Category: ಕಾವ್ಯಯಾನ

ಕಾವ್ಯಯಾನ

“ಅಂತರ್ಬಹಿರಂಗ”

ಕವಿತೆ “ಅಂತರ್ಬಹಿರಂಗ“ ಉದಯ ಧರ್ಮಸ್ಥಳ ನಿದ್ದೆಯ ಮುಂಜಾವಿನಲ್ಲಿಮುಂಜಾವಿನ ನಿದ್ದೆಯಲ್ಲಿಮಂಪರು ಭಾವಗಳೊಂದಷ್ಟುಮತಿಯ ತೋಪಿನಲ್ಲಿಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆಶಬ್ದಗಳಲ್ಲದೆಮೌನ ಅಕ್ಷರದುಂಡೆಗಳು ! ಎತ್ತೆತ್ತಲೋ ಎಸೆದೆರಗುವಂತಾಗಿಧಮಿಲ್ ಧಮಿಲ್ ಧಮಿಲ್ಹೊರಗುಗುಳುವಾಗಹಿಡಿದುದಾಖಲಾಗಿಸುವಾಗಅರೆಬಿರಿದ ಕಣ್ಣೆಡೆಯಿಂದದೃಷ್ಟಿ ಕಾಣುವ ಪಂಕ್ತಿ ಪದಅದೇನೋ ಅಪರೂಪದಆಗೀಗ ಬರುವ ಅತಿಥಿಯಂತೆನಕ್ಕಣರಳಿಸಿ ಬೀಸಿದ ಓರೆನೋಟ ! ಧಿಂಗಣ‌ ಕುಣಿದ ರಂಗದಂಗಳದವೇಶಗಳಾಗಿ ಬಣ್ಣಬಣ್ಣ ಕಟ್ಟಿದೊಗಲೆ ದೊಗಲೆಯೊಳಗೆಅಂಡು ಬಿಗಿದ ಹಳೆಬಟ್ಟೆಯ ಹಿಂಡುಮೇಲೆ ಮಿರಮಿರನೆ ಝಗಮಗಿಸುವರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದಜೀವ ಲಕಲಕ ಲಕಾ ಭಾಷೆಯುಚ್ಛಾರ ! ಅದೇನೋ ಮೊರದಗಲತಡ್ಪೆ ಕಿರೀಟದ ಬಣ್ಣದ ವೇಶಅರಚಿ ಅರಚಿ ಬೆದರಿಸಿಅರ್ಥವಾಗದಿದ್ದರೂಅರ್ಥ ಮಾತಾಡುವಂತೆ ಕಂಡರೆಅದು […]

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ

ಕವಿತೆ ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ ಪ್ರೇಮಶೇಖರ ಹೀಗೇಎತ್ತಲಿಂದಲೋ ಹಾರುತ್ತಾಇತ್ತ ಬಂದ ಗುರುತಿಲ್ಲದ ಹಕ್ಕಿ,ಇಲ್ಲೇ ಕೂತಿದೆ ಬೆಳಗಿನಿಂದಲೂ. ಲಲಿತೆ ಕಾಳು ಹಾಕಿದ್ದಾಳೆ,ಪುಟ್ಟಿ ನೀರಿಟ್ಟಿದ್ದಾಳೆ,ನಾನು ಕೋಲು ಹಿಡಿದುಪುಸ್ಸಿಯನ್ನು ಕಾಯುತ್ತಿದ್ದೇನೆ. ಪುಟ್ಟ ಹಕ್ಕಿಕಾಳು ತಿನ್ನುತ್ತಿಲ್ಲ,ನೀರು ಕುಡಿಯುತ್ತಿಲ್ಲ,ಬಾಯಿ ತೆರೆದು ಕೂಗುತ್ತಲೂ ಇಲ್ಲ. ಅಕ್ಕಪಕ್ಕದ ಮನೆಯವರು ಬಂದರು,ತಲೆಗೊಂದು ಮಾತು ಅಂದರು-ಅದು ಹಾರಿಬಂದ ದಿಕ್ಕುನೋಡಿದಿರಾ? ಮನೆಯೊಳಗೆ ನುಗ್ಗಿದಗಳಿಗೆ ಗಮನಿಸಿದಿರಾ? ಲಲಿತೆ ಅವರಿಗೆಲ್ಲ ಚಹ ಮಾಡುತ್ತಿದ್ದಾಳೆ,ಪುಟ್ಟಿ ವಾಷ್‍ಬೇಸಿನ್ ತೋರಿಸುತ್ತಿದ್ದಾಳೆ,ಪುಟ್ಟಹಕ್ಕಿ ಸುಮ್ಮನೆ ನೋಡುತ್ತಿದೆ,ನನ್ನ ಕೈಯಲ್ಲಿನ್ನೂ ಕೋಲು ಆಡುತ್ತಿದೆ.ಅವರು ಚಹಾ ಜತೆ ಹಕ್ಕಿಯನ್ನು ನೆಂಜಿಕೊಳ್ಳುತ್ತಿದ್ದಾರೆ. ಕಿವಿಚಿದರೆ ಕೂಸಿಗಾದರೂಒಂದೊತ್ತಿನ ಪಲ್ಯವೂ […]

