ನೀನೊಂದು ಕಾವ್ಯ
ಕವಿತೆ ನೀನೊಂದು ಕಾವ್ಯ ಆನಂದ ಆರ್.ಗೌಡ ತಾಳೇಬೈಲ್ ನೀನೊಂದು ಕಾವ್ಯಭಾವ ಮನದ ಧರೆಯಲಿನಿನ್ನ ನಡಿಗೆಯೊಳಗಿನ ಮಿಲನತೆನಿಗೂಢ ಬೆಳಕು ಬೀರಿದೆ ನಗುವಿನ ಕೆನ್ನೆ ಗುಳಿ ನಕ್ಷತ್ರ ಕಡ್ಡಿಯಹೊಳಪಿನ ವದನ ಆಗಾಗ ಸಹನೆಯಿಂದಜಾರುವ ಕಣ್ಣಹನಿ ಆರಾಧನೆಯ ಹೃನ್ಮನತಬ್ಬಿಕೊಂಡಾಗಿನ ಧನ್ಯತೆನನ್ನ ತೆಕ್ಕೆಯಲ್ಲಿ ಹಾಗೇಹುದುಗುವ ಪರಿ ಎಲ್ಲವೂ ಮೊದಲಿನಂತೆ ಮಧ್ಯಾಹ್ನದ ನೆರಳಿನಂತೆನನ್ನೊಳಗೆ ನೀನಿದ್ದೆಬೆವೆತ ಎದೆ ಮೇಲಿನ ನಿನ್ನ ಮೊಗನನ್ನ ನಿದಿರೆ ಕದ್ದು ಮೆರೆಯುತ್ತಿದ್ದುಮೊದಲ ಸಲುಗೆ ಅಪ್ಪುಗೆಯ ದಾಹಎಲ್ಲವನ್ನೂ ತಣಿಸಿದ ಪರಿಒಲುಮೆಯ ಕಾವ್ಯದಂತೆ ನಿನ್ನ ಮುನಿಸಿನ ಸನಿಹದಸ್ಪರ್ಶದಲಿ ಯಾವುದೇ ಗಾಯವಿಲ್ಲಮಡಿಕೆಯಲಿ ತುಂಬಾನೇಬೇಸಿ ಉಂಡ ನೆನಪು […]
ಗಜಲ್
ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ. ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ. ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ. ನೀವು ಬರುವುದಾದರೆ […]
ಕಪ್ಪುಬಿಳುಪಿನ ಚಿತ್ರ
ಕವಿತೆ ಕಪ್ಪುಬಿಳುಪಿನ ಚಿತ್ರ ಬಿದಲೋಟಿ ರಂಗನಾಥ್ ಅವಳಿಗಾಗಿ ಕಾದ ಭರವಸೆಯ ದೀಪಹೊಯ್ಲಾಡುತ್ತಿರುವಾಗಲೇಇರುವೆಯೊಂದು ಕೂತು ಮೂತಿ ತೀಡಿಮುಂಗೈ ಮೇಲಿನ ಗುರುತ ನೋಡಿ ಕಣ್ಣ ಮಿಟುಕಿಸಿತು ಕಾದ ತಂಗೂದಾಣದ ಗೋಡೆಯ ತೊಡೆಗೀಚಿದ ಅಕ್ಷರಗಳ ಮೌನ ಮುರಿದುಬರುವ ಬಸ್ಸಿನ ಸೌಂಡಿಗೆಉಗುರ ಬಣ್ಣ ಕಚಗುಳಿಯಿಟ್ಟುಬೆರಳ ತುದಿಯ ಅವಳ ಸ್ಪರ್ಶದ ನಗುತುಟಿಯ ಕಚ್ಚಿ ಬೆಳಕಾಡಿತು ಆ ಸಂದಣಿಯಲ್ಲೂ ಸೂಟಿಯಿಟ್ಟ ಕಣ್ಣುಕೆನ್ನೆಕಚ್ಚಿದ ಗುರುತನು ಹುಡುಕಿಭಾವಜಾಡಿನ ಬಲೆನೇಯ್ದುಹಕ್ಕಿಮರಿಯ ಪ್ರೇಮದಂಚು ಹೊಳೆದುಚಂದ್ರಗೆರೆಯ ಕರುಣೆ ಮುದ್ದಾಡಿಕಾಲನ ಕರುಳು ಮರುಗಿನೆಲದ ಬೆವರು ಚಿಗುರಿಸಿದ ಕನಸು ಒಂಟಿ ಚಿಪ್ಪಿನಲಿ ನಿಲ್ಲದ ತೂಕದ ಬೊಟ್ಟುಸತ್ಯದ […]
