ಭ್ರೂಣಹತ್ಯೆ
ಶಾಲಿನಿ ಆರ್.
ಕನಸುಗಳು ಹೌ ಹಾರಿವೆ
ನಾ ಬರುವ ಮೊದಲೆ
ಅಮ್ಮಾ ,
ಬಾಯಿಯಿರದ ನಾ’
ನಿರಪರಾಧಿನೆ ಕಣೆ !
ಮನದ ಭಾವನೆಗಳು
ಒಡಲಲಿಳಿದು ಒಡಮೂಡಿದಾಗ
ಹೊಡೆತಗಳ ಸವಿ ತಿನಿಸು,
ಚುಚ್ಚು ಮಾತುಗಳಾರತಿಗೆ,
ಭಾವಗಳ ಬಸಿರಲೆ, ನನ್ನಿರುವು
ಕಮರಿ ಕುಸಿದು ಹೋಯಿತು,
ಕಥೆ ಮುಗಿದ ನನ್ನ ವ್ಯಥೆಗೆ
ಅಂಕಣ ಪರದೆ ಜಾರಿತು,
ರಕ್ಷಿಸುವ ಕೈಗಳಿಗೆ
ಕೊಳ ತೊಡಿಸಿದ ರಾಕ್ಷಸರು,
ನೋಡುವ ಹೃದಯಗಳು ಕೆಲವು
ಚೀತ್ಕರಿಸಲರಿಯದ ಮನಗಳು ಹಲವು,
ಬಾಯಿ ಇರುವ ಮೂಕರನೇಕರ
ನಡುವೆ ,ನತದೃಷ್ಟೆ ನಾನಮ್ಮ!
ಅಮ್ಮಾ’ ನಿನ್ನಾರ್ಥನಾದ
ಅಡಗಿಹುದು ಇಲ್ಲಿ,
ಅಹಿಂಸತ್ವವ ಸಾರಿದ ನಾಡಲ್ಲಿ,
ನನ್ನಂಥ ನಿರಪರಾಧಿ ಕೂಸಿಗೆ ‘
ಭ್ರೂಣದಲಿರುವಾಗಲೆ
ಹೆಣ್ಣೆಂಬ ಅಪರಾಧಿ ಪಟ್ಟ …
********