ಕಾವ್ಯಯಾನ

ಗಝಲ್

Person Holding Baby's Foot

ಮರುಳಸಿದ್ದಪ್ಪ ದೊಡ್ಡಮನಿ

ಎಷ್ಟೊಂದು ಕನಸುಗಳು ನಿನ್ನ ತಲೆಯಲಿ ಕುಂತಿವೆ ಅಮ್ಮಾ
ನಾಳೆ ಬಿದ್ದು ಹೋಗುವ ಸೂರಿನೊಳಗೆ ನಿಂತಿವೆ ಅಮ್ಮಾ

ಹಕ್ಕಳೆ ಉದುರಿದ ಗೋಡೆ ಇಂದೋ ನಾಳೆ ಬಿಳಲಿದೆ
ಎಲ್ಲ ಚಿಂತೆಗಳನ್ನು ಗಂಟು ಕಟ್ಟಿ ಕುಳಿತಿರುವೆ ಅಮ್ಮಾ

ಗೆದ್ದಿಲು ಹಿಡಿದ ಬಾಗಿಲು ಇಂದೋ ಎಂದೋ ಕಿತ್ತು ಹೋಗಲಿದೆ
ನಿನ್ನೊಳಗೆ ಎಷ್ಟು ಕನಸುಗಳ ತುಂಬಿ ಕೊಂಡಿರುವೆ ಅಮ್ಮಾ

ಇಂದು ನಾಳೆಗಳ ಹಂಗಿಗಂಜದೆ ಗಂಜಿಯ ಚಿಂತೆ ಬಿಟ್ಟು ಹೋಗಿದೆ
ಪುಸ್ತಕದೊಳು ನೀ ಮುಳುಗಿ ಈಜಾಡುತ್ತ ಸಾಗುತ್ತಿರುವೆ ಅಮ್ಮಾ

ಬಡತನ ಸಿರಿತನದ ಹಂಗಿಲ್ಲ ಮರುಳನಿಗೆ ನಿನ್ನ ಹೊರತು
ನಿನ್ನೊಳಗೆ ಜ್ಞಾನ ನಿಧಿಯ ಹಂಬಲಕೆ ಮೆಟ್ಟು ಬಿಡದೆ ಧ್ಯಾನಿಸುತಿರುವೆ ಅಮ್ಮಾ

*******

Leave a Reply

Back To Top