Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ನಿನ್ನ ಧ್ಯಾನ ಮಲ್ನಾಡ್ ಮಣಿ ಅರಳು ಮಲ್ಲಿಗೆಯ ಮಾಲೆ ಮಾಡಿ ನಿನ್ನ ಕೊರಳ ಧ್ಯಾನಿಸುತ್ತಲಿರುವೆ. ಎಂದು ಬರುವೆಯೆಂದು ದಾರಿ ಕಾಯುವ ಶಬರಿ ನಾನು. ದೇಹ ಮಲ್ಲಿಗೆ ಗೀಡವು ಭಾವ ಅದರ ಹೂವು, ನಿನ್ನ ನೆನಪಿನ ನೀರನೆರೆದು ಹೂ ಕಿತ್ತು ಕಟ್ಟಿ ಮಾಲೆ ಮಾಡಿದೆ. ನಿನ್ನ ದಾರಿ ಕಾದು ಮತ್ತೆ ಮಲ್ಲೆ ಹೂವ ಕಂಡೆ, ಅರಳು ಮಲ್ಲಿಗೆ ನಗುವ ಬೀರಿತು. ಹೊತ್ತು ಹಾದು ಹೋದರು ನಿನ್ನ ಸುಳಿವು ಕಾಣದು ಬರುವ ಸಂಜೆಗೆಂಪು ನಗುವ ಮಾಸಿತು. ನೆರಳಿನಲ್ಲಿ ನನ್ನ ನೆರಳು […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಈ ಬೆಳಗು ಎಂದಿನಂತಿಲ್ಲ ಈ ಬದುಕು ಎಂದಿನಂತಿಲ್ಲ ಅಲೆಗಳೆಷ್ಟು ಕ್ಷುಬ್ಧವಾಗಿವೆ ಈ ಕಡಲು ಎಂದಿನಂತಿಲ್ಲ ಮಧುಶಾಲೆಗೇ ಗರ ಬಡಿದು ಈ ಗುಟುಕು ಎಂದಿನಂತಿಲ್ಲ ಎಂಥ ಮರುಳಿತ್ತು ಸಂಜೆಯಲ್ಲಿ ಈ ಇರುಳು ಎಂದಿನಂತಿಲ್ಲ ಮುಖ ತಿರುಗಿಸಿ ನಡೆದಳಲ್ಲ ಯಾಕವಳು ಎಂದಿನಂತಿಲ್ಲ ಎದೆಯೂಟೆ ಬತ್ತಿಹೋಯಿತೇ ಈ ಮಡಿಲು ಎಂದಿನಂತಿಲ್ಲ ಬಾಂದಳಕೆ ಬೆಂಕಿ ಬಿದ್ದಿದೆ ಈ ಮುಗಿಲು ಎಂದಿನಂತಿಲ್ಲ ಸಾಂತ್ವನವ ಅರಸಿದೆ ‘ಜಂಗಮ’ ಈ ಹೆಗಲು ಎಂದಿನಂತಿಲ್ಲ ********

ಕಾರ್ಮಿಕ ದಿನದ ವಿಶೇಷ-ಗಝಲ್

ಗಝಲ್ ತೇಜಾವತಿ ಹೆಚ್.ಡಿ. ಗಝಲ್ ಕನಿಷ್ಠ ಕೂಲಿಗಾಗಿ ಮೈಯೊಳು ಬೆವರ ಹರಿಸುವೆವು ಕಾರ್ಮಿಕರು ನಾವು ಒಂದ್ಹೊತ್ತಿನ ಗಂಜಿಗಾಗಿ ಶ್ರಮದ ಬದುಕ ಸಾಗಿಸುವೆವು ಕಾರ್ಮಿಕರು ನಾವು ಕರ್ತವ್ಯ ನಿಷ್ಠೆಯಲಿ ಹಗಲಿರುಳೆನ್ನದೆ ಸ್ವಾರ್ಥವ ತೊರೆದು ಹೋರಾಡುವೆವು ಬಿಸಿಲು ಮಳೆ ಗಾಳಿಗೆ ಜಗ್ಗದೆ ತನುವ ಒಡ್ದುವೆವು ಕಾರ್ಮಿಕರು ನಾವು ಮಲಗಲು ಸೂರಿಲ್ಲದೆ ಮೈಗೆ ಹೊದಿಕೆಯಿಲ್ಲದೆ ಚಳಿಗೆ ನಲುಗಿದರೂ ಒಡೆಯನಿಗೆ ಸುಸಜ್ಜಿತ ಅರಮನೆ ನಿರ್ಮಿಸುವೆವು ಕಾರ್ಮಿಕರು ನಾವು ಕೃಷಿಯನ್ನೇ ನಂಬಿ ಮುಗಿಲನ್ನು ನೋಡುತ ಮಳೆಯ ಕಾಯುವೆವು ದೇಶಕ್ಕಾಗಿ ಹೊಲವ ಉತ್ತು ಅನ್ನವ ಬೆಳೆಯುವೆವು […]