ಸಾಕು ಬಳುಬಳಿ…
ಕವಿತೆ ಸಾಕು ಬಳುಬಳಿ… ಕೃಷ್ಣಮೂರ್ತಿ ಕುಲಕರ್ಣಿ ಸಾಲು ದೀಪ ಉರಿಯುವಾಗಒಂದಕಂಟಿದೆ ಸೊಡರುಮಕ್ಕು ಕವಿದು ಬಿಕ್ಕುವಾಗಅದ್ಯಾರು ನೋಡ್ವರು ಹೇಳುದೀಪಗಳು ಪ್ರಜ್ವಲತೆಯಲಿಸುತ್ತ ಬೆಳಗುವಾಗಹಬ್ಬದ ಸಡಗರ ಹಬ್ಬಿರುವಾಗಆರ್ಥ ಧ್ವನಿಯತ್ತಹರಡದು ಯಾರ ಚಿತ್ತಈ ತನಕ ಬೆಳಗಿದೆಬೇಕಿದೆ ಈಗ ವಿರಾಮಎಂದಾರುತಿದೆ ಬಸವಳಿದ ದೀಪಅದಕು ಮುನ್ನ ಬೆಳಗಿಸಿದೆಇನ್ನೊಂದು ರೂಪದೀಪದಿಂದ ದೀಪಹಚ್ಚಬೇಕು ಮಾನವಅದೆ ದೀಪ ಉಳಿಯಲೆಂಬಸೊಲ್ಲು ಬೇಡಾ ಕೇಳುವಬೆಳಕು ಮುಖ್ಯ ಬದುಕಿನಲ್ಲಿಅಂಧತೆಯ ತೊಡೆಯಲುನಾನು ನನದು ಎಂಬುದೆಲ್ಲಬತ್ತಿಯಾಗಿ ಉರಿಯಲುಶಕ್ತಿ ಕೊಡು ದೀಪಾವಳಿಸಾಕು ಇದೇ ಬಳುವಳಿ… **********************
ಬೆಳಕು
ಕವಿತೆ ಬೆಳಕು ಬಸವರಾಜ ಕಾಸೆ ಕತ್ತಲು ಎಲ್ಲೆಲ್ಲಿ ಇದೀಯೋಅಲ್ಲಿ ಎಲ್ಲಾ ಒಮ್ಮೆಯಾದರೂತೂಗಿ ಬಿಡಬೇಕು ಆಕಾಶಬುಟ್ಟಿಮಮತೆಯ ತೊಟ್ಟಿಲಂತೆ* ನಾ ಬೆಳಕು ಬಯಸಿದೆಕತ್ತಲೆಯಲ್ಲಿ ನಿಂತುಒಂದು ಹಣತೆ ಹಿಡಿದುಆದರೆ ಆ ಕತ್ತಲೆತಾನೇ ಬೆಳಗಾಗ ಬಯಸಿತ್ತು* ಮನೆಯೊಳಗಿನ ಮನಗಳ ದೀಪಹಪಾಹಪಿಸುತ್ತಿತ್ತುಹೊರಗೂ ಬೆಳಕಾಗಲುಅದಕ್ಕಾಗಿಯೇ ಹಚ್ಚಿದರುಹೆಚ್ಚು ಸಾಲುಗಳ ದೀಪ* ನಾವು ಹಚ್ಚಿದೆವೆಂದು ಹತ್ತು ದೀಪಅಲ್ಲೊಬ್ಬ ಹಚ್ಚಿದ ಇಪ್ಪತ್ತು ದೀಪ ಆದರೆ ಬೆಳಕು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆಸದ್ದಿಲ್ಲದೆ ಪ್ರಸಾರವಾಗಿಪರಸ್ಪರ ವಿನಿಮಯವಾಗುತ್ತಿತ್ತು* ಅತ್ತಿತ್ತ ಓಲಾಡಿ ಕುಲುಕುವ ದೀಪಕ್ಷಣ ಕ್ಷಣ ಚಂಚಲವಾಗಿಮತ್ತೆ ಧೃಡವಾಗುವಈ ಮನಸ್ಸಿನ ವಯ್ಯಾರದಷ್ಟೆ ಸಹಜ* ಕತ್ತಲೆಗೆ ತೋರಿಸಬೇಕು ಅಲ್ವಾಬೆಳಕು […]
ಮೌನ
ಕವಿತೆ ಮೌನ ತಿಲಕ ನಾಗರಾಜ್ ಹಿರಿಯಡಕ ನಾನು ಸುಮ್ಮನಿದ್ದೆನೀನೂ ಸುಮ್ಮನಾದೆ ನಿನ್ನೆದೆಯ ಭಾವಾಂತರಂಗದತುಡಿತಗಳ ಅರಿವತವಕ ನನ್ನೊಳಗಿತ್ತು… ದಿನ ಕಳೆಯುತ್ತಲೇ ಹೋಯಿತುಜಡಿದ ಮೌನದ ಬೀಗಬಿಚ್ಚದೆ ಅಲ್ಲೇ ತುಕ್ಕುಹಿಡಿದಿತ್ತು.. ಜತೆಗೆ ಹಿಡಿದ ಹಠವೂಕರಗದೆ ಹೆಪ್ಪುಗಟ್ಟಿತ್ತು..ನೀ ಸೋಲುವೆಯೋ?ಇಲ್ಲ ನಾನೋ?ಇಲ್ಲ ಯಾರಿಗೂ ಸೋಲುವ ಮನಸ್ಸಿಲ್ಲದೆ ಬದುಕುಕವಲು ದಾರಿಯಲ್ಲಿ ಸಾಗಿತ್ತುನೀ ಎಲ್ಲೋ… ನಾ ಇನ್ನೆಲ್ಲೋ.. *************************
ಇನ್ನೆಷ್ಟು ತ್ಯಾಗ ಮಾಡಬೇಕು.
ಕವಿತೆ ಇನ್ನೆಷ್ಟು ತ್ಯಾಗ ಮಾಡಬೇಕು. ಅನಿಲ ಕಾಮತ ಒಡಲಲ್ಲಿ ನಿನ್ನ ಕುಲದ ಕುಡಿಯನುಜತವಾಗಿಸಿಕೊಂಡಿರುವೆನಿನ್ನ ಕೆಣಕಿಸಿ ಜನರುಉಡಾಫೆಯ ನಗು ನಕ್ಕರುನಿನ್ನನ್ನು ನಾನು ಸಂತೈಸಿರುವೆ ತಾಳ್ಮೆ ಕಳೆದುಕೊಂಡುಸೋತ ಮೊಗವ ಹೊತ್ತುಮನೆಯ ಮೂಲೆ ಸಂಧಿಯಲಿಕೂತಾಗ ನಗುವಲ್ಲೇ ತೇಲಿಸಿದ್ದೇನೆ ಮದಿರೆಯಲಿ ಮಿಂದೆದ್ದಾಗನಿನ್ನ ಮರ್ಯಾದೆ ಮುಕ್ಕಾಗದ ಹಾಗೆನಟಿಸಿದ್ದೇನೆಕೋಪಾಗ್ನಿಗೆ ಬೆನ್ನ ಮೇಲಿನಬರೆಗಳು ನಿನ್ನನ್ನೇ ದಿಟ್ಟಿ ಸುತ್ತಿವೆ ನಿನ್ನ ಬರುವಿಕೆಗಾಗಿಅದೆಷ್ಟು ಇರುಳನ್ನುಏಕಾಂತದಲ್ಲೇ ಕಳೆದಿದ್ದೇನೆನಿನ್ನ ಕಾಮದ ಜ್ವಾಲಾಮುಖಿಗೆಸುಟ್ಟು ಕರಕಲಾಗಿದ್ದೇನೆನಿನಗಾಗಿ ಇನ್ನೆಷ್ಟು ತ್ಯಾಗ ಮಾಡಬೇಕು… ***********************
ಹನಿಗಳು
ಹನಿಗಳು ಭಾರತಿ ರವೀಂದ್ರ ಕೆಂಪಿನ ಮುತ್ತು ಬೆಳಗಿನಿಂದ ಕೆಂಪಾದಕೆನ್ನೆಯೊಂದಿಗೆ ನನ್ನವರಿಗೆ ಖುಷಿಯೇಖುಷಿ, ಬಿಡಿಸಿ ಹೇಳಲಿಹೇಗೆ? ಆ ಕೆಂಪಿಗೆಕಾರಣ ನಾನಲ್ಲಇಡೀ ರಾತ್ರಿ ಸೊಳ್ಳೆ ಕೊಟ್ಟ ಮುತ್ತಿನ ಪ್ರಭಾವ ಅಂತಾ ನೆನಪು ನಸು ನಾಚುತ ನಲ್ಲೆಕೇಳಿದಳು. ನೆನಪಿದೆಯಾ ನಿಮಗೆನಾ ಮೊದಲ ಬಾರಿಮಾಡಿದ ಹಲ್ವಾ…ಮೊಗದಿ ನಗು ಸೂಸಿಮನದಲ್ಲಿ ಅಂದು ಕೊಂಡೆ ಹೇಗೆ ಕಣೆಮರೆಯಲು ಸಾಧ್ಯಕಾಗದ ಅಂಟಿಸೋಅಂಟಿನ ಹಾಗೆ ಬಳಸಿದ್ದೆಅಂತಾ… ಮುಡಿದ ಮಲ್ಲಿಗೆ ಮದುವೆ ಮನೆಯಲ್ಲಿಮುಡಿ ತುಂಬಾ ಮಲ್ಲಿಗೆದಂಡೆ ಮುಡಿದವಳ ನಡೆ ಬಲು ಸೊಕ್ಕಿನದು,ಪಾಪ ಅದೇನಾಯಿತೋ ಗದ್ದಲದಿ ಅವಸರದಿಓಡಿ ಬರೋ ಹುಡುಗನಕೈಲಿ ದಂಡೆ […]
ದೀಪಾವಳಿ
ಕವಿತೆ ದೀಪಾವಳಿ ವಿದ್ಯಾಶ್ರೀ ಅಡೂರ್ ಮನಗಳ ನಡುವಿನ ತಮಗಳ ಕಳೆಯಲಿಬೆಳಕಿನ ಹಬ್ಬ ದೀಪಾವಳಿನೀಗದ ಬೆಳಕು ತುಂಬುತ ಬದುಕಲಿಕಳೆಯಲಿ ಕತ್ತಲ ಅಸುರನ ಧಾಳಿ ಬಗೆಬಗೆ ಖಾದ್ಯದ ಚಪಲವ ಮನದಲಿಹುಟ್ಟಿಸುವಂತ ಖಾನಾವಳಿಸುಡುಮದ್ದಿನಲಿ ಪರಿಸರ ಕೆಡಿಸದೆಮಾಡದೆ ಇರೋಣ ಹಾವಳಿ ಹಿಂದಿನ ದಿನಗಳ ಹಬ್ಬದ ನೆನಪುಬಿಟ್ಟಿದೆ ಮನದಲಿ ಕಚಗುಳಿಹಿಂದೆಗೂ ಮುಂದೆಗೂ ಕೊಂಡಿಗಳಾಗುತಹರಡುವ ಹಬ್ಬದ ಬಳುವಳಿ. ****************************
ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ
ಕವಿತೆ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ನಾಗರಾಜ್ ಹರಪನಹಳ್ಳಿ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ; ಅದಕೆ ನಾಮಗುವಿನಂತೆ ನಿನ್ನ ಎದೆಗೊತ್ತಿಕೊಂಡೇ ಇರುವೆ ಜಗದ ತುಂಬಾ ಮುಗಿಲ ಬೆಳಕ ಯಾಕೆ ತುಂಬಿದೆ ಒಲವೇಅದಕೆ ನಾಅವಳ ಜಗದ ಕತ್ತಲೆಯಲ್ಲೂ ದೂರ ಇರುವ ಅವಳಹುಡುಕುತಿರುವೆ ನೂರಾರು ಬಣ್ಣಬಣ್ಣದ ಹೂಗಳ ಯಾಕೆ ಈ ಭೂಮಿಗೆ ಕಳಿಸಿದೆ ಒಲವೇಅದಕೆ ನಾ ; ಅವಳ ಕನಸುಗಳಿಗೆ ಬಣ್ಣ ತುಂಬಿದೆ ಯಾಕೆ ಪ್ರತಿ ಉಸಿರಿಗೂ ನಿನ್ನ ಹೆಸರ ಬರೆದೆ ಒಲವೇಅದಕೆ ನಾನಿನ್ನ ಧ್ಯಾನಿಸುವೆ […]