ಮನ್ಸೂರ್ ಮುಲ್ಕಿ ಮೋಡದ ಮಳೆ 

ಕೋಗಿಲೆ ನೀನು ಹಾಡುವಾಗ
ಮಾತುಗಳೆಲ್ಲ ಮೌನವು
ನವಿಲೇ ನೀನು ನಲಿಯುವಾಗ
ರೆಪ್ಪೆಯು ಕೂಡ ಮುಚ್ಚದು.

ಚಂದಿರನೇ ನೀನು ಕಾಣುವಾಗ
ಸೂರ್ಯನು ಕೂಡ ನಾಚುವನು
ಬೆಳಕೆ ನೀನು ತೋರುವಾಗ
ಕತ್ತಲೆ ಕೂಡ ಕರಗುವುದು.

ಸರಸರ ಗಾಳಿಯು ಬೀಸುವಾಗ
ತೇಲಿದ ಅನುಭವ ಆಗುವುದು
ಮೋಡದ ಮಳೆಯಲಿ ನೆನೆಯುವಾಗ
ಕಿರುನಗೆ ಮನದಲಿ ಮೂಡುವುದು.

ಸಂಜೆಯ ಸೂರ್ಯನು ಮುಳುಗುವಾಗ
ಚುಕ್ಕಿಗಳೆಲ್ಲ ಹೊರಡುವುದು
ಲಂಗರು ಹಾಕಿದ ಹಡಗುಗಳೆಲ್ಲ
ಪಳಪಳ ಹೊಳೆಯುತ  ತೇಲುವುದು.


Leave a Reply