ಕಾವ್ಯಯಾನ

ನಚಂ

ವಯಸಲ್ಲದ ವಯಸ್ಸಲ್ಲಿ
ಹೊತ್ತಲ್ಲದ ಹೊತ್ತಲ್ಲಿ
ಕತ್ತಲೆಯ ಬೆನ್ನತ್ತಿ
ಬಂದ ಓ ಬೇಳಕೆಂಬ ಕನಸೇ
ಹೇಳು ನಿನೆಲ್ಲಿಗೆ ಹೋದೆ

ಮನದ ಇರುಳು ತೊಲಗಲೇ ಇಲ್ಲ
ನಿನ್ನ ಹೆಜ್ಜೆ ಮೂಡಲೇ ಇಲ್ಲ
ಕಣ್ಣಬಿಟ್ಟು ನೋಡಿದೊಡೆ
ಕಾಲವೇ ಕೇಳೇದಿತ್ತು
ಕತ್ತಲೇ ಮಾತ್ರ ಉಳಿದಿತ್ತು!

ಕರುಣೇ ಇಲ್ಲದ ಕಾಲದ ಬೇಳಕೇ
ನೀನಾಗದಿರು ಮರಭೂಮಿಯ ನಿರ್ಗುಳ
ಹುಡುಕುತ್ತಿರುವೆ ಹುಡುಕುತ್ತಿರುವೆ ನಿನ್ನ
ಬಾ ಬೇಳಗೊಮ್ಮೆ ಬದುಕ
ಹಬ್ಬವೆಂಬ ನೆಪಹೂಡಿ….

ಬಂದು ನಿಲ್ಲು ಬೇಳಕೇ
ಕಾಲದ ಬಿರುಗಾಳಿಗೆ ಆರದೆ
ನಿನ್ನ ಹಸಿವು ನನಗೂ ಇದೆ
ಅರಿತು ಬಾ ನಿನೊಮ್ಮೆ
ದೀಪಾವಳಿಯ ನೆಪವೊಡ್ಡಿ!?
==========================

One thought on “ಕಾವ್ಯಯಾನ”

Leave a Reply