ಎಲ್ಲೆಲ್ಲೆಂದು ಹುಡುಕಲಿ ?
ರಜನಿ ತೋಳಾರ್
ನೀ ಹೊರಟು ಹೋಗಿದ್ದು
ಗೊತ್ತೇ ಆಗಲಿಲ್ಲ…
ಕಣ್ತೆರೆದು ನೋಡಲು
ಏಕಾಏಕಿ ನಾ ಏಕಾಂಗಿ
ಹೊಸ ಪ್ರಪಂಚದ ಬೆಡಗಿನಲಿ
ರಂಗಿಸಿಕೊಂಡು ಸುತ್ತುವ ಗುಂಗಿನಲಿ
ಮರೆತೇ ಹೋದೆಯಾ
ಬಿಡಾರಕ್ಕೆ ಬರುವ ದಾರಿ
ಝಲ್ಲೆಂದು ಮಳೆ ಹೊಯ್ಯುವಾಗ
ಗುಡುಗು ಮಿಂಚಿನ ಸದ್ದಿಗೆಲ್ಲಾ
ಡವಡವಿಸುವುದು ನನ್ನೆದೆ
ಗೊತ್ತಲ್ಲವೇ…
ಒಂದು ಮಾತೂ ಹೇಳದೇ
ಹೊರಟೇ ಬಿಟ್ಟೆ ಅಂತೂ…
ನಿಲ್ಲಲಾಗಲಿಲ್ಲವೇ
ನಾಲ್ಕು ದಿನವೂ,
ಬಂದು ಬಿಡುತ್ತಿದ್ದೆನಲ್ಲಾ
ನಾನೂ ನಿನ್ನ ಜೊತೆಗೆ
ಇದಾಗಲೇ ಎಲ್ಲೆಡೆ ಹುಡುಕಿ
ಸೋತಿಹರು ನಿನ್ನ ಹೆತ್ತವರು..
ಎಲ್ಲೆಲ್ಲೆಂದು ಹುಡುಕಲಿ ಇನ್ನು ?
ಅಮ್ಮ ತುತ್ತು ಕೊಡುವಾಗಲೆಲ್ಲಾ
ನಿನ್ನದೇ ನೆನಪು…
ನನಗೆ ಮೊದಲು ..
ನನಗೆ ಮೊದಲೆನ್ನುವ ಪೈಪೋಟಿ ಇನ್ನೆಲ್ಲಿ!
ಹಾರುವುದ ಕಲಿಯುವ ಸಾಹಸ
ಕಿಟಕಿಯ ಗ್ರೀಲಿನಲ್ಲೇ
ಎಡವಿ ಜಾರಿ ಬಿದ್ದರೆ
ಆರನೇ ಮಳಿಗೆಯಿಂದ..
ಅಂಜಿಕೆಯಾದಾಗ ಬಂದು ಕೂರುವೆ
ಗೂಡಿನಲ್ಲಿ
ಹುಡುಕ ಬೇಕಲ್ಲವೇ ನಿನ್ನ…
********************
Nice
Superb
Superb
A
Nice words
Very nice … Meaningfull .. baruvanu ondu dina
Very nice
Very Nice
Very nice
Very nice
Phenomenal
Very nice
ಕವಿತೆ ಚೆನ್ನಾಗಿದೆ.