ಹನಿಗಳು

ಹನಿಗಳು

ಭಾರತಿ ರವೀಂದ್ರ

ಕೆಂಪಿನ ಮುತ್ತು

ಬೆಳಗಿನಿಂದ ಕೆಂಪಾದ
ಕೆನ್ನೆಯೊಂದಿಗೆ ನನ್ನವರಿಗೆ ಖುಷಿಯೇ
ಖುಷಿ, ಬಿಡಿಸಿ ಹೇಳಲಿ
ಹೇಗೆ? ಆ ಕೆಂಪಿಗೆ
ಕಾರಣ ನಾನಲ್ಲ
ಇಡೀ ರಾತ್ರಿ ಸೊಳ್ಳೆ ಕೊಟ್ಟ ಮುತ್ತಿನ ಪ್ರಭಾವ ಅಂತಾ


ನೆನಪು

ನಸು ನಾಚುತ ನಲ್ಲೆ
ಕೇಳಿದಳು. ನೆನಪಿದೆಯಾ ನಿಮಗೆ
ನಾ ಮೊದಲ ಬಾರಿ
ಮಾಡಿದ ಹಲ್ವಾ…
ಮೊಗದಿ ನಗು ಸೂಸಿ
ಮನದಲ್ಲಿ ಅಂದು ಕೊಂಡೆ ಹೇಗೆ ಕಣೆ
ಮರೆಯಲು ಸಾಧ್ಯ
ಕಾಗದ ಅಂಟಿಸೋ
ಅಂಟಿನ ಹಾಗೆ ಬಳಸಿದ್ದೆ
ಅಂತಾ…


ಮುಡಿದ ಮಲ್ಲಿಗೆ

ಮದುವೆ ಮನೆಯಲ್ಲಿ
ಮುಡಿ ತುಂಬಾ ಮಲ್ಲಿಗೆ
ದಂಡೆ ಮುಡಿದವಳ ನಡೆ ಬಲು ಸೊಕ್ಕಿನದು,
ಪಾಪ ಅದೇನಾಯಿತೋ ಗದ್ದಲದಿ ಅವಸರದಿ
ಓಡಿ ಬರೋ ಹುಡುಗನ
ಕೈಲಿ ದಂಡೆ ಸಮೇತ
ಕೃತಕ ಮುಡಿ… ಅವಳದು.

***********************

One thought on “ಹನಿಗಳು

Leave a Reply

Back To Top