು ಬೆನ್ನೆತ್ತವುದು ಕ್ಷಣದಲ್ಲಿ ಕಳಿಸಿ ಕೊಡಲು ಕಲಿಸಿದೆಕೇಳಿ ನಗುವಿನ ಆಮಂತ್ರಣಸಪ್ಪೆಯಾದರೂ ನಟಿಸಿದೆನಿರಾಳವಾಗಲು ನಿನ್ನ ಮೈಮನ ಹೇಳಿ ಹೋಗದ್ದಿದರೆಚೆಂದವಿತ್ತು ಏನೋ ಕಾರಣತಿಳಿ ಹೇಳಿ ರಮಿಸಿದ ಪರಿಬಿಗಿಗೊಳಿಸಿತು ಭಾವ ಬಂಧನ ಬಿಟ್ಟು ಕೊಡದ ಪ್ರೀತಿಪಡೆಯಲಾಗದ ಬದುಕುಧಿಕ್ಕಾರ ಕಿರುಚಲು ನನ್ನೊಳಗೆನನಗೆ ನಿರಂತರ ಕುಟುಕು ಇಡಿ ಸಾಗರದ ಉಪ್ಪುತೆವಳಿಯೇ ಹಿಂದಿಕ್ಕುತ್ತೆ ನೋವಿನಾಳದಲ್ಲಿತಡೆತಡೆದು ಬಿಕ್ಕಿ ಜಾರುವಹನಿ ಹನಿ ನೀರಲ್ಲಿ ಬಿಟ್ಟು ಹೋಗುವ ಮುನ್ನಪ್ರೇಮದ ನಿನಾದಗರಿಗೆದರಿ ತಬ್ಬಿ ಅಲವತ್ತಿತುನೆನೆದು ತವಕಿಸಿ […]

ಕಾವ್ಯಯಾನ

ಸೊಡರು ಚಂದ್ರಪ್ರಭ .ಬಿ. ಚೆಂಗುಲಾಬಿ ಮೊಗದವಳೆ ದಾಸವಾಳದ ವರ್ಣದಲಿ ಅದ್ದಿ ಬಂದವಳೆ…ಸಖಿ ಅನುಪಮ..ಅಪಾರ ನಿನ್ನ ಮಮತೆ..ಹೃದಯವಂತಿಕೆ..! ಹಲವು ಮೈಲುಗಲ್ಲುಗಳಿಗೆ ಸಾಕ್ಷಿ ನಿನ್ನ ನಿರ್ಗಮನ ಅಂಚಿನತ್ತ ದೌಡಾಯಿಸುತ್ತಿರುವ ವೃತ್ತಿ ಮೈಕೊಡವಿ ಮೇಲೇಳುತ್ತಿರುವ ಪ್ರವೃತ್ತಿ ಏನೆಲ್ಲಕೆ ತೆರೆದುಕೊಳುವಾಸೆಗೆ ಬಲಿತ ರೆಕ್ಕೆ ನೀ ಹೊತ್ತು ತರುತ್ತಿದ್ದ ವೇದನೆ ಈಗ ಕಾಡುತ್ತಿದೆ ಮಧುರ ನೆನಪಾಗಿ! ಅಜ್ಜಿ ಅವ್ವನ ಕಾಲದಲಿ ಅರವತ್ತರ ವರೆಗೂ ಜತೆಯಾದವಳು ನೀ ಅವರ ಹಿಂದೆ ಹಿಂದೆ ನಾ… ನನ್ನ ಹಿಂದಿನವರಿಗೆ ನಲವತ್ತಕ್ಕೇ ಕೈ ಬೀಸಿ ವಿದಾಯ ಹೇಳುತಿರುವೆಯಲ್ಲೇ? ಮೂವ್ವತ್ತರ ಬಳಿಕ […]

ಕಾವ್ಯಯಾನ

ಮಿನುಗುವ ನಕ್ಷತ್ರ ಚೈತ್ರ ಶಿವಯೋಗಿಮಠ ಅಗೋ…. ಅಲ್ಲಿ ಮಿನುಗುವ ನಕ್ಷತ್ರ ನೀನೇ ಇರಬಹುದು ಅಪ್ಪ! ಪ್ರತಿ ಇರುಳು ಕಾಯುವೆ  ನಿನ್ನ ಬಾಂದಳದಲಿ ಕಾಣಲು! ಮಿಣುಗುವ ಚುಕ್ಕಿ ಸ್ಮೃತಿ  ಪಟಲವ ಕೆಣಕುವುದು! ನೀ ನನ್ನ ಆಡಿಸಿದ್ದು, ಟುವ್ವಿ ಟುವ್ವಿ ಎಂದು ಹಾಡಿದ್ದು ಕಣ್ಮರೆಯಾಗಿ ಕಾಡಿದ್ದು  ಮುಂಜಾನೆಯ ವಿಹಾರಕ್ಕೆ ಹೋಗಿದ್ದು ಸದ್ದು ಮಾಡುತ್ತಾ ಕಾಫಿ ಹೀರಿದ್ದು ಎಲ್ಲವೂ ಕಾಡುವುದು ಅಪ್ಪ! ಈ ನಕ್ಷತ್ರದಂತೆಯೇ ನೀನು ಕತ್ತಲು ಕವಿದಾಗ ದಾರಿ ತೋರುವೆ ಈ ಚುಕ್ಕಿಯಂತೆಯೇ ಆದೆ ನೀನು ಹಗಲೆಂಬ ಸಂತಸದಲಿ ಮಾಯವಾದೆ […]