ವಿರಾಗಿ ತ್ಯಾಗಿ

ಕವಿತೆ ವಿರಾಗಿ ತ್ಯಾಗಿ ಡಾಲಿ ಕೊಡನವಳ್ಳಿ ಚಕ್ರವರ್ತಿ ಭರತ…ನಿನಗಿಂತವಿರಾಗಿ ತ್ಯಾಗಿ ಬಾಹುಬಲಿಗೆಈ ಕನ್ನಡ ನೆಲ ತಲೆಬಾಗಿತಲೆ ಎತ್ತಿ ನೋಡಿದರೂ ನಿಲುಕದ ಪ್ರತಿಮೆಯನ್ನೇಕಡೆದು ನಿಲ್ಲಿಸಿದ್ದು ಯುದ್ದ ಗೆದ್ದು ಸೋತವನಏನಿಲ್ಲವೆಂದು ಹೊರಟವನಕೈಬೀಸಿ ಕರೆದುಗಿರಿನೆತ್ತಿಯ ಮೇಲಿರಿಸಿಮಸ್ತಕಕೆ ಬೆಳ್ಮುಗಿಲ ಮುಕುಟವಿರಿಸಿತಾರೆಗಳ ನೇವಣಿಯನೇರಿಸಿಅಂಬರಕೆ ಚುಂಬಿಸಿದವನನ್ನೇಕರುನಾಡುದೊರೆಯಾಗಿ ಸ್ವೀಕರಿಸಿತು ಮುರಿದು ಬೀಳುವ ಮಹಲಿನಹಂಗು ತೊರೆದವಗೆಗಿರಿಶಿಖರಗಳೇ ಕಂಬವಾಗಿಮೋಡಗಳೇ ಮೇಲ್ಛಾವಣಿಯಾಗಿನಾಡ ಗರ್ಭಗುಡಿಯಲ್ಲಿಸದ್ಗತಿ ಸಂದವನಪ್ರಾಪಂಚಿಕ ಸುಖ ಗೆದ್ದವನಪ್ರಕೃತಿಯ ಕಣಕಣವೂಪಾಲಿಸಿತಿಲ್ಲಿ ಬೆಳಗುಳ ನಂದನಪ್ರತಿದಿನ ನಿನ್ನದೇಪ್ರತೀಕ್ಷೆ ಪೃಥ್ವಿಗೆ.ಎಳೆಸಂತೆ ಕಂಗೊಳಿಸುವ ನಿನ್ನೀನವಿರು ಭಾವ ಹೊತ್ತ ಕುಸುಮ.ಗಂಧವತಿ ವಸುಧೆಯ ಗಂಧ ಘಮಹೊನ್ನ ಹಣತೆಯಲಿಜ್ಯೊತಿ ಬೆಳಗುವ ಶಶಿ ಸೂರ್ಯಆದಿ […]

