ಕಾವ್ಯಯಾನ

ಕೆಂಡ ಸಂಪಿಗೆ

Free Shipping 100%HandPainted Abstract On Canvas Modern Woman ...

ರೇಮಾಸಂ

ನೀರಾಡಿದೆ ಕಣ್ಣಲಿ ಮಂದಹಾಸೆ
ಗಂಟಲುಬ್ಬಿದರು ನಸುನಗು ಮಾಸೆ
ಸೆರಗಲಿ ಕೆಂಡವು ನಿಗಿನಿಗಿಸುತಿದೆ
ಎದೆಯ ಕ್ಷೀರಧಾರೆ ಅಮೃತವಾಗಿದೆ/

ಭೇದಭಾವದ ನೊಗದಲಿ ಕಳೆದೆ
ಬಾಲ್ಯ ಅಯ್ಯೋ ನೀನು ಮಹಿಳೆಯಂದು
ಕೂಗಿದರು ರೆಕ್ಕೆಗಳನು ಕತ್ತರಿಸಿದ್ದು
ಲಕ್ಷ್ಮಣರೇಖೆ ಹೊಸ್ತಿಲವು ಹೆಬ್ಬಾವಾಗಿದೆ/

ಧಾರೆಗೆ ಬಾಲ್ಯಕೆ ಮನೆಯರಡು
ಬೆಳಗಿದರೂ ಅವಳು ಕೊರಡು
ಜ್ಯೋತಿಯಾದರೂ ಚುಕ್ಕೆಯೆಂದರು
ಅಡುಗೆ ಗಡುಗೆಗವಳನು ಮೀಸಲಿಟ್ಟರು/

ಹೊತ್ತು ಗರ್ಭದಿ ನವಮಾಸಗಳು
ನೋವನುಂಗಿ ನಗುವ ಹರಡಿದಳು
ಕುಲವಧುವಾಗಿ ಕುಲಜ್ಯೋತಿಯಾದಳು
ಮರಣಶಯ್ಯೇನೇರುತ ಜೀವದಾನಿಯಾದಳು/

ಮೊಗ್ಗುಗಳು ಕಾಮಿಗಳ ಅಟ್ಟಹಾಸಕೆ
ಬಲಿಯಾಗಿ ಹೊಸಕಿದ ಅನಾಗರಿಕ
ನಡೆಯಲಿ ಭ್ರಾತೃತ್ವ ನಗ್ನವಾಗಿದೆ
ಅಬಲೆ ನಡತೆಗೆ ಸಬಲೆ ಭಾಷಣಕ್ಕಾಗಿದೆ/

ನಿರ್ಭಯದಿ ಒಂಟಿ ನಡಿಗೆಯಲಿ
ನಿರ್ಭಯಾಳಾಗುವಳು ಹತ್ಯೆಯಲಿ
ಅಮಾನುಷ ಹಸಿವಿನ ಪುಂಗವರಲಿ
ಮಾನವೀಯತೆ ಸತ್ತಿದೆ ಕಾಮಕೇಳಿಯಲಿ/

ಜನನಿ ಸ್ತನಪಾನ ಹರಿಸಿದ ಅವನಿ
ಮಮತೆಯ ಮಡಿಲಲಿ ತೂಗಿದ
ಜೀವನದಲಿ ಪ್ರತಿಕ್ಷಣ ಸಿಗುವ ಸಂಗಾತಿ
ಮರೆಯದಿರಿ ಅವಳು ಬಹು ಪಾತ್ರಗಳ ಒಡತಿ /

*******

Leave a Reply

Back To Top