Category: ಕಾವ್ಯಯಾನ

ಕಾವ್ಯಯಾನ

ಕೆಂಪು ಐರಾವತ

ಕವಿತೆ ಡಾ.ಪ್ರೇಮಲತ ಬಿ.  ರೆಕ್ಕೆಬಿಚ್ಚಿ ಉಡ್ಡಯನಗೈಯ್ಯುವ ಮುನ್ನವೇ ಹಿಡಿಯಬೇಕೆಂದು ಓಡಿದೆ ಒರೆಸುತ್ತ ಹಣೆಯ ಮೇಲಿನ ಬೆವರು ಒಡಲ ತುಂಬುತ್ತ, ಹರಟೆಯೊಡೆಯುತ್ತ ಪುಕ್ಕವರಡಿ ವಿರಮಿಸಿ ನಿಂತಿತ್ತು ದೇದೀಪ್ಯಮಾನವಾದ  ಕೆಂಪು ಐರಾವತ ಏನೋ ಸಂಕಟ, ಬಿಟ್ಟು ಹೊರಟ ತವಕ ನನ್ನದಲ್ಲದ ಊರ, ಮೂರ್ತವಲ್ಲದ ಭಾವ ದಿನಕೊಂದು ಕೊನೆಕಟ್ಟಿ ಗಟ್ಟಿಯಾಗಿರದ ಅಳ್ಳಕ   ಒಂದೇ ಗಂಟೆ ಊರ ತಲುಪಲು ಒಂದೆರಡೇ ದಿನದ ಗಡುವು ಮತ್ತೆ ಮರಳಲು ನಿಟ್ಟುಸಿರಿಟ್ಟೆ ನಕ್ಕು..” ಎಲ್ಲ ಮರುಳು” ಯಾರೋ ಬಂದರು, ಯಾರೋ ಇಳಿದರು ಕಣ್ಣ ಮುಚ್ಚಿ ಕಿಟಗಿಗೊರಗಿ ಗುನುಗಿ […]

ಮಾತು – ಮಳೆ ಹಾಡು

ಕವಿತೆ ಬಾಲಕೃಷ್ಣ ದೇವನಮನೆ ಚಿತ್ರ ಕಟ್ಟಿದ ಚೌಕಟ್ಟು      ಮಾತು ಮಳೆಯಂತೆ      ಧೋ… ಎಂದು ಸುರಿಯುತ್ತಿರುತ್ತದೆ ನಿಲ್ಲುವುದಿಲ್ಲ      ಒಮ್ಮೊಮ್ಮೆ ಮಳೆ ನಿಂತರೂ      ಮಾತು ನಿಲ್ಲುವುದಿಲ್ಲ…      ಮೌನವೂ ಮಾತಾದಂತೆ      ಮಳೆ ನಿಂತ ಮೇಲಿನ ಮರದ ಹನಿಯಂತೆ…      ಚೌಕಟ್ಟಿನೊಳಗೆ ಮಾತು ಮಳೆ ಹಾಡು. ದೃಶ್ಯ ಒಂದು      ಆಕಸ್ಮಿಕದ ಭೇಟಿ      ಎಷ್ಟೋ ಕಾಲದ ಮೇಲೆ      ಮರು ಮಿಳಿತವಾದ ಗೆಳೆತನ      ಮುಗಿಯುತ್ತಿಲ್ಲ ಕ್ಷೇಮ ಕುಶಲೋಪರಿ      ಕೂಡಿ ಆಡಿದ […]

