ಗಝಲ್
ಗಝಲ್ ದೇವು ಮಾಕೊಂಡ ಎಚ್ಚರಗೊಂಡ ಕನಸಿಗೆ ಕಾತರಿಸಬೇಡ ಸಂಗಾತಿಮುಂಗುರುಳ ಸ್ವಪ್ನ ಕಾಣಬೇಡ ಸಂಗಾತಿ ಅವರ ಬದುಕು ಅವರೇ ಕಂಡುಕೊಂಡಿಲ್ಲಬೇರೆಯವರ ಮನದ ಭಾವನೆಗೆ ಕಾಯಬೇಡ ಸಂಗಾತಿ ಸುಖದ ಕಡಲು ಬಿಟ್ಟು ಬಯಲಾಗಿ ಬಂದು ಶೂನ್ಯವಾದೆಹಗಲ ಕುದುರೆಯನೇರಿ ಇರುಳು ತಿರುಗಬೇಡ ಸಂಗಾತಿ ಅತ್ತು ಗಾಯಗೊಂಡ ಕಣ್ಣಿಗೆ ಮುಲಾಮು ತರಬೇಕಿದೆಬಿರುಗಾಳಿಗೆ ಉಕ್ಕೇರುವ ನದಿಯ ದಾರಿ ಹುಡುಕಬೇಡ ಸಂಗಾತಿ ಜಗದ ಕೂಗಿಗೆ ಕಿವಿ ಏಕೆ ಕೊಡುತ್ತಿರುವೆ ‘ದೇವ’ಹಳೆ ಕಂದಕದ ನಿಟ್ಟುಸಿರ ಬವಣೆ ನೂಕಬೇಡ ಸಂಗಾತಿ **************************************
ಕಾವ್ಯಯಾನ
ಚೀನಿ ಗಾದೆ ನೂತನ ದೋಶೆಟ್ಟಿ ಮನದಲ್ಲಿ ಹಸಿರು ಗಿಡ ನೆಡುಹಾಡು ಹಕ್ಕಿ ಬಂದೇ ಬರುವುದುಒಂದು ದಿನ ಚೀನಿ ಗಾದೆಯ ನಂಬಿಎದೆಯಂಗಳದಲ್ಲಿನಗುವ ಹಸಿರು ಗಿಡ ಹಾಡು ಕೇಳದೆಹೊರಟ ನಿಟ್ಟುಸಿರಿಗೂಶಾಂತತೆಯ ಪಾಠ ಮೈಯೆಲ್ಲ ಕಿವಿಯಾಗಿಕಾಯುತಿದೆ ಹಸಿರು ಗಿಡಮನದ ಪ್ರತಿ ಮೀಟಿನಲೂಹಕ್ಕಿ ಗಾನದ ಕನವರಿಕೆ ಗಳಿಗೆಗಳ ಲೆಕ್ಕಸರಿ ಹೋಗಲೇ ಇಲ್ಲಹಕ್ಕಿ ಬರುವುದೋ ಇಲ್ಲವೋಹಾಡು ಕೇಳುವುದೊ ಇಲ್ಲವೊ ಮನ ಕರಗಿ ಹರಿಯಿತುಗಿಡದಲ್ಲಿ ಹಸುರಿತ್ತುತಾನು ಅತ್ತು ನಗುವ ಹಂಚಿಗಾದೆಯ ಉಳಿಸಿತ್ತು. *************************************
ಕಾವ್ಯಯಾನ