ಸ್ವಾತಿಮುತ್ತು

ಕವಿತೆ ಸ್ವಾತಿಮುತ್ತು ಅಕ್ಷತಾ ಜಗದೀಶ. ಎನಿತು ಸುಂದರ ನೋಡುತಿಳಿನೀಲ ಮುಗಿಲು….ಮುತ್ತು ನೀಡುವಂತಿದೆಬಾನಂಚಿನ ಕಡಲು.. ಕಡಲಿಗು‌ ಮುಗಿಲಿಗುಇದೆಂತಹ ಬಂಧ..ಅರಿಯಲಾರದಂತಹಅಂತರಂಗದ ಅನುಬಂಧ.. ಕಾಲಗಳು ಉರುಳಿದರುಯುಗಗಳೇ ಕಳೆದರುಕಾಣುವುದು ತಿಳಿನೀಲಿ ಬಿಂಬಮಾಸಿಹೋಗದ ಆ ಪ್ರತಿಬಿಂಬ.. ಭಾವದೊಳಗೆ ಸನಿಹ ಕಡಲುವಾಸ್ತವದೊಳು ದೂರ ‌ಮುಗಿಲುಸತ್ಯದ ಒಳಗಿನ ಮಿಥ್ಯ..ನೆನಪಿಸುತಿದೆ‌ ಅಲೆಗಳು‌ ನಿತ್ಯ.. ಬಾನಿಂದ ಜಾರಿದೆ ಮಳೆ ಹನಿಕೇಳುತಿದೆ ಮರಳಿ ಕಡಲ ದನಿಮತ್ತೆ ಪ್ರೀತಿ ಮೂಡುವ ಹೊತ್ತುಕಡಲಾಳದಲಿ ಎಲ್ಲೆಲ್ಲೂ ‌ಸ್ವಾತಿಮುತ್ತು…. ****************************

ಹರಿದ ಬಟ್ಟೆ….

ಹರಿದ ಬಟ್ಟೆ…. ಸುಜಾತ ಕಂದ್ರವಳ್ಳಿ ನನ್ನದು ಅರ್ಧಂಬರ್ಧ ಹರಿದ ಬಟ್ಟೆಆಧುನಿಕತೆಯನ್ನು ವೈಭವೀಕರಿಸಲೆಂದೇಹರಿದುಕೊಂಡ ಬಟ್ಟೆ….!ಹರಕಲು ಬಟ್ಟೆ ಎನ್ನಲಾರೆ….!ಆದರೂ ಹರಿದ ಬಟ್ಟೆ….! ಆಧುನಿಕತೆಯನ್ನು ತೋರಿಸುವ ಭರದಲ್ಲಿ, ಸಾಂಪ್ರಾದಾಯಿಕತೆಯನ್ನು ಮುಚ್ಚಿಡಲೆಂದೇ ಹರಿದುಕೊಂಡ ಬಟ್ಟೆ……!ಅರ್ಧ ಹೊಟ್ಟೆಗೆ ತಾಗುವಂತ ಹಸಿದ ಬಟ್ಟೆ…ಅಂಬಲಿ ಊಟ ನನ್ನದಲ್ಲವೇ ಅಲ್ಲ…!ಮಾಲ್ಟ್ ಎಂದು ಹೆಸರು ಬದಲಿಸಿಕೊಂಡು ಮೆರೆವ ಹರಿದ ಬಟ್ಟೆ.ನನ್ನದು ಅರ್ಧಂಬರ್ಧ ಹರಿದ ಬಟ್ಟೆ. ಅಮ್ಮನ ಹಳೆ ಸೀರೆಗೆ ಹೊಸ ಮೆರುಗು ಕೊಟ್ಟ ಬಟ್ಟೆ,ಅಪ್ಪನ ಲುಂಗಿಗೆ ಅಲಂಕಾರ ಕೊಟ್ಟ ಬಟ್ಟೆ…,ಲುಂಗಿಯನ್ನೆ ಅಂಗಿಯಾಗಿಸಿದ ಬಟ್ಟೆ…ಸೀರೆಯನ್ನೆ ಹೊದಿಕೆಯಾಗಿ ಸಿಂಗರಿಸಿಕೊಂಡ ಬಟ್ಟೆ,ಆದರೇನಂತೆ ನಾ ಹರಕಲು […]