ಕಾವ್ಯವಾಗಿ ಕರಗುತ್ತೇನೆ

ಕವಿತೆ ಪೂಜಾ ನಾರಾಯಣ ನಾಯಕ ನಾನರಿಯಲಾಗದ  ಶೂಲೆಗಳೇ ಆಪ್ತವಾಗಿ ನನ್ನನ್ನು ಬಿಗಿದಪ್ಪಿಕೊಂಡಾಗ ಬದುಕು ಬರಡಾಗಿ ಬೆಂಬಿಡದೆ ಕಾಡಿದಾಗ ನನಗನಿಸುತ್ತದೆ, ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು! ಕಳೆದುಕೊಂಡ ಮಧುರವಾದ ಪ್ರೇಮ ನೆನಪಿನಾಳದಲಿ ಪುಟಿದೆದ್ದು ಕೂತಾಗ ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ ನನಗನಿಸುತ್ತದೆ, ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು! ಕಗ್ಗತ್ತಲ ವೇಳೆಯಲಿ ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ ನನಗನಿಸುತ್ತದೆ, ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು! ಏಕಾಂತದಲಿ ಮರೀಚಿಕೆಯಂತ ಕನಸುಗಳು […]

ಗಝಲ್

ಗಝಲ್ ಎ.ಹೇಮಗಂಗಾ ಕಡುಗಪ್ಪು ಕುರುಳ ನಡುವೆ ಮೊಗ ಚಂದಿರನಂತೆ ಹೊಳೆದಿದೆ ಗೆಳತಿಬಿರಿದ ಅಧರಗಳ ನಡುವೆ ಮಿಂಚು ನಗು ಹೊರಹೊಮ್ಮಿದೆ ಗೆಳತಿ ಅಪೂರ್ವ ಸೌಂದರ್ಯ ಬಣ್ಣಿಸಲು ಕವಿಯಾಗುವನು ನಿನ್ನ ನಲ್ಲಸೆಳೆವ ಕಾಡಿಗೆ ಕಂಗಳ ಮೇಲಿನ ಹುಬ್ಬು ಕಬ್ಬಿನಂತೆ ಬಾಗಿದೆ ಗೆಳತಿ ಆಗಸದತ್ತ ದಿಟ್ಟಿ ನೆಟ್ಟ ನೋಟದಿ ಅದಾವ ಭಾವ ತುಂಬಿದೆಯೋವಿಚಲಿತಳಾಗದೇ ನೀ ಕುಳಿತ ಭಂಗಿ ಮೋಹಕವಾಗಿ ಕಂಡಿದೆ ಗೆಳತಿ ನಿನ್ನವನ ಚರಣಕೆ ಸಮರ್ಪಿಸಲು ಹೂಗಳ ಗುಚ್ಛ ಹಿಡಿದಿಹೆ ಏನು?ಇಹದ ಅರಿವಿಲ್ಲದೇ ನಗುತಿಹ ಅಭಿಸಾರಿಕೆ ನೀನಾದಂತಿದೆ ಗೆಳತಿ ತುಸು ಹೊತ್ತು […]

ವಾರದ ಕವಿತೆ

ಬದುಕುಮರುಗುತ್ತಿದೆ ಸುಜಾತಾ ಲಕ್ಮನೆ ಬದುಕು ಮರುಗುತ್ತಿದೆಕನಸುಗಳು ಶಿಥಿಲಗೊಂಡು ರಚ್ಚೆ ಹಿಡಿದುಮುರುಟ ತೊಡಗಿದಂತೆಲ್ಲಬದುಕ ಭಿತ್ತಿಯ ಆಚೀಚೆ ನೀನು ಎಗ್ಗಿಲ್ಲದೇ ಜಡಿದ ಮೊಳೆಗಳುಆಳಕ್ಕಿಳಿದಂತೆಲ್ಲಾ ಹೊರಳಿ ನರಳಿ ಅನಾಮತ್ತಾಗಿ ಹರಡಿಬೆದರುಬೊಂಬೆಗಳಾಗಿ ನಿಲ್ಲುತ್ತವೆ ಭಾವಗಳು !!ದಿಕ್ಕೆಟ್ಟು, ಸೋತು ಹೆಜ್ಜೆ ಮೂಡಿಸಲಾಗದ ಕೊರಗು ತುಂಬಿ ನಿಂತಈ ಭಾವಗಳ ತಬ್ಬಿದರೆಬರೀ ನಿಟ್ಟುಸಿರ ಮೇಳಗಳು !!ಧೂಳು ಹೊದ್ದು ಮಸುಕಾದ ಗೋಡೆಗಂಟಿದ ನಮ್ಮೀವಿವಾಹದ ಜೋಡಿ ಪಟದಿಂದ ಒಳಗೊಳಗೇ ನಕ್ಕು ಸೂಸುವ ಹಳವಂಡಗಳು!ಜೇಡ ನೇಯ್ದ ಬಲೆಯೊಳಗೆ ಬಿದ್ದು ಹೊರಳಾಡುವ ಪಟದ ಬಗ್ಗೆ ನಮಗೇಕೆ ಚಿಂತೆ?ಬದುಕೇ ಚೌಕಟ್ಟು ಮೀರಿ ಮೂರಾಬಟ್ಟೆಯಾದ ಮೇಲೆ ಇನ್ನೇನಂತೆ […]