ಎಲ್ಲೆಲ್ಲೆಂದು ಹುಡುಕಲಿ ? ರಜನಿ ತೋಳಾರ್ ನೀ ಹೊರಟು ಹೋಗಿದ್ದುಗೊತ್ತೇ ಆಗಲಿಲ್ಲ…ಕಣ್ತೆರೆದು ನೋಡಲುಏಕಾಏಕಿ ನಾ ಏಕಾಂಗಿ ಹೊಸ ಪ್ರಪಂಚದ ಬೆಡಗಿನಲಿರಂಗಿಸಿಕೊಂಡು ಸುತ್ತುವ ಗುಂಗಿನಲಿಮರೆತೇ ಹೋದೆಯಾಬಿಡಾರಕ್ಕೆ ಬರುವ ದಾರಿ ಝಲ್ಲೆಂದು ಮಳೆ ಹೊಯ್ಯುವಾಗಗುಡುಗು ಮಿಂಚಿನ ಸದ್ದಿಗೆಲ್ಲಾಡವಡವಿಸುವುದು ನನ್ನೆದೆಗೊತ್ತಲ್ಲವೇ… ಒಂದು ಮಾತೂ ಹೇಳದೇಹೊರಟೇ ಬಿಟ್ಟೆ ಅಂತೂ…ನಿಲ್ಲಲಾಗಲಿಲ್ಲವೇನಾಲ್ಕು ದಿನವೂ,ಬಂದು ಬಿಡುತ್ತಿದ್ದೆನಲ್ಲಾನಾನೂ ನಿನ್ನ ಜೊತೆಗೆ ಇದಾಗಲೇ ಎಲ್ಲೆಡೆ ಹುಡುಕಿಸೋತಿಹರು ನಿನ್ನ ಹೆತ್ತವರು..ಎಲ್ಲೆಲ್ಲೆಂದು ಹುಡುಕಲಿ ಇನ್ನು ? ಅಮ್ಮ ತುತ್ತು ಕೊಡುವಾಗಲೆಲ್ಲಾನಿನ್ನದೇ ನೆನಪು…ನನಗೆ ಮೊದಲು ..ನನಗೆ ಮೊದಲೆನ್ನುವ ಪೈಪೋಟಿ ಇನ್ನೆಲ್ಲಿ!ಹಾರುವುದ ಕಲಿಯುವ ಸಾಹಸಕಿಟಕಿಯ ಗ್ರೀಲಿನಲ್ಲೇಎಡವಿ […]
ಕಾವ್ಯಯಾನ
ಅವನಿದ್ದಾನೆ ಮಾಲತಿ ಶಶಿಧರ್ ನನಗಾಗಿ ನೀನುದುಃಖಿಸುವುದೇನು ಬೇಡನಾನೀಗ ನಿರಾಳಅವನು ಕೂಗಿದ, ದನಿ ಹಾದುಬಂದತ್ತ ಹೆಜ್ಜೆ ಹಾಕುತ್ತಾ ಹೋಗಿದ್ದಾಗಿದೆಅಲ್ಲಿ ಅವನು ನನ್ನ ಕೈ ಹಿಡಿದಿದ್ದಾನೆಬೀಳುವ ಮಾತಿಲ್ಲಬೆನ್ನು ತಿರುಗಿಸಿ ನಡಿಗೆ ಶುರುವಿಟ್ಟಿದ್ದೇನೆಎಲ್ಲಾ ತಾಪತ್ರಯಗಳ ನಿನ್ನ ಅಡಿಗಳಲ್ಲೇಬಿಟ್ಟು ಹೊರಟದ್ದಾಗಿದೆಅವನು ದಾರಿಯುದ್ದಕ್ಕೂ ಜೊತೆಇದ್ದು ನಗಿಸುತ್ತಾನೆ, ಪ್ರೀತಿಸುತ್ತಾನೆಮುದ್ದಿಸುತ್ತಾನೆಒಮ್ಮೊಮ್ಮೆ ಬೇಸರದಿ ಕುಸಿದು ಕೂತಾಗಎಳೆದುಕೊಂಡು ಹೋಗಿಮರ ಸುತ್ತುವ ಆಟಆಡಿಸುತ್ತಾನೆನಾನು ಅರೆಬರೆ ಬರೆದು ಬಿಟ್ಟಕವಿತೆಗಳ ಕೈಗಿಟ್ಟು ಬರೆಸುವನುಕವಿತೆ ಪೂರ್ಣವಾಗುವವರೆಗೂಕೆನ್ನೆಯ ಕೆನ್ನೆಗೊತ್ತಿ ತೋಳಲಿ ಬಳಸಿನಿಲ್ಲುವನುಅವನು ಶಾಂತಿಯ ಪ್ರತೀಕಕೆಟ್ಟದಿನಗಳಿಗೆ ಅಗುಳಿ ಇಟ್ಟುಶಾಂತಿ ಮಂತ್ರ ಪಠಿಸುವನನಗೆ ಅವನೇ ಮಂತ್ರದಂಡನನ್ನ ತಲೆಯ ಮೇಲೀಗ ಹೊರೆ […]
