ಕಾವ್ಯಯಾನ
ನಾಲಿಗೆ ಕತ್ತರಿಸಿ ನಡೆದವರು ಜಹಾನ್ ಆರಾ ದೂರ ವಿಮಾನದಿಂದ ಹಾರಿ ಬಂದವರು ತಂದ ಆಧುನಿಕತೆಯ ಭಾರವನ್ನು ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ ಈಗ ಕಾಲುಗಳು ಸೋತಿವೆ ತಲುಪುವ ಊರು ಇನ್ನೂ ಬಹು ದೂರ ದುಡಿದು ತಿಂದ ದೇಹ ದಾರಿಯುದ್ಧಕ್ಕೂ ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು ಮೇಲೆ ಕುಳಿತವನು ಆಡಿಸಿದಂತೆ ದೀಪವು ಹಚ್ಚಿದ್ದೇವೆ ನಮ್ಮ ರಕುತ ಬಸೆದು ಜಾಗಟೆಯೂ ಬಾರಿಸಿದ್ದೇವೆ ಖಾಲಿ ಹೊಟ್ಟೆ ಬಡಿದು ಹಗಲು-ರಾತ್ರಿ ಬಿಸಿಲು ಹಸಿವು ಯಾರ ಮಾತು ಕಿವಿಗೆ ಬೀಳಲಿಲ್ಲ ನಿಮ್ಮ ಆಶಾದಾಯಕತೆಯ ಹೊರತು […]
ಕಾವ್ಯಯಾನ
ಜೀವನಕ್ಕೊಂದು ಕ್ಲಾಸ್ ಶೀಲಾ ಭಂಡಾರ್ಕರ್ ನಾನೊಂದು ಹೆಜ್ಜೆ ಇಡುವುದರಲ್ಲಿ..ಸಾಗುತ್ತದೆ. ನಾಲ್ಕು ಹೆಜ್ಜೆ ಮುಂದೆ ನನ್ನ ಜೀವನ. ಪುನಃ ನನ್ನ ಒಂದು ಹೆಜ್ಜೆಗೆ ಅದು ಮತ್ತೆ ನಾಲಕ್ಕು. ಆದರೂ ನಗುತ್ತಲೇ ಇದ್ದ ನನ್ನ ನೋಡಿ. ಕೇಳಿತೊಮ್ಮೆ ನನ್ನದೇ ಮನಸ್ಸು. ನಗುತ್ತಲೇ ಇರುವಿಯಲ್ಲ.. ಬದುಕೇ ನಿನ್ನಿಂದ ಬಲು ಮುಂದೆ ಸಾಗಿದ್ದರೂ..!! ನಾನಂದೆ.. ಎಷ್ಟು ವೇಗವಾಗಿ ಸಾಗಿದರೂ ಇದ್ದೇ ಇದೆಯಲ್ಲ ಮುಂದೆ ಗಡಿ.. ಅಲ್ಲಿಂದ ಇಡಲಾದೀತೆ ಒಂದೇ ಒಂದು ಅಡಿ. ಅಲ್ಲಿ ನಿಂತು ಕಾಯುತ್ತಿರಲಿ. ತಲುಪುತ್ತೇನೆ ನಾನು ನನ್ನದೇ ವೇಗದಲ್ಲಿ ನನ್ನದೇ […]
ಕಾವ್ಯಯಾನ
ಗಝಲ್ ತೇಜಾವತಿ ಹೆಚ್.ಡಿ. ನಿನ್ನ ಬಿಟ್ಟು ನಾನು ಬಹುದೂರ ಬಂದಿರುವೆನು ಗೆಳೆಯ ನೀನು ಅತ್ತು ಕೂಗಿದರೂ ಕೇಳಿಸದಾಗಿದೆ ನನಗೀಗ ಗೆಳೆಯ ಇಷ್ಟು ದಿನ ಪ್ರೀತಿಯ ಭ್ರಮಿಸಿ ಕನವರಿಸಿ ನಿತ್ರಾಣವಾಗಿರುವೆನು ನಾನು ಮನವೀಗ ಅರಸಿಬಂದರು ಮರುನೋಡದೆ ಒಪ್ಪಿಕೊಳ್ಳದಾಗಿದೆ ಗೆಳೆಯ ಬಿಸಿಲ್ಗುದುರೆಯೇರಿ ಮೋಹದ ಓಣಿಯ ಜೀವಜಲಕ್ಕಾಗಿ ಓಡಿದೆ ನಾನು ಹೆಜ್ಜೆಗಳು ಬಸವಳಿದು ಕಣ್ಣರಳಿಸಲಾರದೆ ಕಳೆಗುಂದಿದೆ ಗೆಳೆಯ ಘಮಭರಿತ ಸುಮವೀಗ ನಿರ್ವಾತಕ್ಕೆ ಸಿಲುಕಿ ಕಠಿಣ ಶಿಲೆಯಾಗಿ ಬದಲಾಗಿದೆ ಕ್ರಿಯೆಗೆ ಪ್ರತಿಕ್ರಿಯಿಸುವ ಸೂಕ್ಷ್ಮ ಸಂವೇದನೆಗಳ ಕಳೆದುಕೊಂಡಿದೆ ಗೆಳೆಯ ನೀನೀಗ ಒಲವ ಅಮೃತಧಾರೆಯನ್ನೇ ಸ್ಪುರಿಸಿದರೂ […]
ಕಾವ್ಯಯಾನ
ನಿರುಪದ್ರವಿ ವಸುಂಧರಾ ಕದಲೂರು ಗಿಡಗಂಟಿ ಬಳಿ ಹೂ ಕೊಯ್ಯಲು ಹೋದೆ; ಮೈ ಮೇಲೆ ಕಪ್ಪು ಇರುವೆ ಹತ್ತಿದೆ. ಅದು ಹಾದಿ ತಪ್ಪಿತೆ ಅಥವಾ ನಾನು ತಪ್ಪಿದೆನೆ ಬೆರಳ ಬೆಟ್ಟಗುಡ್ಡ ಏರಿಳಿದು, ಅಂಗೈ ರೇಖೆ ಅಳೆದು, ಸರಸರಾ ಸರಸರಾ ಸಂಚರಿಸಿತು ಸಾವಧಾನವೇ ಇಲ್ಲ ಸರಸರಾ ಸರಸರಾ.. ನೋಡುತಿದ್ದೆ ಕಂಗೆಟ್ಟದ್ದು ಯಾರು ಭುಜದ ಮೇಲೆ; ಹಣೆ, ಮೂಗು, ಕೆನ್ನೆ ಮೇಲೆಲ್ಲಾ ಹರಿದಾಡಿತು ಸರಸರಾ ಸರಾಸರಾ.. ಈ ಮೈ, ಈ ಜೀವವುಳ್ಳ ನನ್ನನ್ನು ಹೊತ್ತ ಮೈ ; ಬಲು ಬಂಜರೆನಿಸಿತೇನು ಎದೆಗಿಳಿಯಲಿಲ್ಲ; […]
ಕಾವ್ಯಯಾನ
ಅಯ್ಯೋ… ಸಂತೇಬೆನ್ನೂರು ಫೈಜ್ನಾಟ್ರಾಜ್ ಮುರಿದು ಬಿಟ್ಟಿರಾ…ಛೆ..ಬಿಟ್ಟಿದ್ದರೆ ನೆಲದ ಮೇಲೆ ಆಕಾಶ ನೋಡ್ತಾ ನಾಲ್ಕು ದಿನ ಹೇಗೋ ಬಾಳುತ್ತಿತ್ತು ಅಯ್ಯೋ ಹರಿದು ಹಾಕಿದಿರಾ…ಛೆ ಮನವರಳೋ ನಾಲ್ಕಕ್ಷರ ಬರೆದು ಹಾಕಿದ್ದರೆ ಸಾಕಿತ್ತು ಕಿತ್ತೇಕೆ ಎಸೆದಿರಿ…ಛೆ ಮಳೆ ಬಂದಿದ್ದರೆ ಮೈ ಮುರಿದು ಚಿಗುರುತ್ತಿತ್ತೇನೋ ಪಾಪ ಏನಂದಿರಿ….ಛೆ ತುಸು ಕಾದು ನೋಡಿದ್ದರೆ ನಿಮ್ಮಂತೆಯೇ ಇರುತ್ತಿದ್ದರೋ…ಏನೋ… ಮುಖ ತಿರುವಿ ಬಿಟ್ಟಿರಾ… ಛೆ ನಗ್ತಾ ಒಂದೆರಡು ಮಾತಾಡಿದ್ದರೆ ಹೂ ನಗೆ ಕೊಡುತ್ತಿದ್ದರೇನೋ….! ಬಾಗಿಲು ಹಾಕಿಯೇ ಬಿಟ್ಟಿರಾ…ಛೆ ಒಲವ ಒಲವಿಂದ ನೋಡದೇ ಹಳದಿ ಕಣ್ಣೇಕೆ ಬಿಟ್ಟಿರಿ ಪಾಪ […]
