Category: ಕಾವ್ಯಯಾನ

ಕಾವ್ಯಯಾನ

ಅಪ್ಪನ ಕವಿತೆಗಳು

ಉಸಿರನಿತ್ತ ಒಡಲು ಜಗದಿ ಬಯಸೊದು ಬೊಗಸೆ ಪ್ರೀತಿ
ಮರುಗದಿರಲಿ ಆತನೊಡಲು ನಿದಿರೆಯ ನಿಟ್ಟುಸಿರಲಿ
ನಮ್ಮ ಬಯಕೆ ಹೊನ್ನು ಚಿಂತೆಯ ಹೊರೆಯಾಗದಿರಲಿ ಆತಗೆ.

ಚಂದನ ಅವರ ಎರಡು ಕವಿತೆಗಳು

ನನ್ನ ಅಸ್ತಿತ್ವದ ಕೋಟೆಯನ್ನು
ಧ್ವಂಸ ಮಾಡಿದಾಗಲೆಲ್ಲ
ನಿನ್ನ ಪೂಜಿಪ ವೃಕ್ಷಸ್ಥಳವನ್ನು
ಮತ್ತಷ್ಟು ಕಲ್ಲಾಗಿಸುತ್ತಿದ್ದೇನೆ

ಗಜಲ್

ನಿರ್ಭಯದಿ ಉಸಿರಾಡುವ ದಿನಗಳು ಸೇರಿಹೋಗಿವೆ ಭೂತಕ್ಕೆ
ಕಾಲನ ತುಳಿತಕೆ ಸತ್ತವನೂ ಅರಸಲೇಬೇಕಿದೆ ಮಸಣದಿ ತಾವು

ಕಾವ್ಯ ಜುಗಲ್ ಬಂದಿ ಖಾಲಿತನದ ಗಳಿಗೆಯ ಕವಿತೆಗಳು ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ… ಖಾಲಿತನದ ಗಳಿಗೆಯ ಕವಿತೆಗಳು ಗಳಿಗೆ-೧ ಖಾಲಿತನ ಹ್ಞೂಂ……..!! ಖಾಲಿತನವೆಂಬುದು ಬರೀ ಭ್ರಮೆಯಷ್ಟೇ..ಒಲವು- ಚೆಲುವು-ಬೆರಗು ಭಾವಗಳ ತೇವ ಇಂಗಿದ ಮೇಲೂಹಾಯ್ವ ನೆನಪ ಮಂದಾನಿಲ ಒತ್ತುತ್ತಲಿರುವುದುಕಾಣದಂತೆಮನದ ಗಡಿಗೆಯಲ್ಲಿ.. ಖಾಲಿತನವೆಂದೆಯಲ್ಲವೇ ತೋರು ಅದೆಲ್ಲಿ…?? ವೀಣಾ ಪಿ. ಭ್ರಮೆಯ ಭಾವವೇನಲ್ಲ ನನ್ನೊಳಗಿನ ಖಾಲಿತನ ಬಿಸಿಲ […]

ಗಜಲ್

ಗಜಲ್ ಡಾ.ರೇಣುಕ ಅರುಣಕುಮಾರ ಕಠಾರಿ ಹಣೆ ಬರಹವೆಂದು ಕೈ ಕಟ್ಟಿ ಮಾತಿದ್ದೂ ಸುಮ್ಮನೆ ಕೂಡಬೇಕೆ ಈ ಲೋಕದೆದುರುಒಳಮನೆಯ ಹೊಸ್ತಿಲಳೊಗೆ ಮೈಲಿಗೆಂದು ಕುದಿಯಬೇಕೆ ಈ ಲೋಕದೆದುರು ಮಡಿ ಮೈಲಿಗೆಯ ಮನದೆದುರು ಬೆತ್ತಲೆ ಒಂದಾಗಿದೆ ಬದುಕುಮನಸಿಗೆ ಮೈಲಿಗೆ ಇಲ್ಲವೆಂದು ತಿಳಿದರು ದೂರವಾಗಬೇಕೆ ಈ ಲೋಕದೆದುರು ಮೂರರೊಳಗೆ ಬಂಧನ ಮೂರರೊಳಗೆ ಬೆಂದೇನಾ ಧರ್ಮದೆದುರುಹೆಣ್ಣನೇ ದೇವರು ಮಾಡಿದ ಬದುಕಿನೊಳಗೆ ಮಾತನು ಅಡವಿಡಬೇಕೆ ಈ ಲೋಕದೆದುರು ಬೆಂಕಿಗೆ ಹಾರಿದವಳೊಬ್ಬಳು ಬೆನ್ನು ಹತ್ತಿದವಳೊಬ್ಬಳು ಕಲ್ಲಾಗಿ ಕಾದವಳೊಬ್ಬಳು ಚರಿತ್ರೆಯೇ ಹೀಗೆಗಾದೆಯೊಳಗೆ ನೇಣು ಬಿಗಿದರೂ ನಮ್ಮ ಕುಲವನು ಕುರುಡಾಗಬೇಕೆ […]

ಅಮ್ಮಾ-ನೆನಪು!

