Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಗಝಲ್ ವಿನಿ ಬೆಂಗಳೂರು ಪ್ರಕೃತಿಯೇ ತಾನಾಗಿ ಸೌಂದರ್ಯ ತುಂಬಿದವಳು ತಾಯಿ ಭೂಮಿಯೇ ಅವಳಾಗಿ ಭಾರವನು ಹೊತ್ತವಳು ತಾಯಿ ಸಾವಿಗೂ ಹೆದರದೆ ಹೆರಿಗೆ ನೋವ ನುಂಗುವಳು ತಾಯಿ ಸಾವಿರ ಕನಸು ಕಂಡು ಮಗುವಿನ ಒಳಿತ ಬಯಸುವವಳು ತಾಯಿ ಭವಿಷ್ಯದ ಉತ್ತಮ ವ್ಯಕ್ತಿಯಾಗಲು ಶ್ರಮಿಸುವಳು ತಾಯಿ ಅಕ್ಷರೆ ಪ್ರೀತಿ ಮಮತೆಯ ಧಾರೆ ಎರೆದು ಬೆಳೆಸುವಳು ತಾಯಿ ತನ್ನೆಲ್ಲ ನೋವ ಮರೆತು ನಗುತ ಮುದ್ದು ಮಾಡುವವಳು ತಾಯಿ ಕಷ್ಟವೆಲ್ಲವನು ತಾನೆ ಅನುಭವಿಸುತ ತನ್ನ ಕುಡಿಗಾಗಿ ದುಡಿದವಳು ತಾಯಿ ತನ್ನೆಲ್ಲ ವಾತ್ಸಲ್ಯವನು ಉಣಿಸಿ […]

ಕಾವ್ಯಯಾನ

ವೈರಾಣು-ಪರಮಾಣು ಉಮೇಶ್ ಮುನವಳ್ಳಿ ಕೆಟ್ಟು ಕೆರವಾದ ಮನಸ್ಥಿತಿಯ ಗುಟ್ಟು, ರಟ್ಟು! ಜತನಮಾಡಿ ಇಟ್ಟಿದ್ದು, ಹಿಡಿ ಹಿಟ್ಟು, ಹಾಲು, ಔಷಧಿ, ಸೋಪು, ಸ್ಯಾನಿಟೈಸರು. ಬೀದಿಗೆ ಬಿದ್ದಿದ್ದು, ಲಿಪ್‌ಸ್ಟಿಕ್, ಪೌಡರ, ಪೇಂಟು, ಫ್ರೆಶ್ನರು! ಗುಡಿ-ಗುಂಡಾರ, ಮಸೀದಿ, ಚರ್ಚು ಸ್ಥಬ್ದ ಅರಿವಿನ ಆಸ್ಧಾನದಲಿ ಮನಸ್ಸು ನಿಶ್ಶಬ್ದ! ತಪ್ಪಿನ ಅರಿವು, ಒಪ್ಪಿನ ಹುಡುಕಾಟ, ಒಪ್ಪತ್ತಿನ ಊಟದ ಹೊಂದಾಣಿಕೆ. ಬೆಳೆದವನ ಮಾಲು, ಮನೆ ಬಾಗಿಲಿಗೆ! ದಲ್ಲಾಳಿಗಳ ಗಲ್ಲಾಪೆಟ್ಟಿಗೆ ಲೂಟಿ. ದೂರದ ಪಯಣ, ದೂರ, ಒಬ್ಬರಿಗೊಬ್ಬರು ದೂರ ದೂರ. “ನಮ್ಮ ಹಳ್ಳಿ ಊರ ನಮಗ ಪಾಡ, […]

