ದೇವಿದಾಸ ನಾಯಕ ಕವಿತೆ- ಉಪೇಕ್ಷೆ

ಉದಯಾಚಲದ ಬಳಿ
ಉದಯಾದಿತ್ಯನ ಉಗಮ
ಉದಯಕಾಲದಲಿ ಕೇಳಿತು
ಉದಯರಾಗದ ಸರಿಗಮ

ಉದಯಾಸ್ತದ ಸಮಯ
ಉತ್ಸಾಹಭರಿತದಿ ಕಾದಿತ್ತು
ಉಷಾಳ ರಾಗಕೆ ಮನವು
ಉಭಯಸಂಕಟಕ್ಕೊಳಗಾಗಿತ್ತು

ಉತ್ಕಟವಾಗಿ ಹೃದಯ ಪ್ರೀತಿಸಲು
ಉದಾಸೀನತೆ ತೋರಿದಳು ಆರಂಭದಲ್ಲಿ
ಉಸಿರನ್ನು ತುಂಬಿ ಅನಂತರ
ಉಲ್ಲಾಸದಿಂದ ಬೆರೆತಳು ಪ್ರೇಮದಲ್ಲಿ

ಉಪಲಾಲಸೆ ಮಾಡುವುದು ಬಿಟ್ಟು
ಉತ್ಪ್ರೇಕ್ಷೆ ಮಾಡಿ ನಮ್ಮೀ ಪ್ರೀತಿಗೆ
ಉಪೇಕ್ಷೆಯಿಂದ ದೂರಾದವಳು
ಉಸಾಬರಿ ಬೇಡವೆಂದು ಹೊರಟಳೆಲ್ಲಿಗೆ?

ಉದ್ವೇಗ ಒಂದೇ ಈಗ ನನ್ನೊಳು
ಉಬ್ಬರಿತಗೊಂಡ ಈ ಅಂತರಂಗ
ಉತ್ತರ ಈವರೆಗೂ ಸಿಗದೆ
ಉಜ್ವಲತೆ ಇರದೆ ಇಂದು ಉತ್ಸಾಹಭಂಗ

ಪದಗಳ ಅರ್ಥ
ಉತ್ಕಟ..ಭಯಂಕರ ಉದಾಸೀನತೆ..ತಿರಸ್ಕಾರ
ಉಪಲಾಲಸೆ..ಮುದ್ದುಮಾಡುವುದು. ಉತ್ಪ್ರೇಕ್ಷೆ.. ಅಲಕ್ಷ್ಯ. ಉಪೇಕ್ಷೆ.. ತಿರಸ್ಕಾರ. ಉದ್ವೇಗ… ದುಃಖ. ಉಬ್ಬರಿತ..ಅಧಿಕವಾದ ಇರಿತ.
ಉಜ್ವಲತೆ…ಪ್ರಕಾಶ. ಉತ್ಸಾಹ ಭಂಗ…ಹುರುಪು ಕಮ್ಮಿ


Leave a Reply

Back To Top