ಅಪ್ಪನ ಆತ್ಮ

ಕವಿತೆ

ಫಾಲ್ಗುಣ ಗೌಡ ಅಚವೆ.

ಇಲ್ಲೇ ಎಲ್ಲೋ
ಸುಳಿದಾಡಿದಂತೆ ಭಾಸವಾಗುವ
ಅಪ್ಪನ ಅತ್ಮ
ನನ್ನ ತೇವಗೊಂಡ ಕಣ್ಣುಗಳನ್ನು
ನೇವರಿಸುತ್ತದೆ.

ಅಪ್ಪನ ಹೆಜ್ಜೆ ಗುರುತುಗಳಿರುವ
ಗದ್ದೆ ಹಾಳಿಯ ಮೇಲೆ
ನಡೆದಾಡಿದರೆ
ಇನ್ನೂ ಆಪ್ತವಾಗಿ
ಸುಪ್ತ ಭಾವನೆಗಳನ್ನು
ಆಹ್ಲಾದಕರಗೊಳಿಸುತ್ತದೆ.

ನಾನು ನಡೆದಲ್ಲೆಲ್ಲ
ನೆರಳಿನಂತೆ ಬರುವ ಅದು
ನನಗೆ ಸದಾ ಗೋಚರಿದಂತೆ ಭಾಸ!

ನನ್ನನ್ನೇ ಕುರಿತು ನೇರ
ಬೊಟ್ಟು ಮಾಡಿ ತೋರಿಸಿದಂತೆ
ಏನನ್ನೋ ಹೇಳುತ್ತದೆ!
ದ್ವೇಷದ ಬೆಂಕಿಯಲ್ಲಿ
ಮಗನ ಮುಖ
ವ್ಯಗ್ರವಾಗಿರುವುದ ಕಂಡು
ಬೇಸರಿಸಿಕೊಂಡಿದೆ
ಆತ್ಮದ ಮ್ಲಾನ ವದನ!!

ಅನ್ಯರಿಗೆ ಅಗೋಚರವೆನಿಪ
ಅಪ್ಪನ ಅತ್ಮಕ್ಕೂ ನನಗೂ
ಅದೆಂಥದೋ
ಅಲೌಕಿಕ ನಂಟು!

ಅವನ ನೆನಪಿನೊಂದಿಗಿನ
ಮುಕ್ತ ತಾದಾತ್ಮ್ಯವೇ
ನನ್ನ ಅದ್ಯಾತ್ಮ!!!

********

6 thoughts on “ಅಪ್ಪನ ಆತ್ಮ

  1. ತುಂಬಾನೇ ಅಂತರಾತ್ಮದಲ್ಲಿ ಹುದುಗಿರುವ ಅಪ್ಪನ ಜೊತೆಯಲ್ಲಿ ವಿಹರಿಸುವ ಕವಿ ಮನಸ್ಸಿನ ಭಾವನೆ very nice. ಎಷ್ಟೋ ದಿನಗಳು ಕಳೆದರು ಇನ್ನೂ ನೆರಳಿನಲಿ ಅಪ್ಪನನ್ನು ಕಾಣುವ ಪರಿ, ಆ ನಂಟು,ಅವರ ಪ್ರೀತಿ, ವಾತ್ಸಲ್ಯದ ನೆನಪು, ಕವಿಯ ಮನಸ್ಸಿನಲಿ ಉಸಿರಾಗಿ ಉಸಿರಾಡುತ್ತಿದೆ….ಚೆಂದದ ಕವಿತೆ.
    ಎ.ಆರ್.ಗೌಡ ತಾಳೇಬೈಲ್

    1. ನಿಜವಾಗಿಯೂ ಮನಸಿಗೆ ನಾಟುವಂತಹ ತುಂಬಾ ಸೊಗಸಾದ ಸಾಹಿತ್ಯ ದೊಂದಿಗೆ ಕವಿತೆ ಮೂಡಿಬಂದಿದೆ ಅಭಿನಂದನೆಗಳು ಸರ್

  2. ಅಪ್ಪ ನಿಮ್ಮ ಪಾಲಿನ ಸದಾ ಕಾಯುವ ,ಕಾಡುವ ಹಿರೋ…
    ದಟ್ಟೈಸುವ ಅಪ್ಪ ಎದೆಯೊಳಗಿರುವಂತೆ, ಗದ್ದೆ ಹಾಳೆಯ ಮೇಲೆ ನಡೆದಾಡಿದಂತೆ ನೆನಪಿನ‌ ದಾರಿಯಲ್ಲಿ ನಡೆಯುವುದು ,ನಡೆದಾಡುತ್ತಲೇ ಇರುವ ಪರಿ ಅಗಮ್ಯ ಅಗೋಚರ. ಹಾಗೂ ಅಲೌಕಿಕವ ಲೌಕಿಕದೊಳಗೆ ಬೆಸೆಯುವ ಪರಿ ಸೊಗಸು ಗೆಳೆಯಾ…

Leave a Reply

Back To Top