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಜುಲ್ ಕಾಫಿ಼ಯಾ ಗಜ಼ಲ್………….. ಜಂಜಾಟಗಳ ಒತ್ತಡವೇ ನಿಜಬದುಕೆಂದು ನೆಮ್ಮದಿಯನ್ನೇ ಮರೆತೆ ಅಜ್ಞಾನದ ಕತ್ತಲಕೂಪವೇ ಜಗತ್ತೆಂದು ಜ್ಞಾನಜ್ಯೋತಿಯನ್ನೇ ಮರೆತೆ ಎದುರಾದ ನೂರು ಸಂಕಷ್ಟಗಳು ತಾತ್ಕಾಲಿಕವೆಂಬ ಅರಿವು ಇರಬೇಕಿತ್ತು ನಿನ್ನ ದುಃಖ ವೇದನೆಯೇ ಎಲ್ಲಕಿಂತ ಮಿಗಿಲೆಂದು ನಗುವುದನ್ನೇ ಮರೆತೆ ದ್ವೇಷ ಮದ ಮತ್ಸರಗಳ ಜ್ವಾಲಾಮುಖಿ ಸುಡುವುದಿಲ್ಲವೇ ನಿನ್ನನ್ನು ? ಇತರರ ಅವನತಿಯಲ್ಲೇ ನಲಿವಿದೆಯೆಂದು ಪ್ರೀತಿಯನ್ನೇ ಮರೆತೆ ಮೂರು ದಿನದ ಬಾಳಿನಾಟದಿ ಯಾರೂ ಯಾವುದೂ ಶಾಶ್ವತವಲ್ಲ ಸ್ವಾರ್ಥ ಲಾಲಸೆಯಲ್ಲೇ ಏಳಿಗೆಯಿದೆಯೆಂದು ನಿಸ್ವಾರ್ಥವನ್ನೇ ಮರೆತೆ ಎಚ್ಚರಿಸಬೇಕಿತ್ತು ನಿನ್ನ ಮನಸ್ಸಾಕ್ಷಿ ಎಂದೂ […]

ಕಾವ್ಯಯಾನ

ನೀರೊಲೆಯ ಮೇಲೆ. ಶಶಿಕಲಾ ವೀ ಹುಡೇದ ನೀರೊಲೆಯ ಮೇಲೆ. ಸೀಗೆಯ ಹೊಗರು ಸುಡುಸುಡು ನೀರು ಬೆರಕೆಯ ಬೇಡುವ ಹೊತ್ತು ಸುಣ್ಣ ನುಂಗಿದ ಹೊಗೆಸುತ್ತಿದ ಗೋಡೆಗಳ ಮೇಲೆ ನೀರ ಹನಿಗಳದೇ ಚಿತ್ತಾರ ಯಾವ ಯುದ್ಧದ ಕತೆಯ ಹೇಳುತ್ತಾವೋ ನೋಡುವ ಕಣ್ಣುಗಳಿಗೆ ಒಂದೊಂದು ರೀತಿಯ ಅರ್ಥ ಉಸಿರಾಡಲು ಒದ್ದಾಡುವ ಒಂದೇ ಒಂದು ಕಿಂಡಿಯ ಕುತ್ತಿಗೆಯ ಮಟ್ಟ ಧೂಳು ಮಸಿಯದೇ ಕಾರುಬಾರು ಹೆಸರೂ ನೆನಪಿರದ ಮುತ್ತಜ್ಜ ಬುನಾದಿ ಹಾಕಿದ ಈ ಬಚ್ಚಲು ಮನೆ ಯಾವ ವಾರಸುದಾರನ ಅವಧಿಗೆ ಏನನು ಸುಖ ಕಂಡಿದೆಯೋ […]

ಕಾವ್ಯಯಾನ

ಪ್ರೇಮದ ಹನಿಗಳು ನಾಗರಾಜ ಹರಪನಹಳ್ಳಿ ಬಿಕೋ ಎನ್ನುವ ರಸ್ತೆಗಳ ಮಧ್ಯೆಯೂ ನಿನ್ನದೇ ಧ್ಯಾನ ಎಂದಾದರೆ ಅದೇ ಪ್ರೀತಿ ; ಮತ್ತಿನ್ನೇನು ಅಲ್ಲ… ಜನ ಮನೆ ಸೇರಿದರು ಸರ್ಕಾರದ ಆದೇಶದಿಂದ ಪ್ರೀತಿಯ ಬಂಧಿಸುವುದು ಕಷ್ಟ ಉರಿ ಬಿಸಿಲಲ್ಲೂ ಮೈತುಂಬ ಹೂ ಹೊದ್ದ ಮರ ನೆರಳ ಚೆಲ್ಲಿ ವಿರಹಿಗೆ ಸಾಂತ್ವಾನ ಹೇಳಿತು ನನ್ನ ಕೂಗಾಟ, ಚರ್ಚೆ ವಾದ ಎಲ್ಲವೂ ನಿನಗಾಗಿ ಪ್ರೇಮ ಹುಲುಮಾನವರಿಗೆ ಅರ್ಥವಾಗುವುದಿಲ್ಲ ದೂರದಿಂದ ಸಂತೈಸುವ ನೀನು ನನ್ನ ತಾಯಿ ಪ್ರೇಮಿ, ಕಡು ವ್ಯಾಮೋಹಿ ಕೊಂಚ ಅಸಮಧಾನಿ ಸಹಜ […]