ಕಾವ್ಯಯಾನ
ಹಸಿರು ಕುದುರೆ ನೀ.ಶ್ರೀಶೈಲ ಹುಲ್ಲೂರು ಹಸಿರು ಕುದುರೆ ರಾಜನೊಂದು ಸಂಜೆ ತನ್ನ ರಾಜ ತೋಟದಲ್ಲಿ ಬರಲು ಮೋಜುಗರೆವ ಹಕ್ಕಿಯುಲಿಗೆ ಸೋತುಹೋದನು ಹಚ್ಚಹಸಿರು ಕಂಡ ತಾನು ಮೆಚ್ಚಿ ಹರುಷ ಸೂಸುತಿರಲು ಹುಚ್ಚು ಮನದಿ ಆಸೆಯೊಂದು ಹುಟ್ಟಿಕೊಂಡಿತು ಹಸಿರು ಸಿರಿಯ ನಡುವೆ ನಲಿದು ಹೊಸತನೊಂದ ಯೋಚಿಸುತಲಿ ಹಸಿರು ಕುದುರೆ ಏರೊ ಕನಸು ತುಂಬಿಕೊಂಡನು ಬೀರಬಲ್ಲನನ್ನು ಕರೆದು ಕೊರೆವ ಆಸೆ ಹೇಳಿಕೊಂಡು ವಾರದಲ್ಲಿ ಹಸಿರು ಕುದುರೆ ತರಲು ಹೇಳಿದ ಉಕ್ಕಿಬರುವ ನಗೆಯ ತಡೆದು ಅಕ್ಕರೆಯಲಿ ಒಪ್ಪಿಕೊಂಡು ಸಿಕ್ಕ ಸಿಕ್ಕ ಊರಿನಲ್ಲಿ ಸುಮ್ಮನಲೆಯತೊಡಗಿದ […]
ಕಾವ್ಯಯಾನ
ನನ್ನೂರಲಿ ಏನಿದೆ….? ರೇಖಾವಿ.ಕಂಪ್ಲಿ ನನ್ನೂರಲಿ ಏನಿದೆ….? (ನನ್ನದು ಪ್ರಾಸವಿಲ್ಲದ ಹಾಡು) ನಾಲ್ಕಾರು ಪುಡಿಗಾಸು ಮಾಡಿಕೊಳ್ಳುವ ನನ್ನೂರಲಿ ಏನಿದೆ ಎಂದೆನುತ ಊರಕೇರಿ ಬಿಟ್ಟು ದೂರದೂರಿಗೆ ಪಯಣ ಬೆಳಸಿದರು ನನ್ನನ್ವ ನನ್ನಪ್ಪ ತಮ್ಮನೊಂದಿಗೆ……… ಮಹಾನಗರದಲಿ ಅಲ್ಲೊಂದು ಮೇಲ್ಚಾವಣಿ ಇಲ್ಲದ ಗುಡಾರದಲ್ಲಿ ಬೀದಿ ಬದಿಯ ಒಲೆಯಲಿ ರೊಟ್ಟಿ ತಟ್ಟಿ ನನ್ನನ್ವ ಪುಡಿಗಾಸು ದುಡಿದು ಬರುವ ನನ್ನಪ್ಪನಿಗಾಗಿ ಕಾದು ಕುಳಿತಳು ತಮ್ಮನೊಂದಿಗೆ… ಅದಾವ ಮಸಣದ ಕರೆಯೊ ತಿಳಿಯೆ ನನ್ನಪ್ಪನ ಕೂಗಿ ಕರೆಯಿತು ಬಾರದೂರಿಗೆ ಕರೋನಾ ಎನ್ನುವ ರೋಗದ ರೂಪದಲಿ ತಪ್ಪಿತಸ್ಥನಂತು ಖಂಡಿತ ಅಲ್ಲ […]
ಗಝಲ್
