ಜೀವ ಕನಿಷ್ಠವಲ್ಲ
ಮದ್ದೂರು ಮಧುಸೂದನ
ಕಾಣದ ಜೀವಿಯ ಕರಾಮತ್ತಿಗೆ
ದೀಪದ ಹುಳುಗಳಾಂತದ
ಭಾರತ ವಿಲವಿಲದ
ನಡುವೆ
ಸಾವಿನ ದಳ್ಳುರಿ
ಧಗ ಧಗಿಸಿ ಆವರಿಸುತ್ತಿದ್ದರೂ
ಧರ್ಮದ ಅಪೀಮು
ತಿಂದವರ ದಿಗಿ ದಿಗಿ ನೃತ್ಯ ನಿಂತಿಲ್ಲ..
ಜಾತಿ ಮತ ಧರ್ಮಗಳ
ಸ್ಪೃಶ್ಯ ಅಸ್ಪೃಶ್ಯಗಳ
ಸೋಂಕಿತರ ನಡುವೆ
ಅವರವರ ಧರ್ಮದ ಉಳುವಿಗೆ ವಿಧ ವಿಧ
ಲೆಕ್ಕಚಾರದ ಅಸಹ್ಯವೂ ಸಹ್ಯ
ಧರ್ಮದ ಕಿನ್ನರಿ ಮುಂದೆ
ಸಾವು ತುಟ್ಟಿಯಲ್ಲ ಬಿಡಿ!
ನನ್ನ ಒಂದು ಕಣ್ಣು
ಕಿತ್ತಾದರೂ ವಿರೋಧಿಗಳ
ಎರೆಡೆರಡು ಕಣ್ಣು ಕೀಳುವ ಕುಹಕ ಕೇಕೆ
ನಡುವೆ
ಜೀವವೂ ಕನಿಷ್ಠತಮ
ಎನ್ನುವುದೇ ಚೋದ್ಯ
***********************************