ಕಾವ್ಯಯಾನ
ನಿಮ್ಮ ಹಾಗೆ ಬರೆಯಲಾಗುವುದಿಲ್ಲ ವಿ.ಎಸ್.ಶಾನಬಾಗ್ ನನಗೆ ನಿಮ್ಮ ಹಾಗೆ ಬರೆಯಲಾಗುದಿಲ್ಲನಿಮ್ಮ ಬಗ್ಗೆ ನೀವು ಬರೆದ ಹಾಗೆನನ್ನ ಬಗ್ಗೆ ನನಗೆ ಬರೆಯಲಾಗುವುದಿಲ್ಲನೀವು ಹೇಳಿದಹಾಗೆನಿಮ್ಮ ಸ್ನೇಹಕ್ಕೆ ಬರೆದಿದ್ದನೆಲ್ಲಒರೆಸಿ ಹಾಕಿದೆ ಎಲ್ಲ ಅವನು ಅವಳ ಹಳೆಯ ಪ್ರೀತಿಒಂದಾಗಿ ಮತ್ತೆ ಮತ್ತೆ ಬೇರೆಯಾದ ರೀತಿಎಲ್ಲ ಎಲ್ಲ ಎಲ್ಲ ಅನುರಾಗಕ್ಕೆಅವಳನ್ನು ಕೂಡಲಾಗುವುದಿಲ್ಲಅವನನ್ನು ಕಳೆಯಲಾಗುವುದಿಲ್ಲಇವರ ಬಗ್ಗೆನೀವು ಬರೆದಹಾಗೆನನಗೆ ಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಅವ ಅವಳ ನೆನೆದ ಹಾಗೆಅವಳು ಅವನು ನಡೆದಹಾಗೆಒದ್ದೆ ನಿಂತ ಅವರನ್ನು ಕವಿತೆಯಲ್ಲಿಕರೆಯಲಾಗುವುದಿಲ್ಲಆದ್ದರಿಂದ ನಿಮ್ಮ ಹಾಗೆಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಆದ್ದರಿಂದ ನಾನು ನಿಮ್ಮಗುಂಪಿನಲ್ಲಿ ಸಲ್ಲನೀವು ಬರೆದದ್ದೇ ಕವಿತೆತೆರೆದದ್ದೇ […]
ಕಾವ್ಯಯಾನ
ಇಳೆಯ ಸ್ವಗತ ಕಲಾ ಭಾಗ್ವತ್ ಹಕ್ಕಿ ಹಾರಾಡಿಗೂಡ ಸೇರುವ ಸಂಜೆಚಿಲಿಪಿಲಿಗಳ ಸದ್ದು ಗದ್ದಲ ತಾನೇ ಗೆದ್ದೆನೆಂಬ ದಣಿವುಹಿಗ್ಗಿ ಹಿಂದಿಕ್ಕಿ ಓಡಿಹುದುಕರುಳ ಕುಡಿಗಳ ಸಿದ್ಧಿ ಸಂಭ್ರಮದಕಥೆಗಳಿಗೆ..ಮೆಲುದನಿಯಲೇ ಉತ್ತರಒಳಗೊಳಗೆ ಏರು ಎತ್ತರ! ಪಿಸುಮಾತಿನ ರಸಘಳಿಗೆ,ಕುಸುರಿ ಮಾಡಿದೆ ಕನಸ,ಪಡುವಣದ ಕೆಂಪಂಚಿನಲಿ..ಹೋಗಿಯೇ ಬಿಟ್ಟನಾಳೆ ಬರುವೆನೆಂದು!