ಕವಿತೆ ಅಮ್ಮಾ-ನೆನಪು! ಹೇಮಚಂದ್ರದಾಳಗೌಡನಹಳ್ಳಿ ಸದಾ ಕಾಡುವನನ್ನೊಳಗಲಿ ಇಣುಕುವ ಕೆಡುಕನು ಸುಡುವ,,ಹೊಸ ಆಲೋಚನೆ ಯೋಜನೆಗೆ ಪ್ರೇರಿಸುವ,,ನನ್ನುಸಿರೊಳಗೆ ಬೆರೆತೇನೋ ಉಸುರುತಿರುವಂತೆ,ನಿನ್ನ ನೆನಪು…. ಸದಾ ಕಾಡುವನನ್ನನಾಗ ತಿದ್ದಿ ತೀಡಿ ನಿನ್ನ ಮೆಚ್ಚು ರೂಪ ನೀಡಿಇಂದಿಗೂ ಕನಸಾಗಿ ಬಂದು ಕೂಗಿ ಎಬ್ಬಿಸುವ..ಸರಿ ದಾರಿದೋರಿ ಮುನ್ನಡೆಸುವ ಹಂಬಲಿ..ಹಸಗಟ್ಟಿದ ಹೊಟ್ಟೆಯ ಮಾಸಲು ಬಟ್ಟೆಯಮುಗುಳುನಗುಮೊಗದ ನಿನ್ನಾ ನೆನಪು ಸದಾ ಕಾಡುವದುಡಿದು ನೀನು ದಣಿದು ನಮಗೆ ತಣಿಸಿಹಸಿವನೇ ಹೊತ್ತು ಹುಸಿನಗುವಲದನು ಮುಚ್ಚಿಖಾಲಿಮಡಕೆ ನಮಗೆ ಹಣ್ಣುಗಳನೇ ತುಂಬಿಹಣ್ಣಿನಮಡಕೆ ಸ್ಥಾನ ನೀಡಿ..ತಿನ್ನದೊಂದನೂಜೋಪಾನಿಸಿ ನಡೆದಾ..ನಿನ್ನ ನೆನಪು.. ಸದಾ ಕಾಡುವಬೇಕು ನೀನೆಂಬ ಭಾವದ ನೋವತಾಳಿಕೊಂಡಿದೆ […]

ನನ್ನಪ್ಪನ ಕನ್ನಡಕ

ಕವಿತೆ ನನ್ನಪ್ಪನ ಕನ್ನಡಕ ವಿಶ್ವನಾಥ ಎನ್. ನೇರಳಕಟ್ಟೆ ನನ್ನಪ್ಪ ತೊಟ್ಟ ಕನ್ನಡಕ ಕಂಡಿದೆ ಎಲ್ಲವನ್ನೂ- ಏಳ್ನೂರರ ಪಗಾರದಲ್ಲಿ ಪ್ರತಿ ತಿಂಗಳ ಕ್ಯಾಲೆಂಡರ್ ತಿರುವಿಹಾಕಿದ್ದನ್ನುತಣ್ಣೀರು ಕುಡಿದು ಹೊಟ್ಟೆ ತಂಪಾಗಿಸಿಕೊಂಡದ್ದನ್ನುಕಣ್ಣೀರು ಕಾಣದಂತೆ ನಗೆಯಾಡಿದ್ದನ್ನು ಬಾಡಿಗೆ ಮನೆಯ ಮುರುಕುಬಾಗಿಲನ್ನು ರಾತ್ರಿ ಕಾದದ್ದನ್ನುವಾರಾನ್ನದ ಬೆಳಕಲ್ಲಿ ಬಾಳುಬೆಳಗಿಸಿಕೊಂಡದ್ದನ್ನುಬಿಟ್ಟಿ ಚಾಕರಿಗೆಜೊತೆಗಾರನಾದುದನ್ನು ಮನೆಯ ಫೌಂಡೇಶನ್ನಿಗೆಬೆವರಹನಿ ಬಿದ್ದುದನ್ನುಮಕ್ಕಳನ್ನು ನೆರಳಲ್ಲಿಟ್ಟುಬಿಸಿಲಲ್ಲಿ ಶತಪಥ ಓಡಾಡಿದ್ದನ್ನು ಮಕ್ಕಳಿಗೆ ಹೊಡೆದುದನ್ನುಹೆಂಡತಿಗೆ ಬೈದುದನ್ನುಹೊದಿಕೆಯೊಳಗಿನ ಕತ್ತಲಲ್ಲಿಸದ್ದೇಳದಂತೆ ಅತ್ತುದನ್ನು ಮಾಡದ ತಪ್ಪಿಗೆಬೈಸಿಕೊಂಡದ್ದನ್ನುಮರ್ಯಾದೆಗೆ ಅಳುಕಿತೆಪ್ಪಗಿದ್ದುದನ್ನುಬಿಗಿಗೊಂಡ ಮುಷ್ಟಿಸಡಿಲವಾದದ್ದನ್ನು *********************************

Back To Top