ಕಾವ್ಯಯಾನ

ಗಾಯಗಳ ಎಣಿಸುತ್ತಲೇ! ದೀಪಾಜಿ ಮಾತಿಗೊಮ್ಮೆ ತುಟಿಕಚ್ಚಿ  ಹೀಗೆಂದರೆ ಎಲ್ಲಿ ಬಿಟ್ಟು ಹೋದಾನೊ ಹಾಗೆಂದರೆ ಎಲ್ಲಿ ಬಿಟ್ಟು ಹೋದಾನೊ ಎಂಬ ದುಗುಡದಲ್ಲೆ ಕಳೆದೆ ಅಷ್ಟು ದಿನಗಳನ್ನ.. ಹೆಜ್ಜೆ ಹೆಜ್ಜೆಗೊಮ್ಮೆ ಹೆಜ್ಜೇನು ಸುರಿದು ಬಾಯಿಗೆ ಸೆರಗ ಒತ್ತಿ ದುಃಖ ಉಮ್ಮಳಿಸಿದಾ -ಗೆಲ್ಲ ಹುಸಿ ನಗುವನ್ನೆ ಹೊರಚೆಲ್ಲಿ ನೋವೆಲ್ಲ ಪಕ್ಕಡಿಗೆ ಸರಿಸುತ್ತಲೆ ಕಳೆದೆ ಅಷ್ಟು ದಿನಗಳನ್ನ.. ಉಸಿರು ಬಿಟ್ಟುರು ಸಾಕು ಹೆಡೆಎತ್ತಿ ಬುಸುಗುಡುತ್ತೀ ಪ್ರೇಮ ಸರಸ ಸಮರಸ ಕಲ್ಪಸಿದವಳಿಗೆ ಸಿಕ್ಕಿದ್ದು ಬರಿಯ ಹಾಲಾಹಲ ನಿನ್ನ ಸಿಟ್ಟುರಿಯ ಹರಿವು ಅಸಮಾಧಾ -ನದ ಕೋಲಾಹಲ […]

ತಂತಿಯೊಳಗಣ  ಶಬ್ದ !

ಕಾವ್ಯ ಸಂಗಾತಿ ತಂತಿಯೊಳಗಣ  ಶಬ್ದ ! ಬಿದಲೋಟಿ ರಂಗನಾಥ್ ನಾನು ಶರಾಬಿನ ದಾಸ ಘಟಶೋಧನೆಯಲ್ಲಿನ ಬಂಧವನ್ನು ಹುಡುಕುತ್ತಲೇ ಹೋದೆ ಅವನ ನೆರಳಿತ್ತು ಅವಳ ಒಲವಿತ್ತು ನಾನೇ ಇರಲಿಲ್ಲ. ಶೋಧಿಸಿಸಲು ಎದೆಗೂಡಲ್ಲಿದ್ದ ಹಂಸದ ನಡಿಗೆಯ ಹೆಜ್ಜೆಯ ಸುತ್ತಿ ಹೊಲೆದ ಪಾಪದ ಮೂಟೆಯ. ತಿರುಗಿದೆ ಕಾಡು –ಮೇಡು ಬೆಟ್ಟ ಕಣಿವೆ ಕಂದರ ನಾ ಬಯಸಿದ್ದು ಸಿಗಲಿಲ್ಲ ಧ್ಯಾನದ ಹೆಜ್ಜೆ ಮುಟ್ಟಿ ನೋಡಿದೆ ಸಕಲವೂ ನನ್ನೊಳಗೇ ಇತ್ತು ತಂತಿ ಮೀಟಿದ ಶಬ್ದ ನಿಜದ ನೆಲೆಯ ಬದುಕಿಗೆ ದಾರಿ ತೋರಿ ಬಯಲ ಪದಗಳು […]

ಕಾವ್ಯಯಾನ

ಹೊಸ ಹಾಡು ದೇವಯಾನಿ ನೆನಪಿಗೆಂದು ಕೊಳಲ ನಾನೆಂದೂ ಕೇಳಲೇ ಇಲ್ಲ ಚಕ್ರ ಹಿಡಿಯಲೆಂದೇ ಹೊರಟವನು ನೀನು , ಕೊಳಲು ಬೇಕಿರಲಿಲ್ಲ ಏನು ಮಾಡಲಿ ಈ ಕೊಳಲ ಗಾಳಿ ನುಸುಳಿದರೂ ರಾಧೆ ರಾಧೇ ಎಂದೇ ಉಲಿಯುತ್ತಿದ್ದ ಕೊಳಲೀಗ ಬರಿ ಬಿದಿರ ಕೊಳವೆಯಾಗಿ ಬಿದ್ದಿದೆ ನೀನು ಕೊಳಲೂದಲೆಂದೇ ಗೋಕುಲಕೆ ಈ ಜಗಕೆ ಬರಲಿಲ್ಲ ಬಿಡು ಆದರೂ ಚಕ್ರ ಹೊತ್ತ ಕೈ ಸೋತಾಗ ಕೊಳಲ ನೆನಪಾಗದ್ದೇ ನನಗೆ ವಿಸ್ಮಯ ಕೊಳಲೆಂದರೆ ರಾಧೆ ಎಂದುಕೊಂಡಿದ್ದೆ ಎಂದು ಹೆಮ್ಮೆ ಪಡುತ್ತಿದ್ದೆ ನಾನು ಕೊಳಲ ತೊರೆದಷ್ಟೇ […]

Back To Top