ಕಾರ್ಮಿಕ ದಿನದ ವಿಶೇಷ-ಕವಿತೆ

ಬೆವರ ಹನಿಗಳು ಚೈತ್ರಾ ಶಿವಯೋಗಿಮಠ ಬೆವರ ಹನಿಗಳು ದುಡಿಯುವ ಕೈಗಳು, ದೇವರ ಕೈಗಳು ಹೊಲದಲಿ ಕೃಷಿಕ ಗಡಿಯಲಿ ಸೈನಿಕ ದುಡಿಯಲು ಕಾರ್ಮಿಕ ಕಾಯಕ ಯೋಗದ ಹರಿಕಾರರು ಬಸವಾದಿ ಪ್ರಮಥರು ದುಡಿಮೆ, ಶ್ರಮದ ಮಹತ್ವ ಸಾರಿದ ಜಗದ ಶ್ರೇಷ್ಠ ಕಾರ್ಮಿಕರು ದುಡಿಯುವ ಜೀವಗಳಿಗೆ ಸದಾ ಸಮೃದ್ಧಿಯಿರಲಿ ದುಡಿಸುವವರಿಗೆ, ಶ್ರಮಿಕರಿಗೆ ಪ್ರೀತಿ-ಗೌರವ ನೀಡುವ ಬುದ್ಧಿ ಸರ್ವದಾ ಇರಲಿ ಕಠಿಣ ಪರಿಶ್ರಮ ದುಡಿಮೆಯೇ ರಾಮನಾಮ. ಕಾರ್ಮಿಕನಿಗಿಲ್ಲ ವಿರಾಮ! ಇವರಿಗೆ, ದುಡಿಮೆಯೆ ದೈವ ಸ್ವಾಭಿಮಾನವೆ ಭವ-ಭಾವ ಪರಿಶ್ರಮವೆ ವಿಭವ! ಬೇಕು, ಚಿಪ್ಪಿಗೆ ಸ್ವಾತಿ […]

ಕಾವ್ಯಯಾನ

ಕಾಮಿ೯ಕರ ದಿನ ಎನ್. ಆರ್ .ರೂಪಶ್ರೀ ಕಾಮಿ೯ಕರ ದಿನ ತುತ್ತು ಅನ್ನಕ್ಕಾಗಿ ಬಾಳನ್ನು ತೆತ್ತು ತೆತ್ತು ಹಗಲಿರುಳು ದುಡಿತದ ನೆರಳಿನಲಿ ಸಾಗುತಿದೆ ಕಾಮಿ೯ಕನ ಹೊತ್ತು. ದಿನ ದಿನವೂ ಅನುದಿನವೂ ನೋವು ನರಳಾಟ ಅರಳುವುದು ಕಣ್ಣಿನಲ್ಲಿ ಕುಡಿಮಿಂಚು ನಗೆಯಾಟ ಬಲ್ಲಿದರ ಬಂಧನದಿ ಸದಾ ಶೋಷಣೆಯ ಸೆರಗು ಇದೇ ಏನೋ ಕಾಮಿ೯ಕನ ಜೀವನಕೆ ಸಂತಸದ ಮೆರಗು. ತಾನು ತನ್ನದೆನ್ನುವ ಹಕ್ಕಿನ ಹಂದರ ಹಸಿದು ಬಸವಳಿದಿದೆ ಆಸೆ ಆಮಿಷಗಳ ದೂರದ ಬಯಕೆಗಳ ಗೋಪುರದ ಗುಮ್ಮಟ ತಲೆಯೆತ್ತಿ ನಿಂತಿದೆ. ದು:ಕ ದುಗುಡ ದುಮ್ಮಾನಗಳಿಗೆ […]