ಇಲ್ಲೀಗ ಕಗ್ಗತ್ತಲು.. ಕೈಯೊಂದು ಚಾಚಿತು ಬಾಎಂದು ಬೆಳಕ ತೋರಲು..ಆಹಾ.. ಎಂತಹ ಶುಭ್ರ !ಎಂದಿನಂತಲ್ಲ ಇಂದು.. ಮಾಸಕೊಮ್ಮೆಯಾದರೂಮರೆಯಾದರೇ ಚಂದಈ ಚಂದ್ರಮ..ಮರುದಿನ ತುಸು ಮಾತ್ರ ನೋಡಲು.ಪುಟ್ಟ ಮಗುವಿಗೆಬೇಕಲ್ಲವೇ ಊಟದಾಟಕೆ?ಕರುಣೆಯೋ, ಒಲುಮೆಯೋ..ಇಣುಕಿದರೆ ಸೆಳವೊಂದಿಹುದು ದಿನದಂತ್ಯದ ಶಾಂತ, ಹಸಿತಅವನ ಮೊಗವೊಂದೇ ಸಾಕುಹಂಚಿಕೊಳ್ಳಲು ಸಿಹಿ-ಕಹಿಯ ಬೆಳಗಾದರೆ […]
ಕಾವ್ಯಯಾನ
ನೆನಪುಗಳ ಸುತ್ತ” ರಿತೇಶ್ ಕಿರಣ್ ಕಾಟುಕುಕ್ಕೆ ಅಂದು..,ನನ್ನಪ್ಪ ಸೋರುವಮುಳಿ ಮಾಡಿನೆಡೆಗೆದೃಷ್ಟಿ ನೆಟ್ಟಿದ್ದ.,ನಾವೋ…..ಅಂಗಳದ ಬದಿಯಲ್ಲೋಹರಿವ ತೊರೆಯ ಬದಿಯಲ್ಲೋಉದುರುವ ಮಳೆಹನಿಗಳ ಜೊತೆಹರಿವ ನೀರಿನ ಜೊತೆಮೈ ಮರೆಯುತ್ತಿದ್ದೆವು…… ಅಮ್ಮನೂ..,ಅಷ್ಟೇ., ನೀರು ಹೀರಿದಸೌದೆಯ ಒಲೆಗಿರಿಸಿಕಣ್ಣು ಕೆಂಪಗಾಗಿಸಿಊದಿಸಿಕೊಂಡಿದ್ದಳು..,ಮೂರು ಹೊತ್ತುಹೊಟ್ಟೆ ತಣಿಯದಿದ್ದರೂಒಂದು ಹೊತ್ತಿಗಾದರೂಪಾತ್ರೆ ಪಗಡೆಗಳಸದ್ದಾಗುತಿತ್ತುಹೊಟ್ಟೆ ಸಮಾಧಾನಿಸುತ್ತಿತ್ತು……, ಹರಿದ.,ಅರಿವೆಗೆ ತೇಪೆ ಹಾಕಿಸಿವರುಷವಿಡಿ ಕಳೆದರೂಯಾವುದೇ ಸಂಕೋಚವಿರಲಿಲ್ಲಮನೆಯ ಒಳಗೂಹೊರಗಿನ ಜಗುಲಿಗೂ..,ದಾಟಿದರೆ ಅಂಗಳಕ್ಕೆ ಮಾತ್ರನಮ್ಮ ಮಾತುಗಳು ಕೇಳಿಸುತಿತ್ತು.ನಮ್ಮ ಕನಸುಗಳೂ ಅಷ್ಟೇ..!ಅಷ್ಟಕ್ಕೇ ಸೀಮಿತವೋ..?ತಿಳಿಯೆ ನಾ………., ಅಪ್ಪ ದಿನಾ.,ಮಳೆಯಲ್ಲಿ ತೋಯುತ್ತಿದ್ದಸಂಜೆಗೆ ನಮ್ಮಆತ್ಮೀಯ ಗೆಳೆಯನಾಗುತ್ತಿದ್ದ.ಒದ್ದೆಯಾದ ವಸ್ತ್ರದಅರಿವೂ ಅವನಿಗಿಲ್ಲ.,ಚಳಿಯ ಅನುಭವವೂ ಅವನಿಗಿಲ್ಲ.,ನಮ್ಮ ಮುಖವ ನೋಡಿಎಲ್ಲವ ಮರೆಯುತ್ತಿದ್ದಮುಖವರಳಿಸಿ ನಗುತ್ತಿದ್ದ...….., […]