ಅಪ್ಪನ ಆತ್ಮ

ಕವಿತೆ ಫಾಲ್ಗುಣ ಗೌಡ ಅಚವೆ. ಇಲ್ಲೇ ಎಲ್ಲೋಸುಳಿದಾಡಿದಂತೆ ಭಾಸವಾಗುವಅಪ್ಪನ ಅತ್ಮನನ್ನ ತೇವಗೊಂಡ ಕಣ್ಣುಗಳನ್ನುನೇವರಿಸುತ್ತದೆ. ಅಪ್ಪನ ಹೆಜ್ಜೆ ಗುರುತುಗಳಿರುವಗದ್ದೆ ಹಾಳಿಯ ಮೇಲೆನಡೆದಾಡಿದರೆಇನ್ನೂ ಆಪ್ತವಾಗಿಸುಪ್ತ ಭಾವನೆಗಳನ್ನುಆಹ್ಲಾದಕರಗೊಳಿಸುತ್ತದೆ. ನಾನು ನಡೆದಲ್ಲೆಲ್ಲನೆರಳಿನಂತೆ ಬರುವ ಅದುನನಗೆ ಸದಾ ಗೋಚರಿದಂತೆ ಭಾಸ! ನನ್ನನ್ನೇ ಕುರಿತು ನೇರಬೊಟ್ಟು ಮಾಡಿ ತೋರಿಸಿದಂತೆಏನನ್ನೋ ಹೇಳುತ್ತದೆ!ದ್ವೇಷದ ಬೆಂಕಿಯಲ್ಲಿಮಗನ ಮುಖವ್ಯಗ್ರವಾಗಿರುವುದ ಕಂಡುಬೇಸರಿಸಿಕೊಂಡಿದೆಆತ್ಮದ ಮ್ಲಾನ ವದನ!! ಅನ್ಯರಿಗೆ ಅಗೋಚರವೆನಿಪಅಪ್ಪನ ಅತ್ಮಕ್ಕೂ ನನಗೂಅದೆಂಥದೋಅಲೌಕಿಕ ನಂಟು! ಅವನ ನೆನಪಿನೊಂದಿಗಿನಮುಕ್ತ ತಾದಾತ್ಮ್ಯವೇನನ್ನ ಅದ್ಯಾತ್ಮ!!! ********

