ನಾಲಿಗೆ ಕತ್ತರಿಸಿ ನಡೆದವರು
ಜಹಾನ್ ಆರಾ
ದೂರ ವಿಮಾನದಿಂದ
ಹಾರಿ ಬಂದವರು ತಂದ
ಆಧುನಿಕತೆಯ ಭಾರವನ್ನು
ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ
ಈಗ ಕಾಲುಗಳು ಸೋತಿವೆ
ತಲುಪುವ ಊರು ಇನ್ನೂ ಬಹು ದೂರ
ದುಡಿದು ತಿಂದ ದೇಹ ದಾರಿಯುದ್ಧಕ್ಕೂ
ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು
ಮೇಲೆ ಕುಳಿತವನು ಆಡಿಸಿದಂತೆ
ದೀಪವು ಹಚ್ಚಿದ್ದೇವೆ
ನಮ್ಮ ರಕುತ ಬಸೆದು
ಜಾಗಟೆಯೂ ಬಾರಿಸಿದ್ದೇವೆ
ಖಾಲಿ ಹೊಟ್ಟೆ ಬಡಿದು
ಹಗಲು-ರಾತ್ರಿ ಬಿಸಿಲು ಹಸಿವು
ಯಾರ ಮಾತು ಕಿವಿಗೆ ಬೀಳಲಿಲ್ಲ
ನಿಮ್ಮ ಆಶಾದಾಯಕತೆಯ ಹೊರತು
ಊರಿನಲ್ಲಿ ತನ್ನವರು ಸತ್ತರು
ಜೊತೆಗೆ ನಡೆದವರು ಇಲ್ಲವಾದರು
ಕರಾಳತೆಯ ಕರಳು
ಯಾವ ವಯಸ್ಸಿಗೂ ಮಿಡಿಯಲಿಲ್ಲ
ಪ್ರಸವ ಬೇಗೆಯು ಸಹಿಸಿದೆವು
ಗರ್ಭವನ್ನು ಇಳಿಸಿ ನಡೆದೆವು
ಬಿಟ್ಟು ಬಂದ ಗೂಡು ಸೇರಲು
ಹಗಲಿರುಳು ನಡೆದೆವು
ಸೌಲಭ್ಯವಿದೆಯಂತೆ
ಮಾಗಿದ ಮಾವಿನಂತೆ
ನಮಗೆ ಗೊಟ್ಟೆಯಾದರು ಸಿಕ್ಕಿದರೆ
ಚೀಪಿ ನಾವು ತಿಂದಷ್ಟೇ ಸುಖಿಸುವೆವು
ನಡೆನಡೆದು ಸೊರಗಿದ ಚಪ್ಪಲಿಗಳು
ನಮ್ಮ ಮೇಲೆ ವಿರಸ ಹಾಡುವೆ
ಇನ್ನೂ ಪಾದದ ಚರ್ಮಕ್ಕೆ
ಹೊಲಿಗೆ ಹಾಕಿಕೊಂಡು ನಡೆಯುತ್ತಿದ್ದೇವೆ
ನೀವು ತಂದ ಹುಳುಗಳು
ನಮ್ಮ ಹೆಸರು ಹೇಳುತ್ತಿದೆ ಕೇಳಿ
ವಲಸಿಗರಿಂದ ಕಾರ್ಮಿಕರಿಂದ
‘ನಾ ರಾರಾಜಿಸುವೆ ‘ಎನ್ನುತ್ತಿವೆ ನೋಡಿ
ನೀವು ಬಾಯಿಮುಚ್ಚಿಕೊಂಡು ಇರಲು ಹೇಳಿದ್ದೀರಿ
ನಾವು ನಾಲಿಗೆಯನ್ನು ಕತ್ತರಿಸಿ ನಡೆಯುತ್ತಿದ್ದೇವೆ
ನೋಡಿ
ಸ್ವಲ್ಪ ಕರುಣೆ ಇದ್ದರೆ ನಿಮಗೆ
ರಸ್ತೆಗಳನ್ನು ಕತ್ತರಿಸಿ ಕಿರಿದಾಗಿಸಿ
ನಾಲ್ಕೈದು ಹೆಜ್ಜೆಗಳಲ್ಲಿ ಮನೆ ಸೇರುವಂತೆ
*********
Prastuta paristitita anavarana
ವಾಸ್ತವ.. ಸಕಾಲಿಕ ಪರಿಸ್ಥಿತಿಗೆ ಹಿಡಿದ ಕನ್ನಡಿ