ಕಾವ್ಯಯಾನ
ಮೂರು ಸಂಜೆ ಫಾಲ್ಗುಣ ಗೌಡ ಅಚವೆ. ಮೋತಿ ಗುಡ್ಡದ ಬಂಡೆಗಳ ಮೇಲೆಕುಳಿತ ಮೋಡಗಳು ಎಂಥದೋಪಿಸುಮಾತನಾಡುತ್ತ ಅಲ್ಲೇ ಕೆಳಗೆಹೈಗರ ಹುಡುಗಿಯರು ಅಬ್ಬಿಯ ನೀರು ಬೆರೆಸಿ ಮೀಯುವ ಚಂದನೋಡುತ್ತಿವೆ. ಸದಾ ವಿಪ್ರಲಂಭ ಶ್ರಂಗಾರದ ಕೊಮಣೆ ಮಾಡುತ್ತಮಂಗಟ್ಟೆ ಹಕ್ಕಿಗಳು ಆಕಾಶದೆತ್ತರಕ್ಕೆ ಹಾರುತ್ತ ಹಾರುತ್ತ ಹನಿಮೂನು ಮೂಡಿನಲ್ಲಿ ಸುಖದ ಮೂರೇ ಗೇಣು ಬಾಕಿ. ಗುಮ್ಲೆಗದ್ದೆಯಿಂದಿಳಿದು ಬರುವ ವಿಭೂತಿಯಾಣದ ಭೈರವೇಶ್ವರನ ಬೂದಿ ತೊಳೆದು ರಾಶಿ ರಾಶಿ ಕಟ್ಟಿಗೆಗಳ ಮೇಲೇರಿ ಗಂಗಾವಳಿಯ ಸಮುದ್ರದಲಿಮೀಯುತ್ತದೆ. ಅಶ್ಲೇಷಾ ಮಳೆಗೆ ಹುತ್ತದಿಂದೆದ್ದಅಣಬೆಗಳ ಕೊಡೆ ಹಿಡಿದು ಇರುವೆಗಳು ಮೊಟ್ಟೆಯನ್ನು ಹೊಟ್ಟೆಯಡಿ ಹೊತ್ತು […]
ಗಝಲ್
ಗಝಲ್ ರತ್ನರಾಯಮಲ್ಲ ಆ ಕಡೆ ಭಜನೆಯ ನಾದವು ಜಿನುಗುತಿದೆಈ ಕಡೆ ಆಕ್ರಂದನ ಮುಗಿಲು ಮುಟ್ಟುತಿದೆ ಕಣ್ಣೀರ ಕೋಡಿ ಹರಿಯುತಿದೆ ಸದ್ದಿಲ್ಲದೆ ಇಲ್ಲಿಅಲ್ಲಿ ಹೆಂಡದ ನಶೆ ನೆಲವು ಚುಂಬಿಸುತಿದೆ ಸಂಬಂಧಗಳು ಗೋಳಾಡುತಿವೆ ನೆನೆ ನೆನೆದುಹಲಗೆಯ ಸದ್ದಿಗೆ ಹೆಜ್ಜೆಯು ಕುಣಿಯುತಿದೆ ಗುಲಾಬಿ ಹೂ ಕಸವಾಗಿ ಬಿದ್ದಿದೆ ಬೀದಿಯಲ್ಲಿಗಡಿಯಾರದ ಮುಳ್ಳು ಹೆಣವನ್ನು ಎತ್ತುತಿದೆ ದರುಶನಕ್ಕೆಂದು ಜನ ಸಾಲುಗಟ್ಟಿಹರು ಮಲ್ಲಿಕುಣಿಯ ಮುಖ ಕಾಣದೆ ಗುಂಪು ಚದುರುತಿದೆ **********************
ಗಝಲ್
ಗುರಿ ದೂರ ದುರ್ಲಭ ಹಿಡಿಯದಿರು ಕಿರಿ ದಾರಿಗಳ
ತುಳಿದ ಹಾದಿ ಅನುಭವ ದೊಡ್ಡದು ಕೂಡಿಡು ಸಖ