ಕಾವ್ಯಯಾನ

ಭ್ರೂಣಹತ್ಯೆ ಶಾಲಿನಿ ಆರ್. ಕನಸುಗಳು ಹೌ ಹಾರಿವೆ ನಾ ಬರುವ ಮೊದಲೆ ಅಮ್ಮಾ , ಬಾಯಿಯಿರದ ನಾ’ ನಿರಪರಾಧಿನೆ ಕಣೆ ! ಮನದ ಭಾವನೆಗಳು ಒಡಲಲಿಳಿದು ಒಡಮೂಡಿದಾಗ ಹೊಡೆತಗಳ ಸವಿ‌ ತಿನಿಸು, ಚುಚ್ಚು ಮಾತುಗಳಾರತಿಗೆ, ಭಾವಗಳ ಬಸಿರಲೆ, ನನ್ನಿರುವು ಕಮರಿ ಕುಸಿದು ಹೋಯಿತು, ಕಥೆ ಮುಗಿದ ನನ್ನ ವ್ಯಥೆಗೆ ಅಂಕಣ ಪರದೆ ಜಾರಿತು, ರಕ್ಷಿಸುವ ಕೈಗಳಿಗೆ ಕೊಳ ತೊಡಿಸಿದ ರಾಕ್ಷಸರು, ನೋಡುವ ಹೃದಯಗಳು ಕೆಲವು ಚೀತ್ಕರಿಸಲರಿಯದ ಮನಗಳು ಹಲವು, ಬಾಯಿ‌ ಇರುವ ಮೂಕರನೇಕರ ನಡುವೆ ,ನತದೃಷ್ಟೆ ನಾನಮ್ಮ! […]

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಎಷ್ಟೊಂದು ಕನಸುಗಳು ನಿನ್ನ ತಲೆಯಲಿ ಕುಂತಿವೆ ಅಮ್ಮಾ ನಾಳೆ ಬಿದ್ದು ಹೋಗುವ ಸೂರಿನೊಳಗೆ ನಿಂತಿವೆ ಅಮ್ಮಾ ಹಕ್ಕಳೆ ಉದುರಿದ ಗೋಡೆ ಇಂದೋ ನಾಳೆ ಬಿಳಲಿದೆ ಎಲ್ಲ ಚಿಂತೆಗಳನ್ನು ಗಂಟು ಕಟ್ಟಿ ಕುಳಿತಿರುವೆ ಅಮ್ಮಾ ಗೆದ್ದಿಲು ಹಿಡಿದ ಬಾಗಿಲು ಇಂದೋ ಎಂದೋ ಕಿತ್ತು ಹೋಗಲಿದೆ ನಿನ್ನೊಳಗೆ ಎಷ್ಟು ಕನಸುಗಳ ತುಂಬಿ ಕೊಂಡಿರುವೆ ಅಮ್ಮಾ ಇಂದು ನಾಳೆಗಳ ಹಂಗಿಗಂಜದೆ ಗಂಜಿಯ ಚಿಂತೆ ಬಿಟ್ಟು ಹೋಗಿದೆ ಪುಸ್ತಕದೊಳು ನೀ ಮುಳುಗಿ ಈಜಾಡುತ್ತ ಸಾಗುತ್ತಿರುವೆ ಅಮ್ಮಾ ಬಡತನ ಸಿರಿತನದ […]

ಕಾವ್ಯಯಾನ

ನನ್ನೊಳಗಿನ ನೀನು ದೀಪಾ ಗೋನಾಳ ಏನೋ ಹೇಳಬೇಕಿತ್ತು ಹೇಳುವುದು ಬೆಟ್ಟದಷ್ಟಿತ್ತು ಸಂತಸದ ಮೂಟೆ‌ಹೊತ್ತು ನಿನ್ನ ಬಾಗಿಲು ತಟ್ಟಿದೆ ನೂಕಿಕೊಂಡು ರಭಸವಾಗಿ ಒಳನುಗ್ಗಿದೆ, ಅವಸರ ಸಲ್ಲದು ನಿಧಾನ ಎಂದವನ ಧ್ವನಿಯಲ್ಲಿ ಕೋಪ ಮಿಶ್ರಿತ ಪ್ರೀತಿಯಿತ್ತು ಇನ್ನೇನು ಎಲ್ಲ ಹೇಳಿ ಗೆಲುವ ಹಂಚಿ ತೇಗಬೇಕು ಮಾತಿನ ನಡುವಿನ ಅಂತರದಲ್ಲಿ ಅವಾಂತರವೆದ್ದಿತು ಹೋಗು ಇನ್ನೊಮ್ಮೆ ಹುಡುಕಿ ತಾ ಎಂದಿ, ಬಂದೆ, ತಿರುವಿನಲ್ಲಿ ನಿಂತು ಬಿಕ್ಕಳಿಸಿ ತಂದ ಮೂಟೆಯ ತಲೆಯಲ್ಲೆ ಉಳಿಸಿ ಹೊರಟೆ, ಎಲ್ಲಿಗೆ!? ನನ್ನ ಜೀವ ತಲ್ಲಣಿಸುತ್ತಿತ್ತು ಹಿಡಿ ಮಾತು ಹುಡಿಯಾಗಿ […]