ನನ್ನಜ್ಜ

ಕವಿತೆ ಚೈತ್ರಾ ಶಿವಯೋಗಿಮಠ ಬಸ್ಟ್ಯಾಂಡ್ ನ್ಯಾಗ ನಿಂತುಬಾರಕೋಲು ಬೇಕಾ ಅಂದಾಗಮಂದಿ ಬೇಡಿ ಕೊಡಿಸ್ದಾವ ನನ್ನಜ್ಜಇದ ಕಥಿ ನೂರ ಸರತಿ ಹೇಳಿ“ಹಠಮಾರಿ ಚೈತ್ರಾ” ಅಂದಾವ ನನ್ನಜ್ಜ ಹೆಗಲ ಮ್ಯಾಲೆ ಹೊತ್ತು ಓಣಿತುಂಬಾ ತಿರಗ್ಯಾಡಿದಾವ ನನ್ನಜ್ಜಬಾಯಿ ಒಡದರ, ತುಂಬಾ ಬಿಳಿ ಬೀಜಕೆಂಪಗ ಕಾಣೂ ಪ್ಯಾರಲ ಹಣ್ಣ ತರಾವ ನನ್ನಜ್ಜನಿಂಬುಹುಳಿ, ಪೇಪರಮಟ್ಟಿ, ಚಾಕಲೇಟ್ಗಾಂಧಿ ಮುತ್ಯಾನ ಫೋಟೋ ಮುಂದ ನಿಂದರೀಸಿಕಣ್ಮುಚ್ಚಿಸಿ, ಮುತ್ಯಾ ಕೊಟ್ಟ ನೋಡನ್ನವ ನನ್ನಜ್ಜ ಮುದುಕಿ, ನರಿ-ಒಂಟಿ ಅಂತ ನೂರ ಕಥಿಅವನ ಅಂಗಿ ಕಿಶೆದಾಗ. ಸ್ವತಂತ್ರ ಸಿಕ್ಕಾಗನಡುರಾತ್ರಿ ಮಾಸ್ತಾರ ಎಬ್ಬಿಸಿದ್ದನ್ನ ಕಥಿಮಾಡಿ […]

ವಿನಂತಿಯಷ್ಟೇ…

ಕವಿತೆ ಮಧುಸೂದನ ಮದ್ದೂರು ನಿನ್ನ ಒಂದೇ ಒಂದು ಕನಸಿಗೆ ಇಷ್ಟು ಪರಿತಪಿಸ ಬೇಕಿತ್ತೆ…..? ನಿನ್ನ ಕುಡಿಮಿಂಚ ಕಣ್ಣೋಟಎದೆ ಇರಿದಿದ್ದರೆ ಸಾಕಿತ್ತು..ಎದೆಗೆ ನಿನ್ನ ನೆನಪುಗಳ ಭರ್ಜಿಯಿಂದಇರಿದುಕೊಳ್ಳಬೇಕಿರಲಿಲ್ಲ..ನಿನ್ನ ತುಸು ಸ್ಪರ್ಶದ ಕೆನೆಗಾಳಿ ಎದೆಗೆ ಸೊಂಕಿದ್ದರೆ ಸಾಕಿತ್ತು… ನಿನ್ನ ಸಿಹಿ ಮುತ್ತೊಂದು ಸಿಕ್ಕಿದ್ದರೆ ಸಾಕಿತ್ತು..ಮಧುಶಾಲೆಗೆ ಎಡತಾಕಿ ಮತ್ತಿನ ಬಾಟಲಿಗಳಿಗೆ ಮುತ್ತಿಕ್ಕುವ ಪ್ರಮೇಯವೇ ಇರುತ್ತಿರಲಿಲ್ಲ… ನಿನ್ನ ನವಿರು ಬಿಸಿಯುಸಿರು ನನ್ನೆದೆಗೆ ಸುಳಿಗಾಳಿಯಾಗಿದ್ದರೆ ಸಾಕಿತ್ತು..ಧೂಮಲೀಲಾ ವಿನೋದವಳಿಗೆ ಅಗ್ನಿಮಿತ್ರನಾಗುತ್ತಿರಲಿಲ್ಲ.. ಈಗಲೂ ಕಾಲ‌ಮಿಂಚಿಲ್ಲ..ಒಂದೇ ಒಂದು ಬಾರಿ ಕನಸಿಗೆ ಬಂದು ಬಿಡು ಸಾಕುಈ‌ ನನ್ನಿ ವ್ಯಸನಗಳ ಸಾಮ್ರಾಜ್ಯವ ಸೋಲಿಸಿಎದೆಯ […]