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾವಲಿಯಿಂದ_ಕೆಂಡಕ್ಕೆ ಲಕ್ಷ್ಮಿಕಾಂತಮಿರಜಕರ ಕಾವಲಿಯಿಂದ_ಕೆಂಡಕ್ಕೆ ಚರಂಡಿ ಬದಿಯ ಮುರುಕಲು ಶೆಡ್ ಗಳಲ್ಲಿ ಸಹಿಸುತ್ತ ಕಚ್ಚುವ ಸೊಳ್ಳೆಗಳ ನೋವು ನಾಳೆಯೂ ಕೆಲಸಕ್ಕೆ ಹೋಗದಿದ್ದರೆ ಹೊಟ್ಟೆಗೇನೂ ಸಬೂಬು ಹೇಳುವುದೆಂದು ಚಿಂತಾಮಗ್ನದಲ್ಲಿ ನಾವಿರುವಾಗ ನೀವಾಗಲೇ ಚಪ್ಪಾಳೆ ತಟ್ಟುವ ಸಂತೋಷದಲ್ಲಿ ಮೈಮರೆತು ಮೀಯುತ್ತಿದ್ದಿರಿ ನಿಮ್ಮ ನಿಮ್ಮ ಅರಮನೆಗಳ ಬಾಲ್ಕನಿಗಳಲ್ಲಿ ನಿಂತು ನಿಮ್ಮ ಚಪ್ಪಾಳೆಯ ಲಯಬದ್ಧ ಸದ್ದಿಗೆ ಸಮವಲ್ಲ ಬಿಡಿ ನಮ್ಮ ಹಸಿದ ಹೊಟ್ಟೆಗಳ ತಾಳ ತಿಂಗಳಪೂರ್ತಿ ಸಾಕಾಗುವಷ್ಟು ದಿನಸಿಗೋದಾಮು ಪೇರಿಸಿಡಲು ನೀವು ನಗುತ್ತಲೇ ಹೆಣಗಾಡುತ್ತಿದ್ದ ಸಮಯದಲ್ಲಿ ನಮ್ಮ ಬದುಕು ಪೇರಿಕಿತ್ತಿತ್ತು ಬಿಸಿಲಿಗೆ ಕಾದು […]

ಕಾರ್ಮಿಕ ದಿನದ ವಿಶೇಷ-ಕವಿತೆ

ಕೂಲಿಯವನ ಮಗ ನಾನು ವಾಯ್.ಜೆ.ಮಹಿಬೂಬ ಕೂಲಿಯವನ ಮಗ ನಾನು ಬಡವನಾದರೇನಂತ ಇಲ್ಲೆನಗ ಬ್ಯಾಸರ ಕಣ್ಣತುಂಬ ನಿದ್ದೀಗಿ ಗುಡಿಸಲೆಮಗೆ ಆಸರ !!ಪ!! ಕೂಲಿಯವನ ಮಗನಾನು ಬಿಸಿಲೆಮಗೆ ಸಹೋದರ ನಮ್ಮಪ್ಪ ಅಂತಾನ ಮುಗಿಲೆ ನಮಗೆ ಹಂದರ !!೧!! ಅವ್ವನ ಸೀರಿ ಶೆರಗೇ ಒರಿಸೇತಿ ಬೆವರ ಹಾಸಿಗೆ ಆಗತೈತಿ ಅಪ್ಪನ ಹರಕ ಧೋತರ!!೨!! ಹಬ್ಬಕವರು ಕಾಣಲಿಲ್ಲ ಹೊಸ ಸೀರಿ-ದೋತರ ಸತ್ತಾಗ ಕಟ್ಟತೀರಿ ಅರವಿ ಐದು ಮೀಟರ್ !!೩! ******

ಕಾರ್ಮಿಕ ದಿನದ ವಿಶೇಷ-ಕವಿತೆ

ಕಾರ್ಮಿಕ-ಶ್ರಮಿಕ ಪ್ರೊ.ಕವಿತಾ ಸಾರಂಗಮಠ ಕಾರ್ಮಿಕ-ಶ್ರಮಿಕ ದೇವನಿತ್ತ ಭೂಮಿಯಲ್ಲಿ ಶ್ರಮಿಕ ಪ್ರಾಮಾಣಿಕತೆಯ ಧನಿಕ ಸಮಯದ ಪರಿಪಾಲಕ ನಿತ್ಯ ದುಡಿದು ತಿನ್ನುವ ಕಾಯಕ! ಕರ್ಮದಿಂದ ಜಗವೆಲ್ಲ ಸುಗಮ ಕರ್ಮದಿಂದಲೇ ಸಂತಸದ ಉಗಮ ಹರಿಸುತ ನಿತ್ಯ ಬೆವರ ಸುಮ ಜಗವೆಲ್ಲ ಹರಡುವ ಶ್ರಮದ ಕುಸುಮ! ಶ್ರಮದೊಂದಿಗೆ ದಿನಚರಿ ಆರಂಭ ಅವಿರತ ದುಡಿದ ಬೆವರಲವನ ಬಿಂಬ ಸಹಿಸುವ ಧನಿಕರ ದಬ್ಬಾಳಿಕೆ ಆದರೂ ಇವನ ಕೆಲಸಕಿಲ್ಲ ಹೋಲಿಕೆ! ಕಟ್ಟುವ ನಿತ್ಯ ಕಾಯಕದ ಕಟ್ಟೆ ಕೈಯಲ್ಲಿ ಹಿಡಿದು ಉಣ್ಣುವ ಕರ್ಮದ ತಟ್ಟೆ ತೊಟ್ಟರೂ ಚಿಂದಿ ಬಟ್ಟೆ […]

