ನೀನೊಂದು ಕಾವ್ಯ

ಕವಿತೆ

ನೀನೊಂದು ಕಾವ್ಯ

ಆನಂದ ಆರ್.ಗೌಡ ತಾಳೇಬೈಲ್

Forest, Fog, Sunlight, Sunbeam, Bright

ನೀನೊಂದು ಕಾವ್ಯ
ಭಾವ ಮನದ ಧರೆಯಲಿ
ನಿನ್ನ ನಡಿಗೆಯೊಳಗಿನ ಮಿಲನತೆ
ನಿಗೂಢ ಬೆಳಕು ಬೀರಿದೆ

ನಗುವಿನ ಕೆನ್ನೆ ಗುಳಿ ನಕ್ಷತ್ರ ಕಡ್ಡಿಯ
ಹೊಳಪಿನ ವದನ ಆಗಾಗ ಸಹನೆಯಿಂದ
ಜಾರುವ ಕಣ್ಣಹನಿ ಆರಾಧನೆಯ ಹೃನ್ಮನ
ತಬ್ಬಿಕೊಂಡಾಗಿನ ಧನ್ಯತೆ
ನನ್ನ ತೆಕ್ಕೆಯಲ್ಲಿ ಹಾಗೇ
ಹುದುಗುವ ಪರಿ ಎಲ್ಲವೂ ಮೊದಲಿನಂತೆ

ಮಧ್ಯಾಹ್ನದ ನೆರಳಿನಂತೆ
ನನ್ನೊಳಗೆ ನೀನಿದ್ದೆ
ಬೆವೆತ ಎದೆ ಮೇಲಿನ ನಿನ್ನ ಮೊಗ
ನನ್ನ ನಿದಿರೆ ಕದ್ದು ಮೆರೆಯುತ್ತಿದ್ದು
ಮೊದಲ ಸಲುಗೆ ಅಪ್ಪುಗೆಯ ದಾಹ
ಎಲ್ಲವನ್ನೂ ತಣಿಸಿದ ಪರಿ
ಒಲುಮೆಯ ಕಾವ್ಯದಂತೆ

ನಿನ್ನ ಮುನಿಸಿನ ಸನಿಹದ
ಸ್ಪರ್ಶದಲಿ ಯಾವುದೇ ಗಾಯವಿಲ್ಲ
ಮಡಿಕೆಯಲಿ ತುಂಬಾನೇ
ಬೇಸಿ ಉಂಡ ನೆನಪು

ಎಂದಿಗೂ ಮಾಸದಿರಲಿ
ಹಾಗೇ ಸುಮ್ಮನೆ ಒಡೆಯದಿರಲಿ
ನನ್ನದೊಂದು ಕನಸಿನಂತೆ
ನಿನ್ನ ಮಡಿಲು ನನ್ನ ಚಿರನಿದ್ರೆಯ
ನೆಲೆಯಾಗಿರಲಿ !

*********************************************

4 thoughts on “ನೀನೊಂದು ಕಾವ್ಯ

  1. ತುಂಬಾ ಚೆನ್ನಾಗಿದೆ ನಿಮ್ಮ ಕವಿ ಮನದ ಮಿಡಿತಗಳು.

  2. ಕವನ ಚೆನ್ನಾಗಿ ಮೂಡಿಬಂದಿದೆ

Leave a Reply

Back To Top