ಕಾವ್ಯಯಾನ

ನೀನೆಂದರೆ ಮೋಹನ್ ಗೌಡ ಹೆಗ್ರೆ ನೀನೆಂದರೆ ಬರಿ ಬೆಳಕಲ್ಲ ಕುರುಡು ಕತ್ತಲೆಯ ಒಳಗೆ ಮುಳ್ಳು ಚುಚ್ಚಿದ ಕಾಲಿನ ನೋವ ಗುರುತಿಸುವ ಮಹಾಮಾತೆ ಜಗದ ತದ್ವಿರುದ್ಧಗಳ ಸಮದೂಗಿಸಿ, ಅಳುವ ಕಣ್ಣೀರಿಗೆ ಬಾಡಿ ಹೋದ ಮೊಲೆಯ ತೊಟ್ಟಿಂದ ಅಮೃತವ ಉಣಬಡಿಸುವ ಕರುಣಾಳು…. ನೀನೆಂದರೆ ಬರಿ ಕಷ್ಟಜೀವಿಯಲ್ಲ ಕಷ್ಟಗಳನೆ ಅಂಜಿಸುವ ಮಹಾತಾಯಿ ಬರೆಯದೇ ಇರುವ ಖಾಲಿ ಪುಸ್ತಕದೊಳಗೆ ನಾನೊಬ್ಬನೇ ಓದಬಹುದಾದ ಕೋಟಿ ಕಥೆ ನಿನ್ನ ಮುಖ ಯಾವ ಚಟಕ್ಕೂ ಹಾತೊರೆಸದ ದಿಗ್ಬಂಧನದ ಮಹಾ ಮಂಟಪ ಸಹಸ್ರ ಸಂಕಷ್ಟಗಳ ಹಡೆದ ನಿನ್ನ ಪಾದದಲ್ಲೆ […]

ಕಾವ್ಯಯಾನ

ಜೀವ ಕನಿಷ್ಠವಲ್ಲ ಮದ್ದೂರು ಮಧುಸೂದನ ಕಾಣದ ಜೀವಿಯ ಕರಾಮತ್ತಿಗೆ ದೀಪದ ಹುಳುಗಳಾಂತದ ಭಾರತ ವಿಲವಿಲದ ನಡುವೆ ಸಾವಿನ ದಳ್ಳುರಿ ಧಗ ಧಗಿಸಿ ಆವರಿಸುತ್ತಿದ್ದರೂ ಧರ್ಮದ ಅಪೀಮು ತಿಂದವರ ದಿಗಿ ದಿಗಿ ನೃತ್ಯ ನಿಂತಿಲ್ಲ.. ಜಾತಿ ಮತ ಧರ್ಮಗಳ ಸ್ಪೃಶ್ಯ ಅಸ್ಪೃಶ್ಯಗಳ ಸೋಂಕಿತರ ನಡುವೆ ಅವರವರ ಧರ್ಮದ ಉಳುವಿಗೆ ವಿಧ ವಿಧ ಲೆಕ್ಕಚಾರದ ಅಸಹ್ಯವೂ ಸಹ್ಯ ಧರ್ಮದ ಕಿನ್ನರಿ ಮುಂದೆ ಸಾವು ತುಟ್ಟಿಯಲ್ಲ ಬಿಡಿ! ನನ್ನ ಒಂದು ಕಣ್ಣು ಕಿತ್ತಾದರೂ ವಿರೋಧಿಗಳ ಎರೆಡೆರಡು ಕಣ್ಣು ಕೀಳುವ ಕುಹಕ ಕೇಕೆ […]

Back To Top