ಅವನಿದ್ದಾನೆ
ಮಾಲತಿ ಶಶಿಧರ್
ನನಗಾಗಿ ನೀನು
ದುಃಖಿಸುವುದೇನು ಬೇಡ
ನಾನೀಗ ನಿರಾಳ
ಅವನು ಕೂಗಿದ, ದನಿ ಹಾದು
ಬಂದತ್ತ ಹೆಜ್ಜೆ ಹಾಕುತ್ತಾ ಹೋಗಿದ್ದಾಗಿದೆ
ಅಲ್ಲಿ ಅವನು ನನ್ನ ಕೈ ಹಿಡಿದಿದ್ದಾನೆ
ಬೀಳುವ ಮಾತಿಲ್ಲ
ಬೆನ್ನು ತಿರುಗಿಸಿ ನಡಿಗೆ ಶುರುವಿಟ್ಟಿದ್ದೇನೆ
ಎಲ್ಲಾ ತಾಪತ್ರಯಗಳ ನಿನ್ನ ಅಡಿಗಳಲ್ಲೇ
ಬಿಟ್ಟು ಹೊರಟದ್ದಾಗಿದೆ
ಅವನು ದಾರಿಯುದ್ದಕ್ಕೂ ಜೊತೆ
ಇದ್ದು ನಗಿಸುತ್ತಾನೆ, ಪ್ರೀತಿಸುತ್ತಾನೆ
ಮುದ್ದಿಸುತ್ತಾನೆ
ಒಮ್ಮೊಮ್ಮೆ ಬೇಸರದಿ ಕುಸಿದು ಕೂತಾಗ
ಎಳೆದುಕೊಂಡು ಹೋಗಿ
ಮರ ಸುತ್ತುವ ಆಟ
ಆಡಿಸುತ್ತಾನೆ
ನಾನು ಅರೆಬರೆ ಬರೆದು ಬಿಟ್ಟ
ಕವಿತೆಗಳ ಕೈಗಿಟ್ಟು ಬರೆಸುವನು
ಕವಿತೆ ಪೂರ್ಣವಾಗುವವರೆಗೂ
ಕೆನ್ನೆಯ ಕೆನ್ನೆಗೊತ್ತಿ ತೋಳಲಿ ಬಳಸಿ
ನಿಲ್ಲುವನು
ಅವನು ಶಾಂತಿಯ ಪ್ರತೀಕ
ಕೆಟ್ಟದಿನಗಳಿಗೆ ಅಗುಳಿ ಇಟ್ಟು
ಶಾಂತಿ ಮಂತ್ರ ಪಠಿಸುವ
ನನಗೆ ಅವನೇ ಮಂತ್ರದಂಡ
ನನ್ನ ತಲೆಯ ಮೇಲೀಗ ಹೊರೆ ಇಲ್ಲ
ಎಲ್ಲವೂ ಅವನ ಉಸಿರ ರಭಸಕೆ
ತೂರಿ ಹೋಗಿದೆ
ನನ್ನ ಕುರುಳಲ್ಲೀಗ ಮೊಲ್ಲೆ ಮೊಗ್ಗ
ಪರಿಮಳ
ಇಳಿ ಸಂಜೆ ಹೊತ್ತಿಗೆ ಅಂದವ
ನೋಡಿ ಹಾಡಿ ಹೊಗಳುತ್ತಾನೆ
ನೀನು ನನಗಾಗಿ ದುಃಖಿಸುವುದೇನು
ಬೇಡ ನನ್ನೊಡನೆ ಈಗ ಅವನಿದ್ದಾನೆ
ಆತ್ಮವಿಶ್ವಾಸ..
ನನಗಾಗಿ ನೀನು
ದುಃಖಿಸುವುದೇನು ಬೇಡ
ನಾನೀಗ ನಿರಾಳ
ಅವನು ಕೂಗಿದ, ದನಿ ಹಾದು
ಬಂದತ್ತ ಹೆಜ್ಜೆ ಹಾಕುತ್ತಾ ಹೋಗಿದ್ದಾಗಿದೆ
ಅಲ್ಲಿ ಅವನು ನನ್ನ ಕೈ ಹಿಡಿದಿದ್ದಾನೆ
ಬೀಳುವ ಮಾತಿಲ್ಲ
ಬೆನ್ನು ತಿರುಗಿಸಿ ನಡಿಗೆ ಶುರುವಿಟ್ಟಿದ್ದೇನೆ
ಎಲ್ಲಾ ತಾಪತ್ರಯಗಳ ನಿನ್ನ ಅಡಿಗಳಲ್ಲೇ
ಬಿಟ್ಟು ಹೊರಟದ್ದಾಗಿದೆ
ಅವನು ದಾರಿಯುದ್ದಕ್ಕೂ ಜೊತೆ
ಇದ್ದು ನಗಿಸುತ್ತಾನೆ, ಪ್ರೀತಿಸುತ್ತಾನೆ
ಮುದ್ದಿಸುತ್ತಾನೆ
ಒಮ್ಮೊಮ್ಮೆ ಬೇಸರದಿ ಕುಸಿದು ಕೂತಾಗ
ಎಳೆದುಕೊಂಡು ಹೋಗಿ
ಮರ ಸುತ್ತುವ ಆಟ
ಆಡಿಸುತ್ತಾನೆ
ನಾನು ಅರೆಬರೆ ಬರೆದು ಬಿಟ್ಟ
ಕವಿತೆಗಳ ಕೈಗಿಟ್ಟು ಬರೆಸುವನು
ಕವಿತೆ ಪೂರ್ಣವಾಗುವವರೆಗೂ
ಕೆನ್ನೆಯ ಕೆನ್ನೆಗೊತ್ತಿ ತೋಳಲಿ ಬಳಸಿ
ನಿಲ್ಲುವನು
ಅವನು ಶಾಂತಿಯ ಪ್ರತೀಕ
ಕೆಟ್ಟದಿನಗಳಿಗೆ ಅಗುಳಿ ಇಟ್ಟು
ಶಾಂತಿ ಮಂತ್ರ ಪಠಿಸುವ
ನನಗೆ ಅವನೇ ಮಂತ್ರದಂಡ
ನನ್ನ ತಲೆಯ ಮೇಲೀಗ ಹೊರೆ ಇಲ್ಲ
ಎಲ್ಲವೂ ಅವನ ಉಸಿರ ರಭಸಕೆ
ತೂರಿ ಹೋಗಿದೆ
ನನ್ನ ಕುರುಳಲ್ಲೀಗ ಮೊಲ್ಲೆ ಮೊಗ್ಗ
ಪರಿಮಳ
ಇಳಿ ಸಂಜೆ ಹೊತ್ತಿಗೆ ಅಂದವ
ನೋಡಿ ಹಾಡಿ ಹೊಗಳುತ್ತಾನೆ
ನೀನು ನನಗಾಗಿ ದುಃಖಿಸುವುದೇನು
ಬೇಡ ನನ್ನೊಡನೆ ಈಗ ಅವನಿದ್ದಾನೆ
ಆತ್ಮವಿಶ್ವಾಸ..
ಕಾವ್ಯ ತೆರೆದುಕೊಂಡ ರೀತಿ ಚೆನ್ನಾಗಿದೆ.
ವಸ್ತು ವಿಶೇಷ ವಾಗಿದೆ.
* ನಟರಾಜ್ ಅರಳಸುರಳಿ