Category: ಕಾವ್ಯಯಾನ

ಕಾವ್ಯಯಾನ

 ಮನ್ಸೂರ್ ಮುಲ್ಕಿ ಮೋಡದ ಮಳೆ 

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ ಮೋಡದ ಮಳೆ ಕೋಗಿಲೆ ನೀನು ಹಾಡುವಾಗಮಾತುಗಳೆಲ್ಲ ಮೌನವುನವಿಲೇ ನೀನು ನಲಿಯುವಾಗರೆಪ್ಪೆಯು ಕೂಡ ಮುಚ್ಚದು. ಚಂದಿರನೇ ನೀನು ಕಾಣುವಾಗಸೂರ್ಯನು ಕೂಡ ನಾಚುವನುಬೆಳಕೆ ನೀನು ತೋರುವಾಗಕತ್ತಲೆ ಕೂಡ ಕರಗುವುದು. ಸರಸರ ಗಾಳಿಯು ಬೀಸುವಾಗತೇಲಿದ ಅನುಭವ ಆಗುವುದುಮೋಡದ ಮಳೆಯಲಿ ನೆನೆಯುವಾಗಕಿರುನಗೆ ಮನದಲಿ ಮೂಡುವುದು. ಸಂಜೆಯ ಸೂರ್ಯನು ಮುಳುಗುವಾಗಚುಕ್ಕಿಗಳೆಲ್ಲ ಹೊರಡುವುದುಲಂಗರು ಹಾಕಿದ ಹಡಗುಗಳೆಲ್ಲಪಳಪಳ ಹೊಳೆಯುತ  ತೇಲುವುದು.  ಮನ್ಸೂರ್ ಮುಲ್ಕಿ

ಅಮ್ಮು ರತನ್ ಶೆಟ್ಟಿ ಕವಿತೆ -ಸತ್ಯ

ಸನ್ಮಾರ್ಗದಲ್ಲಿ ನಡೆವವಗೆ
ಸಂಕಟವು ತಪ್ಪದು
ದುರುಳರ ಸುಳ್ಳಿಗೆ
ಉಳಿಗಾಲವಿರದು

ಸುಳ್ಳು ಸಿಹಿಯಾದರೂ
ಭಾದಕವು
ರುಚಿಸದ ಕಹಿಯಾದರೂ
ಸತ್ಯವೇ ನಿಜವು

ಭಾಧೆಗಳಲಿ ಬೆಂದವಗೆ
ಸಿಗಬಹುದು ಗೆಲುವು
ಮಿಥ್ಯದ ಮಾತುಗಳಿಗೆ
ಸಿಗದೆಂದಿಗೂ ವಿಜಯವು

ಮೊಸರಿನಲಿ ಕಲ್ಲು
ಹುಡುಕುವವರ ನಡುವೆ
ಬೇಸರಿಸದೇ ಅರ್ಥೈಸಿಕೊ
ತಪ್ಪುಗಳು ಸಹಜವೇ

ಸತ್ಯಮೇವ ಜಯತೆ
ಭಾರತೀಯರ ಮೂಲಮಂತ್ರ
ಸತ್ಯದ ಹಾದಿಯಲ್ಲೇ
ಪಡೆದೆವು ಸ್ವತಂತ್ರ

✍️ ಅಮ್ಮು ರತನ್ ಶೆಟ್ಟಿ

ಡಾ ಸಾವಿತ್ರಿ ಕಮಲಾಪೂರ-ಬದಲಾಗುವುದೇ ? ಸೃಷ್ಟಿ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಬದಲಾಗುವುದೇ ? ಸೃಷ್ಟಿ

ಎ. ಹೇಮಗಂಗಾ ಅವರ ಕವಿತೆ

ಆರದೇ ಉಳಿದ ಅಂತರಾಳದ ಬಾವುಗಳೆಷ್ಟೆಂದು ತಿಳಿಯದು ನಿನಗೆ
ಕಣ್ಣೀರಾಗಿ ದಿಂಬು ತೋಯಿಸಿದ ನೋವುಗಳೆಷ್ಟೆಂದು ತಿಳಿಯದು ನಿನಗೆ

Back To Top