ಗಝಲ್

ಗಝಲ್ ಶಶಿಕಾಂತೆ ನಿನ್ನನ್ನು ಎದೆಯಾಳದಿಂದ ಅನಂತವಾಗಿ ಪ್ರೀತಿಸುತಿರುವೆನುಆಣೆ ಇಡಲೇ,ನನ್ನೊಲವನ್ನೆಲ್ಲಾ ನಿನಗಾಗೇ ಮುಡಿಪಾಗಿಡುವೆನು. ಜೀವನವೆಂಬುದು ಮೂರು ದಿನದ ಸಂತೆಯಂತೆ ಚೆಲುವೆ.ಆ ಸಂತೆಯಲ್ಲಿ ನೀ ನೀಡಿದೆ ನನಗೆ ಯಾರೂ ನೀಡದ ಸ್ನೇಹವನು. ನೀನೀಗ ಹೃದಯ ವೀಣೆ ಮೀಟಿಯಾಗಿದೆ ದೂರ ಹೋಗದಿರು ಸಖಿ ತಾಳಿಕೊಳ್ಳಲಾರದು ನನ್ನೆದೆ ವಿರಹದ ಬೇಗೆಯನು. ಈ ಬಾಳು ಬರಡು ಬಂಜರುಭೂಮಿ ಆಗಿತ್ತು ನಿನ್ನಾಗಮದ ಮೊದಲು.ಪ್ರೇಮ ಸಿಂಚನದಿಂದ ಮನದಲಿ ನೀ ಮೂಡಿಸಿದೆ ಹೊಸ ಬಯಕೆಗಳನು ನಿನ್ನ ಹೆಸರೇ ನನ್ನುಸಿರಾಗಿದೆ ನಾವು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದಾಗದಿಂದ.ಬಾ ಜಾನು, ನನ್ನೆದೆಗೊರಗಿ ಮಲಗಿ […]

ಉತ್ತರ ಏನು?

ಕವಿತೆ ನಂದಿನಿ ಹೆದ್ದುರ್ಗ ಅವನೆನ್ನ ಅಗತ್ಯವಲ್ಲ.ಅನಿವಾರ್ಯವಲ್ಲಅಭೇದ್ಯವೂ ಅಲ್ಲ.ನಡುದಾರಿಯಲಿ ಸಿಕ್ಕ ದಾರಿಹೋಕ.ನನ್ನ ನೋಡಿ ಸಣ್ಣಗೆ ನಕ್ಕ. ಒಡ್ಡಿಕೊಂಡೆವು ಎಂದುಎರಡುಅಲುಗಿನ ನಡೆಗೆ ನಾವಿಬ್ಬರೂ.? ಅವನೀಗ ನನ್ನೆದೆಯ ರಾಗ.ಬೆವರ ಬೆಳಕು.ಹೆರಳ ಸಿಕ್ಕು.ಕಣ್ಣ ಚುಕ್ಕಿ.ಒಳಗಿನೊಳಗಿನ ಭಕ್ತಿ. ಅವನೆನ್ನ ಬಯಕೆ ಎನ್ನ ಬಳಲಿಕೆಮಳೆಗರೆವ ಮುಗಿಲುಆಳದ ದಿಗಿಲುಅವನೆನ್ನ ಬೇಕುಪದ್ಯದ ಪರಾಕು.ಅವನು…ಸಿಹಿಯಾದ ಕತ್ತಲುಹೂ ಹಿಡಿದ ಹಿತ್ತಿಲು.ಅವನೆನ್ನ ಸುಖ ನನ್ನ ಮೋಹದ ಸಖ ಜಗದ ಆ ಬದಿಯಲಿ ಅವನುಸಮೃದ್ಧ ಏಕಾಂತದಲಿ ನಾನುಹರಿದು ಅಲೆಗಳ ಬಣ್ಣಸುತ್ತೆಲ್ಲಾ ತಿಳಿಗೆಂಪು ಉದ್ಯಾನ.ಹೊರಳಿದರೆ ಹಗಲುಅವನೆದೆಯ ಮಗ್ಗುಲು ನನ್ನಇಂದು ನಾಳೆ ನಿನ್ನೆಗಳೆಲ್ಲಾಕಣ್ಣು ಕೂಡಿದಕ್ಷಣದ ಧ್ಯಾನದಲ್ಲಿ ಅದೇ […]

Back To Top