ಕಾವ್ಯಯಾನ

ಬತ್ತಿದೆದೆ ರೇಷ್ಮಾ ಕಂದಕೂರ ಬತ್ತಿದೆದೆಯಲಿ ಬಿತ್ತದಿರು ಕನಸುಸುತ್ತಲೆಲ್ಲ ಕವಿದ ಕತ್ತಲೆಮುತ್ತಿದೆ ಭರವಸೆಯ ಬೆಳಕನುಕುತ್ತಾಗಿದೆ ಕಿತ್ತು ತಿನ್ನುವ ಹುಳುವಿನಂತೆ ಸತ್ಯದ ಹೊನಲಿಗೂ ಸಂಚಕಾರಮಿತ್ಯದ ಝೇಂಕಾರದ ಸಲಿಗೆಅಪತ್ಯದ ನಡೆ ನುಡಿಯುವವರೆ ಹೆಚ್ಚುನಿತ್ಯ ನೇಮವು ದೂರ ತೀರದಲಿ ತೇಲಿ ಕೋಪ ತಾಪದ ಆರ್ಭಟಕೂಪದಲಿ ಸೇರಿದೆ ಮಾನವೀಯತೆಊಹಾಪೋಹದ ಸುಳಿಗೆವಾಸ್ತವವ ಮರೆ ಮಾಚಿದೆ.

ನಿರುತ್ತರ

ಕವಿತೆ ನಿರುತ್ತರ ಮಧುಸೂದನ ಮದ್ದೂರು ನಿನ್ನ ತುದಿ ಬೆರಳುಎದೆ ತಾಕಲುನೂರು ನವಿರು ಪುಳಕ ನಿನ್ನ ಮುಂಗುರುಳುಗಾಳಿ ಗಂಧ ತೀಡಲುಸಾವಿರದ ಸಂಭ್ರಮದ ಘಮಲು ನಿನ್ನ ಕೆಂದುಟಿಅರಳಿ ನಾಚಲುಲಕ್ಷದ ಲಕ್ಷ್ಯವುಅಲಕ್ಷ್ಯವು ನಿನ್ನ ಕಟಿಕುಲುಕಿ ಬಳಕಲುಕೋಟ್ಯನುಕೋಟಿಅಪ್ಸರೆಯರಿಗೂ ಮತ್ಸರ ನಾ…..ನಿರುತ್ತರನಿರಂತರ****************************************

ದಂಡೆಯಲ್ಲಿ ಒಮ್ಮೆ ನಡೆದು..

ಕವಿತೆ ದಂಡೆಯಲ್ಲಿ ಒಮ್ಮೆ ನಡೆದು.. ಫಾಲ್ಗುಣ ಗೌಡ ಅಚವೆ ಕಾರವಾರದ ದಂಡೆಯೆಂದರೆ ನನಗೆಅದೆಂಥದೋ ಪ್ರೀತಿಸಂಜೆ ಮುಂಜಾವೆನ್ನದೇಸದಾ ಗಿಜುಗುಡುವ ಜನರುಈ ದಂಡೆಯಲ್ಲಿ ನಡೆದುಅದರ ಜೊತೆ ಒಬ್ಬೊಬ್ಬರೇಸಂಭಾಷಿಸಿಸುತ್ತಾರೆ ಮತ್ತುಹಗುರಾಗುತ್ತಾರೆ. ದಿಗಂತದಿಂದೋಡಿ ಬರುವ ಅಲೆಗಳುನಡೆವ ಪಾದಗಳ ತಂಪುಗೊಳಿಸಿಎಂತೆಂಥದೋ ಒತ್ತಡಗಳಿಂದ ವ್ಯಗ್ರವಾದವರಿಗೆಸಾಂತ್ವನ ನೀಡುತ್ತವೆ. ದಂಡೆಯಲ್ಲಿ ಸಿಗುವ ಪರಿಚಿತ ಕೊಂಕಣಿಗರು‘ ನಂಗೆ ಅಷ್ಟಾಗಿ ಕನ್ನಡ್ ಬರುದಿಲ್ಲ ಹಾಂ’ಎಂದು ಕನ್ನಡದಲ್ಲಿಯೇ ಮಾತಿಗಿಳಿಯುತ್ತಾರೆಕನ್ನಡ ದ್ವೇಶಿಸದ ಆ ಕೊಂಕಣಿಗರ ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಯಾಕೆಂದರೆ, ಯಾರ ಸುದ್ದಿಗೂ ಹೋಗದ ಅವರು‘ತಾವಾಯಿತು ತಮ್ಮ ಕೆಲಸಾಯಿತು’ ಅಷ್ಟೇ! ನೀವು ಎಲ್ಲಿಂದಲೇ ಬಂದು […]