ಕಾರ್ಮಿಕ ದಿನದ ವಿಶೇಷ-ಕವಿತೆ

ಸನ್ಮಾನ ಸಂಮ್ಮೋದ ವಾಡಪ್ಪಿ ಸನ್ಮಾನ ಗಳಿಕೆಗೆ ಸ್ವಾಭಿಮಾನದ ದಿಟ್ಟ ಹೆಜ್ಜೆ ಇಡುತ ಬೆವರ‌ ಹನಿಗಳ ಸುರಿಸಿ ದುಡಿಮೆಯಲಿ ನಗುತ ಭವ್ಯ ದೇಶದ ಏಳಿಗೆಯ ಬೆನ್ನೆಲಬು ನಾವು ಶ್ರಮದ ದಾರಿ ಜೀವನದುದ್ದಕ್ಕೂ ನಡೆಯುತಿಹೆವು ಒಗ್ಗಟ್ಟಿನಲಿ ಒಕ್ಕೊರಲಿನ ಶಿಸ್ತಿನ ನಡೆಯು ದಣಿವಿಲ್ಲದ‌ ಚಲನೆ ನಿಲ್ಲಬೇಕು ಮನೆಯು ಸಹಿಷ್ಣುತೆಯಿಂದ ಸದಾ‌ ಕಾರ್ಯೋನ್ಮುಖ ಆತ್ಮವಿಶ್ವಾಸದ ಪಡೆ ಆಗನೆಂದು ವಿಮುಖ ಕಾರ್ಮಿಕರು ಒಂದೇ‌ ಸೂರಿನಲಿ ಬಂಧುಗಳು ಸಮಯ‌‌ ಪಾಲನೆ, ಶ್ರದ್ಧೆಯೇ ಪ್ರಮಾಣಗಳು ತಂತ್ರಜ್ಞಾನ ಕಾರ್ಯತಂತ್ರದಲ್ಲಿ‌ಯೂ ಪರಿಣಿತರು ಆರ್ಥಿಕತೆಯ ಬುನಾದಿ ನಿರಂತರ ಸಾಧಕರು ದಿನ‌‌ ವಾರ […]

ಕಾರ್ಮಿಕ ದಿನದ ವಿಶೇಷ-ಕವಿತೆ

ಭರವಸೆಯ ಬದುಕು ಪ್ರತಿಭಾ ಹಳಿಂಗಳಿ ಭರವಸೆಯ ಬದುಕು ದುಡಿಯುವ ಕೈಗಳೇ ನಿವೇನು ಬೇಡುತಿರುವಿರಿ ಹೊತ್ತು, ಹೊತ್ತಿನ ಊಟ ಇರಲೊಂದು ನೆಲೆ ಇಷ್ಟು ಸಾಕಲ್ಲವೇ? ಇಲ್ಲ ಸಾಕಾಗಲಿಲ್ಲ ನಾವೇನು ಯಂತ್ರಗಳಲ್ಲ, ನಮ್ಮ ‌ದೇಹದಲ್ಲೂ ಹರಿದಾಡುತಿದೆ ರಕ್ತ ಅದು ಕೂಡ ಕೆಂಪಲ್ಲವೇ ನಿಮ್ಮೆಲ್ಲರ‌ ಹಾಗೆ. ಬೆವರು ಸುರಿಯುತಿಹೆ ನಮ್ಮ ಹಣೆಯ ಮೇಲೆ ಅದು ಯಾರದೋ ಸಂಪತ್ತಿನ ಬಂಡವಾಳವಂತೆ ಹಗಲು, ರಾತ್ರಿ ಶ್ರಮವಹಿಸಿ ಮೈಯೆಲ್ಲ ಹಣ್ಣಾಗಿಸಿ ದುಡಿಯುತಿರೆ ನಾವು ನೀವು ಕೊಡುವ ಕಾಸು ಧರ್ಮದ್ದೇನಲ್ಲ. ಇಂದು ಬೆವರು ಹರಿಸಿದಾಗಲೇ ದೊರಕುವದು ಅನ್ನ […]

Back To Top