ಕಾವ್ಯ ಸಂಗಾತಿ
ಮಹಾಂತೇಶ ಕಮತ
ಮಗುವಿನ ನಗು ಹೂವಿನಂತೆ
ಜಾತಿ – ಗೀತಿ ಇಲ್ಲ ಅರಿವು
ಆಡುವುದರಲ್ಲೇ ಉಂಟು ನಿನ್ನ ಮನ !!
ಭೇದ ಭಾವ ಎಲ್ಲ ಮೀರಿ
ಸದಾ ನಗುತ್ತಿರುವೆ ಕ್ಷಣ ಕ್ಷಣ!!
ಬಿಳಿಯ ಕರಿಯ ಲೆಕ್ಕಿಸಲ್ಲ
ಆಡುವುದೊಂದೇ ನಿನ್ನ ಗುರಿ!!
ಊಟ ನಿದ್ದೀ ಬಿಟ್ಟು ಆಡುತ್ತೀಯಲ್ಲ
ಮನವ ತಟ್ಟಿ ಕೇಳು ಅದೆಷ್ಟು ಸರಿ?!!
ಏನು ಸೊಗಸು ನಿನ್ನ ಮನಸು
ಆಡಲು ಕರೆಯುವೆ ನಿನ್ನ ಬಳಗವನು!!
ತರುವೆ ತಿನಿಸು ನಿನಗಿಲ್ಲ ಮುನಿಸು
ಮೆಚ್ಚಬೇಕು ಹಂಚಿ ತಿನ್ನುವ ನಿನ್ನ ಗುಣವನು!!
ಅಳುತ್ತಿರುವೆ ಹೆತ್ತವರನು ಕಾಡಿ ಬೇಡಿ
ಹಠಮಾಡಿ ಅಳುವೆ ಬರೀ ಆ ಕ್ಷಣ!!
ನಗುತ್ತಿರುವೆ ಇವೆಲ್ಲವನು ಮೀರಿ
ಸದಾ ನಗು ನಗುತಾ ಗೆಲ್ಲುವೆ ಎಲ್ಲರ ಮನ!!
ಅದೆಷ್ಟು ಸೊಗಸು ಆ ನಿನ್ನ ನಗು
ಈಗತಾನೆ ಅರಳಿದ ಹೂವಿನಂತೆ!!
ನಿರ್ಮಲ ಮನಸು ನಿನ್ನಿಂದ ಸಲೀಸು
ಮುಡಿದರೂ ನಗುವ ಮಲ್ಲಿಗೆಯಂತೆ!!
ಮಹಾಂತೇಶ ಕಮತ