ಕವಿತೆ
ನಿರುತ್ತರ
ಮಧುಸೂದನ ಮದ್ದೂರು
ನಿನ್ನ ತುದಿ ಬೆರಳು
ಎದೆ ತಾಕಲು
ನೂರು ನವಿರು ಪುಳಕ
ನಿನ್ನ ಮುಂಗುರುಳು
ಗಾಳಿ ಗಂಧ ತೀಡಲು
ಸಾವಿರದ ಸಂಭ್ರಮದ ಘಮಲು
ನಿನ್ನ ಕೆಂದುಟಿ
ಅರಳಿ ನಾಚಲು
ಲಕ್ಷದ ಲಕ್ಷ್ಯವು
ಅಲಕ್ಷ್ಯವು
ನಿನ್ನ ಕಟಿ
ಕುಲುಕಿ ಬಳಕಲು
ಕೋಟ್ಯನುಕೋಟಿ
ಅಪ್ಸರೆಯರಿಗೂ ಮತ್ಸರ
ನಾ…..ನಿರುತ್ತರ
ನಿರಂತರ
****************************************
ಚಂದ..ಸೊಗಸು