ಕಾವ್ಯಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಗುಟ್ಟು
ದಾಂಪತ್ಯದ ಸುವರ್ಣ ಮಹೋತ್ಸವ
ಆಚರಿಸಿಕೊಂಡ ದಂಪತಿಗಳಿಗೆ
ಮೊಮ್ಮಕ್ಕಳು ಕೇಳಿದರು
ಇಷ್ಟು ವರ್ಷದ ಸುಖಮಯ ದಾಂಪತ್ಯದ
ಗುಟ್ಟೇನು ಎಂದು??
ಪರಸ್ಪರ ಮುಖ ನೋಡಿ ನಕ್ಕು
ನಾನವಳ ಗೆಲ್ಲಿಸಬಯಸಿದೆ
ಅವಳು ನನ್ನ ಸೋಲಗೊಡಲಿಲ್ಲ
ಪ್ರೀತಿಯಿಂದ ಸವಿದೆವು ಬಾಳ ಬುತ್ತಿಯ
ಜೊತೆಯಾಗಿ ಸಾಗಿದೆವು ಬಾಳ ಬಟ್ಟೆಯಲಿ
ಪರಸ್ಪರ ಕೊಟ್ಟು ಪಡೆದೆವು ಗೌರವಾದರ
ಒಬ್ಬರಿಗೊಬ್ಬರು ಸೋತೆವು
ಆದ್ದರಿಂದಲೇ ಬದುಕಿನಲ್ಲಿ ಗೆದ್ದೆವು
ಎಂದು ಉತ್ತರವಿತ್ತರು ಆ ದಂಪತಿಗಳು
ವೀಣಾ ಹೇಮಂತ್ ಗೌಡ ಪಾಟೀಲ್
ಸೋಲಬೇಕು ಒಬ್ಬರಿಗೊಬ್ಬರು
ನಿಸ್ವಾರ್ಥದಿಂದ
ಸುಖ ಸಂಸಾರಕ್ಕೆ ಮೊದಲ ಸೂತ್ರ
ಬಹಳ ಸತ್ಯವಾದ ವಿಚಾರ.. ಸೊಗಸಾಗಿ ಮೂಡಿದೆ