ಗಝಲ್ ರತ್ನರಾಯಮಲ್ಲ ಧ್ಯಾನ ಮಾಡಲು ಜಾಗ ಹುಡುಕುತಿರುವೆ ಶರಣ ನನ್ನ ಹೃದಯವನ್ನೇ ಸ್ವಚ್ಛ ಮಾಡುತಿರುವೆ ಶರಣ ಪಡೆದುಕೊಳ್ಳಲು ಹತ್ತು ಹಲವಾರು ದಾರಿಗಳಿವೆ ಇಲ್ಲಿ ಕಳೆದುಕೊಳ್ಳಲು ದಾರಿಯನ್ನು ಅರಸುತಿರುವೆ ಶರಣ ಬದುಕುತಿದ್ದೇವೆ ಬಣ್ಣ ಬಣ್ಣದ ಮನಸ್ಸುಗಳೊಂದಿಗೆ ಕನಸುಗಳೊಂದಿಗೆ ಸಾಗಲು ಹೆಣಗುತಿರುವೆ ಶರಣ ಭೋಗದ ಗರ್ಭಗುಡಿ ಚಂಚಲಗೊಳಿಸುವುದೇ ಹೆಚ್ಚು ಕಾನನದ ಗುಹೆಗಳಿಂದ ಹಿಂತಿರುಗುತಿರುವೆ ಶರಣ ಸಂಸಾರದಿ ಓಡಿ ಹೋಗವುದು ಸಾಧನೆಯಲ್ಲ ‘ಮಲ್ಲಿ’ ಜೀವನದ ರಂಗಭೂಮಿಯಲ್ಲಿ ನಟಿಸುತಿರುವೆ ಶರಣ
ಕಾವ್ಯಯಾನ
ತೋರಣ ಕಟ್ಟುವೆವು ಸುಜಾತ ಗುಪ್ತ ಜಗನ್ನಾಥನು ಜೊತೆ ನಿವಸಿಸಿ ನಮ್ಮನ್ನು ಕಾಯಲು ಅನವರತ ಹೃದಯದ ಭಾವಕೆ ಮಾನವತಾ ತೋರಣ ಕಟ್ಟುವೆವು.. ಜಗದಂಬೆಯ ಮನ ಒಲಿಸಿ ಹಸನ್ಮುಖಿಯಾಗಿರಿಸಲು ಮನದ ದ್ವಾರಕೆ ನೀತಿಯ ತೋರಣ ಕಟ್ಟುವೆವು… ಬಾಳಲಿ ಹಿನ್ನಡೆಸುವ ಸೋಲಿನ ಸಾಲಿಗೆ ನಾವ್ ಚೇತನಾಪ್ರದ ಗೆವುವಿನ ತೋರಣ ಕಟ್ಟುವೆವು. ಕಂದನ ಖುಷಿಯ ಸಿರಿಗೆ ಹರಸುತ ಹರುಷದೆ ಮುತ್ತಂತ ತ್ಯಾಗದ ತೋರಣ ಕಟ್ಟುವಳಮ್ಮ ********
ಕಾವ್ಯಯಾನ
ಕೆಂಡ ಸಂಪಿಗೆ ರೇಮಾಸಂ ನೀರಾಡಿದೆ ಕಣ್ಣಲಿ ಮಂದಹಾಸೆ ಗಂಟಲುಬ್ಬಿದರು ನಸುನಗು ಮಾಸೆ ಸೆರಗಲಿ ಕೆಂಡವು ನಿಗಿನಿಗಿಸುತಿದೆ ಎದೆಯ ಕ್ಷೀರಧಾರೆ ಅಮೃತವಾಗಿದೆ/ ಭೇದಭಾವದ ನೊಗದಲಿ ಕಳೆದೆ ಬಾಲ್ಯ ಅಯ್ಯೋ ನೀನು ಮಹಿಳೆಯಂದು ಕೂಗಿದರು ರೆಕ್ಕೆಗಳನು ಕತ್ತರಿಸಿದ್ದು ಲಕ್ಷ್ಮಣರೇಖೆ ಹೊಸ್ತಿಲವು ಹೆಬ್ಬಾವಾಗಿದೆ/ ಧಾರೆಗೆ ಬಾಲ್ಯಕೆ ಮನೆಯರಡು ಬೆಳಗಿದರೂ ಅವಳು ಕೊರಡು ಜ್ಯೋತಿಯಾದರೂ ಚುಕ್ಕೆಯೆಂದರು ಅಡುಗೆ ಗಡುಗೆಗವಳನು ಮೀಸಲಿಟ್ಟರು/ ಹೊತ್ತು ಗರ್ಭದಿ ನವಮಾಸಗಳು ನೋವನುಂಗಿ ನಗುವ ಹರಡಿದಳು ಕುಲವಧುವಾಗಿ ಕುಲಜ್ಯೋತಿಯಾದಳು ಮರಣಶಯ್ಯೇನೇರುತ ಜೀವದಾನಿಯಾದಳು/ ಮೊಗ್ಗುಗಳು ಕಾಮಿಗಳ ಅಟ್ಟಹಾಸಕೆ ಬಲಿಯಾಗಿ ಹೊಸಕಿದ ಅನಾಗರಿಕ […]