ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
ಬದಲಾಗುವುದೇ ? ಸೃಷ್ಟಿ
ಇದ್ದದ್ದು ಇದ್ದ ಹಾಗೇ ಇದೆ
ಅದೇ ಮಣ್ಣು ಗಾಳಿ ಬೆಳಕು
ಬದಲಾಗಿವೆ ಮನಗಳು
ದ್ವೇಷ ಮತ್ಸರದ ಬಿರುಗಾಳಿ
ಬೆಳಕಿಗೂ ಮಲೀನ ಮೈಲಿಗೆ
ಅವರವರದೇ ನ್ಯಾಯ ನೀತಿ
ಸತ್ತು ಹೋದ ಸಮತೆ ಪ್ರೀತಿ
ಎಂದೋ ಮಹಾತ್ಮರ ಜೊತೆಗೆ
ಸೇರಿವೆ ಮಣ್ಣು
ಇಗೋ ಇಲ್ಲಿ ಬದಲಾವಣೆ ಸಮಯ ಬದಲಾಗಲೇ ? ನನ್ನವರಿಗಾಗಿ
ಅಂದ ಚಂದವಿಲ್ಲದ ಬಾಹ್ಯ ಅಲಂಕಾರಕ್ಕೆ
ಅರಿಯುವ ಮೇಲೊಬ್ಬ
ಅಪ್ಪಿ ಮುನ್ನಡೆಸುವ
ನನ್ನದೇ ಸೃಷ್ಟಿ ಜಗತ್ತೆಂದು
ಹಿಡಿದಿರುವ ಹಿಡಿಯಷ್ಟು
ಪ್ರೀತಿ ಕೊಟ್ಟು
ಹುಡುಕುವ ನೂರೆಂಟು
ಸಮಸ್ಯೆಗಳ ಸುಳಿಯಲಿ ಸುಲಿಕಿಕೊಂಡಿದೆ ಸೃಷ್ಟಿ
ಬರುವೆಯಾ ? ಒಡೆಯಾ
.ನಾಳೆಯ ದಿನಗಳಿಗಾಗಿ
ಸುಂದರ ಚಿತ್ತಾರದ
ನಗು ಬೆಳಕಿಗೆ
ಗೆಲುವಾಗಿ ನೆರಳಾಗಿ
ನಿಲ್ಲುವೆಯಾ ? ಖಂಡಿತ ಇಲ್ಲ ಬಿಡು
ನಂಗೊತ್ತು ಬೆಳಕಿಗೂ ಮೈಲಿಗೆ
ಬೆಳೆಯುವ ಸಿರಿದೇವಿಗೆ ಅಲಂಕಾರ
ಬದಲಾಗಲೇ ಬೇಕು ಬೂತ ಮರೆತು
ಭವಿಷ್ಯತ್ತಿಗಾಗಿ
ಇದಿರು ಕಾಯುವೆ
ನೆರಳ ಬಯಸಿ
ಬರೀ ಸೃಷ್ಟಿಗಾಗಿ
ಬರೀ ಬದಲಾವಣೆಗಾಗಿ ಮಾತ್ರ …
ಡಾ ಸಾವಿತ್ರಿ ಕಮಲಾಪೂರ
Super