ಗೋವು ಮತ್ತು ರೈತ

ಕವಿತೆ ಗೋವು ಮತ್ತು ರೈತ ಡಾ.ಶಿವಕುಮಾರ್ ಮಾಲಿಪಾಟೀಲ ಗೋವು ಪುಣ್ಯಕೋಟಿರೈತ ಪುಣ್ಯಾತ್ಮಗೋವು ತ್ಯಾಗಿರೈತ ಯೋಗಿ ಗೋವು ಬೀದಿಪಾಲಾಗಿದೆರೈತ ಗುಳೆ ಹೊರಟಿದ್ದಾನೆ ಇಬ್ಬರೂ ಮೂಖರೆಇಬ್ಬರೂ ಅಮಾಯಕರೆ ರೈತ ಕಷ್ಟ ಪಡುತ್ತಾನೆಹಗಲು ರಾತ್ರಿ ಎನ್ನದೆಜಗಕೆ ಅನ್ನ ಕೊಡಲುಜಾತಿ ಧರ್ಮ ನೋಡದೆ ಎತ್ತು ಕಷ್ಟ ಪಡುತ್ತದೆರೈತ ಮಿತ್ರನಾಗಿ ಉಳಿಮೆಮಾಡುತ ಮಳೆ ಬಿಸಿಲು ಲೆಕ್ಕಿಸದೆ, ಬಾರಕೊಲು ಏಟುತಿಂದರೂ ಒಮ್ಮೆಯೂ ಎದುರಾಡದೆ ಗೋವಿನ ಹಾಲು ಮೊಸರುತುಪ್ಪ ನೀಡುತ್ತದೆ ಮಕ್ಕಳಿಂದಮುದುಕರವರೆಗೆಜಾತಿ ಧರ್ಮ ಕೇಳದೆ ಹೌದುಗೋವಿನ ಹೊಟ್ಟೆಯಲ್ಲಿ ಬಂಗಾರವಿದೆರೈತನ ಬೆನ್ನಿನ ಮೇಲೆದೇಶ ನಿಂತಿದೆ ಗೋವಿನ ಹೊಟ್ಟೆ ಕೊಯ್ಯತ್ತಿದ್ದಾರೆ […]

ಗಜಲ್

ಗಜಲ್ ವೀರಅಮರಸುತೆ ಮನದೊಳಗಿನ ಕಿಚ್ಚಿನಿಂದ ದೀಪ ಹೊತ್ತಿಸಬೇಡ ಗೆಳೆಯನಿರ್ಮಲ ಜ್ಯೋತಿ ಬೆಳಗಿಸು ಅಶಾಂತಿಯ ಕದವ ತಟ್ಟಬೇಡ ಗೆಳೆಯ ಇನ್ನೆಷ್ಟು ದಿನ ಹಗೆಯ ಸಾಧಿಸುವೆ ಹೊಗೆಯ ಹೊತ್ತಿಸುವೆಶರಣಾಗು ಸ್ನೇಹಕೆ ‌ಕರಿನೆರಳ ಗತವನು ಮರುಕಳಿಸಬೇಡ ಗೆಳೆಯ ಇರುವ ಸೇತುವೆಯ ಬೀಳಿಸುವೆ ಮನಸ್ಸು ದೂರ ಮಾಡುವೆ ಏಕೆಬಂಧ ಬೆಸೆಯುವ ನಾವು ಅಡ್ಡಗೋಡೆ ಕಟ್ಟಬೇಡ ಗೆಳೆಯ ತೋರಿಕೆಗೆ ಹಣತೆ ಎಣ್ಣೆಯಾಗೋಣ ಎಂಬ ಜಂಭವೇಕೆಶಮಭಾವಬತ್ತಿಯಾಗಿ ಬೆಳಕ ಬೆಳಗುವ ಬಿರುಗಾಳಿ ಬೀಸಬೇಡ ಗೆಳೆಯ ಸಕಲರ ಬಾಳಿಗೆ ಭಾಗ್ಯಜ್ಯೋತಿಯಾಗುವ ಬಯಕೆ ಎನಗೆ ಸಾಕಿನಂದಾದೀಪಕೆ ತೈಲವಾಗುವ ಪ್ರೀತಿ ಪ್ರಣತಿಯ […]

Back To Top